ಕೃತಕ ಬುದ್ದಿಮತ್ತೆ: Artificial Intelligence Essay In Kannada

ಪ್ರಿಯ ಓದುಗರೇ, ನಾವು ಈ Artificial Intelligence Essay In Kannada (ಕೃತಕ ಬುದ್ದಿಮತ್ತೆ ಪ್ರಬಂಧ) ಲೇಖನದಲ್ಲಿ ಕೃತಕ ಬುದ್ಧಿಮತ್ತೆ ಎಂದರೇನು?, ಕೃತಕ ಬುದ್ಧಿಮತ್ತೆಯ ವಿಧಗಳು, ಶಾಖೆಗಳು, ಅನ್ವಯ, ಉಪಯೋಗಗಳು, ಪರಿಣಾಮಗಳು, ಕೃತಕ ಬುದ್ಧಿಮತ್ತೆಯ ಯೋಜನೆ ಇತ್ಯಾದಿಗಳ ಕುರಿತು ತಿಳಿಯಲಿದ್ದೇವೆ.

ಕೃತಕ ಬುದ್ಧಿಮತ್ತೆಗೆ ಆಂಗ್ಲ ಭಾಷೆಯಲ್ಲಿ Artificial Intelligence ಸಂಕ್ಷಿಪ್ತವಾಗಿ AI ಎನ್ನುವರು.

ಇದು ಕಂಪ್ಯೂಟರ್ ವಿಜ್ಞಾನದ ಒಂದು ಭಾಗವಾಗಿದ್ದು ಕೆಲವು technical ಶಬ್ದಗಳನ್ನು ಒಳಗೊಂಡಿದೆ. ಆದ್ದರಿಂದ ನೀವು ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಚಿಂತೆಬೇಡ! ನಾವು ಸಾಧ್ಯವಾದಷ್ಟು  ಸರಳಭಾಷೆಯಲ್ಲಿ ತಿಳಿಸಿಕೊಡಲು ಪ್ರಯತ್ನಿಸುತ್ತೇವೆ.

Artificial Intelligence Essay In Kannada Language

ಕೃತಕ ಬುದ್ಧಿಮತ್ತೆ ಎಂದರೇನು? (What is Artificial Intelligence In Kannada)

Artificial intelligence  ಅಥವಾ ಕೃತಕ ಬುದ್ಧಿಮತ್ತೆ ಎನ್ನುವುದು computer system ಮತ್ತು ಯಂತ್ರಗಳಲ್ಲಿ ಮಾನವರಂತೆ  ವರ್ತಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ,  ಯೋಜನೆಗಳನ್ನು ಮಾಡುವ, ಭಾಷೆಗಳನ್ನು ಅರ್ಥೈಸಿಕೊಳ್ಳುವ, ಸಮಸ್ಯೆಗಳನ್ನು ಬಗೆಹರಿಸುವ, ದೃಶ್ಯ ಗ್ರಹಿಸಿಕೊಳ್ಳುವ ಹಾಗೂ ಪ್ರತಿಕ್ರಿಯೆಗಳನ್ನು ನೀಡುವ ಸಾಮರ್ಥ್ಯಗಳನ್ನು  ಅಭಿವೃದ್ಧಿಪಡಿಸುವುದು  ಎಂದರ್ಥ.

ಸರಳವಾಗಿ ಹೇಳಬೇಕೆಂದರೆ ಯಂತ್ರಗಳನ್ನು ಮಾನವರಂತೆ ವರ್ತಿಸುವ ಹಾಗೆ ಮಾಡುವ ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ.

ದೇವರು ಎಲ್ಲೆಡೆಯೂ ಹೇಗಿರುವನೋ ಹಾಗೆಯೇ ಈ ಕೃತಕ ಬುದ್ಧಿಮತ್ತೆಯೂ ಎಲ್ಲೆಡೆ ಪಸರಿಸಿಬಿಟ್ಟಿದೆ.

ವಿಚಿತ್ರವೆಂದರೆ ಇದರ ಇರುವಿಕೆಯು ಎಲ್ಲರಿಗೂ ಗೊತ್ತಾಗುವುದಿಲ್ಲ.

