(2021) General Knowledge Questions And Answers In Kannada

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ?, ಹಾಗಾದರೆ ನಿಮಗೆ ಈ ಕೆಳಗೆ ನೀಡಲಾದ General Knowledge Questions And Answers In Kannada ತುಂಬಾ ಸಾಹಯವನ್ನು ಮಾಡಬಲ್ಲವು.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ, ನಾವು ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳಲ್ಲಿ ಬಹಳ ನುರಿತರಾಗಿರುವುದು ಅವಶ್ಯಕ.

ಇಲ್ಲಿ ನೀಡಲಾದ ಪ್ರಶ್ನೋತ್ತರಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದ್ದು, ಅವುಗಳಲ್ಲಿಯ ಕೆಲವು ಪ್ರಶ್ನೆಗಳನ್ನು ಆರಿಸಲಾಲಾಗಿದೆ.

Read every general knowledge questions in Kannada carefully.


Basic General Knowledge Questions And Answers In Kannada in 2021

1. ಯಾರನ್ನು Father Of Indian Space Programme ಎಂದು ಕರೆಯಲಾಗಯುತ್ತದೆ?

ಅ. ರಾಕೇಶ್ ಶರ್ಮಾ

ಬ. ಅಬ್ದುಲ್ ಕಲಾಂ

ಕ. ವಿಕ್ರಮ್ ಸಾರಾಭಾಯ್

ಡ. ಯಾರೂ ಅಲ್ಲ

 

ಟಿಪ್ಪಣಿ: ವಿಕ್ರಮ್ ಸಾರಾಭಾಯ್ ಅವರು ಒಬ್ಬ ಭೌತ ವಿಜ್ಞಾನಿ ಮತ್ತು ಖಗೋಳ ಶಾಸ್ತ್ರಜ್ಞರಾಗಿದ್ದರು. ಇವರಿಗೆ 1966 ರಲ್ಲಿ ಪದ್ಮ ಭೂಷಣ ಮತ್ತು 1972 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

2. World Red Cross Dayಯನ್ನು ಯಾವಾಗ ಆಚರಿಸಲಾಗುತ್ತದೆ?

ಅ. 8 ಮೇ

ಬ. 11 ಮೇ

ಕ. 17 ಮೇ

ಡ. 5 ಜೂನ್

ದಿನಾಂಕಆಚರಣೆಗಳು
8 ಮೇರೆಡ್ ಕ್ರಾಸ್ ದಿನ
11 ಮೇರಾಷ್ಟ್ರೀಯ ತಂತ್ರಜ್ಞಾನ ದಿನ
17 ಮೇವಿಶ್ವ ದೂರಸಂಪರ್ಕ ದಿನ
5 ಜೂನ್ವಿಶ್ವ ಪರಿಸರ ದಿನ
General Knowledge Questions And Answers In Kannada

3. ನಿರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?

ಅ. ಎ,ಡಿ

ಬ. ಡಿ,ಇ

ಕ. ಇ,ಕೆ

ಡ. ಬಿ,ಸಿ

 

4. PAN CARD ನಲ್ಲಿಯ PAN ನ ವಿಸ್ತೃತ ರೂಪವೇನು?

ಅ. Primary Account Number

ಬ. Parent Account Number

ಕ. Permanent Account Number

ಡ. Perfect Account Number

 

5. ಯಾರ ಜನ್ಮ ದಿನವನ್ನು “ವಿಶ್ವ ಮಾನವ ದಿನ” ಎಂದು ಆಚರಿಸಲಾಗುತ್ತದೆ?

ಅ. ಡಾ.ಬಿ.ಆರ್.ಅಂಬೇಡ್ಕರ

ಬ. ಕುವೆಂಪು

ಕ. ಸರ್.ಎಂ.ವಿಶ್ವೇಶ್ವರಯ್ಯ

ಡ. ಡಾ.ಸಿ.ಎನ್.ಆರ್.ರಾವ್

 

6. ವಾತಾವರಣದ ಒತ್ತಡವನ್ನು ಅಳೆಯಲು ಯಾವ ಮಾಪನವನ್ನು ಬಳಸಲಾಗುತ್ತದೆ?

