2021 Kannada GK Questions And Answers – GK Question In Kannada

Kannada GK Questions And Answers: ಈ ಕೆಳಗೆ ತುಂಬಾ ಉಪಯುಕ್ತವಾದ ಕೆಲವು ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ನೀಡಲಾಗಿದೆ.

ಆ ಪ್ರಶ್ನೋತ್ತರಗಳಿಗೆ ಸಂಬಂಧ ಪಟ್ಟಂತೆ ಸಣ್ಣ ಟಿಪ್ಪಣಿಗಳನ್ನೂ ಸಾಹ ನೀಡಲಾಗಿದೆ.

  • ಬ್ಲಾಕ್ ಫಂಗಸ್ ನ ವೈಜ್ಞಾನಿಕ ಹೆಸರೇನು?
  • ಭಾರತೀಯ ನವೋದಯದ ದೃವತಾರೆ ಎಂದು ಯಾರನ್ನು ಕರೆಯಲಾಗುತ್ತದೆ?
  • “ಪ್ಲೈಯಿಂಗ್ ಸಿಖ್” ಖ್ಯಾತಿಯಾದ ಕ್ರೀಡಾಪಟು ಯಾರು?
  • ವಿಶ್ವದ ಉಗಮದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
  • ಕರ್ನಾಟಕದಲ್ಲಿ ನಮ್ಮ ಮೆಟ್ರೋ ರೈಲು ವ್ಯವಸ್ಥೆ ಇರುವುದು ಎಲ್ಲಿ?
  • ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಯ ಕೇಂದ್ರ ಕಚೇರಿ ಎಲ್ಲಿದೆ?
  • ಇತ್ಯಾದಿ

ಪರಿವಿಡಿ

Top Kannada GK Questions And Answers Please

1. “ಪ್ಲೈಯಿಂಗ್ ಸಿಖ್” ಖ್ಯಾತಿಯಾದ ಕ್ರೀಡಾಪಟು ಯಾರು?
ಮಿಲ್ಕಾ ಸಿಂಗ್

ಟಿಪ್ಪಣಿ: 400 ಮೀಟರ್ ಓಟದಲ್ಲಿ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನವನ್ನು ಗಳಿಸಿದ ಭಾರತದ ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1959 ರಲ್ಲಿ ಇವರಿಗೆ ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇವರು 2021 ರ ಜೂನ್ 18 ರಂದು ನಿಧನರಾದರು.

2. ಬ್ಲಾಕ್ ಫಂಗಸ್ ನ ವೈಜ್ಞಾನಿಕ ಹೆಸರೇನು?
ಮ್ಯೂಕೋರ್ ಮೈಕೋಸಿಸ್ (Mucormycosis)

ಟಿಪ್ಪಣಿ: ಇದೊಂದು ಕಪ್ಪು ಶಿಲಿಂದ್ರ ವಾಗಿದ್ದು ಇದಕ್ಕೆ ಜೈಗೋಮೈಕೋಸಿಸ್ (Zygomycosis) ಎಂಬ ಹೆಸರೂ ಇದೆ.

3. ಭಾರತೀಯ ನವೋದಯದ ದೃವತಾರೆ ಎಂದು ಯಾರನ್ನು ಕರೆಯಲಾಗುತ್ತದೆ?
ರಾಜಾ ರಾಮ್ ಮೋಹನ್ ರಾಯ್

ಟಿಪ್ಪಣಿ: ರಾಜಾರಾಮ್ ಮೋಹನ್ ರಾಯ್ ರವರು 1828 ರಲ್ಲಿ ಬ್ರಹ್ಮ ಸಮಾಜ ವನ್ನು ಸ್ಥಾಪಿಸಿದರು. ಇವರು 1821 ರಲ್ಲಿ ಆರಂಭಿಸಿದ ಸಂವಾದ ಕೌಮುದಿ ವರ್ತಮಾನ ಪತ್ರಿಕೆಯನ್ನು ಬ್ರಹ್ಮಸಮಾಜದ ಬೈಬಲ್ ಎನ್ನಲಾಗುತ್ತದೆ.

