[2022] ಕ್ರಿಪ್ಟೋಕರೆನ್ಸಿ ಎಂದರೇನು? | ಬಿಟ್ ಕಾಯಿನ್ ಎಂದರೇನು?

ಕ್ರಿಪ್ಟೋ ಕರೆನ್ಸಿ ಅಂತೆ, ಬಿಟ್ ಕಾಯಿನ್ ಅಂತೆ, ಬ್ಲಾಕ್ಚೇನ್ ತಂತ್ರಜ್ಞಾನವಂತೆ. ಅಷ್ಟಕ್ಕೂ ಏನಿವೆಲ್ಲಾ? ಪ್ರಚಲಿತದಲ್ಲಿ ಅಷ್ಟೊಂದು ಸದ್ದಿನಲ್ಲಿ ಇರುವುದಕ್ಕೆ ಕಾರಣಗಳೇನು?

ಹೀಗೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿವೆಯೇ?
ಬನ್ನಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!.

ಈ ಲೇಖನದಲ್ಲಿ ಕ್ರಿಪ್ಟೋಕರೆನ್ಸಿ ಎಂದರೇನು? ಬಿಟ್ ಕಾಯಿನ್ ಎಂದರೇನು?, ಬಿಟ್-ಕಾಯಿನ್ ಗೂ ಮತ್ತು ಕ್ರಿಪ್ಟೋ ಕರೆನ್ಸಿಗೂ ಇರುವ ವ್ಯತ್ಯಾಸವೇನು? ಹಾಗೂ ಬ್ಲಾಕ್ ಚೇನ್ ತಂತ್ರಜ್ಞಾನ ಎಂದರೇನು? ಇವುಗಳೆಲ್ಲದರ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

In this article we are explaining about cryptocurrency in Kannada and cryptocurrency details in Kannada.


ಕ್ರಿಪ್ಟೋಕರೆನ್ಸಿ ಎಂದರೇನು?

ಕ್ರಿಪ್ಟೋ ಕರೆನ್ಸಿ ಎನ್ನುವುದು ಬ್ಲಾಕ್ ಚೇನ್ ತಂತ್ರಜ್ಞಾನದ ಮೇಲೆ ಆಧಾರಿತ ಡಿಜಿಟಲ್ ಕರೆನ್ಸಿ ಆಗಿದೆ. ಇದೊಂದು ವಿಕೇಂದ್ರೀಕೃತ (Decentralized) ಕರೆನ್ಸಿಯಾಗಿದೆ. ಅಂದರೆ, ಇದು ನಾವು ಬಳಸುವ ರೂಪಾಯಿಯಂತೆ ವಹಿವಾಟುಗಳನ್ನು ಪರಿಶೀಲಿಸಲು ಯಾವುದೇ ಬ್ಯಾಂಕುಗಳ ಅಥವಾ ವಿಶ್ವಾಸಾರ್ಹ ಮೂರನೆಯ ವ್ಯಕ್ತಿಗಳ ಮೇಲೆ ಅವಲಂಬಿತವಾಗಿರುವುದಿಲ್ಲ.

ಬದಲಾಗಿ, ವಹಿವಾಟುಗಳಿಗೆ ರಕ್ಷಣೆಯನ್ನು ನೀಡಲು ಹೆಚ್ಚುವರಿ ಕರೆನ್ಸಿಗಳ ಸೃಷ್ಟಿಯನ್ನು ನಿಯಂತ್ರಿಸಲು ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾಗುವ ಕರೆನ್ಸಿಗಳ ಅಂದರೆ Coin ಗಳ ಮಾಲೀಕತ್ವವನ್ನು ಪರಿಶೀಲಿಸಲು ಬಲವಾದ ಕ್ರಿಪ್ಟೋಗ್ರಫಿ(Cryptography) ಯನ್ನು ಹೊಂದಿದೆ.

ಈ Cryptocurrency ಯಲ್ಲಿನ Crypto ಪದವನ್ನು Cryptography ಯಿಂದ ತೆಗೆದುಕೊಳ್ಳಲಾಗಿದೆ.

