ಕಂಪ್ಯೂಟರ್ ಸಾಮಾನ್ಯ ಜ್ಞಾನ PDF | Computer GK In Kannada

ಕಂಪ್ಯೂಟರ್ ಗೆ ಸಂಬಂಧಿಸಿದ ಮಹತ್ವಪೂರ್ಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂಭವನೀಯ ಕಂಪ್ಯೂಟರ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

ಕಂಪ್ಯೂಟರ್ ಸಾಮಾನ್ಯ ಜ್ಞಾನ PDF ಲೇಖನದ ಕೊನೆಗೆ ಬಹು ಆಯ್ಕೆ ಪ್ರಶ್ನೆಗಳನ್ನೂ ಕೂಡ ಉತ್ತರಿಸಲಾದೆ. ಹಾಗಾಗಿ ಕೊನೆಯ ತನಕ ಓದಿ.

1. ಕಂಪ್ಯೂಟರ್ ಎಂದರೇನು?

ಉತ್ತರ: ಕಂಪ್ಯೂಟರ್ ಎನ್ನುವುದು ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಪ್ರೋಗ್ರಾಂಗಳು ಒದಗಿಸಿದ ಸೂಚನೆಗಳ ಆಧಾರದ ಮೇಲೆ ಪ್ರಕ್ರಿಯೆ, ಲೆಕ್ಕಾಚಾರ ಹಾಗೂ ಕಾರ್ಯಾಚರಣೆ ಮಾಡುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ.

2. ಕಂಪ್ಯೂಟರ್ ಪಿತಾಮಹ ಎಂದು ಯಾರಿಗೆ ಕರೆಯುತ್ತಾರೆ?

ಉತ್ತರ : ಚಾಲ್ಸ್ ಬ್ಯಾಬೇಜ್ ರವರು ಆಧುನಿಕ ಕಂಪ್ಯೂಟರ್ ಅನ್ನು ಹೋಲುವ Analytical Engine ( ವಿಶ್ಲೇಷಣಾತ್ಮಕ ಎಂಜಿನ್) ಅನ್ನು ವಿನ್ಯಾಸಗೊಳಿಸಿದರು. ಅದಕ್ಕಾಗಿ ಇವರನ್ನು ಗಣಕಯಂತ್ರದ ಪಿತಾಮಹ ಎಂದು ಕರೆಯುತ್ತಾರೆ.

ಕಂಪ್ಯೂಟರ್ ಸಾಮಾನ್ಯ ಜ್ಞಾನ PDF Download

3. ಕಂಪ್ಯೂಟರ್ ನ ಕೀಬೋರ್ಡಿನಲ್ಲಿ ಎಷ್ಟು Key ಗಳು ಇರುತ್ತವೆ?

ಉತ್ತರ: Window ಕೀಬೋರ್ಡಿನಲ್ಲಿ 104 Key ಗಳಿರುತ್ತವೆ. Window Based ಲ್ಯಾಪ್ಟಾಪ್ ಕೀಬೋರ್ಡ್ನಲ್ಲಿ 86 key ಗಳಿರುತ್ತವೆ. Apple Keyboard With Numeric ಕೀಬೋರ್ಡ್ನಲ್ಲಿ 109 ಕೀ ಗಳಿರುತ್ತವೆ.

4. ವಿಶ್ವದ ಮೊದಲ ಕಂಪ್ಯೂಟರ್ ಯಾವುದು?
ಉತ್ತರ: ENAIC (Electrical Numerical Integrator And Calculator) ಎನ್ನುವುದು ವಿಶ್ವದ ಮೊದಲ ಕಂಪ್ಯೂಟರ್ ಆಗಿದೆ.