4. 2021ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯವಾಕ್ಯ ಏನಾಗಿತ್ತು?
“ಯೋಗಕ್ಷೇಮಕ್ಕೆ ಯೋಗ (Yoga for Well-Being )”

ಟಿಪ್ಪಣಿ: 2021 ರ ಯೋಗ ದಿನಾಚರಣೆಯು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಾಗಿದೆ.
ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 2015 ಜೂನ್ 21ರಂದು ಆಚರಿಸಲಾಗಿತ್ತು.

5. World Wide Web ಅನ್ನು ಕಂಡುಹಿಡಿದವರು ಯಾರು?
Tim Berners-Lee
Robert Cailliau

ಟಿಪ್ಪಣಿ : WWW ವು ಒಂದು internet navigation system ಆಗಿದ್ದು, ಇದನ್ನು ಹದಿನೈದು 1989 ರಲ್ಲಿ ಕಂಡುಹಿಡಿಯಲಾಯಿತು.

6. ದೆಹಲಿ ಸುಲ್ತಾನರಲ್ಲಿ ಅತಿ ದೀರ್ಘಾವಧಿಯ ಆಡಳಿತ ನಡೆಸಿದ ಸಂತತಿ ಯಾವುದು?
ತುಘಲಕ್ ಸಂತತಿ (1320-1399)

ಟಿಪ್ಪಣಿ :

ಘೀಯಾಸುದ್ದಿನ್ ತುಘಲಕ್ ಈ ಸಂತತಿಯ ಸ್ಥಾಪಕ. ಘೀಯಾಸುದ್ದಿನ್ ತುಘಲಕ್ ನ ನಂತರ ಇವನ ಹಿರಿಯ ಮಗನಾದ ಮಹಮದ್ ಬಿನ್ ತುಘಲಕ್ 1352 ಅಧಿಕಾರಕ್ಕೆ ಬಂದನು.

7. ವಿಶ್ವದ ಉಗಮದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಕಾಸ್ಮೋಲಜಿ (Cosmology)

ಟಿಪ್ಪಣಿ :

ವಿಷಯಗಳು ಮತ್ತು ಅಧ್ಯಯನ
ಶಿಲೆಗಳ ಅಧ್ಯಯನ – ಪೆಟ್ರೊಲಜಿ
ಹೂಗಳ ಅಧ್ಯಯನ – ಅಂಥೋಲಜಿ
ಚರ್ಮದ ಅಧ್ಯಯನ – ಡರ್ಮಟೊಲಜಿ
ಮಣ್ಣಿನ ಅಧ್ಯಯನ – ಪೆಡಾಲಜಿ

8. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಇರುವುದು ಎಲ್ಲಿ?
ಶ್ರೀಹರಿಕೋಟ

ಟಿಪ್ಪಣಿ:
ಕೇಂದ್ರ: ಶ್ರೀಹರಿಕೋಟ, ಆಂಧ್ರ ಪ್ರದೇಶ
ಸ್ಥಾಪನೆ: 1971 ಅಕ್ಟೋಬರ್ 1

9. ಜಗತ್ತಿನ ಎರಡನೇ ಅತಿ ಎತ್ತರದ ಶಿಖರವಾದ ಮೌಂಟ್ ಗಾಡ್ವಿನ್ ಆಸ್ಟಿನ್ ಯಾವ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತದೆ?
ಕಾರಕೋರಂ

ಟಿಪ್ಪಣಿ: ಇದರ ಎತ್ತರ 8611 ಮೀಟರ್ ಆಗಿದ್ದು ಇದನ್ನು ಉಗ್ರ ಪರ್ವತ ಎಂದೂ ಕರೆಯುತ್ತಾರೆ.

10. ಕರ್ನಾಟಕದಲ್ಲಿ ನಮ್ಮ ಮೆಟ್ರೋ ರೈಲು ವ್ಯವಸ್ಥೆ ಇರುವುದು ಎಲ್ಲಿ?
ಬೆಂಗಳೂರು

ಟಿಪ್ಪಣಿ: ಬೆಂಗಳೂರಿನ ನಮ್ಮ ಮೆಟ್ರೋ ರೈಲು ವ್ಯವಸ್ಥೆಯು 2011 ಅಕ್ಟೋಬರ್ 20 ರಂದು ಪ್ರಾರಂಭವಾಯಿತು.