ಉದಾಹರಣೆಗೆ: ನಾವು YouTube ನಲ್ಲಿ ಒಂದು ವಿಡಿಯೋವನ್ನು ನೋಡುತ್ತಿದ್ದರೆ ಅದರ ಕೆಳಗೆ ಆ ವಿಡಿಯೋಗೆ ಸಂಬಂಧಪಟ್ಟ ಇನ್ನೊಂದು ವಿಡಿಯೋ ಕಾಣಿಸಿಕೊಳ್ಳುವುದು. Amazon ಅಥವಾ Flipkart ನಲ್ಲಿ ನೀವು ನಿಮ್ಮ ಇಷ್ಟದ ವಸ್ತುಗಳನ್ನು  ಖರೀದಿಸಿದ ನಂತರ ಅಥವಾ Search ಮಾಡಿದ ನಂತರ Google, YouTube ಹಾಗೂ Facebook ಗಳಲ್ಲಿ ಆ ವಸ್ತುಗಳಿಗೆ ಸಂಬಂಧಪಟ್ಟಂತಹ  ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ.

ಅದಕ್ಕೆ ಕಾರಣವೇ ಈ ಕೃತಕ ಬುದ್ಧಿಮತ್ತೆ. Facebook, YouTube & Google ಗಳಲ್ಲಿ ಕೃತಕ ಬುದ್ಧಿಮತ್ತೆ (artificial intelligence)  ತಂತ್ರಜ್ಞಾನವನ್ನು ಅಳವಡಿಸಿರುತ್ತಾರೆ.

ಇವುಗಳಷ್ಟೇ ಅಲ್ಲ ನಾವು ಬಳಸುವ ಹಲವಾರು App ಗಳಲ್ಲಿ, ವಸ್ತುಗಳಲ್ಲಿ, computer ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿರುತ್ತಾರೆ. ಆದರೆ ಅದರ ಅರಿವು ನಮಗೆ ಆಗುವುದಿಲ್ಲ ಅಷ್ಟೇ.

ಈ ಆಧುನಿಕ ಯುಗದಲ್ಲಿ ನಮ್ಮೆಲ್ಲರ ಜೀವನ ಹೆಚ್ಚಾಗಿ ಕಂಪ್ಯೂಟರುಗಳ ಮೇಲೆ ಅವಲಂಬಿತವಾಗಿಬಿಟ್ಟಿದೆ.

ನಾವು ಬಳಸುವ ಮೊಬೈಲ್ ಕೂಡ ಒಂದು ವಿಧದ ಕಂಪ್ಯೂಟರ್. ಕಂಪ್ಯೂಟರ್ ನ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಒಮ್ಮೆ ಓದಿಕೊಂಡು ಬನ್ನಿ.

ಓದಿ: ಕನ್ನಡದಲ್ಲಿ ಕಂಪ್ಯೂಟರ್ ಮಾಹಿತಿ


ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹುಟ್ಟಿದ್ದು ಯಾವಾಗ?

1956 ರಲ್ಲಿ ಅಮೆರಿಕದ ಗಣಕಯಂತ್ರ ವಿಜ್ಞಾನಿ ‘ಜಾನ್ ಮೆಕಾರ್ತಿ’ಯವರು ಡಾರ್ಥ್ ಮೌತ್(Dartmouth) ಸಮ್ಮೇಳನದಲ್ಲಿ “Artificial Intelligence” ಎಂಬ ಪದವನ್ನು ಹುಟ್ಟು ಹಾಕಿದರು. ನಂತರ ಇದನ್ನು ಅಳವಡಿಸಿಕೊಳ್ಳಲಾಯಿತು.

ಕೃತಕ ಬುದ್ಧಿಮತ್ತೆಯನ್ನು ಬುದ್ಧಿವಂತ ಯಂತ್ರಗಳನ್ನು ತಯಾರಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಎಂದು ವ್ಯಾಖ್ಯಾನಿಸಿದರು.

ಯಂತ್ರಗಳ ಅಥವಾ ಪ್ರೋಗ್ರಾಂಗಳ ಗುಣಲಕ್ಷಣಗಳನ್ನು ವಿವರಿಸಲು ಸಹ Artificial Intelligence ಪದವನ್ನು ಬಳಸಲಾಗುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ವಿಶೇಷವೇನು?

ಕೃತಕ ಬುದ್ಧಿಮತ್ತೆಯು ಯಂತ್ರಗಳನ್ನು ತಮ್ಮ ಅನುಭವಗಳಿಂದ ಕಲಿಯುವಂತೆ ಮಾಡುತ್ತದೆ.