5. ಕಂಪ್ಯೂಟರ್ ಭಾಗಗಳು ಯಾವುವು?
ಕಂಪ್ಯೂಟರ್ ನ ಕೆಲವು ಮುಖ್ಯ ಭಾಗಗಳು ಈ ಕೆಳಗಿನಂತಿವೆ:

Computer samanya gyana pdf kannada
  • ಮಾನಿಟರ್
  • ಕೀಬೋರ್ಡ್/ ಕೀಲಿಮಣೆ
  • ಮೌಸ್
  • CPU
  • HDD
  • ಮದರ್ ರ್ಬೋರ್ಡ್
  • RAM
  • ಪ್ರಿಂಟರ್
  • ಮೈಕ್ರೊಫೋನ್
ಇನ್ಪುಟ್ ಸಾಧನಗಳು ಔಟ್ ಪುಟ್
ಸಾಧನಗಳು
ಮೌಸ್ಮಾನಿಟರ್
ಕೀಬೋರ್ಡ್ಸ್ಪೀಕರ್
ವೆಬ್ ಕ್ಯಾಮ್ಪ್ರೊಜೆಕ್ಟರ್
ಜಾಯ್ಸ್ಟಿಕ್ಹೆಡ್ ಸೆಟ್
ಮೈಕ್ರೊಫೋನ್ಪ್ಲಾಟರ್
ಸ್ಕ್ಯಾನರ್ಪ್ರಿಂಟರ್
ಟಚ್ ಸ್ಕ್ರೀನ್ಇತ್ಯಾದಿ

6. ಕಂಪ್ಯೂಟರ್ ನ ಪಾಯಿಂಟಿಂಗ್ ಡಿವೈಸ್ ಎಂದು ಯಾವುದಕ್ಕೆ ಕರೆಯುತ್ತಾರೆ?

ಉತ್ತರ: ಮೌಸ್. ಇದರಲ್ಲಿ ಎಡ ಬಟನ್, ಬಲ ಬಟನ್ ಮತ್ತು ಸ್ಕ್ರೋಲ್ ವೀಲ್(Scroll Wheel) ಎಂಬ ಮೂರು ಮುಖ್ಯ ಭಾಗಗಳಿವೆ.

ಮೌಸ್ ಒಂದು ಚಿಕ್ಕ ಹಾರ್ಡ್ವೇರ್ Input ಸಾಧನವಾಗಿದ್ದು ಕೈಯಿಂದ ಬಳಸಲಾಗುತ್ತದೆ. ಇದನ್ನು ಕರ್ಸರ್ ಚಲನೆಯನ್ನು ನಿಯಂತ್ರಿಸಲು ಮತ್ತು ಫೋಲ್ಡರ್ಗಳು, Text ಗಳು, ಫೈಲ್ ಗಳು ಹಾಗೂ Icon ಗಳನ್ನು ಸರಿಸಲು ಮತ್ತು ಆಯ್ಕೆ ಮಾಡಲು ಬಳಸಲಾಗುತ್ತದೆ.

7. OMR Sheet ನಲ್ಲಿ ಪೆನ್ ಅಥವಾ ಪೆನ್ಸಿಲಿನಿಂದ ಮಾಡಲಾದ ಗುರುತುಗಳನ್ನು ಸ್ಕ್ಯಾನ್ ಮಾಡಲು ಬಳಸುವ ಸಾಧನ ಯಾವುದು?

ಉತ್ತರ: OMR( Optical Mark Recognizer) ಅಥವಾ ADF( Automatic Document Feeder).

8. ಗಣಕಯಂತ್ರದ ದೃಶ್ಯ ಪ್ರದರ್ಶನ ಘಟಕ ಎಂದು ಯಾವುದಕ್ಕೆ ಕರೆಯುತ್ತಾರೆ?

ಉತ್ತರ: ಮಾನಿಟರ್ ಒಂದು ಔಟ್ ಪುಟ್ ಸಾಧನವಾಗಿದ್ದು ಕಂಪ್ಯೂಟರ್ ನಲ್ಲಿನ ಮಾಹಿತಿಗಳನ್ನು ಚಿತ್ರದ ಅಥವಾ ಅಕ್ಷರದ ರೂಪದಲ್ಲಿ ತೋರಿಸುತ್ತದೆ.

9. ಪ್ರೈಮರಿ ಮೆಮೊರಿಗಳು ಯಾವುವು?

ಉತ್ತರ: RAM(Random Access Memory) ಮತ್ತು ROM (Read Only Memory). ಇವುಗಳು ಸಂಸ್ಕರಣ ಘಟಕಗಳಾಗಿದ್ದು ನಾವು ನೀಡುವ ದತ್ತಾಂಶಗಳನ್ನು ಕಂಪ್ಯೂಟರ್ನಲ್ಲಿ ಉಳಿಸಿಕೊಳ್ಳಲು ಬೇಕಾಗುತ್ತವೆ.

