ಈ Computer Details In Kannada ಲೇಖನದಲ್ಲಿ ನೀವು, ಗಣಕಯಂತ್ರದ ಇತಿಹಾಸ, ಅದರ ಭಾಗಗಳು, ವಿಧಗಳು, ಭಾಷೆಗಳು, ಅನುಕೂಲಗಳು, ಅನಾನುಕೂಲಗಳು, ಬಳಕೆ, ಇವೆಲ್ಲದರ ಕುರಿತು ಸವಿವರವಾದ ಮಾಹಿತಿಯನ್ನು ಪಡೆಯಬಲ್ಲಿರಿ.
ಕಂಪ್ಯೂಟರ್ ಎಂದರೇನು?, ಅದರ ಇತಿಹಾಸವೇನು?, ಉಪಯೋಗಗಳೇನು?, ಅನಾನುಕೂಲಗಳೇನು?, ಇವೆಲ್ಲದರ ಬಗ್ಗೆ ಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬೇಕೆಂದರೆ ಈ ಲೇಖನವನ್ನು ಕೊನೆಯತನಕ ಓದಿ.
Here we have tried to provide Computer information in Kannada in a easy way.
ಓದಿ: Starlink ಎಂದರೇನು ಮತ್ತು Starlink ಹೇಗೆ ಕೆಲಸ ಮಾಡುತ್ತದೆ?
ಪರಿವಿಡಿ
Computer Details In Kannada Language
Computer ಕುರಿತು Full Details ಅನ್ನು ಪಡೆಯಲು ನೀವು ಸಿದ್ಧರಿದ್ದೀರಾ?,
ಹಾಗಾದರೆ ಬನ್ನಿ, ಕಂಪ್ಯೂಟರ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಕಂಪ್ಯೂಟರ್ ಎಂದರೇನು? | What is Computer in Kannada
ಕಂಪ್ಯೂಟರ್ (Computer) ಎಂದರೆ ಡಾಟಾವನ್ನು ಮಾಹಿತಿಯನ್ನಾಗಿ ಪರಿವರ್ತಿಸುವ ಇಲೆಕ್ಟ್ರಾನಿಕ್ ಸಾಧನ.
ಗಣಕಯಂತ್ರವು ಡಾಟಾವನ್ನು ಸಂಗ್ರಹಿಸುವ, ಹಿಂಪಡೆಯುವ, ಮತ್ತು ಪ್ರಕ್ರಿಯೆಗೊಳಿಸುವ (Processing) ಸಾಮರ್ಥ್ಯವನ್ನು ಹೊಂದಿದೆ.
ಗಣಕಯಂತ್ರದ ಕುರಿತು ಮುಂದಿನ ಮಾಹಿತಿಯನ್ನು ತಿಳಿಯುವುದಕ್ಕಿಂತ ಮುಂಚೆ ನಾವು ಅದರ ಇತಿಹಾಸವನ್ನು ತಿಳಿಯುವುದು ಬಹಳ ಅವಶ್ಯಕ.
ಕಂಪ್ಯೂಟರ್ ಕಂಡು ಹಿಡಿದವರು ಯಾರು?

ಕಂಪ್ಯೂಟರ್ ನ್ನು ಕಂಡು ಹಿಡಿದವರು ಚಾರ್ಲ್ಸ್ ಬ್ಯಾಬೇಜ್. ಇವರನ್ನು “ಗಣಕಯಂತ್ರ ಪಿತಾಮಹ” ಎಂದೂ ಕರೆಯುತ್ತಾರೆ.
ಏಕೆಂದರೆ, ಚಾರ್ಲ್ಸ್ ಬ್ಯಾಬೇಜ್ ರವರ 1837 ಅನಲಿಟಿಕಲ್ ಎಂಜಿನ್ ಯಂತ್ರವು, ಆಧುನಿಕ ಕಂಪ್ಯೂಟರ್ ಗಳ ಮಾದರಿಯಾಗಿದೆ ಮತ್ತು ಒಂದೇ ರೀತಿಯ ಕಾರ್ಯವೈಖರಿಯನ್ನು ಹೊಂದಿದೆ.
