Information About Air Pollution In Kannada – ವಾಯು ಮಾಲಿನ್ಯ

Information About Air Pollution In Kannada ಲೇಖನದಲ್ಲಿ ನಾವು ಈ ಕೆಳಗಿನ ಅಂಶಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ:

  1. ವಾಯು ಮಾಲಿನ್ಯ ಎಂದರೇನು?
  2. ವಾಯುಮಾಲಿನ್ಯ ಹೇಗೆ ಉಂಟಾಗುತ್ತದೆ?
  3. ವಾಯು  ಮಾಲಿನ್ಯಕ್ಕೆ ಕಾರಣಗಳು
  4. ವಾಯು ಮಾಲಿನ್ಯದ ಪರಿಣಾಮಗಳು
  5. ವಾಯುಮಾಲಿನ್ಯ ತಡೆಗಟ್ಟುವ ಕ್ರಮಗಳು
  6. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ

ಗಾಳಿಯಲ್ಲಿ ಘನ ಕಣಗಳು ಮತ್ತು  ಅನೇಕ ವಿಷಕಾರಿ ಅನಿಲಗಳು ಮಿಶ್ರಣ ಆಗುವುದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.

ವಾಯು ಮಾಲಿನ್ಯದ ಬಗ್ಗೆ ಆಳವಾಗಿ ತಿಳಿಯುದಕ್ಕಿಂತ ಮುಂಚೆ ವಾಯು ಮಾಲಿನ್ಯ ಎಂದರೇನು? ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ. 


Information About Air Pollution In Kannada Language

ವಾಯು ಮಾಲಿನ್ಯ ಎಂದರೇನು?

ವಾಯು ಮಾಲಿನ್ಯ (Air Pollution) ಎಂದರೆ, ಗಾಳಿಯಲ್ಲಿ ಉಂಟಾಗುವ ಭೌತಿಕ,  ರಾಸಾಯನಿಕ ಮತ್ತು ಜೈವಿಕ ಬದಲಾವಣೆ.

ವಾಹನಗಳ ಹೊಗೆ, ಕಾರ್ಖಾನೆಗಳಿಂದ ಹೊರಸೂಸುವ ರಾಸಾಯನಿಕಗಳು, ಧೂಳು, ಸಸ್ಯಗಳ ಪರಾಗಗಳು ಇನ್ನೀತರ ಕಣಗಳು ಗಾಳಿಯ ಮಾಲಿನ್ಯಕಾರಕಗಳಾಗುತ್ತವೆ.

ಈ ಮಾಲಿನ್ಯ ಕಾರಕಗಳು ತುಂಬಾ ವಿಷಕಾರಿಯಾಗಿರುತ್ತವೆ. ಹಾಗಾದರೆ ವಾಯು ಮಾಲಿನ್ಯ ಕಾರಕಗಳು ಎಂದರೇನು?

ಗಾಳಿಯಲ್ಲಿ ಭೌತಿಕ, ರಾಸಾಯನಿಕ ಮತ್ತು ಜೈವಿಕ ಬದಲಾವಣೆ ಮಾಡುವ ಬೇಡವಾದ ವಸ್ತುಗಳು ಅಥವಾ ಕಣಗಳನ್ನು ವಾಯು ಮಾಲಿನ್ಯಕಾರಕಗಳು ಎಂದು ಕರೆಯುತ್ತಾರೆ.

ವಾಯುಮಾಲಿನ್ಯಕ್ಕೆ ಕಾರಣಗಳು 

  1. ಇಂಗಾಲದ ಮೋನಾಕ್ಸೈಡ್
  2. ಸಿಸ್
  3. ಸಾರಜನಕದ ಡೈಯಾಕ್ಸೈಡ್
  4. ಗಂಧಕದ ಡೈಆಕ್ಸೈಡ್
  5. ಓಝೋನ್
  6. ಕ್ಲೋರೋ ಪ್ಲೋರೋ ಕಾರ್ಬನ್ ಗಳು
  7. ಅತಿ ಸೂಕ್ಷ್ಮ ಕಣಗಳು
  8. ಇನ್ನೀತರ ಮಾಲಿನ್ಯಕಾರಕಗಳು