ಅ. ಥರ್ಮಾ ಮೀಟರ್

ಬ. ಎನರ್ಜಿ ಮೀಟರ್

ಕ. ಬ್ಯಾರೊ ಮೀಟರ್

ಡ. ಅನಿಮೋ ಮೀಟರ್

 

ಥರ್ಮಾ ಮೀಟರ್ : ದೇಹದ ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.

ಎನರ್ಜಿ ಮೀಟರ್ : ವಿದ್ಯುತ್ ಶಕ್ತಿಯನ್ನು ಅಳೆಯಲು ಬಳಸುತ್ತಾರೆ.

ಬ್ಯಾರೊ ಮೀಟರ್ : ವಾತಾವರಣದ ಒತ್ತಡವನ್ನು ಅಳೆಯಲು ಬಳಸುತ್ತಾರೆ.

ಅನಿಮೋ ಮೀಟರ್ : ಗಾಳಿಯ ಗತಿ ಮತ್ತು ದಿಕ್ಕನ್ನು ತಿಳಿದುಕೊಳ್ಳಲು ಬಳಸುತ್ತಾರೆ.

 

7. ರಿಸರ್ವ್ ಬ್ಯಾಂಕ್ ಆ ಇಂಡಿಯಾ ರಾಷ್ಟ್ರೀಕೃತವಾದದ್ದು ಯಾವಾಗ?

ಅ. 1935

ಬ. 1939

ಕ. 1949

ಡ. 1950

 

ಟಿಪ್ಪಣಿ:ರಿಸರ್ವ ಬ್ಯಾಂಕ್ ಆಫ್ ಇಂಡಿಯಾ 1935ರ ಎಪ್ರೀಲ್ 1 ರಂದು ಕಲ್ಕತ್ತದಲ್ಲಿ ಸ್ಥಾಪನೆಯಾಯಿತು. ಇದು 1949 ರ ಜನವರಿ 1 ರಂದು ರಾಷ್ಟ್ರೀಕೃತವಾಯಿತು. ತದನಂತರ ಇದರ ಕೇಂದ್ರ ಕಚೇರಿಯನ್ನು 1937 ರಲ್ಲಿ ಮುಂಬೈಗೆ ಸ್ಥಳಾಂತರಿಸಲಾಯಿತು.

 

8. ಈ ಕೆಳಗಿನವರುಗಳಲ್ಲಿ ಯಾರು ಶಾಂತಿ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ?

ಅ. ಅಮರ್ತ್ಯ ಸೇನ್

ಬ. ಅಭಿಜಿತ್ ಬ್ಯಾನರ್ಜಿ

ಕ. ಕೈಲಾಶ್ ಸತ್ಯಾರ್ಥಿ

ಡ. ವೆಂಕಟ ರಾಮಕೃಷ್ಣನ್

ನೊಬೆಲ್ ಪುರಸ್ಕೃತರುಕ್ಷೇತ್ರ
ಅಮರ್ತ್ಯ ಸೇನ್ಅರ್ಥಶಾಸ್ತ್ರ
ಅಭಿಜಿತ್ ಬ್ಯಾನರ್ಜಿಅರ್ಥಶಾಸ್ತ್ರ
ಕೈಲಾಶ್ ಸತ್ಯಾರ್ಥಿ ಶಾಂತಿ ಕ್ಷೇತ್ರ
ವೆಂಕಟ ರಾಮಕೃಷ್ಣನ್ರಸಾಯನಶಾಸ್ತ್ರ
general knowledge in Kannada

 

9. ಗಾಳಿಗೋಪುರ ನುಡಿಗಟ್ಟಿನ ಅರ್ಥವೇನು?

ಅ. ಕೈಗೂಡದ ಆಸೆ

ಬ. ಗಾಳಿಯಲ್ಲಿ ತೇಲಿದ ಗೋಪುರ

ಕ. ಗಾಳಿ ಸುದ್ದಿ

ಡ. ಸುಳ್ಳುಗಳ ಸಾಲು

 

ನೀವು ಕನ್ನಡದಲ್ಲಿ ಒಳ್ಳೆಯ ಪುಸ್ತಕಗಳನ್ನು ಹುಡುಕುತ್ತಿದ್ದರೆ ಈ ಲೇಖನವನ್ನು ಓದಿ.

