How To Write Essay In Kannada | ಪ್ರಬಂಧ ಬರೆಯುವ ವಿಧಾನ

How To Write Essay In Kannada – ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ, ಪತ್ರಿಕೋದ್ಯಮದಲ್ಲಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುವ ಈ ಪ್ರಬಂಧವನ್ನು ಹೇಗೆ ಬರೆಯಬೇಕು? ಅಥವಾ ಪ್ರಬಂಧವನ್ನು ಬರೆಯುವ ಸರಿಯಾದ ವಿಧಾನ ಯಾವುದು ಎಂಬುದನ್ನು ನಾವು ತಿಳಿದುಕೊಂಡರೆ ನಮ್ಮ ಬರವಣಿಗೆಗೆ ಮತ್ತಷ್ಟು ಶ್ರೀಮಂತಿಕೆಯನ್ನು ತುಂಬಿದಂತೆ ಆಗುತ್ತದೆ.

ನಾವು ಈ ಕೆಳಗೆ ಪ್ರಬಂಧದ ಲಕ್ಷಣಗಳು, ಬರವಣಿಗೆಯ ಶೈಲಿ, ರಚನೆ, ಹಂತಗಳು, ವಿಧಗಳು, ಉದಾಹರಣೆಗಳು, ಪ್ರಬಂಧದ ವಿಷಯಗಳು, ಬರೆಯುವಾಗ ನೆನಪಿಡಬೇಕಾದ ಅಂಶಗಳು,  ಇತ್ಯಾದಿಗಳ ಕುರಿತು ಸವಿವರವಾಗಿ ತಿಳಿದುಕೊಳ್ಳಲಿದ್ದೇವೆ.

ಹೀಗಾಗಿ ಈ How To Write Prabandha In Kannada ಲೇಖನವನ್ನು ಪೂರ್ತಿಯಾಗಿ ಓದಿ.

ಪ್ರಬಂಧ ಬರೆಯುವ ವಿಧಾನವನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಪ್ರಬಂಧ ಎಂದು ಯಾವುದಕ್ಕೆ ಕರೆಯುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

ಪ್ರಬಂಧ ಎಂದರೇನು?

ಪ್ರಬಂಧವು ಲೇಖಕನ ಆಲೋಚನೆಯನ್ನು, ಸ್ವಂತ ವಾದವನ್ನು ಮತ್ತು ಅಭಿಪ್ರಾಯವನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ಗದ್ಯ ರೂಪದಲ್ಲಿ ನಿರೂಪಿಸುವ ಸಾಹಿತ್ಯ ಪ್ರಕಾರವಾಗಿದೆ.

ಪ್ರಬಂಧ ಬರೆಯುವವರನ್ನು ಪ್ರಬಂಧಕಾರರು ಎನ್ನಲಾಗುತ್ತದೆ. 20ನೆಯ ಶತಮಾನದಲ್ಲಿ ವೈವಿಧ್ಯಪೂರ್ಣವಾಗಿ ಬೆಳೆದ ಸಾಹಿತ್ಯ ಪ್ರಕಾರಗಳಲ್ಲಿ ಪದಗಳ ಬಂಧ ಅಂದರೆ ಪ್ರಬಂಧವು ಕೂಡ ಒಂದು.

ಪ್ರಬಂಧವು ಒಂದು ಲೇಖನ ಕಲೆಯಾಗಿದ್ದು ಆಂಗ್ಲಭಾಷೆಯ ESSAY ಎನ್ನುವ ಪ್ರಕಾರಕ್ಕೆ ಸಂವಾದಿಯಾಗಿ ಬಂದಿದೆ.

ಪ್ರಬಂಧದ ಗುರಿ – ವಿಷಯದ ಆಳ ಮತ್ತು ವಿಸ್ತಾರದ ಬಗ್ಗೆ ತಿಳುವಳಿಕೆ ನೀಡುವುದು ಪ್ರಬಂಧದ ಮುಖ್ಯ ಗುರಿಯಾಗಿದೆ.

ನಾವು ಬರೆದ ಒಂದು ಪ್ರಬಂಧ ಉತ್ತಮ ಪ್ರಬಂಧವಾಗಿ ರೂಪುಗೊಳ್ಳಬೇಕಾದರೆ ಕೆಲವು ಗುಣಲಕ್ಷಣಗಳು ಅವಶ್ಯಕವಾಗುತ್ತವೆ.