ಈ ಮೇಲಿನ ಮಾಲಿನ್ಯ ಕಾರಕಗಳು ಮಾನವನ ಚಟುವಟಿಕೆಗಳಿಂದ ಉಂಟಾದರೆ ಕೆಲವು ನೈಸರ್ಗಿಕವಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತವೆ.
ಉದಾಹರಣೆಗೆ:

  • ಕಾಡಗಿಚ್ಚಿನ ಹೊಗೆ
  • ಬಿರುಗಾಳಿ ಧೂಳು
  • ಜ್ವಾಲಾಮುಖಿ ಸ್ಫೋಟದಿಂದ ಬರುವಂತಹ ಹೊಗೆ
  • ಕೊಳೆತ ಸಸ್ಯಗಳಿಂದ ಬಿಡುಗಡೆಯಗುವ ಅನಿಲ (ಮೀಥೆನ್, ಹೈಡ್ರೋಜನ್ ಸಲ್ ಫೈಡ್)

ಈ ಮಾಲಿನ್ಯಕಾರಕಗಳು ಪರಿಸರದಲ್ಲಿರುವ ಜೀವ ಸಂಕುಲಗಳ ಮೇಲೆ ತುಂಬಾ ದುಷ್ಪರಿಣಾಮಗಳನ್ನು ಬೀರುತ್ತಿವೆ. ಹಾಗಾದರೆ What are the effects of environmental pollution issue in kannada?

ವಾಯು ಮಾಲಿನ್ಯದ ದುಷ್ಪರಿಣಾಮಗಳು

  • ಹೃದಯ ತೊಂದರೆ
  • ಶ್ವಾಸಕೋಶದ ಕ್ಯಾನ್ಸರ್
  • ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳು ಉದಾಹರಣೆಗೆ Emphysema
  • ಜಾಗತಿಕ ತಾಪಮಾನದ ಏರಿಕೆ
  • ವಾತಾವರಣದಲ್ಲಿ ಬದಲಾವಣೆ
  • ಆಮ್ಲಮಳೆ

ಅಷ್ಟೇ ಅಲ್ಲದೆ ನರಕೋಶ, ಮೆದುಳು, ಕಿಡ್ನಿ, ಲಿವರ್, ಮತ್ತು ಇತರ ಅಂಗಗಳಿಗೆ ಸಂಬಂಧಪಟ್ಟಂತಹ ಕಾಯಿಲೆಗಳಿಗೂ ಮನುಷ್ಯರನ್ನು  Air Pollution ತುತ್ತಾಗಿಸುತ್ತದೆ.

ಕೆಲ ವಿಜ್ಞಾನಿಗಳು ವಾಯು ಮಾಲಿನ್ಯಕಾರಕಗಳು ಹುಟ್ಟು ದೋಷಗಳಿಗೂ ಕಾರಣವಾಗುತ್ತವೆ ಎಂದು ಹೇಳಿದ್ದೂ ಉಂಟು.

ಒಂದು ಅಧ್ಯಯನದ ಪ್ರಕಾರ 2030 ಎನ್ನುವುದರೊಳಗೆ ವಾಯು ಮಾಲಿನ್ಯ ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಬಲ್ಲದು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಿ.


Importance of air and how to prevent air pollution in Kannada

  • ಜೀವನ ಮತ್ತು ಬೆಳವಣಿಗೆಗೆ

ಗಾಳಿಯು ಜೀವ ಉಳಿಸುವ ಘಟಕ ಆಮ್ಲಜನಕವನ್ನು ಹೊಂದಿದೆ. ಸರಿಸುಮಾರು ಎಲ್ಲಾ ಜೀವಿಗಳು ಗಾಳಿಯನ್ನು ಬಳಸಿಕೊಳ್ಳುತ್ತವೆ.

ಸಾರಜನಕ ಮತ್ತು ಕಾರ್ಬನ್ ಡೈಯಾಕ್ಸೈಡ್ ಗಳನ್ನು  ಸಸ್ಯಗಳು ತಮ್ಮ ಬೆಳವಣಿಗೆಗೆ ಬಳಸಿಕೊಳ್ಳುತ್ತವೆ.

  • ದಹನ ಕ್ರಿಯೆಗೆ

ಸುಡುವ ಮತ್ತು ದಹನ ಕ್ರಿಯೆಯಲ್ಲಿ ಗಾಳಿಯ ಅವಶ್ಯಕತೆ ಬಹುಮುಖ್ಯ.