ಹೊಸ ಕೆಲಸಗಳಿಗೆ ಹೊಂದಿಕೊಳ್ಳುವಂತೆ ಮಾಡುವುದಲ್ಲದೆ ಯಂತ್ರಗಳಿಗೆ ಮನುಷ್ಯರ ಹಾಗೆ ಕೆಲಸ-ಕಾರ್ಯಗಳನ್ನು ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ.

ಚದುರಂಗ ಆಡುವ ಕಂಪ್ಯೂಟರ್ ದಿಂದ ಹಿಡಿದು ಸ್ವಯಂಚಾಲಿತ ಕಾರುಗಳವರೆಗೆ Deep Learning ಮತ್ತು ಸ್ವಾಭಾವಿಕ ಭಾಷಾ ಸಂಸ್ಕರಣೆಯ ಮಹತ್ವ ತುಂಬಾ ಅಗಾಧವಾದದ್ದು.


ಕೃತಕ ಬುದ್ಧಿಮತ್ತೆಯ ವಿಧಗಳು Types of AI in Kannada

ಕೃತಕ ಬುದ್ಧಿಮತ್ತೆಯನ್ನು ಸಾಮರ್ಥ್ಯ ಮತ್ತು ಕ್ರಿಯಾತ್ಮಕತೆಯ ಆಧಾರದ ಮೇಲೆ ಎರಡು ವಿಧಗಳಲ್ಲಿ ವರ್ಗೀಕರಿಸಬಹುದು.

 1. ಕೃತಕ ಬುದ್ಧಿಮತ್ತೆ ವಿಧ-1
 2. ಕೃತಕ ಬುದ್ಧಿಮತ್ತೆ ವಿಧ-2

ಕೃತಕ ಬುದ್ಧಿಮತ್ತೆ ವಿಧ-1

1. ದುರ್ಬಲ ಕೃತಕ ಬುದ್ಧಿಮತ್ತೆ Weak AI

ಇದನ್ನು ನಿರ್ದಿಷ್ಟ ಕಾರ್ಯಗಳನ್ನು ಬುದ್ದಿವಂತಿಕೆಯೊಂದಿಗೆ ನಿರ್ವಹಿಸಲು ವಿನ್ಯಾಸಗೊಳಿಸಲಾಗುತ್ತದೆ.

ಇದಕ್ಕೆ ಕೆಲವು ಮಿತಿಗಳಿರುತ್ತವೆ. ಆ ಮಿತಿಗಳನ್ನು ದಾಟಿ ಈ ದುರ್ಬಲ AI ಗೆ ಕಾರ್ಯ ನಿರ್ವಹಿಸಲಾಗುವುದುದಿಲ್ಲ. ಆದುದರಿಂದ ಇದನ್ನು  Narrow artificial intelligence ಎಂದೂ ಕರೆಯಲಾಗುತ್ತದೆ.

ಉದಾಹರಣೆಗಳು: ಸ್ವಯಂ ಚಾಲಿತ ಕಾರುಗಳು, ಗೂಗಲ್ ನ “Ok Google”, ಮುಖ ಗುರುತಿಸುವಿಕೆ (Facial recognition), ಮಾತು ಮತ್ತು ಚಿತ್ರ ಗುರುತಿಸುವಿಕೆ(speech and image recognition), Apple phone ನ ಸಿರಿ, ಇತ್ಯಾದಿ.

2. ಸಾಮಾನ್ಯ ಕೃತಕ ಬುದ್ಧಿಮತ್ತೆ General AI

ಈ ಕೃತಕ ಬುದ್ಧಿಮತ್ತೆಯು ಮಾನವರ ಬುದ್ಧಿವಂತಿಕೆಗೆ ತುಂಬ ಹತ್ತಿರವಾದದ್ದು.

ಇದು ಮಾನವರ ಕಾರ್ಯಗಳನ್ನು ಅಷ್ಟೇ ಅರಿವಿನಿಂದ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಮಾಡಬಲ್ಲುದು. ಆದುದರಿಂದ ಇದನ್ನು Strong AI ಎಂದು ಕರೆಯಲಾಗುತ್ತದೆ.