ಪ್ರಬಂಧದ ಲಕ್ಷಣಗಳು

 • ಗಂಭೀರ ಉದ್ದೇಶ
 • ತಾರ್ಕಿಕ ರಚನೆ
 • ಆಕರ್ಷಕ ಶೈಲಿ
 • ಅನುಭವಗಳು
 • ತೀರ್ಮಾನಗಳು
 • ಹಾಸ್ಯ
 • ಘನತೆ
 • ಸುಲಲಿತ ಶೈಲಿ
 • ವಿಷಯದ ಆಳ
 • ಅಸಾಂಪ್ರದಾಯಿಕತೆ ಮತ್ತು ಹೊಸತನ
 • ಇತ್ಯಾದಿ

ಈ ಮೇಲಿನ ಎಲ್ಲ ಲಕ್ಷಣಗಳು ಇದ್ದಾಗ ಒಂದು ಉತ್ತಮ ಪ್ರಬಂಧ ರೂಪುಗೊಳ್ಳಲು ಸಾಧ್ಯ. ಇದಕ್ಕಿಂತ ಮುಖ್ಯವಾಗಿ ಮೇಲಿನ ಎಲ್ಲಾ ಅಂಶಗಳನ್ನು ಪ್ರಬಂಧಕಾರನಿಗೆ ತನ್ನದೇ ಆದ ದೃಷ್ಟಿಕೋನದಲ್ಲಿ ನೋಡುವ ಮತ್ತು ವಿಶ್ಲೇಷಿಸುವ ಗುಣ ಇರುವುದು ಬಹಳ ಅಗತ್ಯವಾಗಿದೆ.

ಹಾಗಾದರೆ, ಪ್ರಬಂಧದ ವಿಧಗಳು ಎಷ್ಟು?

ಪ್ರಬಂಧದ ವಿಧಗಳು

ಹಾಗೆ ನೋಡಿದರೆ ಪ್ರಬಂಧವನ್ನು ರಚನೆ, ವಸ್ತು, ಉದ್ದೇಶ, ತಾರ್ಕಿಕ ಸಂಯೋಜನೆ, ವಸ್ತುನಿಷ್ಠತೆ, ಇತ್ಯಾದಿಗಳ ಆಧಾರದ ಮೇಲೆ ಬಹಳ ವಿಧಗಳಾಗಿ ವಿಂಗಡಿಸಬಹುದು.

ಆದರೆ, ಪ್ರಬಂಧವನ್ನು ಮುಖ್ಯವಾಗಿ ಈ ಕೆಳಗಿನಂತೆ ವಿಂಗಡಿಸಬಹುದು.

 1. ವರ್ಣನಾತ್ಮಕ ಪ್ರಬಂಧಗಳು
 2. ವಿವರಣಾತ್ಮಕ ಪ್ರಬಂಧಗಳು
 3. ವಿಚಾರಾತ್ಮಕ ಪ್ರಬಂಧಗಳು

ಸಧ್ಯಕ್ಕೆ ಇವುಗಳ ಕುರಿತು ಹೆಚ್ಚು ಆಳವಾಗಿ ಹೋಗುವುದು ಬೇಡ. ನೇರವಾಗಿ ಪ್ರಬಂಧದ ರಚನೆಯ ವಿಧಾನಗಳನ್ನು ಕುರಿತು ನೋಡೋಣ.

How To Write Essay In Kannada Language

ಮುಖ್ಯವಾಗಿ ಮೂರು ಬಗೆಯ ಪ್ರಬಂಧ ರಚನೆಯ ಹಂತಗಳು ಇವೆ.

 • ಪೀಠಿಕೆ/ ಪ್ರಸ್ತಾವನೆ
 • ವಿಷಯ ನಿರೂಪಣೆ/ ವಿಷಯ ವಿಸ್ತಾರ
 • ಮುಕ್ತಾಯ/ ಉಪಸಂಹಾರ

1. ಪೀಠಿಕೆ ಎಂದರೇನು?

ಪೀಠಿಕೆಯು ಪ್ರಬಂಧ ರಚನೆಯ ಮೊದಲ ಹಂತವಾಗಿದ್ದು, ಇದು ಸಂಕ್ಷಿಪ್ತವಾಗಿರಬೇಕು. ಇದರ ಆರಂಭವು ಆಕರ್ಷಕ ಮತ್ತು ಪರಿಣಾಮಕಾರಿ ಆಗಿರಬೇಕು. ಇಲ್ಲಿ ಗುರಿ ಮತ್ತು ವಿಷಯ ಖಚಿತತೆಯನ್ನು ಸ್ಪಷ್ಟಪಡಿಸಬೇಕು. ಓದುಗರಿಗೆ ವಿಷಯದ ಕುರಿತು ಆಸಕ್ತಿ ಮೂಡಿಸುವಂತೆ ಪ್ರಬಂಧವನ್ನು ಆರಂಭ ಮಾಡಬೇಕು.