 

10. ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಅ. ಲಾರ್ಡ್ ಡಾಲ್ ಹೌಸಿ

. ರಾಬರ್ಟ್ ಕ್ಲೈವ್

ಕ. ಲಾರ್ಡ್ ವೆಲ್ಲೆಸ್ಲಿ

ಡ. ಲಾರ್ಡ್ ಕಾರ್ನ್ ವಾಲಿಸ್

ಜಾರಿಗೆ ತಂದವರುಪದ್ಧತಿಗಳು
ಲಾರ್ಡ್ ಡಾಲ್ ಹೌಸಿದತ್ತು ಮಕ್ಕಳಿಗೆ ಹಕ್ಕಿಲ್ಲ
ರಾಬರ್ಟ್ ಕ್ಲೈವ್ದ್ವಿ ಸರ್ಕಾರ ಪದ್ಧತಿ
ಲಾರ್ಡ್ ವೆಲ್ಲೆಸ್ಲಿಸಹಾಯಕ ಸೈನ್ಯ ಪದ್ಧತಿ
ಲಾರ್ಡ್ ಕಾರ್ನ್ ವಾಲಿಸ್ಖಾಯಂ ಜಮೀನ್ದಾರಿ ಪದ್ಧತಿ
Kannada quiz questions with answers

 

11. ಈ ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದುವುದಿಲ್ಲ.

ಗಂಗರು ಬನವಾಸಿ
ರಾಷ್ಟ್ರಕೂಟರುಮಾನ್ಯಖೇಟ
ಹೊಯ್ಸಳದ್ವಾರಸಮುದ್ರ
ಶಾತವಾಹನರುಪೈಠಾಣ
Empires and their kingdoms in Kannada

 

12. ಪಕ್ಷಿಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

ಅ. ಅಂಕಾಲಜಿ

ಬ. ಪೆಡಾಲಜಿ

ಕ. ಓರ್ನಿಥೋಲಜಿ

ಡ. ಹೆಮಟಾಲಜಿ

ಅಂಕಾಲಜಿಕ್ಯಾನ್ಸರ್
ಬೊಟನಿಸಸ್ಯಗಳು
ಓರ್ನಿಥೋಲಜಿಪಕ್ಷಿ
ಹೆಮಟಾಲಜಿರಕ್ತ
gk in kannada

13. ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿ ಯಾವುದು?
ಸಿಯಾಚಿನ್

ಟಿಪ್ಪಣಿ: ಸಿಯಾಚಿನ್ ಪ್ರದೇಶವನ್ನು ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲಾಗುತ್ತದೆ.

14. ಸಾಂಬಾರಗಳ ರಾಣಿ ಎಂದು ಯಾವ ಪದಾರ್ಥಕ್ಕೆ ಕರೆಯುತ್ತಾರೆ?
ಏಲಕ್ಕಿ

ಟಿಪ್ಪಣಿ: ಏಲಕ್ಕಿಗೆ ಸಾಂಬಾರುಗಳ ರಾಣಿ ಎಂದು ಕರೆಯುತ್ತಾರೆ. ಏಲಕ್ಕಿ ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ.

15. ಸಾಂಬಾರುಗಳ ರಾಜ ಎಂದು ಯಾವ ಸಾಂಬಾರ್ ಪದಾರ್ಥಕ್ಕೆ ಕರೆಯುತ್ತಾರೆ?
ಕರಿಮೆಣಸು

ಟಿಪ್ಪಣಿ: ಹೆಚ್ಚು ಕರಿಮೆಣಸಿನ ಉತ್ಪಾದನೆಯಲ್ಲಿ ವಿಯೆಟ್ನಾಂ ವಿಶ್ವದ ಮೊದಲ ಸ್ಥಾನದಲ್ಲಿದೆ.

16. ಕೇಂದ್ರ ಲೋಕಸೇವಾ ಆಯೋಗದ ಪ್ರಥಮ ಅಧ್ಯಕ್ಷರು ಯಾರು?
ಸರ್. ಬಾರ್ಕರ್

ಟಿಪ್ಪಣಿ: ಕೇಂದ್ರ ಲೋಕಸೇವಾ ಆಯೋಗ(UPSC- Union Public Service Commission)ವನ್ನು 1926 ಅಕ್ಟೋಬರ್ 1 ರಂದು ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.

