[2022] Kannada GK Questions । ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಈ ಕೆಳಗೆ ನೀಡಲಾದ Kannada GK Questions ಅಂದರೆ ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆಯುವ PC, PSI. KPSC ಹಾಗೂ ಇನ್ನೀತರ ನೇಮಕಾತಿಗಳಿಗೆ ತುಂಬಾ ಸಹಾಯ ಮಾಡಬಲ್ಲವು.

ನೀವು ಒಬ್ಬ ಸ್ಪರ್ಧಾರ್ಥಿ ನಾ? ಹಾಗಾದರೆ ಬನ್ನಿ ಪ್ರಶ್ಣೋತ್ತರಗಳನ್ನು ಶುರು ಮಾಡೇ ಬಿಡೋಣ.

Kannada GK Questions 2022

Kannada GK Questions
Kannada GK Questions

1. ಮಹಾಮಸ್ತಕಾಭಿಷೇಕ ಹಬ್ಬವು ಎಲ್ಲಿ ಮತ್ತು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?

  • ಶ್ರವಣಬೆಳಗೊಳ, 4 ವರ್ಷಗಳಿಗೊಮ್ಮೆ
  • ಶ್ರವಣಬೆಳಗೊಳ, 8 ವರ್ಷಗಳಿಗೊಮ್ಮೆ
  • ಶ್ರವಣಬೆಳಗೊಳ, 12 ವರ್ಷಗಳಿಗೊಮ್ಮೆ
  • ಶ್ರವಣಬೆಳಗೊಳ, 20 ವರ್ಷಗಳಿಗೊಮ್ಮೆ

ಉತ್ತರ: ಮಹಾಮಸ್ತಕಾಭಿಷೇಕವು ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ 12 ವರ್ಷಗಳಿಗೊಮ್ಮೆ ಮಾಡಲಾಗುವ ಅಭಿಷೇಕ ಅಥವಾ ಹಬ್ಬವಾಗಿದೆ.

2. ಭಾರತೀಯ ಜೀವ ವಿಮಾ ನಿಗಮ(LIC) ಪ್ರಾರಂಭವಾದದ್ದು ಯಾವಾಗ?

  • 1955
  • 1956
  • 1957
  • 1958

ಉತ್ತರ: Life Insurance Corporation of India ಅಥವಾ ಭಾರತೀಯ ಜೀವ ವಿಮಾ ನಿಗಮವು 1 ಸೆಪ್ಟೆಂಬರ್ 1956 ಶುರುವಾಯಿತು. ಇದರ ಮುಖ್ಯ ಕಛೇರಿಯು ಮುಂಬೈ ಯಲ್ಲಿದೆ. ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.

3. ಭಾಕ್ರಾನಂಗಲ್: ಸಟ್ಲೆಜ್:: ಬಸವಸಾಗರ:_

  • ಕಾವೇರಿ
  • ಭೀಮಾ
  • ಕೃಷ್ಣಾ
  • ತುಂಗಭದ್ರಾ

ಉತ್ತರ: ನಾರಾಯಣಪುರ ಆಣೆಕಟ್ಟು ಎಂದು ಕರೆಯಲ್ಪಡುವ ಬಸವಸಾಗರ ಆಣೆಕಟ್ಟು ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

4. ಒಂದು ಗಡಿಯಾರವು 8cm ಉದ್ದ ಮತ್ತು 12cm ಅಗಲವಿದೆ.ಅದರ ಸುತ್ತಳತೆ ಎಷ್ಟು?

  • 20cm
  • 23cm
  • 40cm
  • 60cm

ಉತ್ತರ: 40cm. ಹೇಗೆಂದರೆ, ಕೊಟ್ಟಿರುವ ಎರಡು ಉದ್ದಗಲದ ಅಳತೆಗಳು ಅಸಮವಾಗಿವೆ. ಹಾಗಾದರೆ ಗಡಿಯಾರವು ಆಯತಾಕಾರದಲ್ಲಿದೆ.

ಹಾಗಿದ್ದಲ್ಲಿ ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ= 2(ಉದ್ದ + ಅಗಲ)= 2(8cm+12cm)=2(20cm)=2x20cm=40cm.

5. “ಭೂತ ಕೋಲ” ಆಧ್ಯಾತ್ಮಿಕ ನೃತ್ಯದ ಶ್ರೀಮಂತಿಕೆಯನ್ನು ತೋರಿಸುವ ಮೂಲಕ ಜನಮನ್ನಣೆ ಪಡೆದ ಕನ್ನಡದ ಚಲನಚಿತ್ರ ಯಾವುದು?

