120+ Kannada General Knowledge Questions With Answers

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ?, ಹಾಗಾದರೆ ಈ Kannada General Knowledge Questions With Answers ಲೇಖನವು ತುಂಬಾ ಸಹಾಯ ಮಾಡಬಲ್ಲದು.

ಬಹುಮುಖ್ಯವಾಗಿ SDA, FDA, PC ಹಾಗೂ PSI ಪರೀಕ್ಷೆಗಳಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರಶ್ನೋತ್ತರಗಳನ್ನು ಆರಿಸಿಕೊಳ್ಳಲಾಗಿದೆ.

ಹಲವಾರು ವಿಷಯಗಳಿಗೆ ಸಂಬಂಧಿಸಿದ ಹಲವಾರು ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಕೆಳಗೆ ನೀಡಲಾಗಿದೆ.


Important Kannada General Knowledge Questions With Answers

Kannada general knowledge questions with answers
kannada general knowledge questions with answers

1. ಕಾದಂಬರಿಗಳು ರಾಜ ಮತ್ತು ಕಾದಂಬರಿಗಳ ಸಾರ್ವಭೌಮ ಎಂದು ಖ್ಯಾತರಾದವರು ಯಾರು?
Ans: ಅರಕಲಗೂಡು ನರಸಿಂಗ ಕೃಷ್ಣರಾವ್

2. “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ಯಾವಾಗ ಅಂಗೀಕರಿಸಲಾಯಿತು?
Ans: 1950 ಜನೆವರಿ 24

3. ಭೂಮಿಯ ವಿಮೋಚನಾ ವೇಗ (Escape Velocity) ಎಷ್ಟು?
Ans: 11.2 km/sec

4. ಬಾಕ್ಸೈಟ್ ನಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯಲು ಅನುಸರಿಸುವ ಮುಖ್ಯ ವಿಧಾನ ಯಾವುದು?
Ans: ವಿದ್ಯುದ್ವಿಭಜನೆ (Electrolysis)

5. ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದ ಇತಿಹಾಸಕಾರ ಯಾರು?
Ans: ವಿ. ಎ. ಸ್ಮಿತ್

6. ಘನವಸ್ತುಗಳಲ್ಲಿ ಶಬ್ದದ ವೇಗವು ಎಷ್ಟಿರುತ್ತದೆ?
Ans: ಸುಮಾರು 6000 m/sec

7. ಹೊಯ್ಸಳರ ರಾಜಧಾನಿಯ ಹೆಸರೇನು?
Ans: ಹಳೇಬೀಡು (ಹಿಂದಿನ ದ್ವಾರಸಮುದ್ರ)

8. ಸಾರ್ವತ್ರಿಕ ದಾನಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?
Ans: ‘O’

9. ಆಂಧ್ರ ಪ್ರದೇಶದ ಹೊಸ ರಾಜಧಾನಿ ಯಾವುದು?
Ans: ಅಮರಾವತಿ

10. ‘ವಾಕಿಂಗ್ ವಿತ್ ಕಾಮ್ರೆಡ್‘ ಪುಸ್ತಕದ ಲೇಖಕರು ಯಾರು?
Ans: ಅರುಂಧತಿ ರಾಯ್

11. ಶಿಕ್ಷಕರ ದಿನಾಚರಣೆಯನ್ನು ಯಾರ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ?
Ans: ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್

12. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು?
Ans: ಕಾಂಗರೂ

13. ವಾಂಖಡೆ ಸ್ಟೇಡಿಯಂ ಇರುವುದು ಎಲ್ಲಿ?
Ans: ಮುಂಬಯಿ

14. ಧಿಂಗ್ ಎಕ್ಸ್ಪ್ರೆಸ್ (Dhing Express) ಎಂದು ಯಾರಿಗೆ ಕರೆಯಲಾಗಿದೆ?
Ans: ಹಿಮಾದಾಸ್

15. ಕರ್ನಾಟಕದಲ್ಲಿ ಎಷ್ಟು ಪರಮಾಣು ವಿದ್ಯುತ್ ಸ್ಥಾವರಗಳಿವೆ?
Ans: ಒಂದು ( ಕೈಗಾ ಪರಮಾಣು ವಿದ್ಯುತ್ ಸ್ಥಾವರ)

16. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
Ans: ಸರ್. ಎಂ. ವಿಶ್ವೇಶ್ವರಯ್ಯ

17. ವಿಶ್ವ ಪರಿಸರ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
Ans: ಜೂನ್ 5

18. ಸಾರ್ವತ್ರಿಕ ಸ್ವೀಕಾರಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?
Ans: AB

19. ಕಾಲಿಂಗ್ ಕಿಣ್ವಗಳನ್ನು ಉತ್ಪತ್ತಿಮಾಡುವ ಗ್ರಂಥಿ ಯಾವುದು?
Ans: ಲಾಲಾ ಗ್ರಂಥಿ

20. ಮರುಭೂಮಿಯಲ್ಲಿ ಕಂಡುಬರುವ ಮರಿಚಿಕೆ ಗಳಿಗೆ ಕಾರಣವಾದ ವಿದ್ಯಮಾನ ಯಾವುದು?
Ans: ಸಂಪೂರ್ಣ ಆಂತರಿಕ ಪ್ರತಿಫಲನ (Total Internal Reflection)

21. ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?
Ans: ಸೋಡಿಯಂ ಕ್ಲೋರೈಡ್ (NaCl)

22. ವಾತಾವರಣದಲ್ಲಿರುವ ಓಝೋನ್ ಪದರದ ಕೆಲಸವೇನು?
Ans: ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವುದು

23. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡುವ ಕಾಯ್ದೆ ಯಾವುದು?
Ans: 24 ನೇ ತಿದ್ದುಪಡಿ ಕಾಯ್ದೆ(1971)

24. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಯಾರು ಲೆಕ್ಕಹಾಕುತ್ತಾರೆ?
Ans: ಕೇಂದ್ರ ಸಾಂಖ್ಯಕೀಯ ಸಂಸ್ಥೆ

25. ಸೌರಮಂಡಲದ ಅತಿ ದೊಡ್ಡ ಉಪಗ್ರಹ ಯಾವುದು?
Ans: ಗ್ಯಾನಿಮೇಡ

26. ಸೌರಮಂಡಲದ ಅತಿ ಚಿಕ್ಕ ಉಪಗ್ರಹ ಯಾವುದು?
Ans: ಯುರೋಪಾ

27. ಓಝೋನ್ ಪದರವು ನಾಶವಾಗುತ್ತಿರುವುದುಕ್ಕೆ ಪ್ರಮುಖ ಕಾರಣ ಯಾವುದು?
Ans: ಕ್ಲೋರೋ ಪ್ಲೋರೋ ಕಾರ್ಬನ್( CFC)

28. ಗಂಗಾ ನದಿಯ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ?
Ans: ಸುಂದರ್ಬನ್

29. ವೇದ ಎಂಬ ಪದದ ಅರ್ಥ ಏನು?
Ans: ಜ್ಞಾನ (ಶೃತಿ)

30. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಯಾವಾಗ ಆರಂಭಿಸಲಾಯಿತು?
Ans: 28 ಡಿಸೆಂಬರ್ 1885

31. ಕನ್ನಡದ ಅತ್ಯಂತ ಪ್ರಾಚೀನ ಗ್ರಂಥ ಯಾವುದು?
Ans: ಕವಿರಾಜ ಮಾರ್ಗ

32. ದಕ್ಷಿಣ ಪಥೇಶ್ವರ ಎಂಬ ಬಿರುದಾಂಕಿತ ದೊರೆ ಯಾರು?
Ans: ಇಮ್ಮಡಿ ಪುಲಕೇಶಿ

33. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ಯಾವುದು?
Ans: ಗ್ರಾಮ ಪಂಚಾಯತ್

34. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
Ans: ಬಚೇಂದ್ರಿ ಪಾಲ್

35. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಯಾವಾಗ ಆಯಿತು?
Ans: 1915


General Knowledge Questions With Answers In Kannada

36. ಡಬ್ಲ್ಯೂ.ಹೆಚ್.ಒ ದ ಕೇಂದ್ರ ಕಚೇರಿ ಎಲ್ಲಿದೆ?
Ans: ಸ್ವಿಜರ್ಲ್ಯಾಂಡಿನ ಜಿನಿವಾ

37. ದ. ರಾ. ಬೇಂದ್ರೆಯವರ ಅಂಕಿತನಾಮ ಯಾವುದು?
Ans: ಅಂಬಿಕಾತನಯ ದತ್ತ

38. ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?
Ans: 25 ಜನವರಿ

39. ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
Ans: ಡಾಲ್ಫಿನ್

40. ಸಸ್ಯಗಳ ಸಂತಾನೋತ್ಪತ್ತಿ ಅಂಗ ಯಾವುದು?
Ans: ಹೂವು

41. ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ  ಮೀಸಲಾತಿಯ ಪ್ರಮಾಣ ಎಷ್ಟು?
Ans: 50%

42. ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?
Ans: ಭತ್ತ

43. ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?
Ans: ಅಲ್ಯುಮಿನಿಯಂ

44. ಪ್ರಥಮ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾರು?
Ans: ಶ್ರೀಮತಿ ಸರೋಜಿನಿ ನಾಯ್ಡು

45. ನೀಲಿ ಕ್ರಾಂತಿ ಪಿತಾಮಹ ಯಾರು?
Ans: ಹರಿಲಾಲ್ ಚೌದರಿ

46. ಭಾರತ ಹಾರಿಸಿದ ಮೊದಲ ಉಪಗ್ರಹದ ಹೆಸರೇನು?
Ans: ಆರ್ಯಭಟ

47. ಕನ್ನಡದ ಮೊದಲ ಚಲನಚಿತ್ರ ಯಾವುದು?
Ans: ಸತಿ ಸುಲೋಚನ

48. ನೌಕಾಪಡೆ ದಿನವನ್ನು ಎಂದು ಆಚರಿಸಲಾಗುತ್ತದೆ?
Ans: ಡಿಸೆಂಬರ್ 4

ಆಚರಣೆಗಳು ದಿನಾಂಕಗಳು
ಕನ್ನಡ ರಾಜ್ಯೋತ್ಸವ ನಂಬರ್ 1
ವಿಶ್ವ ರೆಡ್ ಕ್ರಾಸ್ ದಿನಮೇ 8
ಹಿಂದಿ ದಿನಸಪ್ಟೆಂಬರ್ 14
ಧ್ವಜ ದಿನಡಿಸೆಂಬರ್ 7
ವಿಶ್ವ ಏಡ್ಸ್ ದಿನ ಡಿಸೆಂಬರ್ 1
ಮಾನವ ಹಕ್ಕುಗಳ ದಿನಡಿಸೆಂಬರ್ 10
Kannada General Knowledge Questions With Answers in kannada

49. ವರ್ಣಾಂಧತೆ ಇರುವವರು ಯಾವ ಬಣ್ಣಗಳನ್ನು ಗುರುತಿಸಲಾರರು?
Ans: ಕೆಂಪು, ಹಸಿರು ಮತ್ತು ನೀಲಿ

50. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಯಾವ ಗ್ರಹಣ ಸಂಭವಿಸುತ್ತದೆ?
Ans: ಸೂರ್ಯಗ್ರಹಣ

51. ವಾಹನಗಳಲ್ಲಿ ಹಿನ್ನೋಟದ ಕನ್ನಡಿಯಾಗಿ ಬಳಸುವ ಮಸೂರ ಯಾವುದು?
Ans: ಪೀನ ಮಸೂರ

52. ಪ್ರಾಥಮಿಕ ಬಣ್ಣಗಳು ಯಾವುವು?
Ans: ಕೆಂಪು, ಹಸಿರು ಮತ್ತು ನೀಲಿ

53. ಸಸ್ಯಗಳಿಗೆ ಆಹಾರವನ್ನು ಸರಬರಾಜು ಮಾಡುವ ಅಂಗಾಂಶ ಯಾವುದು?
Ans: ಪ್ಲೋಯಂ

54. ಬಾಂಬೆ ಷೇರು ಮಾರುಕಟ್ಟೆಯ ಷೇರು ಸೂಚ್ಯಂಕ ಯಾವುದು?
Ans: ಸೆನ್ಸೆಕ್ಸ್ (SENSEX)

55. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು
Ans: ಜವಾಹರ್ಲಾಲ್ ನೆಹರು

56. ಮುಂಜಾನೆ ನಕ್ಷತ್ರ ಅಥವಾ ಬೆಳ್ಳಿ ಚುಕ್ಕಿ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?
Ans: ಶುಕ್ರ ಗ್ರಹ

57. ಹಗಲು ರಾತ್ರಿ ಉಂಟಾಗಲು ಕಾರಣವಾದ ಭೂಮಿಯ ಚಲನೆ ಯಾವುದು?
Ans: ದೈನಂದಿನ ಚಲನೆ

58. ಬಸವ ಸಾಗರ ಜಲಾಶಯ ಎಲ್ಲಿದೆ?
Ans: ಯಾದಗಿರಿ ಜಿಲ್ಲೆಯ ನಾರಾಯಣಪುರ

59. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಸೇರಿಸುವ ಕಾಲುವೆ ಯಾವುದು?
Ans: ಸೂಯೆಜ್ ಕಾಲುವೆ

60. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು?
Ans: ದಂತಿದುರ್ಗ

61. ವಾಸ್ಕೋಡಿಗಾಮನು ಪ್ರಪ್ರಥಮವಾಗಿ ಭಾರತಕ್ಕೆ ಬಂದು ತಲುಪಿದ ಕಲ್ಲಿಕೋಟೆ ಯಾವ ರಾಜ್ಯದಲ್ಲಿದೆ?
Ans: ಕೇರಳ

62. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
Ans: ಹರ್ಡೇಕರ್ ಮಂಜಪ್ಪ

63. ತಾಳಿಕೋಟೆ ಯುದ್ಧ ಯಾವಾಗ ನಡೆಯಿತು?
Ans: ಕ್ರಿ.ಶ 1565

64. ಕರ್ನಾಟಕದ ಪ್ರಥಮ ಹಿಂದುಳಿದ ವರ್ಗದ ಮುಖ್ಯಮಂತ್ರಿ ಯಾರು?
Ans: ಡಿ. ದೇವರಾಜ್ ಅರಸು


65. GST ಯ ವಿಸ್ತೃತ ರೂಪವೇನು?
Ans: Goods And Service Tax

66. ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳಿಗೆ ಏನೆಂದು ಕರೆಯುತ್ತಾರೆ?
Ans: ರೇಖಾಂಶಗಳು

67. ದೇಹದ ಉಷ್ಣಾಂಶವನ್ನು ಅಳೆಯಲು ಬಳಸುವ ಸಾಧನ ಯಾವುದು?
Ans: ಥರ್ಮಾಮೀಟರ್

68. ಕಬ್ಬಿಣ ತುಕ್ಕು ಹಿಡಿಯುವುದರಿಂದ ಅದರ ತೂಕದಲ್ಲಾಗುವ ಬದಲಾವಣೆ ಏನು?
Ans: ತೂಕ ಹೆಚ್ಚಾಗುತ್ತದೆ

69. ಕನ್ನಡದ ಮೊದಲ ಶಾಸನ ಯಾವುದು?
Ans: ಹಲ್ಮಿಡಿ ಶಾಸನ

70. ಗೋಲ್ ಗುಂಬಜ್ ಇರುವುದು ಎಲ್ಲಿ?
Ans: ವಿಜಯಪುರ


General Knowledge Questions In Kannada With Answers

71. ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಡದಲ್ಲಿವೆ?
Ans: ತುಂಗಭದ್ರಾ ನದಿ

72. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
Ans: ಡಾ. A. P. J.ಅಬ್ದುಲ್ ಕಲಾಂ

73. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ನೀಡಿದವರು ಯಾರು?
Ans: ಲಾಲ್ ಬಹದ್ದೂರ್ ಶಾಸ್ತ್ರಿ

74. ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
Ans: 1986

75. ಶ್ರೀಲಂಕಾ ಬ್ರಿಟಿಷರಿಂದ ಯಾವಾಗ ಸ್ವಾತಂತ್ರ್ಯ ಪಡೆಯಿತು?
Ans: 1948

76. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
Ans: ಸರಿಸುಮಾರು 120 ದಿನಗಳು

77. ಮಾನವನ ಮೆದುಳಿನ ಅತಿ ದೊಡ್ಡ ಭಾಗ ಯಾವುದು?
Ans: ಮುಮ್ಮೆದುಳು (ಸೆರೆಬ್ರಮ್)

78. ಪರಾಗರೇಣುಗಳನ್ನು ಕೇಸರದಿಂದ ಶಲಾಕಾಗ್ರಕ್ಕೆ ವರ್ಗಾಯಿಸುವ ಕ್ರಿಯೆಗೆ ಏನೆಂದು ಹೆಸರು?
Ans: ಪರಾಗಸ್ಪರ್ಶ

79. ಕೃತಕವಾಗಿ ಹಣ್ಣು ಮಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ?
Ans: ಇಥೈಲಿನ್

80. ಗೆಲೀನಾ ಯಾವ ಲೋಹದ ಅದಿರಾಗಿದೆ?
Ans: ಸೀಸ (Pb)

81. ರಾಜ್ಯಸಭೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯೋಮಿತಿ ಎಷ್ಟು?
Ans: 30 ವರ್ಷ

82. ಭಾಷೆಯ ಆಧಾರದ ಮೇಲೆ ಮೊದಲು ರಚನೆಯಾದ ರಾಜ್ಯ ಯಾವುದು?
Ans: ಆಂಧ್ರಪ್ರದೇಶ

83. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿವೆ?
Ans: ಮೂರು

84. SBM ಬ್ಯಾಂಕ್ ನ ಸ್ಥಾಪಕರು ಯಾರು?
Ans: ಸರ್.ಎಂ.ವಿಶ್ವೇಶ್ವರಯ್ಯ

85. ಪೋಬೋಸ್ ಮತ್ತು ಡಿಮೋಸ್ ಯಾವ ಗ್ರಹದ ಉಪಗ್ರಹಗಳಾಗಿವೆ?
Ans: ಮಂಗಳ ಗ್ರಹ

86. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ಕಾಲುವೆ ಯಾವುದು?
Ans: ಸೂಯೆಜ್ ಕಾಲುವೆ

87. ಸಹರಾ ಮರುಭೂಮಿ ಯಾವ ದೇಶದಲ್ಲಿದೆ?
Ans: ಉತ್ತರ ಆಫ್ರಿಕಾ

88. ಲೂ ಮಾರುತಗಳು ಎಲ್ಲಿ ಕಂಡುಬರುತ್ತವೆ?
Ans: ಉತ್ತರ ಭಾರತ ಮತ್ತು ಪಾಕಿಸ್ತಾನ

89. ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ ಇರುವುದು ಎಲ್ಲಿ?
Ans: ಬಾಗಲಕೋಟ

90. ಭಾರತದ ಅತಿ ಎತ್ತರದ ಶಿಖರವಾದ ಗಾಡ್ವಿನ್ ಆಸ್ಟಿನ್ ಇದರ ಎತ್ತರ ಎಷ್ಟು?
Ans: 8611

91. ಬ್ರಹ್ಮಪುತ್ರ ನದಿಗೆ ಬಾಂಗ್ಲಾದೇಶದಲ್ಲಿ ಯಾವ ಹೆಸರಿದೆ?
Ans: ಪದ್ಮಾ

92. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?
Ans: ಕೊಡಗು

93. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಆಣೆಕಟ್ಟನ್ನು ಕಟ್ಟಲಾಗಿದೆ?
Ans: ಮಹಾನದಿ