ಓದಿ: ಕ್ರಿಪ್ಟೋ ಕರೆನ್ಸಿ ಕುರಿತು ಪೂರ್ಣ ಮಾಹಿತಿ
ಕಂಪ್ಯೂಟರ್ ಭಾಗಗಳು

ಕಂಪ್ಯೂಟರ್ ಬಗ್ಗೆ ಮುಂದುವರೆಯುವುದಕ್ಕಿಂತ ಮುಂಚೆ ಅದರ ಭಾಗಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
Main Parts Of Computer ಈ ಕೆಳಗಿನಂತಿವೆ;
- ಮಾನಿಟರ್ (Monitor)
- ಕೀಲಿಮಣೆ (Monitor)
- ಮೌಸ್ (Mouse)
- ಸ್ಪೀಕರ್ಸ್ (Speakers)
- Printers
- ಮದರ್ ಬೋರ್ಡ್ (Motherboard)
- ಸಿ.ಪಿ.ಯು (CPU)
- ಜಿ.ಪಿ.ಯು (G.P.U)
- RAM
- HDD/ SSD
ಮೊನಿಟರ್ (Monitor): ಇದೊಂದು ಕಂಪ್ಯೂಟರ್ ನ ಮಾಹಿತಿಗಳನ್ನು ಚಿತ್ರಣದ ಅಥವಾ ದೃಶ್ಯಗಳ ರೂಪದಲ್ಲಿ ಪ್ರದರ್ಶಿಸುವ output ಸಾಧನ.
ಕೀಲಿಮಣೆ (Monitor): ಇದರ ಗುಂಡಿಗಳ ಮೇಲೆ ನೀಡಲಾದ, ಅಕ್ಷರ, ಸಂಖ್ಯೆ ಅಥವಾ ಚಿಹ್ನೆಗಳನ್ನುನಮೂದಿಸುವುದರಿಂದ ನಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕೀಲಿ ಮಣೆಯೊಂದು input ಸಾಧನ.
ಮೌಸ್ (Mouse): ಇದೊಂದು ಕೈಯಲ್ಲಿ ಹಿಡಿದುಕೊಂಡು, ಅದನ್ನು ಸರಿಸುತ್ತ ನಿಮ್ಮ ಆಜ್ಞೆಗಳನ್ನು ಕಂಪ್ಯೂಟರ್ ಗೆ ನೀಡುವ input ಸಾಧನವಾಗಿದೆ.
ಸ್ಪೀಕರ್ಸ್ (Speakers): ಇದು Computer ನ ಶಬ್ದಗಳನ್ನು ಉತ್ಪತ್ತಿ ಮಾಡಲು ಬಳಸುವ Output ಹಾರ್ಡ್ ವೇರ್ ಸಾಧನವಾಗಿದೆ. ಇದರಲ್ಲಿ ಬರುವ ಶಬ್ದವು computer’s sound card ದಿಂದ ಉತ್ಪತ್ತಿಯಾಗಿರುತ್ತದೆ.
Printer: ಇದನ್ನು ಅಕ್ಷರ ಅಥವಾ ಚಿತ್ರಗಳ ರೂಪದಲ್ಲಿರುವ ದಾಖಲೆಗಳನ್ನು ಮುದ್ರಿಸಲು ಬಳಸುತ್ತಾರೆ. ಇದು Output Device ಆಗಿದೆ.
ಮದರ್ ಬೋರ್ಡ್ (Motherboard): ಕಂಪ್ಯೂಟರ್ ನ ಎಲ್ಲ ಘಟಕಗಳು ಈ Circuit ಬೋರ್ಡ್ನ ಮುಖಾಂತರ ಸಂವಹನ ನಡೆಸುತ್ತವೆ. ಇದು ಕಂಪ್ಯೂಟರ್ ನ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತದೆ.
ಸಿ.ಪಿ.ಯು (CPU): ಕೇಂದ್ರ ಸಂಸ್ಕರಣಾ ಘಟಕ (Central Processing Unit) ನಾವು ನೀಡುವ ಸೂಚನೆಗಳನ್ನು ಕಂಪ್ಯೂಟರ್ ನ ಭಾಷೆಗೆ ಬದಲಾಯಿಸಿಕೊಂಡು ಅವುಗಳಿಗೆ ತಕ್ಕ ಪ್ರತಿಕ್ರಿಯೆಗಳನ್ನು ಕೊಡುವಲ್ಲಿ ಮಹತ್ವ ಕಾರ್ಯ ನಿರ್ವಹಿಸುತ್ತದೆ.