ಹಾಗಾದರೆ ಏನಿದು ಕ್ರಿಪ್ಟೋಗ್ರಫಿ?

ಕ್ರಿಪ್ಟೋಗ್ರಫಿ ಎಂದರೇನು?

ಕ್ರಿಪ್ಟೋಗ್ರಫಿ ಎನ್ನುವುದು ಮಾಹಿತಿಯನ್ನು ಸುರಕ್ಷಿತ ಸ್ವರೂಪಕ್ಕೆ ಪರಿವರ್ತಿಸುವ ಮೂಲಕ ರಕ್ಷಣೆಯನ್ನು ನೀಡುವ ವಿಜ್ಞಾನವಾಗಿದೆ. ಈ ಪ್ರಕ್ರಿಯೆಗೆ ಗೂಢಲಿಪೀಕರಣ (Encryption) ಎಂದು ಕರೆಯುತ್ತಾರೆ.

ಉದಾಹರಣೆಗೆ “Hello” ಪದವನ್ನು Encrypt ಮಾಡಿದಾಗ 6EB69570 ರೂಪವಾಗಿ ಬದಲಾಗುತ್ತದೆ. ಆದ್ದರಿಂದ ಮಾಹಿತಿ ಮಧ್ಯದಲ್ಲಿ ಸೋರಿಕೆ ಆಗುವುದು ತಪ್ಪುತ್ತದೆ.

ಹಾಗಾಗಿ ಕ್ರಿಪ್ಟೋಗ್ರಫಿಯನ್ನು ಡಿಜಿಟಲ್ ಮಾಹಿತಿಯನ್ನು ರಕ್ಷಿಸಲು ಬಳಸಲಾಗುತ್ತದೆ. ಇದರರ್ಥ ಕ್ರಿಪ್ಟೋಕರೆನ್ಸಿಯನ್ನು ಸಂಗ್ರಹಿಸುವುದರ ಮತ್ತು ಬೇರೆಯವರಿಗೆ ರವಾನಿಸುವುದರ ಹಿಂದೆ Advanced Coding ಒಳಗೊಂಡಿರುತ್ತದೆ.

ಈ ವರೆಗೆ ಕ್ರಿಪ್ಟೋಕರೆನ್ಸಿ ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ತಿಳಿದುಕೊಂಡೆವು. ಆದರೆ ಈಗ ಕ್ರಿಪ್ಟೋಕರೆನ್ಸಿಗಳು ಯಾವುವು? ಎಂಬುದನ್ನು ತಿಳಿದುಕೊಳ್ಳೋಣ.


ಬ್ಲಾಕ್ ಚೈನ್ ತಂತ್ರಜ್ಞಾನ ಎಂದರೇನು? | Blockchain technology in Kannada

ಅತೀ ಸರಳವಾಗಿ ಹೇಳಬೇಕೆಂದರೆ, Blockchain ಎನ್ನುವುದು Transactions ಅಂದರೆ ವಹಿವಾಟುಗಳ ಪಟ್ಟಿಯಾಗಿದ್ದು ಇದನ್ನು ಯಾರು ಬೇಕಾದರೂ ನೋಡಬಹುದು ಮತ್ತು Verify ಮಾಡಬಹುದು. ಇದು ಒಂದು ಡಿಜಿಟಲ್ ಖಾತೆ ಪುಸ್ತಕದಂತೆ ಕೆಲಸ ಮಾಡುತ್ತದೆ.

ಇದನ್ನು ಬಿಟ್ ಕಾಯಿನ್ ಗೆ ಹೋಲಿಕೆ ಮಾಡಿ ಹೇಳಿದರೆ, ಯಾರಾದರೂ ಬಿಟ್-ಕಾಯಿನ್ ಕಳುಹಿಸಿದ ಅಥವಾ ಸ್ವೀಕರಿಸಿದ ಪ್ರತಿಬಾರಿಯ ದಾಖಲೆಯನ್ನು ಬ್ಲಾಕ್ಚೇನ್ ಹೊಂದಿರುತ್ತವೆ.