Strong AI ನ ಮುಖ್ಯ ಉದ್ದೇಶವೇನೆಂದರೆ, System(ಯಂತ್ರ)ಗಳನ್ನು ತಾವೇ ಸ್ವತಃ ಮಾನವರ ಹಾಗೆ ಯೋಚಿಸುವಂತೆ ಮಾಡುವುದು. ಇಂಥಹ ಯಂತ್ರಗಳನ್ನು create ಮಾಡುವುದು ಅನೇಕ ಸಂಶೋಧಕರ ಭವಿಷ್ಯದ ಅಥವಾ ದೀರ್ಘಕಾಲೀನ ಗುರಿಯಾಗಿದೆ.

3. ಸೂಪರ್ ಕೃತಕ ಬುದ್ಧಿಮತ್ತೆ Super AI

ಸೂಪರ್ ಕೃತಕ ಬುದ್ಧಿಮತ್ತೆಯಲ್ಲಿ ಯಂತ್ರಗಳು ಮಾನವನ ಬುದ್ಧಿವಂತಿಕೆಯನ್ನು ಮೀರಿಸುವುದಲ್ಲದೆ ಯಾವುದೇ ಕಾರ್ಯ ಅಥವಾ ಚಟುವಟಿಕೆಗಳನ್ನು ಮಾನವರಿಗಿಂತ ಉತ್ತಮವಾಗಿ ಮಾಡಬಲ್ಲವು.

Super AI ದ ಭವಿಷ್ಯದ ಉದ್ದೇಶವೇನೆಂದರೆ Machine ಗಳಲ್ಲಿ ಯೋಚಿಸುವ, ಕಾರಣಗಳನ್ನು ಹುಡುಕುವ, Plan ಮಾಡುವ, ಸ್ವತಂತ್ರವಾಗಿ ಸಂವಹನ(communicate) ನಡೆಸುವ, ತೀರ್ಪು ನೀಡುವ, Puzzle ಗಳನ್ನು Solve ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಅಥವಾ ಒದಗಿಸುವುದು.

Super AI ಏನಾದ್ರೂ ಸಾಧ್ಯವಾದರೆ ಇದು ಮಾನವನ ಇತಿಹಾಸದಲ್ಲಿ ಅತಿ ದೊಡ್ಡ ಕ್ರಾಂತಿಯಾಗಿ ಪರಿಣಮಿಸಬಹುದು.

ಕೃತಕ ಬುದ್ಧಿಮತ್ತೆ ವಿಧ-2

1.  ಪ್ರತಿಕ್ರಿಯಾತ್ಮಕ ಯಂತ್ರಗಳು  Reactive Machines

ಈ ಮಷೀನ್ ಗಳು AI ದ Basic ಮಷೀನ್ ಗಳಾಗಿವೆ. ಇಂತಹ AI System ಗಳು ವಾಸ್ತವಿಕ ಅಥವಾ ಸಾಂದರ್ಭಿಕ ಸನ್ನಿವೇಶಗಳ ಮೇಲೆ ಕೇಂದ್ರೀಕರಿಸಿ, ಕ್ರಿಯೆಗೆ ತಕ್ಕಂತೆ ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತವೆ. ಆದರೆ, ಮುಂದಿನ ಅಂದರೆ ಭವಿಷ್ಯದ ಕ್ರಿಯೆಗಳಿಗೆ ಬೇಕಾದ ಮಾಹಿತಿಯನ್ನು ಶೇಖರಿಸಿಡುವುದಿಲ್ಲ.

ಉದಾಹರಣೆಗೆ IBM ದವರು ಅಭಿವೃದ್ಧಿಪಡಿಸಿರುವ ‘Deep blue system‘(ಚದುರಂಗ ಆಡುವ ಕಂಪ್ಯೂಟರ್) ಮತ್ತು ಗೂಗಲ್ ಅಭಿವೃದ್ಧಿಪಡಿಸಿರುವ “Alpha go” game player ಕಂಪ್ಯೂಟರ್ ಪ್ರೋಗ್ರಾಮ್ .

ಸೀಮಿತ ಸ್ಮರಣೆ Limited Memory

ಈ ಮಷೀನ್ ಗಳು ಡೇಟಾವನ್ನು ಅಥವಾ Memory ಗಳನ್ನು ಅಲ್ಪಾವಧಿಗೆ ಮಾತ್ರ ಶೇಖರಿಸಿಡಬಹುದು.