ಸಿ.ಪಿ.ಯು ಅನ್ನು ಕಂಪ್ಯೂಟರ್ ನ ಮೆದುಳು ಎಂದು ಕರೆಯುತ್ತಾರೆ. ಇದು ನೇರವಾಗಿ ಮದರ್ ಬೋರ್ಡ್ ಗೆ Connect ಆಗಿರುತ್ತದೆ.
ಜಿ.ಪಿ.ಯು (G.P.U): Graphics Processing Unit ಇದನ್ನು ಸಾಮಾನ್ಯವಾಗಿ Graphics card ಅಥವಾ Video card ಎಂದೂ ಕರೆಯುತ್ತಾರೆ.
ಇದು Animation, images, videos ಮುಂತಾದವುಗಳ Rendering ವೇಗವನ್ನು ಹೆಚ್ಚಿಸುತ್ತದೆ.
RAM: Random Access Memory ಯನ್ನು Read-write ಮೆಮೊರಿ ಅಥವಾ Primary ಮೆಮೊರಿ ಎಂದು ಕರೆಯುತ್ತಾರೆ.
Execution ಸಮಯದಲ್ಲಿ, CPU ಗೆ ಬೇಕಾದ ಪ್ರೋಗ್ರಾಮ್ ಗಳು ಮತ್ತು ಡೇಟಾ ಗಳು ಈ ಮೆಮೊರಿಯಲ್ಲಿ ಶೇಖರಣೆಯಾಗಿರುತ್ತದೆ. ಒಂದು ವಿದ್ಯುತ್ ಸಂಪರ್ಕ್ ಕಡಿತಗೊಂಡರೆ ಶೇಖರಣೆಯಾದ ಡೇಟಾ ಅಳಿಸಿ ಹೋಗುತ್ತದೆ.
HDD/ SSD: ಕಂಪ್ಯೂಟರ್ ಗಳು ತಮ್ಮ ಡೇಟಾವನ್ನು ಸಂಗ್ರಹಿಸಲು Hard Disk Drive ಅಥವಾ Solid State Drive ಗಳನ್ನು ಬಳಸಿಕೊಳ್ಳುತ್ತವೆ.
ಓದಿ: ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಕಂಪ್ಯೂಟರ್ ವಿಧಗಳು
ಕಂಪ್ಯೂಟರ್ ನ್ನು ಅದರ ಕಾರ್ಯ, ಉಪಯೋಗ, ರಚನೆ, ವೈಶಿಷ್ಟ್ಯ, ವೇಗ, ಹೀಗೆ ಬೇರೆ-ಬೇರೆ ಆಧಾರಗಳ ಮೇಲೆ ಬೇರೆ-ಬೇರೆ ತೆರನಾಗಿ ವರ್ಗೀಕರಿಸಬಹುದು.
ಗಣಕಯಂತ್ರದ Speed ಮತ್ತು Computing Power ಗಳ ಆಧಾರದ ಮೇಲೆ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.
Types of computer in Kannada
- ವರ್ಕ್ಸ್ಟೇಷನ್ ಕಂಪ್ಯೂಟರ್ (Workstation Computer)
- ಮಿನಿ ಕಂಪ್ಯೂಟರ್ (Mini Compute)
- ಮೇನ್ ಫ್ರೇಮ್ ಕಂಪ್ಯೂಟರ್ (Main Frame Computer)
- ಸೂಪರ್ ಕಂಪ್ಯೂಟರ್ (Super Computer)
1. ಪರ್ಸನಲ್ ಕಂಪ್ಯೂಟರ್:

ಈ ಕಂಪ್ಯೂಟರ್ ನ್ನು ಒಬ್ಬ ಬಳಕೆದಾರನು, ಯಾವುದೇ ಕಂಪ್ಯೂಟರ್ ತಜ್ಞರ ಸಹಾಯವಿಲ್ಲದೆ ಬಳಸುವಂತಹ ಬಹುಪಯೋಗಿ ಸಾಧನವಾಗಿದೆ. ಇದನ್ನು ಏಕಕಾಲದಲ್ಲಿ ಒಬ್ಬ ಬಳಕೆದಾರ ಮಾತ್ರ ಬಳಸಲು ಸಾಧ್ಯವಾಗುತ್ತದೆ.