10. ಸೆಕೆಂಡರಿ ಮೆಮೊರಿಗಳು ಯಾವುವು?
ಹಾರ್ಡ್ ಡಿಸ್ಕ್, ಪ್ಲಾಪಿ ಡಿಸ್ಕ್, CD ಮತ್ತು PENDRIVE ಮತ್ತು ಇತ್ಯಾದಿ.

11. 1MB ಮತ್ತು 1Mb ಯಲ್ಲಿ ಯಾವುದು ಹೆಚ್ಚು?
ಉತ್ತರ: MB = MegaByte ಮೆಗಾಬೈಟ್
Mb = Megabit ಮೆಗಾಬಿಟ್

ಇಲ್ಲಿ 1 Megabyte = 8 Megabits ಗೆ ಸಮ.
ಹಾಗಾಗಿ 1MB ಎಂಬುದು ಹೆಚ್ಚು.

ಒಂದು ವೇಳೆ ನಿಮಗೆ ಯಾವುದೇ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿ 100Mbps ವೇಗದ ಇಂಟರ್ನೆಟ್ ಅನ್ನು ಕೊಡುವ ಭರವಸೆ ನೀಡಿದೆ ಎಂದಾದರೆ ಅದರಲ್ಲಿ ತುಂಬಾ ಖುಷಿಯ ಪಡುವ ವಿಚಾರವೇನಿಲ್ಲ. ನಿಮಗೆ ಸಿಗುವ ಇಂಟರ್ನೆಟ್ ವೇಗ 12.5MBps. ಏಕೆಂದರೆ ಇಂಟರ್ನೆಟ್ ವೇಗ =100/8= 12.5MBps

12. 1TB ಎಂದರೆ ಎಷ್ಟು GB ಗಳು?
1TB ಎಂದರೆ 1024GB

13. ಮೆಮೊರಿಯನ್ನು ಅಳೆಯುವ ಅತಿ ದೊಡ್ಡ ಏಕಮಾನ ಯಾವುದು?

ಉತ್ತರ: ಝೆಟಾ ಬೈಟ್ (Zettabyte) ಎನ್ನುವುದು ಮೆಮೊರಿಯನ್ನು ಅಳೆಯುವ ಅತಿ ದೊಡ್ಡ ಏಕಮಾನ. 1ZB = 1024 EB

1KB 1024 Bytes
1MB 1024 KB
1GB 1024MB
1TB 1024GB
1PB 1024TB
1EB 1024PB
1ZB 1024EB
ಕಂಪ್ಯೂಟರ್ ಮೆಮೋರಿಯನ್ನು ಅಳೆಯುವ ಏಕಮಾನಗಳು

14. ಕಂಪ್ಯೂಟರ್ ನ ಮೆದುಳು ಎಂದು ಯಾವುದಕ್ಕೆ ಕರೆಯುತ್ತಾರೆ?

ಉತ್ತರ: ಸಿಪಿಯು CPU. CPU ನ ವಿಸ್ತೃತ ರೂಪ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್. ಇದು Input ನ್ನು ಪ್ರೋಸೆಸ್ ಮಾಡುವುದು, ಡಾಟಾವನ್ನು ಸಂಗ್ರಹಿಸುವುದು, ಮತ್ತು ಬಂದಂತಹ ರಿಸಲ್ಟ್ ಗಳನ್ನು Output ಮಾಡುವ ಕೆಲಸವನ್ನು ಮಾಡುತ್ತದೆ.

15. ಮೊದಲ ಆಪರೇಟಿಂಗ್ ಸಿಸ್ಟಮ್ ಯಾವುದು?
ಅ. ಆಂಡ್ರಾಯ್ಡ್ Android
ಬ. ವಿಂಡೋ Window
ಕ. GMOS
ಡ. ಲಿನುಕ್ಸ್ Linux

ಉತ್ತರ: GMOS ಎನ್ನುವುದು ಮೊದಲ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಇದನ್ನು IBM ಕಂಪ್ಯೂಟರ್ ಗಳಿಗಾಗಿ ಅಭಿವೃದ್ಧಿಪಡಿಸಲಾಗಿತ್ತು.