ಉದಾಹರಣೆಗೆ ಸ್ವಯಂ ಚಾಲಿತ ಕಾರುಗಳು. ರಸ್ತೆಯನ್ನು Navigate ಮಾಡಲು ಬೇಕಾದ ಮಾಹಿತಿ ಮತ್ತು ಸಮೀಪದ ಕಾರುಗಳ ವೇಗ ಹಾಗೂ ದೂರವನ್ನು ಮಾತ್ರ ತಮ್ಮಲ್ಲಿ Store ಮಾಡಿಟ್ಟುಕೊಳ್ಳುತ್ತವೆ.

ಮಸ್ತಿಷ್ಕ ಸಿದ್ಧಾಂತ Theory of Mind


ಈ System ಗಳು ಮನುಷ್ಯರ ಹಾಗೆ ಭಾವನೆಗಳು, ನಂಬಿಕೆಗಳು ಮತ್ತು ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುತ್ತವೆ.

ಈ ತರಹದ ಯಂತ್ರಗಳು ಇನ್ನುವರೆಗೂ ಅಭಿವೃದ್ಧಿ ಅಥವಾ ಶೋಧನೆಯಾಗಿಲ್ಲ. ಸಂಶೋಧಕರು ಇವುಗಳನ್ನು ನಿರ್ಮಾಣ ಮಾಡುವ ಕನಸನ್ನು ಹೊತ್ತಿದ್ದಾರೆ.

4. ಸ್ವಯಂ ಜಾಗೃತಿ Self-Awareness AI


ಸ್ವಯಂ ಜಾಗೃತಿ ಕೃತಕ ಬುದ್ಧಿಮತ್ತೆಯು ಭವಿಷ್ಯದ ಕೃತಕ ಬುದ್ಧಿಮತ್ತೆಯಾಗಿದೆ. ಇಂತಹ ಬುದ್ಧಿಮತ್ತೆಯನ್ನು ಹೊಂದಿದಂತಹ ಯಂತ್ರಗಳು ಮನುಷ್ಯರ ಬುದ್ಧಿಮತ್ತೆಯನ್ನು ಮೀರಿಸುವ ಸಾಮರ್ಥ್ಯವನ್ನು ಹೊಂದಲಿವೆ.

ಓದಿ: ಜಲ ಮಾಲಿನ್ಯ ಪ್ರಬಂಧ

ಓದಿ: ಶಬ್ದ ಮಾಲಿನ್ಯ ಪ್ರಬಂಧ

ಓದಿ: ರಾಷ್ಟೀಯ ಹಬ್ಬಗಳು ಪ್ರಬಂಧ


ಕೃತಕ ಬುದ್ಧಿಮತ್ತೆಯ ಶಾಖೆಗಳು

 • ನಾಲೇಜ್ ಇಂಜಿನಿಯರಿಂಗ್ (Knowledge Engineering): ಇದೊಂದು ಕೃತಕ ಬುದ್ಧಿಮತ್ತೆಯ ಶಾಖೆಯಾಗಿದ್ದು ಮಾನವ ತಜ್ಞರ(Human Expert) ವಿಚಾರವಂತಿಕೆಯನ್ನು ಯಂತ್ರಗಳಿಗೆ ಅಳವಡಿಸುವುದನ್ನು ಈ ಶಾಖೆ ಒಳಗೊಂಡಿದೆ.
 • ರೋಬೋಟಿಕ್ಸ್ (Robotics): ಇದು ಕೃತಕ ಬುದ್ಧಿಮತ್ತೆಯ ಅತಿ ಆಸಕ್ತಿದಾಯಕ ಶಾಖೆಯಾಗಿದ್ದು, ಇದು ಹೆಚ್ಚಾಗಿ ರೋಬೋಟ್ಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಇದರ ಮುಖ್ಯ ಉದ್ದೇಶವು ಮನುಷ್ಯನಿಗೆ ಬೇಸರದ ಮತ್ತು ಬೃಹತ್ ಕೆಲಸಳು ಮಾಡುವಲ್ಲಿ ರೋಬೋಟ್ ಗಳನ್ನು ನಿಯೋಜಿಸುವುದಾಗಿದೆ.
 • ಮಷೀನ್ ಲರ್ನಿಂಗ್ (Machine Learning): ಇದು ಕೃತಕ ಬುದ್ಧಿಮತ್ತೆಯ ಅತಿ ಬೇಡಿಕೆಯ ಶಾಖೆಯಾಗಿದೆ. ಇದರಲ್ಲಿ ಯಂತ್ರಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳು ನೈಜ ಜೀವನದಲ್ಲಿ ಉಂಟಾಗುವ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಷ್ಟು ಸಶಕ್ತಗೊಳಿಸಲಾಗುತ್ತದೆ.