94. ಕುದುರೆಮುಖ ಯಾವ ಲೋಹದ ಅದಿರಿಗೆ ಪ್ರಸಿದ್ಧವಾಗಿದೆ?
Ans: ಕಬ್ಬಿಣ

95. ಚಿಲ್ಕಾ ಸರೋವರವು ಭಾರತದ ಯಾವ ರಾಜ್ಯದಲ್ಲಿದೆ?
Ans: ಒಡಿಸ್ಸಾ

96. ಪೆಟ್ರೋಲಜಿ ಎಂಬುವುದು ಯಾವುದರ ಅಧ್ಯಯನ?
Ans: ಶಿಲೆಗಳು

97. ದಕ್ಷಿಣ ಗಂಗೆ ಎಂದು ಯಾವ ನದಿಗೆ ಕರೆಯುತ್ತಾರೆ ?
Ans: ಕಾವೇರಿ

98. ಬುದ್ಧನನ್ನು ಏಷ್ಯಾದ ಬೆಳಕು ಎಂದವರು ಯಾರು?
Ans: ಎಡ್ವಿನ್ ಅರ್ನಾಲ್ಡ್

99. ಬುದ್ಧ ಪದದ ಅರ್ಥವೇನು?
Ans: ಜ್ಞಾನ ಪಡೆದವನು

100. ಅಷ್ಟಾಂಗ ಮಾರ್ಗ ಗಳನ್ನು ಬೋಧಿಸಿದ ಧರ್ಮ ಯಾವುದು?
Ans: ಬೌದ್ಧಧರ್ಮ


Karnataka KPSC GK Quiz In Kannada

101. ಜಹಾಂಗೀರ್ ನ ಮೊದಲ ಹೆಸರೇನು?
Ans: ಸಲೀಂ

102.  ಬ್ರಾಹ್ಮಣರ ಮೇಲೆ ಜೇಸಿಯಾ ಕಂದಾಯವನ್ನು ಹೇರಿದ ಮೊಘಲ್ ದೊರೆ ಯಾರು?
Ans: ಔರಂಗ್ ಜೇಬ್

103. ಭಾರತದ ಮೊದಲ ಪೋರ್ಚುಗೀಸ್ ವೈಸ್ ರಾಯ್ ಯಾರು?
Ans: ಫ್ರಾನ್ಸಿಸ್ಕೋ-ಡಿ-ಅಲ್ಮಿಡಾ

104. ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರು ಯಾರು?
Ans: ಫ್ರೆಂಚರು

105. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?
Ans: ಆತ್ಮರಾಮ್ ಪಾಂಡುರಂಗ

106. ಕರ್ನಾಟಕವನ್ನು ಆಳಿದ ಪ್ರಥಮ ಕನ್ನಡದ ರಾಜಮನೆತನ ಯಾವುದು?
Ans: ಕದಂಬರು

107. ದಕ್ಷಿಣ ಭಾರತದ ತಾಜಮಹಲ್ ಎಂದು ಯಾವುದಕ್ಕೆ ಕರೆಯುತ್ತಾರೆ?
Ans: ಇಬ್ರಾಹಿಂ ರೋಜ (ವಿಜಯಪುರ ಜಿಲ್ಲೆ)

108. ಮೋಹನ ತರಂಗಿಣಿ ಕೃತಿಯ ರಚನೆಕಾರರು ಯಾರು?
Ans: ಕನಕದಾಸರು

109. ಮೊಘಲರ ಕಾಲದಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಿಗಳು ಯಾರು?
Ans: ಪೋರ್ಚುಗೀಸರು

110. URL ನ ವಿಸ್ತೃತ ರೂಪವೇನು?
Ans: Uniform Resource Locator

111. GB ಗೆ ಎಷ್ಟು MB ಗಳು ಸಮನಾಗುತ್ತವೆ?
Ans: 1024 MB

112. ಸೂರ್ಯ ದೇವಾಲಯ ಇರುವುದು ಎಲ್ಲಿ?
Ans: ಕೊನಾರ್ಕ್

113. ಮೈಸೂರು ವಿಶ್ವವಿದ್ಯಾಲಯದ ಧ್ಯೇಯವಾಕ್ಯವೇನು?
Ans: ‘ನಹಿ ಜ್ಞಾನೇನ ಸದೃಶಂ’