ಬಹುತೇಕ ಎಲ್ಲಾ ಕ್ರಿಪ್ಟೋಕರೆನ್ಸಿಗಳು ಬ್ಲಾಕ್ಚೇನ್ ಜಾಲದ ಮೂಲಕ ರಕ್ಷಿಸಲ್ಪಟ್ಟಿರುತ್ತವೆ.

Blockchain ತಂತ್ರಜ್ಞಾನವು ಯಾವುದೇ ಸಿಸ್ಟಮ್ ಅನ್ನು  ಬದಲಾಯಿಸಲು, ಹ್ಯಾಕ್ ಮಾಡಲು ಅಥವಾ ಮೋಸ ಮಾಡದಂತೆ ಕಷ್ಟಕರವಾದ ರೀತಿಯಲ್ಲಿ ಅಥವಾ ಅಸಾಧ್ಯ ರೀತಿಯಲ್ಲಿ ಮಾಹಿತಿಯನ್ನು ದಾಖಲಿಸುವ ಒಂದು ವ್ಯವಸ್ಥೆಯಾಗಿದೆ.

ಈ ವರಿಗೆ ಬ್ಲಾಕ್ಚೇನ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ತಿಳಿದುಕೊಂಡೆವು. ಬನ್ನಿ ಇದನ್ನು ಉಪಯೋಗಿಸಿಕೊಂಡು ವಹಿವಾಟು ನಡೆಸುವ ಕರೆನ್ಸಿಗಳು ಯಾವುವು ಅಥವಾ ಕ್ರಿಪ್ಟೋಕರೆನ್ಸಿಯ ವಿಧಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.


ಕ್ರಿಪ್ಟೋಕರೆನ್ಸಿಯ ವಿಧಗಳು

ಮಾರುಕಟ್ಟೆಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಕೆಲವು ಕ್ರಿಪ್ಟೋಕರೆನ್ಸಿಗಳು ಈ ಕೆಳಗಿನಂತಿವೆ.

ಬಿಟ್ ಕಾಯಿನ್ – BitCoin
ಇಥೆರಿಯಂ – Ethereum
ಲೈಟ್ ಕಾಯಿನ್ – Litecoin
ರಿಪ್ಪಲ್ – Ripple

1. ಬಿಟ್ ಕಾಯಿನ್ ಎಂದರೇನು?

ಬಿಟ್ ಕಾಯಿನ್ ಎಂದರೇನು
what is bitcoin in kannada

ಬಿಟ್ ಕಾಯಿನ್ ಎನ್ನುವುದು ಒಂದು ವಿಧದ ಕ್ರಿಪ್ಟೋ ಕರೆನ್ಸಿಯಾಗಿದ್ದು ಡಿಜಿಟಲ್ ರೂಪದಲ್ಲಿ ಇರುತ್ತದೆ. ಇದು ಮೊದಲ ಕ್ರಿಪ್ಟೋ ಕರೆನ್ಸಿಯಾಗಿದ್ದು ಇದುವರೆಗೆ ಹೆಚ್ಚು ಬಳಸಿದ, ಹೆಚ್ಚು ಮೌಲ್ಯಯುತ ಮತ್ತು ಹೆಚ್ಚು ಜನಪ್ರಿಯತೆ ಪಡೆದ ಕ್ರಿಪ್ಟೋ ಕರೆನ್ಸಿಯಾಗಿದೆ.

ಪ್ರಸ್ತುತ(2-1-2022) ಒಂದು ಬಿಟ್ ಕಾಯಿನ್ ನ ಮೌಲ್ಯ 35,16,504.3 ರೂಪಾಯಿಗಳು. ಈ ಕೆಳಗಿನ ನಕ್ಷೆಯನ್ನು ನೀವು ನೋಡಬಹುದು.