17. ಭಾರತದ ಮೊದಲ ಸ್ವಾತಂತ್ರ್ಯ ಗ್ರಾಮ ಯಾವುದು?
ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮ

ಟಿಪ್ಪಣಿ: ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮವು ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನು ಅರ್ಪಿಸಿದ ಕಲಿಗಳಿಂದ ಪ್ರತಿಷ್ಠವಾಗಿದೆ.


General Knowledge Quiz In Kannada

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿGeneral Knowledge ಅತಿ ಮುಖ್ಯ. ಈ ಕೆಳಗಿನ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮ್ಮ ಮುಂದಿನ ಪರೀಕ್ಷೆಗಳಿಗೆ ಸಹಾಯ ಮಾಡಬಲ್ಲವು.

13. ಕನ್ನಡದ ಮೊದಲ ಹಾಸ್ಯಪತ್ರಿಕೆ ಯಾವುದು?

ಅ. ಮಂಗಳೂರು ಸಮಾಚಾರ

ಬ. ವಾರ್ತಾ ಭಾರತಿ

ಕ. ಮೈಸೂರು ಮಿತ್ರ

ಡ. ವಿಕಟ ಪ್ರತಾಪ

 

14. ಭಾರತದ ಯಾವ ಮುಖಬೆಲೆಯ ನೋಟಿನ ಮೇಲೆ ಹಂಪಿಯ ಕಲ್ಲಿನ ರಥದ ಚಿತ್ರಣವನ್ನು ಮುದ್ರಿಸಲಾಗಿದೆ?

ಅ. 10

ಬ. 20

ಕ. 50

ಡ. 100

ನೋಟುಮುದ್ರಿತವಾದ ಸ್ಥಳ
10ಸೂರ್ಯ ದೇವಾಲಯ, ಕೋನಾರ್ಕ್
20ಎಲ್ಲೋರಾ ಗುಹೆ, ಮಹಾರಾಷ್ಟ್ರ
50ಕಲ್ಲಿನ ರಥ, ಹಂಪಿ
100ರಾಣಿ ಕಿ ವಾವ್, ಗುಜರಾತ್
200ಸಾಂಚಿ ಸ್ತೂಪ, ಮಧ್ಯಪ್ರದೇಶ
500ಕೆಂಪು ಕೋಟೆ, ದೆಹಲಿ
2000ಮಂಗಳಯಾನ
Currency Notes And Places In Kannada

15. ಯಾರನ್ನು “ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ” ಎಂದು ಕರೆಯುತ್ತಾರೆ?

ಅ. ವಿಶ್ವಾಮಿತ್ರ

ಬ. ಶುಶ್ರುತ

ಕ. ಚಾಣುಕ್ಯ

ಡ. ಕೌಟಿಲ್ಯ

 

16. ಯಾರನ್ನು ಭಾರತದ ಕ್ಷಿಪಣಿ ಮಹಿಳೆ ಎಂದು ಕರೆಯುತ್ತಾರೆ?

ಅ. ಕಲ್ಪನಾ ಚಾವ್ಲಾ

ಬ. ಶಕುಂತಲಾ ದೇವಿ

ಕ. ಟೆಸ್ಸಿ ಥಾಮಸ್

ಡ. ಯಾರೂ ಅಲ್ಲ

 

17. ಹಣ್ಣು ಮಾಗುವುದಕ್ಕೆ ಮತ್ತು ಹೂಗಳು ಅರಳಲು ಕಾರಣವಾಗುವ ಹಾರ್ಮೋನ್ ಯಾವುದು?

ಅ. ಆಕ್ಸಿನ್

ಬ. ಗಿಬ್ಬರ್ಲಿನ್

ಕ. ಎಥಲೀನ್

ಡ. ಸೈಟೊಕೈನಿನ್

 

ಟಿಪ್ಪಣಿ: ಎಥಲೀನ್ (Ethylene) ಹಾರ್ಮೋನ್ ಉನ್ನತ ಸಸ್ಯದ ಎಲ್ಲ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ಅನ್ನು, ಕೃತಕವಾಗಿ ಹಣ್ಣುಗಳನ್ನು ಮಾಗಿಸಲು ಮತ್ತು ಬೀಜಗಳ ಮೊಳಕೆಯೊಡೆಯಿಸಲೂ ಸಹ ಬಳಸಲಾಗುತ್ತದೆ.