11. ಲೋಹಗಳಲ್ಲಿ ಗಟ್ಟಿಯಾದ ಲೋಹ ಯಾವುದು?
ಪ್ಲಾಟಿನಂ

ಟಿಪ್ಪಣಿ:
ರಾಸಾಯನಿಕ ಸಂಕೇತ: Pt
ಪರಮಾಣು ಸಂಖ್ಯೆ: 78

12. ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ಯ ಕೇಂದ್ರ ಕಚೇರಿ ಎಲ್ಲಿದೆ?
ಮುಂಬೈ

ಟಿಪ್ಪಣಿ: ಸ್ಥಾಪನೆ : 2008

13. INX – India International Exchange ನ ಕೇಂದ್ರ ಕಚೇರಿ ಇರುವುದು ಎಲ್ಲಿ?
ಗುಜರಾತಿನ ಗಾಂಧೀನಗರ


ವಿಶೇಷತೆ:

  1. ಭಾರತದ ಮೊದಲ ಅಂತರಾಷ್ಟ್ರೀಯ ಷೇರು ವಿನಿಮಯ ಕೇಂದ್ರ

2. ಜಗತ್ತಿನಲ್ಲಿ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟಾಕ್ ಎಕ್ಸ್ಚೇಂಜ್ ಅಂತಾರಾಷ್ಟ್ರೀಯ ಒಲಿಂಪಿಕ್

13. ಸಮಿತಿ (IOC) ಯ ಪ್ರಸ್ತುತ ಸದಸ್ಯ ರಾಷ್ಟ್ರಗಳು ಎಷ್ಟು?
105


ಟಿಪ್ಪಣಿ:
ಸ್ಥಾಪನೆ: 1894
ಕೇಂದ್ರ ಕಚೇರಿ: ಸ್ವಿಡ್ಜ್ ರ್ಲ್ಯಾಂಡ್ ನ ಲಾಸೆನ್ನೆ
ಉದ್ದೇಶ: ಆಧುನಿಕ ಒಲಿಂಪಿಕ್ಸ್ ಕ್ರೀಡೆಗಳನ್ನು ಆಯೋಜನೆ ಮಾಡುವುದು.

14. BHIM app ನ್ನು ಎಂದು ಉದ್ಘಾಟಿಸಲಾಯಿತು?
2016 ಡಿಸೆಂಬರ್ 30

ಟಿಪ್ಪಣಿ: ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯಲ್ಲಿ 2016 ಡಿಸೆಂಬರ್ 30ರಂದು BHIM-Bharat Interface fot Money app ನ್ನು ಉದ್ಘಾಟಿಸಿದರು.

15. ಗಗನಚುಕ್ಕಿ ಭರಚುಕ್ಕಿ ಜಲಪಾತಕ್ಕೆ ಹರಿಯುವ ನದಿ ಯಾವುದು?
ಕಾವೇರಿ ನದಿ


ಟಿಪ್ಪಣಿ: ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತವು ಮಂಡ್ಯ ಜಿಲ್ಲೆಯಲ್ಲಿದೆ.

GK questions in Kannada 2021

16. ಲಾಕ್ ಭಕ್ ಬಿರುದನ್ನು ಹೊಂದಿದ ಸುಲ್ತಾನ ಯಾರು?

ಕುತುಬ್ದಿನ್ ಐಬಕ್

ಸುಲ್ತಾನರು ಬಿರುದು : ಚಕ್ರವರ್ತಿಗಳು
ಛತ್ರಪತಿ – ಶಿವಾಜಿ
ಹುಲಿ – ಬಾಬರ್
ಮೈಸೂರಿನ ಹುಲಿ – ಟಿಪ್ಪು ಸುಲ್ತಾನ್
ತಾನೇ ಅದೃಷ್ಟವಂತ – ಹುಮಾಯೂನ್

16. ಸಮುದ್ರದ ನೀರಿನ ಪಿಹೆಚ್ ಮೌಲ್ಯ ಎಷ್ಟಾಗಿರುತ್ತದೆ?
7.5 ರಿಂದ 8.4 ಕುಡಿವ ನೀರು 6.5 ರಿಂದ 8.5