ಪೀಠಿಕೆಯು ಪ್ರಬಂಧದ ಬಾಗಿಲು ಇದ್ದಂತೆ. ಓದುಗರನ್ನು ನಿಮ್ಮ ವಿಷಯದ ಒಳಗೆ ಹೇಗೆ ಬರಮಾಡಿಕೊಳ್ಳುತ್ತೀರಿ ಎಂಬುದು ಇದರ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾಗಿ ಪ್ರಬಂಧದ ವಿಸ್ತಾರಕ್ಕೆ ಸಂಬಂಧಿಸಿದಂತೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಕೆಲವು ವಾಕ್ಯಗಳನ್ನು ಇದರಲ್ಲಿ ಬರೆದಿರಬೇಕು.

2. ವಿಷಯ ನಿರೂಪಣೆ

ಇದನ್ನು ಪ್ರಬಂಧದ ಒಡಲು, ಜೀವಾಳ ಅಥವಾ ಶರೀರ ಎಂದು ಕರೆಯುತ್ತಾರೆ. ಏಕೆಂದರೆ ಇದು ಪ್ರಬಂಧದ ಮುಖ್ಯ ಭಾಗವಾಗಿದೆ. ನಾವು ವಿವರಿಸಬೇಕಾದ ವಿಷಯವನ್ನು ಖಚಿತವಾಗಿ, ನಿಶ್ಚಿತ ರೂಪರೇಷಗಳೊಂದಿಗೆ, ಪೂರ್ಣ ಮಾಹಿತಿಯೊಂದಿಗೆ ವಿಮರ್ಶಾತ್ಮಕವಾಗಿ ಬರೆಯಬೇಕು.

ಇದನ್ನು ಬರೆಯುವಾಗ ಉದಾಹರಣೆಗಳು, ನುಡಿಗಳು, ವಿಷಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳು, ಹಾಗೂ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಅಂಶಗಳು ಎದ್ದು ಕಾಣುವಂತಿರಬೇಕು. ಅಂದರೆ ಅವುಗಳನ್ನು ಹೆಚ್ಚು ತಿದ್ದಿ ಬರೆಯಬೇಕು ಎಂಬುದಲ್ಲ! ಬದಲಾಗಿ ಓದುಗರಿಗೆ ಅವು ಮುಖ್ಯವಾದವು ಎನಿಸಬೇಕು.

ನೀವು ಬರೆಯುವ ಪ್ರತಿಯೊಂದು ಅಕ್ಷರ ಮತ್ತು ವಾಕ್ಯಗಳ ನಡುವೆ ಪರಸ್ಪರ ವಿಚಾರಪೂರ್ವಕ ಸಂಬಂಧವಿರಬೇಕು. ಈ ಭಾಗದಲ್ಲಿ ಸಮಸ್ಯೆಗಳಿಗೆ ಪರಿಹಾರ,  ತಜ್ಞರ ಅಥವಾ ವಿಜ್ಞಾನಿಗಳ ಎಚ್ಚರಿಕೆ ಹಾಗೂ ನಿಮ್ಮ ತೀರ್ಮಾನಗಳನ್ನು ಸೇರಿಸಬಹುದು.

ಪರೀಕ್ಷೆಗಳಲ್ಲಿ ಅಂಕಗಳಿಗೆ ಆಸೆ ತೋರಿ ಅನವಶ್ಯಕವಾಗಿ ವಿಷಯವನ್ನು ಹಿಗ್ಗಿಸಬಾರದು. ಪ್ರಬಂಧ ಚಿಕ್ಕದಾದರೂ ಪರವಾಗಿಲ್ಲ ಚೊಕ್ಕದಾಗಿರಬೇಕು.

3. ಉಪಸಂಹಾರ ಎಂದರೇನು?