 

18. ಭಾರತೀಯ ರಿಸರ್ವ್ ಬ್ಯಾಂಕಿನ ಮೊದಲ ಗವರ್ನರ್ ಯಾರು?

ಅ. ಸಿ.ಡಿ.ದೇಶಮುಖ್

ಬ. ಒಸ್ಬೋರ್ನ್ ಸ್ಮಿಥ್

ಕ. ಹೆಚ್.ವಿ.ಆರ್.ಅಯ್ಯಂಗಾರ್

ಡ. ಶಕ್ತಿಕಾಂತ ದಾಸ್

 

19. ಈ ಕೆಳಗಿನವುಗಳಲ್ಲಿ ಯಾವುದು ಪಂಚರತ್ನ?

ಅ. ಕಣ್ಣು

ಬ. ಹಾಲು

ಕ. ವಾಯು

ಡ. ಬೆಳ್ಳಿ

 

20. ಶಿವನ ಸಮುದ್ರ ಜಲವಿದ್ಯುತ್ ತಯಾರಿಕಾ ಕೇಂದ್ರ ಶುರುವಾದದ್ದು ಯಾವಾಗ?

ಅ. 1900

ಬ. 1901

ಕ. 1902

ಡ. 1903

In exams GK questions in Kannada place very important role while the scoring the marks.


Very Important General Knowledge Questions And Answers In Kannada

General Knowledge Questions And Answers In Kannada
General Knowledge Questions And Answers In Kannada

1. ಬ್ರಿಟೀಷ್ ಸಂಸತ್ತಿನ ಸದಸ್ಯನಾದ ಮೊದಲ ಭಾರತೀಯ ಯಾರು?

 • ದಾದಾಭಾಯಿ ನವರೋಜಿ

2. ಜಪಾನಿನ ಸಂಸತ್ತನ್ನು ಏನೆಂದು ಕರೆಯುತ್ತಾರೆ?

 • ದ ಡಯಟ್

3. ಮುದ್ರಣ ಯಂತ್ರವನ್ನು ಕಂಡುಹಿಡಿದವರು ಯಾರು?

 • ಜೋಹಾನ್ಸ್ ಗುಟೆನ್ ಬರ್ಗ್

4. ರಾಕೆಟ್ ಗಳಲ್ಲಿ ಬಳಸುವ ಇಂಧನ ಯಾವುದು?

 • ದ್ರವ ಆಮ್ಲಜನಕ ಮತ್ತು ದ್ರವ ಜಲಜನಕ

5. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಇದೆ.

 • ಧಾರವಾಡ

6. ಸೈಯದ್ ಸಂತತಿಯ ಸ್ಥಾಪಕರು ಯಾರು?

 • ಸೈಯದ್ ಖಿಜ್ರ್ ಖಾನ್

7. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ?

 • ಬೆಂಗಳೂರು

8. ರೇಡಿಯೋ ತರಂಗಗಳ ಮೂಲಕ ವಿಮಾನಗಳ ದಿಕ್ಕು ಮತ್ತು ದೂರವನ್ನು ಕಂಡುಹಿಡಿಯುವ ಸಾಧನ ಯಾವುದು?

 • ರೇಡಾರ್ (RADAR)

9. ಶ್ರವಣಾತೀತ ಶಬ್ದಗಳ ಅಲೆಗಳನ್ನು ಬಳಸಿ ಸಾಗರದ ಆಳದಲ್ಲಿ ವಸ್ತುವಿನ ದೂರ ಮತ್ತು ದಿಕ್ಕನ್ನು ಪತ್ತೆಹಚ್ಚುವ ವಿಧಾನ ಯಾವುದು?

 • ಸೋನಾರ್ (SONAR)

10. ಭಾರತದಲ್ಲಿ ಪ್ರಥಮವಾಗಿ ಬ್ಯಾಂಕ್ ಸ್ಥಾಪನೆಯಾದ ವರ್ಷ ಯಾವುದು?

 • 1970 (ಬ್ಯಾಂಕ್ ಆಫ್ ಹಿಂದೂಸ್ತಾನ್)

11. ಹೃದಯವನ್ನು ಸುತ್ತುವರೆದಿರುವ ಪೊರೆಯ ಹೆಸರೇನು?