16. ಮೊದಲ ವೆಬ್ ಬ್ರೌಸರ್(Browser) ಯಾವುದು?
ಅ. ಫೈರ್ಫಾಕ್ಸ Firefox
ಬ. ಸಫಾರಿ Safari
ಕ. ಕ್ರೋಮ್ Chrome
ಡ. WorldWideWeb

ಉತ್ತರ: WorldWideWeb ವು ಮೊದಲ ವೆಬ್ ಬ್ರೌಸರ್ ಆಗಿದೆ. World Wide Web(WWW) ದೊಂದಿಗೆ ಗೊಂದಲಕ್ಕೆ ಒಳಗಾಗಬೇಡಿ. ಏಕೆಂದರೆ WorldWideWeb ಮತ್ತು World Wide Web(WWW)ಗಳೆರಡೂ ಬೇರೆ-ಬೇರೆ. ಜನರು WorldWideWeb ಬ್ರೌಸರ್ ಹೆಸರಿನೊಂದಿಗೆ Confuse ಆಗಬಾರದೆಂದು ತದನಂತರ ಇದನ್ನು Nexus ಎಂದು ಮರುನಾಮಕರಣ ಮಾಡಲಾಯಿತು.

17. iPhone ಗಳಲ್ಲಿ ಬಳಸಲಾಗುವ ಆಪರೇಟಿಂಗ್ ಸಿಸ್ಟಮ್ ಯಾವುದು?
ಅ. ಆಂಡ್ರಾಯ್ಡ್
ಬ. ಯುನಿಕ್ಸ್
ಕ. ವಿಂಡೋಸ್
ಡ. ಐಒಎಸ್

ಉತ್ತರ: IOS-iPhone Operating System. ಇದು Apple Inc ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಮ್ ಆಗಿದ್ದು iPhone, iPod, iPad ಗಳಲ್ಲಿ ಬಳಸಲಾಗುತ್ತದೆ.

18. E-Mail ನ ಪಿತಾಮಹ ಯಾರು?
ಅ. ರೇ ಟಾಮ್ಲಿನ್ಸನ್
ಬ. ಚಾಲ್ಸ್ ಬ್ಯಾಬೇಜ್
ಕ. ಟಿಮ್ ಬರ್ನರ್ಸ್ ಲಿ
ಡ. ಯಾರೂ ಅಲ್ಲ

ಉತ್ತರ: ರೇ ಟಾಮ್ಲಿನ್ಸನ್(Ray Tomlinson) ರವರನ್ನು ಇಮೇಲ್ ನ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ಮೊಟ್ಟ ಮೊದಲು 1971ರಲ್ಲಿ @ ಸಂಕೇತವನ್ನು ಬಳಸಿಕೊಂಡು ಇಮೇಲ್ ಕಳುಹಿಸಿದರು.

19. ಈ ಕೆಳಗಿನವುಗಳಲ್ಲಿ ಯಾವುದು Search Engine ಅಲ್ಲ?
ಅ. Opra Mini
ಬ. Google
ಕ. Yahoo
ಡ. Yandex

ಉತ್ತರ: Opra Mini ಇದೊಂದು ವೆಬ್ ಬ್ರೌಸರ್ ಆಗಿದ್ದು Opera ಕಂಪನಿಯಿಂದ ಅಭಿವೃದ್ಧಿಪಡಿಸಲಾಗಿದೆ.

ಈ ಪ್ರಶ್ನೋತ್ತರಗಳು ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿಯೂ ತುಂಬಾ ಸಹಾಯವನ್ನು ಮಾಡಬಲ್ಲವು.