ಟಿಪ್ಪಣಿ:
ಶುದ್ಧ ನೀರು – 7
ಆಮ್ಲಗಳು – 7 ಕ್ಕಿಂತ ಕಡಿಮೆ
ಪ್ರತ್ಯಾಮ್ಲಗಳು – 7 ಕ್ಕಿಂತ ಹೆಚ್ಚು
ಆಮ್ಲ ಮಳೆ – 5.6 ರಿಂದ 6.5
ಮಾನವನ ರಕ್ತ – 7.4

17. ಜಾಂಬವತಿ ಕಲ್ಯಾಣ ಎಂಬ ನಾಟಕದ ಕರ್ತೃ ಯಾರು?
ಶ್ರೀ ಕೃಷ್ಣದೇವರಾಯ ಟಿಪ್ಪಣಿ:
ನಾಟಕದ ಭಾಷೆ: ಸಂಸ್ಕೃತ

18. ಹಂಪೆಯನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಿದ ವರ್ಷ ಯಾವುದು?
1986
ಟಿಪ್ಪಣಿ : ಕಿಷ್ಕಿಂದೆ ಹಂಪೆಯ ಹಿಂದಿನ ಹೆಸರಾಗಿತ್ತು. ಈ ಹಂಪೆಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಲಾಂಛನವು ವರಾಹ ಆಗಿತ್ತು.

19. ಕೆಂಪು, ಹಸಿರು ಮತ್ತು ನೀಲಿ ಯಾವ ವರ್ಗದ ಬಣ್ಣಗಳು?
ಪ್ರಾಥಮಿಕ ಬಣ್ಣಗಳು

ಟಿಪ್ಪಣಿ ಬಣ್ಣಗಳನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು.

  1. ಪ್ರಾಥಮಿಕ ಬಣ್ಣಗಳು
  2. ದ್ವಿತೀಯ ಬಣ್ಣಗಳು

20. ಭತ್ತದ ವೈಜ್ಞಾನಿಕ ಹೆಸರೇನು?
ವರೈಸಾ ಸಟೈವಾ


ಟಿಪ್ಪಣಿ: ಭತ್ತವು ಪೊಯೆಸಿ ಹುಲ್ಲಿನ ವರ್ಗದ ಜಾತಿಗೆ ಸೇರಿದೆ. ಪ್ರಪಂಚದಲ್ಲಿ ಬತ್ತದ ಉತ್ಪಾದನೆಯಲ್ಲಿ ಭಾರತವು 2ನೇ ಸ್ಥಾನದಲ್ಲಿದೆ.

21. “ಚಾಲ್ಕೋಲಿಥಿಕ್ ಯುಗ”ದಲ್ಲಿ ಮಾನವನು ಬಳಸಿದ ಲೋಹ ಯಾವುದು?
ತಾಮ್ರ


ಟಿಪ್ಪಣಿ: ಚಾಲ್ಕೋಲಿಥಿಕ್ ಯುಗವನ್ನು ತಾಮ್ರದ ಯುಗ ಎಂದೂ ಕರೆಯುತ್ತಾರೆ.
ತಾಮ್ರದ ರಾಸಾಯನಿಕ ಸಂಕೇತ Cu ಆಗಿದ್ದು ಪರಮಾಣು ಸಂಖ್ಯೆ 29ನ್ನು ಹೊಂದಿದೆ.

22. ವಿಜ್ಞಾನಿ ಖಂಡ ಎಂದು ಯಾವ ಖಂಡಕ್ಕೆ ಕರೆಯುತ್ತಾರೆ?
ಅಂಟಾರ್ಕ್ಟಿಕ್

ಟಿಪ್ಪಣಿ: ಈ ಖಂಡದಲ್ಲಿ ಭಾರತ ದಕ್ಷಿಣ ಗಂಗೋತ್ರಿ ಎಂಬ ಸಂಶೋಧನಾ ಕೇಂದ್ರ ತೆರೆದಿತ್ತು.

23. ಬ್ರಿಕ್ಸ್ (BRICS) ಒಕ್ಕೂಟದಲ್ಲಿ ನ ಸದಸ್ಯ ರಾಷ್ಟ್ರಗಳು ಯಾವುವು?
ಬ್ರೇಜಿಲ್, ರಷ್ಯಾ, ಭಾರತ (India), ಚೀನಾ ಮತ್ತು ಮತ್ತು ದಕ್ಷಿಣ ಆಫ್ರಿಕಾ (South Africa).