ಗಾಳಿಯಲ್ಲಿರುವ ಆಮ್ಲಜನಕವು ಇಧನಗಳ ದಹನ ಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ ಆಹಾರವನ್ನು ತಯಾರಿಸಲು, ಕೈಗಾರಿಕೆಗಳನ್ನು ನಡೆಸಲು, ಶಾಖ ಮತ್ತು ವಿದ್ಯುತ್ ಉತ್ಪತ್ತಿ ಇಂತಹ ಹಲವಾರು ಚೆಟುವಟಿಕೆಗಳನ್ನು ನಡೆಸಲು ಸಹಾಯ ಮಾಡುತ್ತದೆ.

  • ಭೂ ತಾಪಮಾನದ ನಿಯಂತ್ರಣಕ್ಕೆ

ತಂಪು ಗಾಳಿ ಮತ್ತು ಬಿಸಿ ಗಾಳಿಗಳನ್ನು ಒಂದು ಕಡೆಯಿಂದ ಇನ್ನೊಂದೆಡೆ ಸಾಗಿಸುವುದರ ಮೂಲಕ ಭೂ ತಾಪಮಾನವನ್ನು ನಿಯಂತ್ರಿಸುತ್ತದೆ.

ಗಾಳಿಯು ಉಷ್ಣ ಅಥವಾ ತಾಪವನ್ನು ಸಾಗಿಸುವ ಮಾಧ್ಯಮದಂತೆ ವರ್ತಿಸುತ್ತದೆ. ಜಲ ಚಕ್ರವೂ ಕೂಡ ಗಾಳಿಯ ಮೇಲೆ ಆಧಾರಿತವಾಗಿದೆ.

  • ಶಕ್ತಿಯ ಪೂರೈಕೆಗೆ

ಗಾಳಿ ಕೂಡ ಶಕ್ತಿಯ ಮೂಲವಾಗಿದೆ. ಜೀವಕೋಶಗಳು ಶಕ್ತಿಯನ್ನು ಉತ್ಪಾದಿಸಲು ರಕ್ತದದಿಂದ ಆಮ್ಲಜನಕವನ್ನು ಹೀರಿಕೊಳ್ಳುತ್ತವೆ.

ಉತ್ಪಾದಿತ ಶಕ್ತಿಯು ATP ರೂಪದಲ್ಲಿರುತ್ತದೆ. ಭೂಮಿಯ ಮೇಲೆ ಬೆಳವಣಿಗೆಗೆ ATP ಬಹು ಮುಖ್ಯ.

  • ದ್ಯುತಿಸಂಶ್ಲೇಷಣೆ ಪ್ರಕ್ರಿಯೆಗೆ ಗಾಳಿ(ಆಮ್ಲಜನಕ) ಅವಶ್ಯಕ

ಗಾಳಿಯ ಘಟಕವಾದ ಕಾರ್ಬನ್ ಡೈಆಕ್ಸೈಡ್ ನ್ನು ಸಸ್ಯಗಳು ತಮ್ಮ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಬಳಸಿಕೊಳ್ಳುತ್ತವೆ. ಈ ಕ್ರಿಯೆಯ ಮೂಲಕ ಆಮ್ಲಜನಕ ಬಿಡುಗಡೆಯಾಗುತ್ತದೆ. ಆಮ್ಲಜನಕದ ಅವಶ್ಯಕತೆ ಅಂತೂ ನಮಗೆ ಗೊತ್ತೇ ಇದೆ.

ಇವುಗಳು ಅಷ್ಟೇ ಅಲ್ಲದೆ ಗಾಳಿಯಲ್ಲಿರುವ ಹಲವಾರು ಅನಿಲಗಳು ತಮ್ಮದೇ ಆದ ಉಪಯುಕ್ತತೆಯನ್ನು ಹೊಂದಿವೆ.

ಮನುಷ್ಯ ಜೀವಿಸಬೇಕಾದರೂ ಗಾಳಿ ಬೇಕು, ಮನುಷ್ಯ ದಹನವಾಗಬೇಕಾದರೂ ಗಾಳಿ ಬೇಕು

ಇಷ್ಟೆಲ್ಲಾ  ಮಹತ್ವವಿರುವ ಗಾಳಿಯನ್ನೇ ನಾವು ಮಲಿನ ಮಾಡಿದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಿಗಾಗಿ ನಾವು ಅದನ್ನು ತಡೆಗಟ್ಟಬೇಕಾಗಿದೆ.