ಪ್ರಬಂಧದ ಮುಕ್ತಾಯ ಭಾಗವಾದ ಈ ಉಪಸಂಹಾರದಲ್ಲಿ ವಿಷಯದ ಬಗ್ಗೆ ಇರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು, ಸಲಹೆಗಳು, ತಜ್ಞರ ತೀರ್ಮಾನಗಳು ಹಾಗೂ ನಿಮ್ಮ ಅಭಿಪ್ರಾಯಗಳು ನೀಡುವುದರಿಂದ ಪ್ರಬಂಧವು ತುಂಬಾ ಗಟ್ಟಿಯಾದಂತೆ ಆಗುತ್ತದೆ.

ಪ್ರಬಂಧದ ರಚನಾ ವಿನ್ಯಾಸವನ್ನು ತಿಳಿಯಲು ಈ ಕೆಳಗಿನ ಚಿತ್ರವನ್ನು ಗಮನಿಸಿ.

How To Write Essay In Kannada structure
essays writing structure in Kannada

ಈ ಮೇಲ್ಕಾಣಿಸಿದಂತೆ, ನೀವು ಪ್ರಬಂಧದ 10% ಪೀಠಿಕೆಗೆ, 80% ಒಡಲಿಗೆ ಅಂದರೆ ವಿಷಯ ನಿರೂಪಣೆಗೆ ಹಾಗೂ ಉಳಿದ 10% ಮುಕ್ತಾಯಕ್ಕೆ ಮೀಸಲಿಟ್ಟರೆ ಒಳ್ಳೆಯದ್ದು.

List Of Kannada Essay Topics


ಕೆಲವು ಕನ್ನಡ ಪ್ರಚಲಿತ ಪ್ರಬಂಧಗಳು ಕುರಿತ ವಿಷಯಗಳು ಈ ಕೆಳಗಿನಂತಿವೆ:

 1. ಪ್ರಬಂಧ ಪರಿಸರ ಸಂರಕ್ಷಣೆ
 2. ಮಾಲಿನ್ಯ ನಿಯಂತ್ರಣ
 3. ಕ್ರೀಡೆಗಳ ಮಹತ್ವ
 4. ಆರೋಗ್ಯವೇ ಭಾಗ್ಯ
 5. ಭಾರತ ಮತ್ತು ಕರ್ನಾಟಕದಲ್ಲಿ ಮೀಸಲಾತಿಯ ಅವಲೋಕನ
 6. ರಾಷ್ಟ್ರೀಯ ಹಬ್ಬಗಳ ಮಹತ್ವ
 7. ಆತ್ಮ ನಿರ್ಭರ ಭಾರತ ಅಭಿಯಾನ
 8. ಕೃಷಿ ಮಸೂದೆ 2020
 9. ಗ್ರಂಥಾಲಯದ ಮಹತ್ವ ಪ್ರಬಂಧ
 10. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020
 11. ವಿಕೋಪ ನಿರ್ವಹಣೆ
 12. Article 370 ರದ್ದತಿ
 13. ಕೃತಕ ಬುದ್ಧಿಮತ್ತೆ
 14. ತಂತ್ರಜ್ಞಾನವು ಭಾರತಕ್ಕೆ ಬೆನ್ನೆಲುಬಾಗಿದೆಯೇ?
 15. ಜಾಗತಿಕ ತಾಪಮಾನ
 16. ಸ್ವಚ್ಛ ಭಾರತ ಅಭಿಯಾನ
 17. ವಾಯು ಮಾಲಿನ್ಯದ ದುಷ್ಪರಿಣಾಮಗಳು
 18. ಯೋಗದ ಮಹತ್ವ
 19. ರಾಷ್ಟ್ರೀಯ ಏಕತೆ
 20. ಸಂಪರ್ಕ ಮಾಧ್ಯಮಗಳ ಉಪಯೋಗ & ದುಷ್ಪರಿಣಾಮ
 21. ಶಬ್ದ ಮಾಲಿನ್ಯದ ದುಷ್ಪರಿಣಾಮಗಳು
 22. ಆಧುನಿಕ ತಂತ್ರಜ್ಞಾನ

FAQ On How To Write Essay In Kannada Easily


ಪ್ರಬಂಧ ರಚನೆಯ ಮೂರು ಹಂತಗಳು ಯಾವುವು?

1. ಪೀಠಿಕೆ
2. ವಿಷಯ ಪ್ರಸ್ತಾವನೆ
3. ಉಪಸಂಹಾರ

ಕನ್ನಡ ಲಲಿತ ಪ್ರಬಂಧಗಳು ಎಂದರೇನು?