Browser ಮತ್ತು Search Engine ನಡುವಿನ ವ್ಯತ್ಯಾಸ

ಬ್ರೌಸರ್ಸರ್ಚ್ ಇಂಜಿನ್
ಬ್ರೌಸರ್ ಎನ್ನುವುದು ವೆಬ್ ಪೇಜ್ ಗಳನ್ನು ಹಿಂಪಡೆಯುವ ಮತ್ತು ಪ್ರದರ್ಶಿಸುವ ಸಾಫ್ಟ್ ವೇರ್ ನ ಒಂದು ತುಣುಕು.ಸರ್ಚ್ ಇಂಜಿನ್ ಎನ್ನುವುದು ಇತರ ವೆಬ್ ಸೈಟ್ ಗಳಿಂದ Web Page ಗಳನ್ನು ಹುಡುಕಲು ಅಥವಾ ಮಾಹಿತಿಯನ್ನು ಹುಡುಕಲು ಸಹಾಯ ಮಾಡುವ ಒಂದು ವೆಬ್ಸೈಟ್ ಆಗಿದೆ.
ಒಂದು ವೆಬ್ಸೈಟ್ ಅನ್ನು ಪ್ರವೇಶಿಸಲು ಮತ್ತು ತೋರಿಸಲು ಅವಕಾಶ ಮಾಡಿಕೊಡುತ್ತದೆ.ಇದು ವೆಬ್ಸೈಟನ್ನು ಹುಡುಕಲು ಮತ್ತು ನಿಖರವಾದ ಮಾಹಿತಿಯನ್ನು ಶೋಧಿಸಿ ತರುವ ಕೆಲಸವನ್ನು ಮಾಡುತ್ತದೆ.
ಉದಾಹರಣೆ: Chrome, Firefox, Safariಉದಾಹರಣೆ: Google, Bing & Yahoo
ಬ್ರೌಸರ್ ಮತ್ತು ಸರ್ಚ್ ಇಂಜಿನ್ ನಡುವಿನ ವ್ಯತ್ಯಾಸ

20. ಜಗತ್ತಿನ ಅತಿ ವೇಗದ ಸೂಪರ್ ಕಂಪ್ಯೂಟರ್ ಯಾವುದು?
ಅ. ಫುಗಾಕು (Fugaku)
ಬ. ಸಂಮಿತ್ (Summit)
ಕ. HPC5
ಡ. ಸಲೀನ್ (Selene)

ಉತ್ತರ: ಟೋಕಿಯೋದ Fugaku ಸೂಪರ್ ಕಂಪ್ಯೂಟರ್ ಜಗತ್ತಿನ ಅತಿ ವೇಗದ ಮತ್ತು ಅತಿ Powerful ಸೂಪರ್ ಕಂಪ್ಯೂಟರ್ ಆಗಿದೆ.

21. ಕಂಪ್ಯೂಟರ್ ಗಳ ಚಿಪ್ ತಯಾರಿಕೆಯಲ್ಲಿ ಯಾವುದನ್ನು ಬಳಸುತ್ತಾರೆ?
ಅ. ತಾಮ್ರ
ಬ. ಸಿಲಿಕಾನ್
ಕ. ಸ್ಟೀಲ್
ಡ. ಚಿನ್ನ

ಉತ್ತರ: ಸಿಲಿಕಾನ್ ಅರೆವಾಹಕವಾಗಿದ್ದು ಇದನ್ನು ಕಂಪ್ಯೂಟರಗಳ ಚಿಪ್ ತಯಾರಿಕೆಯಲ್ಲಿ ಬಳಸುತ್ತಾರೆ.

22. https ದ ವಿಸ್ತೃತ ರೂಪವೇನು?
ಅ. ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೊಟೋಕಾಲ್ ಸೆಕ್ಯೂರ್
ಬ. ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೋಟೋಕಾಲ್ ಸೆಕ್ಯೂರ್
ಕ. ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೋಟೋಕಾಲ್ ಸೆಕ್ಯೂರಿಟಿ
ಡ. ಹೈಪರ್ ಟ್ರಾನ್ಸ್ಪೋರ್ಟ್ ಪ್ರೋಟೋಕಾಲ್ ಸೆಕ್ಯೂರ್

ಉತ್ತರ: ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೋಟೋಕಾಲ್ ಸೆಕ್ಯೂರ್(Hypertext Transfer Protocol Secure). ಇದನ್ನು ಕಂಪ್ಯೂಟರ್ ನೆಟ್ವರ್ಕ್ ನಲ್ಲಿ ಸುರಕ್ಷಿತ ಸಂವಹನಕ್ಕಾಗಿ ಬಳಸಲಾಗುತ್ತದೆ.