ಹಾಗಾದರೆ Air Pollution ತಡೆಗಟ್ಟುವುದು ಹೇಗೆ?

ವಾಯುಮಾಲಿನ್ಯ ತಡೆಗಟ್ಟುವ ಕ್ರಮಗಳು

  • ಸಂಚರಿಸಲು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು

ಸಾರ್ವಜನಿಕ ವಾಹನಗಳು ಕಡಿಮೆ ವಿಷಪೂರಿತ ಅನಿಲಗಳನ್ನು ಹೊರಸೂಸುವುದಲ್ಲದೆ ಇವುಗಳನ್ನು ಬಳಸುವುದರಿಂದ ಹಣವನ್ನು ಉಳಿತಾಯ ಮಾಡಬಹುದು.

  • Recycle And Reuse

ಸಂಪನ್ಮೂಲಗಳ ಸಂರಕ್ಷಣೆ ಮತ್ತು ನ್ಯಾಯಯುತವಾದ ಬಳಕೆ ಅಷ್ಟೇ Recycle ಮತ್ತು Reuse ದ ಪರಿಕಲ್ಪನೆಯ್ಲಲ. ಮಾಲಿನ್ಯವನ್ನು ಕಡಿಮೆಮಾಡುವಲ್ಲಿಯೂ ಇದು ಸಹಾಯಕಾರಿಯಾಗುತ್ತದೆ. ಮರುಬಳಕೆ ಮಾಡಿದ ವಸ್ತುಗಳನ್ನು ಮತ್ತೊಂದು ವಸ್ತುವನ್ನಾಗಿ ಉತ್ಪಾದಿಸುವಲ್ಲಿ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತವೆ.

  • ಪ್ಲಾಸ್ಟಿಕ್ ಬಳಸದಿರುವುದು

ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕೂಡ ಅಷ್ಟೇ ಪರಿಸರಕ್ಕೆ ಅಪಾಯಕಾರಿ. ಇವುಗಳನ್ನು ಕಚ್ಚಾ ತೈಲ ಹಾಗೂ ಇತರ ವಸ್ತುಗಳಿಂದ ತಯಾರಿಸಿದ್ದರಿಂದ ಇವು ವಿಭಜನೆ ಆಗಲು ಅಥವಾ ಕೊಳೆಯಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ.

ಪ್ಲಾಸ್ಟಿಕ್ ಗಳ ಬದಲಾಗಿ ಕಾಗದದ ಚೀಲಗಳನ್ನು ಬಳಸುವುದು ಒಳ್ಳೆಯ ಪರ್ಯಾಯ ಮಾರ್ಗವಾಗಿದೆ.

  • AC ಬದಲಿಗೆ Fan ಬಳಸುವುದು

ಹವಾ ನಿಯಂತ್ರಿತ ಯಂತ್ರ (AC) ಅತಿ ಹೆಚ್ಚು ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವುದಲ್ಲದೆ ಅತಿ ಹೆಚ್ಚು ಉಷ್ಣವನ್ನು ವಾತಾವರಣಕ್ಕೆ ಸೇರಿಸುತ್ತದೆ. ಇದು ಪರಿಸರಕ್ಕೆ ಅಪಾಯಕಾರಿ. ಇದರ ಬದಲಾಗಿ Fan ಬಳಸುವುದು ಒಳ್ಳೆಯದು.

  • ಹೊಗೆನಳಿಗೆಗಳಿಗೆ ಶೋಧಕಗಳನ್ನು ಬಳಸುವುದು

ಮನೆಯ, ಕಾರ್ಖಾನೆಗಳ ಹಾಗೂ ವಾಹನಗಳ ಹೊಗೆನಳಿಗೆಗಳಿಂದ(Chimneys) ಬರುವಂತಹ ಹೊಗೆಯು ಗಾಳಿಯ ಗುಣಮಟ್ಟವನ್ನು ತೀವ್ರವಾಗಿ ಹಾಳುಮಾಡುತ್ತದೆ. ಆದ್ದರಿಂದ ಹೊಗೆನಳಿಗೆಗಳಿಗೆ ಶೋಧಕಗಳನ್ನು(Filters) ಅಳವಡಿಸುವುದರಿಂದ ಗಾಳಿಯಲ್ಲಿ ವಿಷಕಾರಿ ಅನಿಲಗಳು ಸೇರ್ಪಡೆಯಾಗುವುದನ್ನು ತಡೆಗಟ್ಟಬಹುದು.