24. ಭಾರತದ ಮೊದಲ ಐಐಟಿ (IIT) ಎಲ್ಲಿ ಸ್ಥಾಪನೆಯಾಯಿತು?
ಪಶ್ಚಿಮ ಬಂಗಾಳದ ಖರಗ್ ಪುರ

ನೆನಪಿಡಿ: IIT- Indian Institute of Technology ಖರಗ್ ಪುರ ಭಾರತದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಐಐಟಿ ಆಗಿದೆ. ಇದನ್ನು 1951 ರಲ್ಲಿ ಸ್ಥಾಪಿಸಲಾಗಿದೆ.

25. ವಿಶ್ವಸಂಸ್ಥೆ ಸ್ಥಾಪನೆಯಾದ ವರ್ಷ
1945 ಅಕ್ಟೋಬರ್ 24

ನೆನಪಿಡಿ:
ಕೇಂದ್ರ ಕಚೇರಿ: ಅಮೆರಿಕದ ನ್ಯೂಯಾರ್ಕ್
ವಿಶ್ವಸಂಸ್ಥೆಯಲ್ಲಿ ಭಾರತದ ಸದಸ್ಯತ್ವ: 1945 ಅಕ್ಟೋಬರ್ 30
ವಿಶ್ವಸಂಸ್ಥೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ: 193
ವಿಶ್ವಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದ ವರ್ಷ :2001

26. ಡಾ. ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ವರ್ಷ ಯಾವುದು?
1992

ನೆನಪಿಡಿ: ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು 1992ರಲ್ಲಿ ಪ್ರಾರಂಭಿಸಲಾಯಿತು. ಡಾ. ರಾಜಕುಮಾರ್ ರವರು ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ರಾಜ್ಯಸರ್ಕಾರವು ಈ ಪ್ರಶಸ್ತಿಯನ್ನು ನೀಡಿದೆ.

27. PDF ನ ವಿಸ್ತೃತ ರೂಪವೇನು?
Portable Document Format

28. ಮೈಸೂರಿನ ಅರಮನೆಯ ವಾಸ್ತುಶಿಲ್ಪಿ ಯಾರಾಗಿದ್ದರು?

ಹೆನ್ರಿ ಇರ್ವಿನ್


FAQ On Kannada GK Questions And Answers

ಸೇಬು ಹಣ್ಣಿನಲ್ಲಿ ಯಾವ ಆಮ್ಲವಿರುತ್ತದೆ?

ಮಾಲಿಕ್ ಆಮ್ಲ

ಸಾಗರದ ಆಳವನ್ನು ಅಳೆಯುವ ಮಾಪನ ಯಾವುದು?

ಪ್ಯಾಥಮ್. 1 ಪ್ಯಾಥಮ್ ಎಂದರೆ 6 ಅಡಿ.

ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು?

ಬಸವರಾಜ ಬೊಮ್ಮಾಯಿ

ಭಾರತದ ರಾಷ್ಟ್ರ ಲಾಂಛನವನ್ನು ಯಾವಾಗ ಅಂಗೀಕರಿಸಲಾಯಿತು?

1950 ಜನವರಿ 26

ನೆನಪಿಡಿ: ಮೈಸೂರು ಅರಮನೆಯನ್ನು ಅಂಬಾವಿಲಾಸ ಪ್ಯಾಲೇಸ್ ಎಂದೂ ಕರೆಯುತ್ತಾರೆ. ಇದರ ನಿರ್ಮಾಣವು 1897 ರಲ್ಲಿ ಆರಂಭಗೊಂಡು 1912 ರಲ್ಲಿ ಪೂರ್ಣಗೊಂಡಿತು

Kannada GK Questions And Answers ಲೇಖನವು ಇಷ್ಠವಾಗಿದ್ದರೆ, ನಿಮ್ಮ ಅನಿಸಿಕೆಗಳನ್ನು Comment ಮಾಡಿ.

ಓದಿ:Science Quiz Questions In Kannada 

2 thoughts on “2021 Kannada GK Questions And Answers – GK Question In Kannada”

Leave a Comment

error: Content is protected !!