ಸತೋಷಿ ನಾಕಾಮೋಟೋ (Satoshi Nakamoto)” ಎಂಬ ಹೆಸರಿನಿಂದ ಕರೆಯಲ್ಪಡುವ  ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು 2009ರಲ್ಲಿ ಬಿಟ್ ಕಾಯಿನ್ ಅನ್ನು Launch ಮಾಡಿತು.

ಅಕ್ಟೋಬರ್ 2021 ರ ಹೊತ್ತಿಗೆ ಸುಮಾರು 19 ಮಿಲಿಯನ್ BitCoin ಗಳು ಚಲಾವಣೆಯಲ್ಲಿದ್ದವು. ಇವುಗಳೆಲ್ಲ ಬ್ಲಾಕ್ಚೇನ್ ತಂತ್ರಜ್ಞಾನ ಆಧಾರಿತವಾಗಿವೆ.

2. ಇಥೆರಿಯಂ

Ethereum in kannada

Ethereum ಅನ್ನು 2015ರಲ್ಲಿ Develop ಮಾಡಲಾಯಿತು. ಇದು ಬಿಟ್ ಕಾಯಿನ್ ನ ನಂತರ ಅತಿ ಹೆಚ್ಚು ಪ್ರಸಿದ್ಧಿ ಪಡೆದ Cryptocurrency ಆಗಿದೆ.

3. ಲೈಟ್ ಕಾಯಿನ್ Litecoin

Litecoin cryptocurrency in kannada

ಇದು ಕೂಡ ಬಿಟ್-ಕಾಯಿನ್ ಇದ್ದ ಹಾಗೆ. ಆದರೆ ಇದರಲ್ಲಿ  ಬಿಟ್ ಕಾಯಿನ್ ಗಿಂತ ವೇಗವಾಗಿ Transactions ಮತ್ತು Process ಮಾಡುವ ಹೊಸ ಅವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ ಕೊಂಡಿದೆ.

ನೆನಪಿರಲಿ: BitCoin ಅನ್ನು ಹೊರತುಪಡಿಸಿ ಬೇರೆ Cryptocurrency ಗಳನ್ನು ಒಟ್ಟಾರೆಯಾಗಿ “Altcoins” ಎಂದು ಕರೆಯಲಾಗುತ್ತದೆ.


ಕ್ರಿಪ್ಟೋ ಕರೆನ್ಸಿಯ ಅನುಕೂಲಗಳು ಮತ್ತು ಅನಾನುಕೂಲಗಳು

ಕ್ರಿಪ್ಟೋಕರೆನ್ಸಿಯ ಅನುಕೂಲಗಳು ಈ ಕೆಳಗಿನಂತಿವೆ.

1. ಹಣದುಬ್ಬರದಿಂದ ರಕ್ಷಣೆ
ಹಣದುಬ್ಬರವು ಅನೇಕ ಕರೆನ್ಸಿಗಳ ಮೌಲ್ಯವನ್ನು ಕಾಲನಂತರದಲ್ಲಿ ಕುಸಿಯುವಂತೆ ಮಾಡಿರುವುದನ್ನು ನಾವು ನೋಡಿದ್ದೇವೆ. ಬಹುತೇಕವಾಗಿ ಪ್ರತಿ ಕ್ರಿಪ್ಟೋಕರೆನ್ಸಿ ಗಳು ಆರಂಭದಲ್ಲಿ ನಿಗದಿತ ಮೊತ್ತದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತವೆ.

ಇಡೀ ಜಗತ್ತಿನಲ್ಲಿ ಕೇವಲ 21 ಮಿಲಿಯನ್ ಬಿಟ್ ಕಾಯಿನ್ ಗಳು ಮಾತ್ರ Release ಆಗಿವೆ. ಆದ್ದರಿಂದ ಬೇಡಿಕೆ ಹೆಚ್ಚಾದಂತೆ ಅದರ ಮೌಲ್ಯ ಹೆಚ್ಚಾಗುತ್ತದೆ. ಹೀಗಾಗಿ ಇದು ದೀರ್ಘಾವಧಿಯವರೆಗೆ ಮಾರುಕಟ್ಟೆಯಲ್ಲಿ ಮುಂದುವರೆಯುಲು ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ.