 • ನ್ಯೂರಲ್ ನೆಟ್ವರ್ಕ್ (Neural network): ಬಹಳ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಕೃತಕ ಮೆದುಳಿನ ನರಕೋಶಗಳನ್ನು ನ್ಯೂರಲ್ ನೆಟ್ವರ್ಕ್ ನಲ್ಲಿ ಬಳಸಲಾಗುತ್ತದೆ. ನ್ಯೂರಲ್ ನೆಟ್ವರ್ಕ್ ಅನ್ನು Deep Learning ಎಂದೂ ಕರೆಯುತ್ತಾರೆ.

 • Fuzzy Logic: ಇದು ಊಹೆಗಳು ಅಥವಾ ಪರಿಕಲ್ಪನೆಗಳು ಎಷ್ಟರಮಟ್ಟಿಗೆ ಸತ್ಯವಾಗಿವೆ ಎಂಬುದನ್ನು ವಿಶ್ಲೇಷಿಸಿ ಅವುಗಳಲ್ಲಿ ಅನಿಶ್ಚಿತವಾದದ್ದನ್ನು ಮಾರ್ಪಾಟುಮಾಡಿ ಪ್ರಸ್ತುತಪಡಿಸುವ ತಂತ್ರಜ್ಞಾನವಾಗಿದೆ. ಇದು ತುಂಬಾ ಸಂಕೀರ್ಣ ಅನಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಂದು Logic ಎಷ್ಟರಮಟ್ಟಿಗೆ ಸತ್ಯವಾಗಿದೆ ಎಂಬುದನ್ನು ಕಂಡುಕೊಳ್ಳುವಲ್ಲಿ ಸಹಾಯಮಾಡುವ ತಂತ್ರವಾಗಿದೆ.

 • ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (Natural Language Processing): ಇದು ಕಂಪ್ಯೂಟರ್ system ಮತ್ತು machine ಗಳನ್ನು ಮಾನವನ ಸಂವಹನ ಅಥವಾ ಸಂವಾದವನ್ನು ಅರ್ಥಮಾಡಿಕೊಳ್ಳುವಂತೆ ಮಾಡುವ ಅಥವಾ ಅಭಿವೃದ್ಧಿಪಡಿಸುವ ಶಾಖೆಯಾಗಿದೆ.


ಕೃತಕ ಬುದ್ಧಿಮತ್ತೆಯ ಉಪಯೋಗಗಳು

Application Of Artificial Intelligence In Kannada as follows:

 1. ಆರೋಗ್ಯ ಕ್ಷೇತ್ರದಲ್ಲಿ
 2. ಬ್ಯಾಂಕಿಂಗ್ ಕ್ಷೇತ್ರದಲ್ಲಿ
 3. ಕೃಷಿಯಲ್ಲಿ
 4. ಶಿಕ್ಷಣ ಕ್ಷೇತ್ರದಲ್ಲಿ
 5. ಮಾರ್ಕೆಟಿಂಗ್ ಕ್ಷೇತ್ರದಲ್ಲಿ
 6. ಸರಕು ಸಾಗಣೆಯಲ್ಲಿ
 7. ಸ್ವಯಂ ಚಾಲಿತ ಕಾರುಗಳ ತಯಾರಿಕೆಯಲ್ಲಿ
 8. ರೋಬೋಟ್ ಗಳನ್ನು ತಯಾರಿಸುವಲ್ಲಿ
 9. ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಯಲ್ಲಿ
 10. ಸ್ವಯಂ ಚಾಲಿತ ಹಣಕಾಸು ಹೂಡಿಕೆಯಲ್ಲಿ
 11. ಇತ್ಯಾದಿ