ಉದಾಹರಣೆಗೆ, Desktop, Laptop, Tablet ಮತ್ತು Mobile.
2. ವರ್ಕ್ ಸ್ಟೇಷನ್ ಕಂಪ್ಯೂಟರ್:

ಈ ಕಂಪ್ಯೂಟರ್ ಅನ್ನು ವಿಶೇಷವಾಗಿ Technical ಮತ್ತು Scientific ಬಳಕೆಗಳಿಗೆ ಎಂದೇ ವಿನ್ಯಾಸಗೊಳಿಸಲಾಗಿರುತ್ತದೆ.
ಇದು ಕೂಡ Personal ಕಂಪ್ಯೂಟರ್ ಇದ್ದಂತೆ ಆದರೆ ಹೆಚ್ಚು Powerful Microprocessor ಅನ್ನು ಹೊಂದಿರುತ್ತದೆ.
3. ಮಿನಿ ಕಂಪ್ಯೂಟರ್: ಇದು ಒಂದು Midrange ಕಂಪ್ಯೂಟರ್ ಎಂದೇ ಹೇಳಬಹುದು. ಇದು ನೂರಾರು Users ಗಳನ್ನು ಏಕಕಾಲದಲ್ಲಿ Support ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಗಾತ್ರದಲ್ಲಿಯೂ ಕೂಡ ಕಡಿಮೆ ಇರುತ್ತದೆ
4. ಮೇನ್ ಫ್ರೇಮ್ ಕಂಪ್ಯೂಟರ್: ಇದು Powerful ಕಂಪ್ಯೂಟರ್. ಇದರ Software Technology ಮಿನಿ ಕಂಪ್ಯೂಟರ್ ಗಳಿಂದ ಭಿನ್ನವಾಗಿರುತ್ತದೆ.
ಇದನ್ನು ಉದ್ಯಮ, ಜನಗಣತಿ, ಸರಕಾರಿ ಸಂಸ್ಥೆ, ವಹಿವಾಟು, ಮತ್ತು ಇನ್ನೀತರ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ.
5. ಸೂಪರ್ ಕಂಪ್ಯೂಟರ್:ಇದು ಭೂಮಿಯ ಮೇಲಿನ ಅತಿ ವೇಗದ ಕಂಪ್ಯೂಟರ್ ಎನಿಸಿಕೊಳ್ಳುತ್ತದೆ. ಕೋಟ್ಯಂತರ Instruction ಗಳನ್ನು ಸೆಕೆಂಡಿನಲ್ಲಿಯೇ Execute ಮಾಡುತ್ತದೆ.
ಉದಾಹರಣೆಗೆ; JAGUAR, PARAM series
ಇದೆಲ್ಲ About computer in Kannada ಆಗಿದ್ದು, ಇದನೆಲ್ಲ ತಿಳಿದುಕೊಂಡ ನಿಮಗೆ ಗಣಕಯಂತ್ರದ ಉಪಯೋಗಗಳು ತಿಳಿದುಕೊಳ್ಳುವುದು ಅಷ್ಟೇ ಒಳ್ಳೆಯದು.
ಓದಿ: ಮೊಬೈಲ್ ಎಂದರೇನು? ಮೊಬೈಲ್ ಕುರಿತು ಪೂರ್ಣ ಮಾಹಿತಿ
ಕಂಪ್ಯೂಟರ್ ಭಾಷೆಗಳು
ಕಂಪ್ಯೂಟರ್ ಭಾಷೆಗಳನ್ನು, ಕಂಪ್ಯೂಟರ್ ನೊಂದಿಗೆ ಸಂವಹನ ಮಾಡುವ ವಿಧಾನಗಳು ಎಂದೇ ಹೇಳಬಹುದು.