2. ಆಡಳಿತ ಮತ್ತು ನಿರ್ವಹಣೆ
ಯಾವುದೇ ಕರೆನ್ಸಿ ಅಭಿವೃದ್ಧಿ ಆಗಲು ಅಥವಾ ಪ್ರಸಿದ್ಧಿಯನ್ನು ಪಡೆಯಲು ಅದರ ಆಡಳಿತ ಮತ್ತು ನಿರ್ವಹಣೆಯು ಪ್ರಮುಖ ಅಂಶವಾಗುತ್ತದೆ.

ಕ್ರಿಪ್ಟೋ ಕರೆನ್ಸಿಯ Transaction ಗಳನ್ನು Developers ಅಥವಾ Miners ತಮ್ಮ Hardware ಗಳಲ್ಲಿ Store ಮಾಡುತ್ತಾರೆ ಮತ್ತು ಆ ಕೆಲಸಕ್ಕೆ ಅವರು Transaction Free ಯನ್ನು ಪಡೆಯುತ್ತಾರೆ. ಅವರು ವಹಿವಾಟಿನ ಶುಲ್ಕವನ್ನು ಪಡೆಯುತ್ತಿರುವುದರಿಂದ ವಹಿವಾಟಿನ ದಾಖಲೆಗಳನ್ನು ನಿಖರವಾಗಿ ಮತ್ತು up-to-date ಆಗಿ ಇಟ್ಟುಕೊಳ್ಳುತ್ತಾರೆ.

3. ಸುರಕ್ಷತೆ/ ಭದ್ರತೆ
ಭದ್ರತೆ ಮತ್ತು ಗೌಪ್ಯತೆ ಕ್ರಿಪ್ಟೋಕರೆನ್ಸಿಯ ಪ್ರಮುಖ ಕಾಳಜಿಯಾಗಿದೆ. ಆದ್ದರಿಂದ ಕ್ರಿಪ್ಟೋಕರೆನ್ಸಿಗಳು ವಹಿವಾಟುಗಳಿಗೆ ಕ್ರಿಪ್ಟೋಗ್ರಫಿಯನ್ನು ಬಳಕೆ ಮಾಡಿಕೊಳ್ಳುತ್ತವೆ.

4. ಸುಲಭ ವಿನಿಮಯ (Exchange)
ಭಾರತೀಯ ರೂಪಾಯಿ, ಅಮೆರಿಕದ ಡಾಲರ್, ಯುರೋಪದ ಯುರೋ ಹಾಗೂ ಬ್ರಿಟಿಷ್ ಪೌಂಡ್ ಗಳಂತಹ ಅನೇಕ ಕರೆನ್ಸಿಗಳನ್ನು ಬಳಸಿಕೊಂಡು ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸಬಹುದು. ಹೀಗೆ ಒಂದು ಕರೆನ್ಸಿ ಇನ್ನೊಂದು ಕರೆನ್ಸಿಯಾಗಿ  ಕ್ರಿಪ್ಟೋ ಕರೆನ್ಸಿಯಲ್ಲಿ Trading ಮಾಡುವುದರ ಮೂಲಕ ಕಡಿಮೆ ಶುಲ್ಕದೊಂದಿಗೆ Convert ಮಾಡಿಕೊಳ್ಳಬಹುದು.

5. ವಿಕೇಂದ್ರೀಕೃತ ವ್ಯವಸ್ಥೆ – Decentralized
ಕ್ರಿಪ್ಟೋಕರೆನ್ಸಿಯ ಮುಖ್ಯ ಅನುಕೂಲವೆಂದರೆ ಅದು ವಿಕೇಂದ್ರೀಕೃತ ವ್ಯವಸ್ಥೆ.