 • ಪೆರಿಕಾರ್ಡಿಯಂ

12. ಇಂದಿರಾಗಾಂಧಿ ಪ್ರಶಸ್ತಿಯ ಉದ್ದೇಶವೇನು?

 • ಶಾಂತಿಗಾಗಿ ಕೊಡುಗೆ ನೀಡಿದವರಿಗೆ

13. ಬುದ್ಧನ ಜನ್ಮಸ್ಥಳ ಯಾವುದು?ಎಲ್ಲಿದೆ?

 • ಲುಂಬಿನಿ, ನೇಪಾಳ

14. ಶ್ರವಣಬೆಳಗೊಳದಲ್ಲಿರುವ ಗೋಮಟೇಶ್ವರ ಮೂರ್ತಿಯ ಎತ್ತರ ಎಷ್ಟು?

 • 57 ಅಡಿ

15. ಹಂಪೆಯು ಯಾವ ನದಿಯ ದಡದ ಮೇಲಿದೆ?

 • ತುಂಗಭದ್ರಾ

16. ವಚನ ಸಂಪಾದನೆಯ ಪಿತಾಮಹ ಯಾರು?

 • ಫ.ಗು.ಹಳಕಟ್ಟಿ

17. ಗಂಗರು ವಶದ ಸ್ಥಾಪಕರು ಯಾರು?

 • ದಡಿಗ ಮತ್ತು ಮಾಧವ

18. ವಿ.ಕೃ.ಗೋಕಾಕ್ ರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?

 • ಭಾರತ ಸಿಂಧು ರಶ್ಮಿ

19. ಆಸ್ಟ್ರೇಲಿಯಾದ ರಾಷ್ಟೀಯ ಕ್ರೀಡೆ ಯಾವುದು?

 • ಕ್ರಿಕೇಟ್

20. ಕನ್ನಡ ನಾಡಿನ ಮೊದಲ ದೊರೆ ಯಾರು?

 • ಮಯೂರವರ್ಮ

21. ಸಾಮಾನ್ಯವಾಗಿ ಪ್ರೋಗ್ರಾಮ್ ಗಳ ಸಂಗ್ರಹವನ್ನು ಏನೆಂದು ಕರೆಯುತ್ತಾರೆ?

 • ತಂತ್ರಾಂಶ (Software)

22. ಘಾನಾ ಪಕ್ಷಿಧಾಮ ಇರುವುದು ಎಲ್ಲಿ?

 • ರಾಜಸ್ತಾನ

23. ರಾಷ್ಟೀಯ ರಕ್ಷಣಾ ದಿವಸವನ್ನು ಯಾವಾಗ ಆಚರಿಸಲಾಗುತ್ತದೆ?

 • ಮಾರ್ಚ್ ೪

24. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?

 • ಆತ್ಮರಾಮ್ ಪಾಂಡುರಂಗ (1967)

25. ರಾಣಾ ಪ್ರತಾಪ ಸಾಗರ ಅಣುಶಕ್ತಿ ಸ್ಥಾವರ ಎಲ್ಲಿದೆ?

 • ರಾಜಸ್ತಾನ್

Karnataka General Knowledge Questions And Answers In Kannada

1. ಗುಡವಿ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ?

 • ಶಿವಮೊಗ್ಗ

2. ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?

 • ಹಕ್ಕ ಬುಕ್ಕರು

3. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?

 • ಕೆ.ಸಿ.ರೆಡ್ಡಿ

4. ಹಲ್ಮಿಡಿ ಶಾಶನ ಇರುವುದು ಎಲ್ಲಿ?

 • ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

5. ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಅರಸ ಯಾರು?

 • ವಿಷ್ಣುವರ್ಧನ

6. ಸಂಗೀತ ಗಂಗಾದೇವಿ ಎಂದು ಹೆಸರುವಾಸಿಯಾದವರು ಯಾರು?

 • ಗಂಗುಬಾಯಿ ಹಾನಗಲ್

7. ಕರ್ನಾಟಕದ ಕಶ್ಮೀರ ಎಂದು ಹೆಸರುವಾಸಿಯಾದ ಜಿಲ್ಲೆ ಯಾವುದು?