ಕೃತಕ ಬುದ್ಧಿಮತ್ತೆಯ ಅನುಕೂಲಗಳು ಮತ್ತು ಅನಾನುಕೂಲಗಳು

ಕೃತಕ ಬುದ್ಧಿಮತ್ತೆಯ
ಅನುಕೂಲಗಳು
ಕೃತಕ ಬುದ್ಧಿಮತ್ತೆಯ
ಅನಾನುಕೂಲಗಳು
ಮಾನವ ದೋಷದಲ್ಲಿ
ಇಳಿಕೆ
ನಿರ್ಮಾಣದ ವೆಚ್ಚ
ಹೆಚ್ಚು
ಹೆಚ್ಚು Risk
ತೆಗೆದುಕೊಳ್ಳುತ್ತದೆ
ಸೋಮಾರಿಗಳ ಸಂಖ್ಯೆ
ಹೆಚ್ಚಳ
24 x 7 ಲಭ್ಯನಿರುದ್ಯೋಗ ಹೆಚ್ಚಳ
ಉದ್ಯೋಗಗಳಲ್ಲಿ ಸಹಾಯಯಾವುದೇ ಭಾವನೆಗಳಿಲ್ಲ
ತ್ವರಿತ ನಿರ್ಧಾರಗಳುಮನುಷ್ಯನ ಯೋಚಿಸುವ
ಸಾಮರ್ಥ್ಯ ಸೀಮಿತ
ಡಿಜಿಟಲ್ ಸಹಾಯದುರ್ಬಳಕೆ
ದಿನನಿತ್ಯ ಬಳಕೆ
ಹೊಸ ಆವಿಷ್ಕಾರಗಳು
advantages and disadvantages of Artificial Intelligence In Kannada

FAQ On Artificial Intelligence Essay In Kannada


ಕೃತಕ ಬುದ್ಧಿಮತ್ತೆ ಬಳಸಿ ರೆಸ್ಯುಮೆ ತಯಾರಿಸಬಹುದೇ?

ಹೌದು. ಕೃತಕ ಬುದ್ಧಿಮತ್ತೆಯನ್ನು ಬಳಸಿ ರೆಸ್ಯೂಮೆ ತಯಾರಿಸುವುದು ಸಾಧ್ಯ. ಈಗಿನ ದಿನಗಳಲ್ಲಿ ಆರ್ಟಿಫಿಶಿಯಲ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತಯಾರಿಸಿದ Resume ಗಳಿಗೆ ಕಂಪನಿಗಳು ಹೆಚ್ಚು ಒತ್ತು ನೀಡುತ್ತಿವೆ.

What Is Artificial Intelligence Meaning In Kannada?

Artificial Intelligence ಎಂದರೆ ಕನ್ನಡದಲ್ಲಿ ಕೃತಕ ಬುದ್ದಿಮತ್ತೆ ಎಂದರ್ಥ.

ಕೃತಕ ಬುದ್ದಿಮತ್ತೆ ಎಂಬ ಪದವನ್ನು ಯಾರು ರೂಪಿಸಿದರು?

ಜಾನ್ ಮೆಕಾರ್ಥಿ ಎಂಬುವ ವಿಜ್ಞಾನಿ Artificial Intelligence ಪದವನ್ನು ಹುಟ್ಟು ಹಾಕಿದರು ಎಂದು ಹೇಳಲಾಗುತ್ತದೆ.

ಉಪಸಂಹಾರ Conclusion


ಕೃತಕ ಬುದ್ಧಿಮತ್ತೆಯು ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಪ್ರತಿ ಹೊಸ ಅವಿಷ್ಕಾರ ಅಥವಾ ಪ್ರಗತಿ ಎರಡನ್ನೂ ಹೊಂದಿರುತ್ತದೆ. ಆದರೆ ಮಾನವರಾದ ನಾವು ಅದನ್ನು ನೋಡಿಕೊಳ್ಳಬೇಕು ಮತ್ತು ಉತ್ತಮ ಪ್ರಪಂಚ ಸೃಷ್ಟಿಸುವಲ್ಲಿ ಅವಿಷ್ಕಾರದ ಸಕಾರಾತ್ಮಕ ಅಂಶಗಳನ್ನು ಬಳಸಿಕೊಳ್ಳಬೇಕು.

Artificial Intelligence Essay In Kannada ಲೇಖನವು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಸಲಹೆ ಸೂಚನೆಗಳೇನಾದರೂ ಇದ್ದಾರೆ ದಯವಿಟ್ಟು Comment ಮಾಡಿ.

ಧನ್ಯವಾದಗಳು.

Leave a Comment

error: Content is protected !!