23. Ctrl+A ಕೀ ಅನ್ನು ಯಾವುದಕ್ಕೆ ಬಳಸಲಾಗುತ್ತದೆ?
ಅ. ಡಾಕ್ಯುಮೆಂಟನ್ನು Save ಮಾಡಲು
ಬ. Cut ಮಾಡಲು
ಕ. ಎಲ್ಲಾ ಅಕ್ಷರಗಳನ್ನು Select ಮಾಡಲು
ಡ. Delete ಮಾಡಲು

ಉತ್ತರ: ಎಲ್ಲಾ ಅಕ್ಷರಗಳನ್ನು Select ಮಾಡಲು Ctrl+A Shortcut Key ಯನ್ನು ಬಳಸಲಾಗುತ್ತದೆ.

24. ಗಣಕಯಂತ್ರವು ಈ ಕೆಳಗಿನ ಯಾವ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ?
ಅ. ಇಂಗ್ಲಿಷ್ ಭಾಷೆ
ಬ. ಬೈನರಿ ಭಾಷೆ
ಕ. ಉಚ್ಚಮಟ್ಟದ ಭಾಷೆ
ಡ. ಮೇಲಿನ ಎಲ್ಲವೂ

ಉತ್ತರ: ಬೈನರಿ ಭಾಷೆಯು ಒಂದು ಯಾಂತ್ರಿಕ ಭಾಷೆಯಾಗಿದ್ದು 0 ಮತ್ತು 1 ಅಂಕಿಗಳ ರೂಪದಲ್ಲಿ ಕಂಪ್ಯೂಟರಿಗೆ ಸೂಚನೆ ನೀಡುತ್ತದೆ.

25. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಗರ ಯಾವುದು?
ಅ. ಮುಂಬೈ
ಬ. ಬೆಂಗಳೂರು
ಕ. ಚೆನ್ನೈ
ಡ. ದೆಹಲಿ

ಉತ್ತರ: ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ISRO, ವಿಪ್ರೊ, HAL ಅಂತಹ ದೊಡ್ಡ-ದೊಡ್ಡ ಐಟಿ ಕಂಪನಿಗಳ ಪ್ರಧಾನ ಕಚೇರಿಗಳು ಕೂಡ ಇಲ್ಲಿವೆ.

26. IT ಯ ವಿಸ್ತೃತ ರೂಪ ಏನಾಗುತ್ತದೆ?
ಅ. ಇನ್ಫಾರ್ಮೇಶನ್ ಟೆಕ್ನಾಲಜಿ
ಬ. ಇಂಟಿಗ್ರೇಟೆಡ್ ಟೆಕ್ನಾಲಜಿ
ಕ. ಇಂಟಲಿಜೆಂಟ್ ಟೆಕ್ನಾಲಜಿ
ಡ. ಇಂಟರೆಸ್ಟಿಂಗ್ ಟೆಕ್ನೋಲಜಿ

ಉತ್ತರ: ಇನ್ಫಾರ್ಮೇಶನ್ ಟೆಕ್ನಾಲಜಿ. ಮಾಹಿತಿ ತಂತ್ರಜ್ಞಾನ ಎನ್ನುವುದು ಗಣಕಯಂತ್ರ ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆಯಾಗಿದೆ. ಇದನ್ನು IT Capital Of India ಎಂದೂ ಕರೆಯುತ್ತಾರೆ.

27. UPS ನ ಪೂರ್ಣ ರೂಪವೇನು?
ಅ. Uninterruptible Power Supply
ಬ. Uninterruptible Power Source
ಕ. Uniform Power Supply
ಡ. ಅ ಮತ್ತು ಬ ಎರಡೂ

ಉತ್ತರ ಡ. UPSನ್ನು Uninterruptible Power Supply ಅಥವಾ Uninterruptible Power Source ಎಂದು ಕರೆಯುತ್ತಾರೆ.