 • ಕೊಡಗು

8. ವಿಜಯನಗರದ ಆಳ್ವಿಕೆಯಲ್ಲಿ ಸಂಗಮ ಮನೆತನದ ಅವಧಿ ಏನು?

 • ಕ್ರಿ.ಶ. 1336-ಕ್ರಿ.ಶ 1485

9. ಚಂದ್ರಶೇಖರ ಕಂಬಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಯಾವಾಗ ಸಿಕ್ಕಿತು?

 • 2010

10. ಚಾಲುಕ್ಯರ ವಾಸ್ತುಶಿಲ್ಪಗಳ ಶೈಲಿ ಯಾವುದಾಗಿತ್ತು?

 • ವೇಸರ ಶೈಲಿ

11. ರಸ್ತೆಯಪಕ್ಕದ ಹಳದಿ ಬಣ್ಣದ ಕಲ್ಲು ಏನನ್ನು ಸೂಚಿಸುತ್ತದೆ?

 • ರಾಷ್ಟೀಯ ಹೆದ್ದಾರಿ

12. ಓಂ ಬೀಚ್ ಎಲ್ಲಿದೆ?

 • ಗೋಕರ್ಣ

13. ಮಲಪ್ರಭಾ ನದಿಯ ಉಗಮ ಸ್ಥಾನ ಯಾವುದು?

 • ಕಣಕುಂಬಿ, ಬೆಳಗಾವಿ

14. ಕರ್ನಾಟಕದ ಪ್ರಹಸನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

 • ಟಿ.ಪಿ.ಕೈಲಾಸಂ

15. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಚಿತ್ರ ಯಾವುದು?

 • ಬೇಡರ ಕಣ್ಣಪ್ಪ

16. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಯಾರು ?

 • ಜಯದೇವಿ ತಾಯಿ ಲಿಗಾಡೆ (1984)

17. ಕಾಯಕವೇ ಕೈಲಾಸ ಎಂದು ಸಾರಿದವರು ಯಾರು?

 • ಬಸವಣ್ಣ

18. ಭಕ್ತಿ ಭಂಡಾರಿ ಎಂದು ಯಾರು?

 • ಬಸವಣ್ಣ

19. ಕುವೆಂಪು ಅವರ ಆತ್ಮ ಕಥೆ ಯಾವುದು?

 • ನೆನಪಿನ ದೋಣಿಯಲಿ

20.ಮೊದಲ ಕರ್ನಾಟಕದ ವಿಧಾನಸಭೆಯ ಮಹಿಳಾ ಸಭಾಪತಿ ಯಾರು?

 • ಕೆ.ಎಸ್.ನಾಗರತ್ನಮ್ಮ

21. ಬಸವಸಾಗರ ಆಣೆಕಟ್ಟು ಯಾವ ಜಿಲ್ಲೆಯಲ್ಲಿದೆ?

 • ಯಾದಗಿರಿ (ಕೃಷ್ಣಾ ನದಿ)

22. ತಾಳಿಕೋಟೆ ಕದನ (ರಕ್ಕಸ ತಂಗಡಿ ಯುದ್ಧ ) ನಡೆದ ವರ್ಷ ಯಾವುದು?

 • ೧೫೬೫

23. ಬಿಜಾಪುರದಲ್ಲಿ ಆಳ್ವಿಕೆ ನಡೆಸಿದ್ದ ಷಾಹಿ ಸುಲ್ತಾನ ಮನೆತನ ಯಾವುದು?

 • ಆದಿಲ್ ಷಾಹಿಗಳು

24. ದಂತಿದುರ್ಗ ಸ್ಥಾಪಿಸಿದ ರಾಜಮನೆತನ ಯಾವುದು?

 • ರಾಷ್ಟ್ರಕೂಟರು

25. ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ?

 • 1973 ನವಂಬರ್ 1

26. ಕರ್ನಾಟಕದ ಮೊದಲ ರಾಜ್ಯಪಾಲರು ಯಾರು?

 • ಜಯಚಾಮರಾಜೇಂದ್ರ ಒಡೆಯರು

27. ಕನ್ನಡದ ಮೊದಲ ವ್ಯಾಕಾರಣ ಗ್ರಂಥ ಯಾವುದು?