ಲಲಿತ ಪ್ರಬಂಧಗಳು ಎಂದರೆ, ಇವುಗಳಲ್ಲಿ ಸತ್ಯಕ್ಕೆ ಕೆಲವು ಕಲ್ಪನೆಗಳನ್ನು ಸೇರಿಸಿ ಸತ್ಯವೋ ಎಂಬಂತೆ ಬರೆಯಲಾಗಿರುತ್ತದೆ. ಇವುಗಳು ಹಾಸ್ಯದಿಂದ ಕೂಡಿದ್ದು, ಇವುಗಳಲ್ಲಿ ಸತ್ಯ ಸಂಗತಿಗಳನ್ನು ಮತ್ತು ಘಟನೆಗಳನ್ನು ಹಾಸ್ಯ ದೃಷ್ಟಿಯಿಂದ ನೋಡಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲು ಟಿಪ್ಸ್ ಇಲ್ಲಿದೆ.

1. ತಪ್ಪಾದರೆ ಗೀಟುಗಳನ್ನು ಹಾಕಬಾರದು
2. ಧಾರ್ಮಿಕ ಚಿಹ್ನೆ, ಚಿತ್ರಗಳು ಮತ್ತು ವಿವಾದಾತ್ಮಕ ಹೇಳಿಕೆ ಅಥವಾ ಸಂಕೇತಗಳನ್ನು ಬಳಸಬಾರದು
3. ಯಾವುದೇ ಪುಸ್ತಕ ಅಥವಾ ಜಾಲತಾಣದಲ್ಲಿನ ಪ್ರಬಂಧಗಳನ್ನು ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯಬಾರದು.
4. ಪ್ರಬಂಧದಲ್ಲಿ ಗಾದೆಮಾತುಗಳು, ಸೂಕ್ತಿಗಳು, ತಜ್ಞರ ಹೇಳಿಕೆಗಳು ಹಾಗೂ ಉದಾಹರಣೆಗಳನ್ನು ನೀಡಿ.
5. ಪ್ರಬಂಧವನ್ನು ಬರೆಯಲು ಶುರು ಮಾಡುವುದಕ್ಕಿಂತ ಮುಂಚೆ, ಏನೆಲ್ಲಾ ಬರೆಯಬೇಕು ಎಂಬುದರ ಕುರಿತು ಯೋಚಿಸಿಕೊಳ್ಳಿ.

ಕನ್ನಡ ಪ್ರಬಂಧಗಳು ಎಲ್ಲಿ ಸಿಗುತ್ತವೆ?

ನೀವು ಕನ್ನಡದಲ್ಲಿ ವಿವರಿಸಲಾದ ಪ್ರಬಂಧಗಳನ್ನು ಓದಬೇಕೆಂದರೆ ಗೂಗಲ್ ನಲ್ಲಿ ESSAY BY INFOKANNADIGA ಎಂದು ಹುಡುಕಿ.  ಅಲ್ಲಿ ಹಲವಾರು ಪ್ರಬಂಧಗಳು ವಿವರಣೆಯೊಂದಿಗೆ ಮತ್ತು ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಕೂಡ ಸಿಗುತ್ತವೆ.

ಕನ್ನಡ ಪ್ರಬಂಧಗಳು PSI PDF

Conclusion

How To Write Essay In Kannada ಲೇಖನದ ಮೂಲಕ ಕನ್ನಡದಲ್ಲಿ ಪ್ರಬಂಧವನ್ನು ಹೇಗೆ ಬರೆಯಬೇಕು? ಎಂಬುದನ್ನು ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಇದಾಗಿತ್ತು.

ಈ ಲೇಖನವು ನಿಮಗೆ ಸಹಾಯಕಾರಿಯಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನದ ಕುರಿತು ನಿಮ್ಮ ಸಲಹೆ-ಸೂಚನೆ ಅಥವಾ ಅಭಿಪ್ರಾಯಗಳೇ ನಾದರೂ ಇದ್ದರೆ, ದಯವಿಟ್ಟು Comment ಮಾಡುವುದರ ಮೂಲಕ ಹಂಚಿಕೊಳ್ಳಿ.

2 thoughts on “How To Write Essay In Kannada | ಪ್ರಬಂಧ ಬರೆಯುವ ವಿಧಾನ”

 1. Super and tq you bro.. Please continues this well work it’s will use to be all students but i want more examples of eassy

  Reply

Leave a Comment

error: Content is protected !!