  • ಅರಣ್ಯೀಕರಣ

ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವುದರಿಂದ ಪರಿಸರವು ಉತ್ತಮವಾಗಿರುತ್ತದೆ ಹಾಗೂ ಹೆಚ್ಚು ಹೆಚ್ಚು ಆಮ್ಲಜನಕ ವಾಯುಗೆ ಸೇರ್ಪಡೆಗೊಳ್ಳುವದರಿಂದ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ.

  • ಅಡುಗೆಗೆ ಕಟ್ಟಿಗೆ ಬದಲಾಗಿ Gas ಸಿಲಿಂಡರ್ ಬಳಸುವುದು

ಅಡುಗೆ ಮಾಡಲು ಸೌದೆಯನ್ನು ಇಂಧನವಾಗಿ ಬಳಸಬಾರದು. ಏಕೆಂದರೆ ಕಟ್ಟಿಗೆಗಳು ಪೂರ್ತಿಯಾಗಿ ಸುಡದೇ ಇರುವುದರಿಂದ ಕಾರ್ಬನ್ ಮೊನಾಕ್ಸೈಡ್ ಅನಿಲವು ಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಆಗುವುದರಿಂದ ಪರಿಸರಕ್ಕೂ ಹಾಗೂ ದೇಹಕ್ಕೂ ತುಂಬಾ ಅಪಾಯಕಾರಿ.

ಇವೆಲ್ಲಾ ನಾವು ನೀವು ಪಾಲಿಸಬೇಕಾದ ಕರ್ತವ್ಯಗಳು. ಹಾಗಾದರೆ ಸರ್ಕಾರದ ವತಿಯಿಂದ ಯಾವುದೇ ಕಾನೂನುಗಳಿಲ್ವಾ ಅಥವಾ ನಿಯಮಗಳಿಲ್ವಾ?

ಇದಕ್ಕೆ ಉತ್ತರ ಖಂಡಿತ ಇವೆ. ಸರ್ಕಾರಗಳೂ ಸಹ ಕೆಲವು ಕಾನೂನು ಕಾಯ್ದೆಗಳನ್ನು ಜಾರಿಗೆ ತಂದಿವೆ.

ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ

  • The Air Act 1981: ವಾಯು ಮಾಲಿನ್ಯವನ್ನು ತಡೆಗಟ್ಟಲು ಮತ್ತು  ನಿಯಂತ್ರಿಸುವ ನಿಟ್ಟಿನಲ್ಲಿ 1981 ಮಾರ್ಚ್ 29 ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಪಾಸು ಮಾಡಿತು.

ಇದನ್ನು 1987 ರಲ್ಲಿ ತಿದ್ದುಪಡಿ ಮಾಡಲಾಯಿತು. ಇದು ಭಾರತ ಸರ್ಕಾರದ ವತಿಯಿಂದ, ವಾಯು ಮಾಲಿನ್ಯವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಮಾಡಿದ ಮೊದಲ ಪ್ರಯತ್ನವಾಗಿದೆ.

  • ಪರಿಸರ ರಕ್ಷಣಾ ಕಾಯಿದೆ (Environment Protection Act), 1986: ಪರಿಸರ ಮಾಲಿನ್ಯದಿಂದಾಗಿ ಮಾನವರಿಗೆ ಮತ್ತು ಇತರ ಜೀವಿಗಳಿಗೆ ಉಂಟಾಗುವಂತಹ ಅಪಾಯಗಳನ್ನು ತಡೆಗಟ್ಟುವ ಸಲುವಾಗಿ ಪರಿಸರದ ರಕ್ಷಣೆ ಮತ್ತು ಸುಧಾರಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.

FAQ on Air Pollution In Kannada

ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳು ಯಾವುವು?