ಸದ್ಯಕ್ಕೆ ನಾವು ಉಪಯೋಗಿಸುತ್ತಿರುವ ಭೌತಿಕ ಕರೆನ್ಸಿಗಳು ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಆದರೆ, ಕ್ರಿಪ್ಟೋಕರೆನ್ಸಿಗಳು ಯಾವುದೇ ಸರ್ಕಾರದ, ಬ್ಯಾಂಕ್ ಅಥವಾ ಸಂಸ್ಥೆಯ ನಿಯಂತ್ರಣದಲ್ಲಿ ಇರುವುದಿಲ್ಲ. ಯಾರೂ ಇದರ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಇವು ಸ್ಥಿರ ಮತ್ತು ಸುರಕ್ಷಿತ.

6. ಕಡಿಮೆ ವಹಿವಾಟು ಶುಲ್ಕ
ಕ್ರಿಪ್ಟೋಕರೆನ್ಸಿ ಪ್ರಮುಖ ಉಪಯೋಗವೆಂದರೆ ಜಗತ್ತಿನೆಲ್ಲೆಡೆ ಹಣವನ್ನು ಸುಲಭವಾಗಿ ಕಳಿಸುವುದು.
ಇದರ ವಹಿವಾಟು ಶುಲ್ಕ (Transaction Fee) ಅತಿ ಕಡಿಮೆ ಅಥವಾ ಶೂನ್ಯ ಮೊತ್ತಕ್ಕ ಸಮವಿರುತ್ತದೆ.

ಇನ್ನೊಬ್ಬರಿಗೆ ಕ್ರಿಪ್ಟೋಕರೆನ್ಸಿ Send ಮಾಡುತ್ತಿರುವಾಗ ಮಧ್ಯದಲ್ಲಿ Visa, Paypal ಗಳಂತಹ ಮೂರನೆಯ ವ್ಯಕ್ತಿಗಳ ಅಗತ್ಯತೆ ಇಲ್ಲಿ ಇರುವುದಿಲ್ಲ. ಆದ್ದರಿಂದ Extra Transaction Fee ಕೊಡುವ ಅವಶ್ಯಕತೆ ಇರುವುದಿಲ್ಲ.

7. ಹಣವನ್ನು ವರ್ಗಾಯಿಸುವ ತ್ವರಿತ ಮಾರ್ಗ

ಕ್ರಿಪ್ಟೋಕರೆನ್ಸಿಗಳ ಅಂತರಾಷ್ಟ್ರೀಯ ಅಥವಾ ದೇಶಿಯ ವಹಿವಾಟುಗಳು ಅತೀ ಕಡಿಮೆ ಸಮಯದಲ್ಲಿ ಆಗುತ್ತವೆ. ಏಕೆಂದರೆ ಮಧ್ಯದಲ್ಲಿ ಪರಿಶೀಲನೆ(Verify) ಪ್ರಕ್ರಿಯೆ ಬಹಳ ಕಡಿಮೆ ಇದ್ದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.


ಕ್ರಿಪ್ಟೋಕರೆನ್ಸಿಯ ಅನಾನುಕೂಲಗಳು

  • ಅಕ್ರಮ ವಹಿವಾಟುಗಳಿಗೆ ಬಳಕೆಯಾಗಬಹುದು
  • ಡಾಟಾ Losses ಹಣಕಾಸಿನ ನಷ್ಟವನ್ನು ಉಂಟು ಮಾಡಬಹುದು
  • ವಿಕೇಂದ್ರೀಕೃತವಾಗಿದ್ದರೂ ಇನ್ನೂ ಕೆಲವು ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ
  • ಕೆಲವು Coins ಬೇರೆ Fiat ಕರೆನ್ಸಿ ಗಳಲ್ಲಿ ಲಭ್ಯವಿಲ್ಲ
  • Cryptocurrency Mining ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು
  • ಹ್ಯಾಕ್ ಗಳಿಗೆ ಒಳಗಾಗಬಹುದು
  • Refund ಅಥವಾ Cancellation Policy ಇರುವುದಿಲ್ಲ.

FAQ On ಕ್ರಿಪ್ಟೋಕರೆನ್ಸಿ ಎಂದರೇನು?