28. ಈ ಕೆಳಗಿನವುಗಳಲ್ಲಿ ಯಾವುದು ಮೈಕ್ರೋಸಾಫ್ಟ್ ನ ಉತ್ಪನ್ನವಲ್ಲ?
ಅ. Microsoft Windows
ಬ. MS Office
ಕ. MS Word
ಡ. ಮೇಲಿನ ಎಲ್ಲವೂ

ಉತ್ತರ. Microsoft Windows, MS Office ಮತ್ತು MS Word ಎಲ್ಲಾ ಮೈಕ್ರೋಸಾಫ್ಟ್ ಕಂಪನಿಯ ಉತ್ಪನ್ನಗಳು

29. C, C++, C#, Java ಮತ್ತು Python ಇವುಗಳೇನು?
ಉತ್ತರ: ಇವುಗಳು ಕಂಪ್ಯೂಟರ್ ಪ್ರೊಗ್ರಾಮಿಂಗ್ ಭಾಷೆಗಳು

30. ಕಂಪ್ಯೂಟರ್ File ವಿಸ್ತರಣೆಗಳು(Extension) ಯಾವುವು?
ಉತ್ತರ:. doc, .pdf, .txt, .png, .JPG

31. Apple Computer ಗಳಲ್ಲಿ ಬಳಸುವ ಪ್ರೋಗ್ರಾಮಿಂಗ್ ಭಾಷೆ ಯಾವುದು?
ಉತ್ತರ: ಸ್ವೀಪ್ಟ್ ಭಾಷೆ/ Swift Language

32. ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಡಿಸೆಂಬರ್ 2

33. ಒಂದು Nibble ನಲ್ಲಿ ಎಷ್ಟು ಬಿಟ್ಸ್ ಇರುತ್ತವೆ?
ಉತ್ತರ: 4 Bits

34. ಡಿಜಿಟಲ್ ಗಡಿಯಾರಗಳಲ್ಲಿ ಯಾವ ವಿಧದ ಕಂಪ್ಯೂಟರ್ ಕಂಡು ಬರುತ್ತದೆ?
ಉತ್ತರ: ಎಂಬೆಡೆಡ್ ಕಂಪ್ಯೂಟರ್/Embedded Computer

35. 1KB ಎಷ್ಟು MB ಗಳಿಗೆ ಸಮ?
ಉತ್ತರ: 0.001 MBಗಳಿಗೆ ಸಮ.

FAQ

1. HTTP ಮತ್ತು HTTPS ಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ?

HTTP ಮತ್ತು HTTPS ಗಳಲ್ಲಿ HTTPS ಹೆಚ್ಚು ಸುರಕ್ಷಿತ.

2. ಈ ಕೆಳಗಿನವುಗಳಲ್ಲಿ ಯಾವುದು Output ಸಾಧನ?

A. ಕೀಬೋರ್ಡ್
B. ಮೌಸ್
C. ಲೈಟ್ ಪೆನ್
D. VDU

ಉತ್ತರ: VDU – Visual Display Unit. ಇದು ಬಳಕೆದಾರರಿಂದ ಸೂಚನೆಗಳನ್ನು ತೆಗೆದುಕೊಂಡು ಪ್ರದರ್ಶಿಸಬೇಕಾದ ಮಾಹಿತಿಯನ್ನು ಮಾನಿಟರ್ ಮೇಲೆ ಡಿಸ್ಪ್ಲೇ ಮಾಡುವ ಕಂಪ್ಯೂಟರ್ ನ ಒಂದು Output ಘಟಕ. ಗಣಕಯಂತ್ರದ Input ಮತ್ತು Output ಸಾಧನಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿ ಓದಿ.

ಕನ್ನಡದಲ್ಲಿ ಗಣಕಯಂತ್ರದ ಕುರಿತ ಪ್ರಶ್ನೋತ್ತರಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಕಂಪ್ಯೂಟರ್ ಸಾಮಾನ್ಯ ಜ್ಞಾನ PDF ಎಂಬ ಈ ಲೇಖನದಾಗಿತ್ತು.

ಲೇಖನದ ಕುರಿತು ನಿಮ್ಮ ಸಲಹೆ-ಸೂಚನೆ ಇರುವ ದೂರ ಗಳೇನಾದರೂ ದಯವಿಟ್ಟು Comment Box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

DOWNLOAD PDF

1 thought on “ಕಂಪ್ಯೂಟರ್ ಸಾಮಾನ್ಯ ಜ್ಞಾನ PDF | Computer GK In Kannada”

Leave a Comment

error: Content is protected !!