1. ಸಂಚರಿಸಲು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು
2. ಪ್ಲಾಸ್ಟಿಕ್ ಬಳಸದಿರುವುದು
3. ಹೊಗೆನಳಿಗೆಗಳಿಗೆ ಶೋಧಕಗಳನ್ನು ಬಳಸುವುದು
4. ಅರಣ್ಯೀಕರಣ
5. AC ಬದಲಿಗೆ Fan ಬಳಸುವುದು

ವಾಯು ಮಾಲಿನ್ಯ ಹೇಗೆ ಉಂಟಾಗುತ್ತದೆ?
ವಾಯು ಮಾಲಿನ್ಯ ಮಾಲಿನ್ಯ ಕಾರಕಗಳು ಗಾಳಿಯಲ್ಲಿ ಮಿಶ್ರಣವಾಗುವುದರಿಂದ ಉಂಟಾಗುತ್ತದೆ. ಮುಖ್ಯವಾದವುಗಳೆಂದರೆ:

1. ಇಂಗಾಲದ ಮೋನಾಕ್ಸೈಡ್
2. ಸಿಸ್
3. ಸಾರಜನಕದ ಡೈಯಾಕ್ಸೈಡ್
4. ಗಂಧಕದ ಡೈಆಕ್ಸೈಡ್
5. ಓಝೋನ್
6. ಕ್ಲೋರೋ ಪ್ಲೋರೋ ಕಾರ್ಬನ್ ಗಳು
7. ಅತಿ ಸೂಕ್ಷ್ಮ ಕಣಗಳು

ಗಾಳಿ ಮಾಲಿನ್ಯ ಎಂದರೇನು?

ಗಾಳಿಯಲ್ಲಿ ಮಾಲಿನ್ಯಕಾರಕಗಳು ಮಿಶ್ರಣವಾಗಿರುವುದನ್ನು ವಾಯು ಮಾಲಿನ್ಯ ಎಂದು ಕರೆಯುತ್ತಾರೆ.

Conclusion:

ಆರೋಗ್ಯಯುತ ಜೀವನ ನಡೆಸಬೇಕೆಂದರೆ ಉಸಿರಾಡಲು ಒಳ್ಳೆ ಗಾಳಿಯ ಅವಶ್ಯಕತೆ ಇದೆ. ಹಾಗಾಗಿ ಪರಿಸರದ ಸಂರಕ್ಷಣೆ ತುಂಬಾ ಅಗತ್ಯವಾಗಿದೆ.

ಓದಿ: ಪರಿಸರ ಸಂರಕ್ಷಣೆ ಕುರಿತು ಪೂರ್ಣ ಮಾಹಿತಿ

ನಾವು ನೀವೆಲ್ಲರು ಪರಿಸರ ಮಾಲಿನ್ಯ ಮಾಡದೆ ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸಿಕೊಂಡು ಹೋದಲ್ಲಿ ಒಳ್ಳೆಯ ವಾತಾವರಣವನ್ನು ಕಾಪಾಡಿಕೊಂಡು ಹೋಗಬಹುದು.

ಇಲ್ಲವಾದಲ್ಲಿ ಮಲಿನಗೊಂಡಿರುವ ಪರಿಸರದಲ್ಲಿಯೇ  ಬದುಕಿ ಮಲಿನಗೊಂಡಿರುವ ಪರಿಸರದಲ್ಲಿಯೇ ಸಾಯಬೇಕಾಗುತ್ತದೆ. ಹೀಗಾದಲ್ಲಿ ನಮ್ಮಯ ಗುಂಡಿ ನಾವೇ  ತೋಡಿಕೊಂಡಂತೆ ಅಲ್ವೇ?

  • Information About Air Pollution In Kannada ಲೇಖನದ ಕುರಿತ ನಿಮ್ಮ ಅಭಿಪ್ರಾಯ ಮತ್ತು  ಸಲಹೆಗಳಿದ್ದರೆ ದಯವಿಟ್ಟು Comment ಮಾಡಿ.

ಸೂಚನೆ: ನೀವು ವಾಯು ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯುವವರಾಗಿದ್ದರೆ ಪೀಠಿಕೆ, ವಿಷಯ ವಿಸ್ತಾರ ಮತ್ತು ಉಪಸಂಹಾರವನ್ನು ಬರೆಯುವುದು ಅವಶ್ಯ.

Sources:

source 1 source 2 source 3

Leave a Comment