 • ಶಬ್ದಮಣಿ ದರ್ಪಣ

28. ಕನ್ನಡದ ಮೊದಲ ಕಾವ್ಯ ಯಾವುದು?

 • ಆದಿಪುರಾಣ

29. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ನಾಡಗೀತೆಯನ್ನು ಬರೆದವರು ಯಾರು?

 • ಹುಯಿಲಗೋಳ ನಾರಾಯಣರಾಯ

30. ಪ್ರಥಮ ಕನ್ನಡ ವಿಶ್ವವಿದ್ಯಾಲಯ ಯಾವುದು?

 • ಹಂಪಿ ಕನ್ನಡ ವಿಶ್ವವಿದ್ಯಾಲಯ

31. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

 • ಡಾ.ರಾಜಕುಮಾರ್

32. ಹೊಸಗನ್ನಡ ಸಾಹಿತ್ಯದ ಪಿತಾಮಹ ಯಾರು?

 • ಬಿ.ಎಂ.ಶ್ರೀಕಂಠಯ್ಯ

33. ಕನ್ನಡ ಸಾಹಿತ್ಯದ ನವ್ಯ ನಾಟಕದ ಪಿತಾಮಹ ಯಾರು?

 • ಟಿ.ಪಿ.ಕೈಲಾಸಂ

34. ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ ಯಾರು?

 • ಹೆಚ್.ಡಿ.ದೇವೇಗೌಡ

35. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

 • ಸರ್.ಎಂ.ವಿಶ್ವೇಶ್ವರಯ್ಯ

ಓದಿ: Important GK Questions And Answers


FAQ On General Knowledge Questions And Answers In Kannada

Q: ವಿಟಮಿನ್ ಬಿ ಕೊರತೆಯಿಂದ ಬರುವ ರೋಗ ಯಾವುದು?

ಬೆರಿಬೆರಿ (Beriberi) ರೋಗವು ವಿಟಮಿನ್ ಬಿ ಕೊರತೆಯಿಂದ ಬರುತ್ತದೆ.

Q: ವಿಟಮಿನ್ ಸಿ ಕೊರತೆಯಿಂದ ಬರುವ ರೋಗ ಯಾವುದು?

ವಿಟಮಿನ್ ಸಿ ಕೊರತೆಯಿಂದ ಬರುವ ರೋಗ ಸ್ಕರ್ವಿ (Scurvy).

Q: ಕರ್ನಾಟಕದಲ್ಲಿ ಜಿಲ್ಲೆಗಳು ಎಷ್ಟಿವೆ?

ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳಿವೆ.

Q: ಕರ್ನಾಟಕದ ಒಟ್ಟು ತಾಲೂಕುಗಳು

ಕರ್ನಾಟಕಲ್ಲಿ ಪ್ರಸ್ತುತ 236 (59 ಹೊಸ ) ತಾಲೂಕುಗಳು ಇವೆ.


ಈ ಪ್ರಶ್ನೆ ನಿಮಗಾಗಿ

ಜಗತ್ತಿನ ಅತಿ ದೊಡ್ಡ ವಾಚನಾಲಯ ಯಾವುದು?

ಉತ್ತರವನ್ನು Comment Box ನಲ್ಲಿ ನೀಡಿ

ನೀವೂ ಒಬ್ಬ ಸ್ಪರ್ಧಾರ್ಥಿಯಾಗಿದ್ದೂ, ನಿಮಗೆ ಈ General Knowledge Questions And Answers In Kannada ಲೇಖನ ಇಷ್ಟವಾಗಿದ್ದರೆ, ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರಿಗೆ Share ಮಾಡಿ.

Conclusion

ಕನ್ನಡದಲ್ಲಿ GK Questions And Answers In Kannada ಬರೆಯುವಂತಹ ಸಣ್ಣ ಪ್ರಯತ್ನ ಇದಾಗಿತ್ತು.

ಈ Kannada GK ಕುರಿತ ನಿಮ್ಮ ಅನಿಸಿಕೆಗಳನ್ನು ಬರೆಯುವುದನ್ನು ಮರಿಬೇಡಿ.

ಧನ್ಯವಾದಗಳು.

8 thoughts on “(2021) General Knowledge Questions And Answers In Kannada”

Leave a Comment

error: Content is protected !!
Copy link
Powered by Social Snap