Q1. ಕ್ರಿಪ್ಟೋ ಕರೆನ್ಸಿಯಿಂದ ಹಣ ಗಳಿಸುವುದು ಹೇಗೆ?

ಕ್ರಿಪ್ಟೋಕರೆನ್ಸಿಗಳಿಂದ ಹಣಗಳಿಸಲು ಬಳಸುವ ಸಾಮಾನ್ಯ ಮಾರ್ಗವೆಂದರೆ BitCoin, Ethereum, Ripple ಹಾಗೂ Litecoin ಗಳಂತಹ ಕ್ರಿಪ್ತೋಕರೆನ್ಸಿ ಗಳನ್ನು ಖರೀದಿಸಿ ಅವುಗಳ ಬೆಲೆ ಹೆಚ್ಚಾಗುವ ತನಕ ಕಾಯ್ದು, ಒಮ್ಮೆಲೇ ಅವುಗಳ ಮಾರುಕಟ್ಟೆ ಬೆಲೆ( Market Price) ಏರಿದಾಗ ಲಾಭದಲ್ಲಿ ಮಾರಾಟ ಮಾಡಲಾಗುತ್ತದೆ.

Q2. Bitcoin ಖರದಿಸುವುದು ಹೇಗೆ?

ನೀವು ಎರಡು ವಿಧಾನಗಳಿಂದ ಬಿಟ್ ಕಾಯಿನ್ ಖರೀದಿಸಬಹುದು.
1. ದಲ್ಲಾಳಿಗಳು(Traditional Brokers) – ಇವುಗಳು ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಮಾರ್ಗಗಳನ್ನು ಒದಗಿಸುವ Online Borkers. ಈ Platform ಗಳು ಕಡಿಮೆ Trading Cost ಗೆ ಅವಕಾಶ ಮಾಡಿಕೊಡುತ್ತವೆ. ಆದರೆ ಕೆಲವೇ Crypto Features ನೀಡುತ್ತವೆ.

2. ಕ್ರಿಪ್ಟೋಕರೆನ್ಸಿ ವಿನಿಮಯ (Cryptocurrency Exchanges) – ನಾವು ಆಯ್ಕೆ ಮಾಡಲು ಹಲವಾರು Cryptocurrency Exchange ಗಳಿವೆ. ಪ್ರತಿಯೊಂದೂ ಬೇರೆ-ಬೇರೆ ಕ್ರಿಪ್ಟೋಕರೆನ್ಸಿ ಗಳು, Wallet Storage, Interest-Bearing account option ಹಾಗೂ ಇತರ features ನೀಡುತ್ತವೆ.

ಕನ್ನಡದಲ್ಲಿ ಕ್ರಿಪ್ಟೋಕರೆನ್ಸಿ ಎಂದರೇನು – ಬಿಟ್ ಕಾಯಿನ್ ಎಂದರೇನು? ಎಂಬ ಮಾಹಿತಿಯನ್ನು ತಿಳಿಸಿಕೊಡುವ ಸಣ್ಣ ಪ್ರಯತ್ನ ಇದಾಗಿತ್ತು

ಈ ಲೇಖನದ ಕುರಿತು ನಿಮ್ಮ ಸಲಹೆ ಸೂಚನೆ ಅಥವಾ ದೂರುಗಳೇನಾದರೂ ಇದ್ದರೆ ದಯವಿಟ್ಟು Comment ಮಾಡುವುದರ ಮೂಲಕ ತಿಳಿಸಿ.

ಈ ಕೆಳಗಿನವುಗಳನ್ನೂ ಓದಿ.

Starlink Internet
ಹೇಗೆ ಸಿಗುತ್ತದೆ?
ಕಂಪ್ಯೂಟರ್ ಮಾಹಿತಿ
ಮೊಬೈಲ್ ಅನುಕೂಲ
& ಅನಾನುಕೂಲ
ಕೃತಕ ಬುದ್ಧಿಮತ್ತೆ

Leave a Comment

error: Content is protected !!