114. ನಗಿಸುವ ಅನಿಲವೆಂದು ಯಾವ ಅನಿಲಕ್ಕೆ ಕರೆಯುತ್ತಾರೆ?
Ans: ನೈಟ್ರಸ್ ಆಕ್ಸೈಡ್

115. ಭೂಮಿಯಿಂದ ಎತ್ತರಕ್ಕೆ ಹೋದಹಾಗೆ ನೀರಿನ ಕುದಿಯುವ ಬಿಂದುವಿನಲ್ಲಾಗುವ ಬದಲಾವಣೆ ಏನು?
Ans: ಕುದಿಯುವ ಬಿಂದು ಕಡಿಮೆಯಾಗುತ್ತದೆ

116. ರಕ್ತದಲ್ಲಿ ಇನ್ಸುಲಿನ್ ಕೊರತೆಯಿಂದ ಬರುವ ಕಾಯಿಲೆ ಯಾವುದು?
Ans: ಮಧುಮೇಹ ( ಸಕ್ಕರೆ ಕಾಯಿಲೆ)

117. ಟೆಲಿಸ್ಕೋಪ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?
Ans: ಗೆಲಿಲಿಯೋ ಗೆಲಿಲಿ


FAQs On Kannada General Knowledge Questions With Answers

Q. ಭಾರತದ ಅತಿ ಉದ್ದವಾದ ನದಿ ಯಾವುದು?

Ans: ಗಂಗಾ ನದಿಯು ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ. ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳು ಗಂಗಾ ನದಿಗಿಂತ ಉದ್ದದ ನದಿಗಳಾಗಿವೆ. ಆದರೆ ಭಾರತದ ಒಳಗೆ ಈ ಎರಡು ನದಿಗಳು ಆವರಿಸಿರುವ ದೂರವು ಗಂಗಾನದಿಗಿಂತ ಕಡಿಮೆ.

Q. ಅತ್ಯಂತ ಗಟ್ಟಿಯಾದ ಅಲೋಹ ಯಾವುದು?

Ans: ವಜ್ರವು ಅತ್ಯಂತ ಗಟ್ಟಿಯಾದ ಅಲೋಹವಾಗಿದೆ.

Q. ಆಮ್ಲ ಮಳೆಗೆ ಕಾರಣವಾಗಿರುವ ಅನಿಲಗಳು ಯಾವುದವು?

Ans: ನೈಟ್ರಸ್ ಆಕ್ಸೈಡ್ ಮತ್ತು ಸ್ವಲ್ಪ ಡೈ ಆಕ್ಸೈಡ್

Q. ಜಗತ್ತಿನ ಉದ್ದವಾದ ನದಿ ಯಾವುದು?

Ans: ನೈಲ್ ನದಿಯು ಜಗತ್ತಿನ ಉದ್ದವಾದ ನದಿಯಾಗಿದೆ. ಇದರ ಉದ್ದವು 6,650 km ಇದೆ.

Q. ಭಾರತದ ಅತಿ ದೊಡ್ಡ ರಾಜ್ಯ ಯಾವುದು?

Ans: ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯ ರಾಜಸ್ಥಾನ್ ಮತ್ತು ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶ.

Conclusion:
ನಿಮಗೆ ಈ Kannada General Knowledge Questions With Answers ಲೇಖನ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ.

ಈ ಲೇಖನದ ಕುರಿತು ಏನಾದರು ಸಲಹೆ, ಸೂಚನೆ ಅಥವಾ ದೂರುಗಳಿದ್ದರೆ ದಯವಿಟ್ಟು Comment Box ನಲ್ಲಿ Comment ಮಾಡಿ

ಇದನ್ನೂ ಓದಿ

Leave a Comment

error: Content is protected !!