ಕಂಪ್ಯೂಟರ್ ಭಾಷೆಗಳಲ್ಲಿ Programming, Command, Machine, Markup, Style sheet, Configuration, Construction, Query, Modeling, Simulation ಭಾಷೆಗಳೆಂದು ವಿಧಗಳಿವೆ. ಈ ಭಾಷೆಗಳಲಲ್ಲಿಯೂ ವಿಧಗಳಿವೆ.
C, C++, Java, ಇವೆಲ್ಲ ಪ್ರೋಗ್ರಾಮಿಂಗ್ ಭಾಷೆಗೆ ಉದಾಹರಣೆಗಳಾಗಿವೆ.
ಕಂಪ್ಯೂಟರ್ ಶಿಕ್ಷಣದ ಮಹತ್ವ
ಕಂಪ್ಯೂಟರ್, ವಿದ್ಯಾರ್ಥಿಗಳಿಗೆ ವಾಸ್ತವಿಕ ಜಗತ್ತನ್ನು ಪರಿಚಯ ಮಾಡಿಕೊಡುವುದರ ಜೊತೆಗೆ ಪ್ರಪಂಚದಾದ್ಯಂತ ಏನಾಗುತ್ತಿದೆ ಎಂಬ ಅರಿವನ್ನು ಮೂಡಿಸುತ್ತದೆ.
ಇಂದಿನ ಜಗತ್ತಿನಲ್ಲಿ ನಡೆಯುವ ಬಹುತೇಕ ಚಟುವಟಿಕೆಗಳು ಆನ್ಲೈನ್ ಆಗಿರುವುದರಿಂದ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ತುಂಬಾ ಅವಶ್ಯಕ.
ಈ ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ನಾವೂ ಅದರೊದಿಗೆ ಬದಲಾಗುವದು ಅವಶ್ಯಕ.
ವೈಯಕ್ತಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಕಂಪ್ಯೂಟರ್ ನ ಮಹತ್ವ ಅಪಾರ. ಕಂಪ್ಯೂಟರ್ ಅನ್ನು ಇವತ್ತು ಬ್ಯಾಂಕು, ಕಚೇರಿ, ಶಾಲೆ, ಕಾಲೇಜು, ಸರಕಾರಿ ಕಚೇರಿ, ಅಂಚೆ, ಇತ್ಯಾದಿ ಸ್ಥಳಗಲ್ಲಿ ಉಪಯೋಗಿಸಲಾಗುತ್ತಿದೆ.
ಆದ್ದರಿಂದ ನಾವು ಕಂಪ್ಯೂಟರ್ ನಲ್ಲಿ ಸ್ನಾತಕೋತ್ತರ ಪಡೆಯಲಾಗದಿದ್ದರೂ ಕಂಪ್ಯೂಟರ್ ಬಗ್ಗೆ ಸಾಮಾನ್ಯ ಜ್ಞಾನವನ್ನಾದರೂ ಹೊಂದಬೇಕಾಗಿರುವುದು ಅವಶ್ಯಕ.
ಶಿಕ್ಷಣದಲ್ಲಿ ಗಣಕಯಂತ್ರದ ಉಪಯೋಗಗಳು ಅಪಾರ. ಕಂಪ್ಯೂಟರ್ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ಕಾರಣವಾಗುತ್ತದೆ.
ಕಂಪ್ಯೂಟರ್ ಗಳು ಪಾಠಿ ಪುಸ್ತಕಗಳಾಗಿರುವ ಈ ಆಧುನಿಕ ಯುಗದಲ್ಲಿ ಕಂಪ್ಯೂಟರ್ ನ ಶಿಕ್ಷಣ ಅತ್ಯಂತ ಅವಶ್ಯಕ.
ಕಂಪ್ಯೂಟರ್ ಉಪಯೋಗಗಳು
ಮೊದಲು ಆವಿಷ್ಕರಿಸಿದ ಕಂಪ್ಯೂಟರ್ ಕಠಿಣ ಲೆಕ್ಕಾಚಾರಗಳಿಗೆ ಮಾತ್ರ ಸೀಮಿತವಾಗಿತ್ತು. ಕಾಲ ಕಳೆದಂತೆ ವಿಕಸನ ಹೊಂದುತ್ತಾ ಎಲ್ಲ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ.
ಕಂಪ್ಯೂಟರ್ ನ ಹಲವು ಉಪಯೋಗಗಳಲ್ಲಿ ಕೆಲವನ್ನು ಈ ಕೆಳಗೆ ನೀಡಲಾಗಿದೆ.
- ವ್ಯವಹಾರ
- ಶಿಕ್ಷಣ ವ್ಯವಸ್ಥೆ
- ಆರೋಗ್ಯ ಸೇವೆ
- ಸರಕಾರಿ ಕ್ಷೇತ್ರ
- ಮಾರುಕಟ್ಟೆ
- ವಿಜ್ಞಾನ ಮತ್ತು ತಾಂತ್ರಿಕತೆ
- ಮುದ್ರಣ ಕ್ಷೇತ್ರ
- ಕಲೆ ಮತ್ತು ಮನರಂಜನೆ
- ದೂರ ಸಂಪರ್ಕ
- ಬ್ಯಾಂಕಿಗ್ ಮತ್ತು ಹಣಕಾಸು
- ಸಾರಿಗೆ
- ಗಡಿ ಭದ್ರತೆ
- ಭದ್ರತೆ ಮತ್ತು ಕಣ್ಗಾವಲು
- ಹವಾಮಾನ ಮುನ್ಸೂಚನೆ
- ರೊಬೊಟಿಕ್ಸ್
ಕಂಪ್ಯೂಟರ್ ಅನಾನುಕೂಲಗಳು
ಕಂಪ್ಯೂಟರ್ ಗಳು ಹಲವಾರು ಅನುಕೂಲಗಳನ್ನು ಹೊಂದಿದ್ದು ಜನರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತಿವೆ. ಇವತ್ತು ಕಂಪ್ಯೂಟರ್ ಪ್ರತಿಯೊಂದು ಕ್ಷೇತ್ರದಲ್ಲಿ ಮಹತ್ವದ ಕಾರ್ಯವನ್ನು ನಿಭಾಯಿಸುತ್ತಿದೆ.
ಹೀಗಾಗಿ ಕಂಪ್ಯೂಟರ್ ದಿಂದಾಗಿ ನಾವು ಎದುರಿಸಬಹುದಾದ ಸಮಸ್ಯೆಗಳನ್ನು ನೀಡಲಾಗಿದೆ.
- ಹೆಚ್ಚು ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗದೆ ಇರಬಹುದು
- ಕಣ್ಣಿಗೆ ಒತ್ತಡ ಬೀಳುವುದರಿಂದ ಕಣ್ಣಿನ ದೃಷ್ಟಿ ಕಡಿಮೆಯಾಗಬಹುದು
- ಕಲಿಕೆ ಸೀಮಿತಗೊಳ್ಳದಹುದು
- ಕಂಪ್ಯೂಟರ್ ಮೇಲೆ ಅವಲಂಬನೆ ಹೆಚ್ಚಾಗಬಹುದು
- ಉದ್ಯೋಗಗಳು ಕೊರತೆಯಾಗಬಹುದು
- ಎಲೆಕ್ಟ್ರಾನಿಕ್ ತ್ಯಾಜ್ಯಗಳ ಹೆಚ್ಚಳ
- ಅನುಪಯುಕ್ತ ಚಟುವಟಿಕೆಗಳಿಂದ ಸಮಯದ ವ್ಯರ್ಥ ಆಗಬಹುದು
- ದೈಹಿಕ ಚಟುವಟಿಕೆಗಳ ಕೊರತೆ
- ಖಿನ್ನತೆಗೆ ಒಳಗಾಗಿಸಬಹುದು
- ಸೈಬರ್ ಅಪರಾಧಗಳಿಗೆ ಒಳಗಾಗಿಸಬಹುದು
ಕಂಪ್ಯೂಟರ್ ಸಾಮಾನ್ಯ ಜ್ಞಾನ
ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಕೇಳುವುದು ಸರ್ವೆ ಸಾಮಾನ್ಯ.
Computer Details ಬಹಳ ಮಹತ್ವ. ಹಾಗಾಗಿ ಕೆಲವು ತುಂಬಾ ಮಹತ್ವದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
೧. ಜಗತ್ತಿನ ಪ್ರಥಮ ಕಂಪ್ಯೂಟರ್ ಯಾವುದು?
- ENIAC (electronic numerical integrator and computer)
೨. 1 ಟೆರಾಬೈಟ್ ಎಂದರೆ ಎಷ್ಟು GB?
- 1024 GB
೩. ಕಂಪ್ಯೂಟರ್ ನ ಮೆದಳು ಎಂದು ಯಾವ ಭಾಗವನ್ನು ಕರೆಯುತ್ತಾರೆ?
- CPU
೪. ಕಂಪ್ಯೂಟರ್ ನ ಜನಕ ಯಾರು?
- ಚಾರ್ಲ್ಸ್ ಬ್ಯಾಬೇಜ್
೫. ಪ್ರಥಮ ಬಾರಿಗೆ ಲೆಕ್ಕಾಚಾರಗಳಿಗೆ ಉಪಯೋಗಿಸಿದ ಸಾಧನ ಯಾವುದು?
- ಅಬ್ಯಾಕಸ್ (Abacus)
೬. ಡೆಸ್ಕ್ ಟಾಪ್ ಕಂಪ್ಯೂಟರ್ ನ ಸಾಮಾನ್ಯ ಹೆಸರೇನು?
- PC
೭. ಕಂಪ್ಯೂಟರ್ ನ ಹೃದಯ ಭಾಗ ಯಾವುದು?
- ಮದರ್ ಬೋರ್ಡ್ (motherboard)
೮. ಅತಿ ಹೆಚ್ಚು ವೇಗದ ಸಾಮರ್ಥ್ಯವುಳ್ಳ ಕಂಪ್ಯೂಟರ್ ಯಾವುದು?
- ಸೂಪರ್ ಕಂಪ್ಯೂಟರ್
ಕಂಪ್ಯೂಟರ್ ಪ್ರಶ್ನೋತ್ತರಗಳು – FAQ On Computer Details In Kannada
ಕಂಪ್ಯೂಟರ್ ಪಿತಾಮಹ ಯಾರು?
ಚಾಲ್ಸ್ ಬ್ಯಾಬೇಜ್ ರವರನ್ನು ಕಂಪ್ಯೂಟರ್ ನ ಪಿತಾಮಹ ಎಂದು ಕರೆಯುತ್ತಾರೆ.
Definition of computer in Kannada
ಕಂಪ್ಯೂಟರ್ ಒಂದು ಮಾಹಿತಿಯನ್ನು ಸಂಸ್ಕರಿಸಲು, ಸಂಗ್ರಹಿಸಲು, ಮತ್ತು ಪ್ರದರ್ಶಿಸಲು ಬಳಸುವ ಇಲೆಕ್ಟ್ರಾನಿಕ್ ಸಾಧನ. ಅಥವಾ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಪ್ರೋಗ್ರಾಮ್ ಗಳು ಕೊಡುವ ಸೂಚನೆಗಳ ಆಧಾರದ ಮೇಲೆ ಕಾರ್ಯಾಚರಣೆ ಮಾಡುವ ಒಂದು ಸಾಧನ.
What is ಕಂಪ್ಯೂಟರ್ in Kannada?
Kannada meaning of computer is ಗಣಕಯಂತ್ರ(Ganaka Yantra).
How to use a computer keyboard in Kannada?
There are 2 main methods to use a Computer keyboard in Kannada.
1. You can use a computer keyboard in Kannada by installing Nudi 6.0 (ನುಡಿ 6.0 ) Software from the official website.
2. You can activate the G-Board chrome extension (This works only in Chrome)
Conclusion
ಕಂಪ್ಯೂಟರ್ ಮಾಹಿತಿ ಕನ್ನಡದಲ್ಲಿ ಒದಗಿಸುವ ಸಣ್ಣ ಪ್ರಯತ್ನ ಇದಾಗಿತ್ತು.
ಈ Computer Details In Kannada ಲೇಖನ ನಿಮಗೆ ಇಷ್ಟವಾಗಿದ್ದಾರೆ ದಯವಿಟ್ಟು Share ಮಾಡಿ.
ಮಾಹಿತಿಯ ಮೂಲಗಳು (Sources)
This information is very helpful to us
Thank you.