  • ಕಾಂತಾರ
  • ಬೆಲ್ ಬಾಟಮ್
  • ಸ.ಹಿ.ಪ್ರಾ.ಶಾಲೆ ಕಾಸರಗೋಡು

ಉತ್ತರ: ಕಾಂತಾರ. ಭೂತದ ಕೋಲ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಆಧ್ಯಾತ್ಮಿಕ ನೃತ್ಯ ಮತ್ತು ಪೂಜಾ ವಿಧಾನವಾಗಿದೆ. ಪಂಜುರ್ಲಿ, ಬೊಬ್ಬರ್ಯ, ಪಿಲಿಪೂಟಾ, ಕಲ್ಕುಡ, ಕಲ್ಬುರ್ತಿ, ಪಿಲಿಚಾಮುಂಡಿ, ಕೋಟಿ ಚೆನ್ನಯ ಇವು ಭೂತದ ಕೋಲದ ಭಾಗವಾಗಿ ಪೂಜಿಸಲ್ಪಡುವ ಕೆಲವು ಜನಪ್ರಿಯ ದೇವರುಗಳು (ಭೂತಗಳು)

Kannada GK Questions And Answers

6. ಒಂದನೇ ಆಂಗ್ಲೋ – ಮೈಸೂರು ಯುದ್ಧ ಯಾವಾಗ ನಡೆಯಿತು?

  • ಕ್ರಿ.ಶ. 1766-67
  • ಕ್ರಿ.ಶ. 1766-69
  • ಕ್ರಿ.ಶ. 1780-84
  • ಕ್ರಿ.ಶ. 1790-92

ಉತ್ತರ: ಕ್ರಿ.ಶ. 1766-69. ಈ ಯುದ್ಧವು ಮೈಸೂರು ರಾಜ್ಯದ ವತಿಯಿಂದ ಈಸ್ಟ್ ಇಂಡಿಯಾ ಕಂಪನಿ (ಬ್ರಿಟೀಷ್) ಯ ವಿರುದ್ಧ ನಡೆಯಿತು. ಕೊನೆಗೆ ಮದ್ರಾಸ್ ಒಪ್ಪಂದದೊಂದಿಗೆ ಕೊನೆಗೊಂಡಿತು.

7. ಗೋಬರ್ ಗ್ಯಾಸ್ ನ ಮುಖ್ಯ ಘಟಕ ಯಾವುದು?

  • ಮಿಥೇನ್
  • ಈಥೇನ್
  • ಜಲಜನಕ
  • ಇಂಗಾಲದ-ಡೈ-ಆಕ್ಸೈಡ್

ಉತ್ತರ: ಮಿಥೇನ್. ಗೋಬರ್ ಗ್ಯಾಸ್ ಅಥವಾ ಬಯೋಗ್ಯಾಸ್ ವು ಮಿಥೇನ್, ಜಲಜನಕ(ಹೈಡ್ರೋಜನ್), ಕಾರ್ಬನ್ ಡೈ ಆಕ್ಸೈಡ್ ಮೂರೂ ಅನಿಲಗಳನ್ನು ಒಳಗೊಂಡಿರುತ್ತದೆ. ಆದರೆ ಮುಖ್ಯವಾದ ಘಟಕ ಅಥವಾ ಅನಿಲ ಎಂದರೆ ಅದು ಮಿಥೇನ್.

8. ಸಾರ್ಕ್ ನ ಮೊದಲ ಶೃಂಗಸಭೆ ಎಲ್ಲಿ ನಡೆಯಿತು?

  • ಇಸ್ಲಾಮಾಬಾದ್, ಪಾಕಿಸ್ತಾನ
  • ಬೆಂಗಳೂರು, ಭಾರತ
  • ಕಟ್ಮಂಡು, ನೇಪಾಳ
  • ಢಾಕಾ, ಬಾಂಗ್ಲಾದೇಶ

ಉತ್ತರ: ಮೊದಲ ಸಾರ್ಕ್ ಶೃಂಗಸಭೆ 1985ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಿತು.

9. ಮೊದಲ ಮಾನವ ನಿರ್ಮಿತ ಉಪಗ್ರಹ ಯಾವುದು?

  • ಸ್ಪುಟ್ನಿಕ್ 1
  • ಆರ್ಯಭಟ
  • ಭಾಸ್ಕರ 1
  • ಫೋಬೋಸ್ 1

ಉತ್ತರ: ಸ್ಪುಟ್ನಿಕ್ 1 ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿಸಲಾದ ವಿಶ್ವದ ಮೊದಲ ಕೃತಕ ಉಪಗ್ರಹವಾಗಿದೆ. ಇದನ್ನು ಅಕ್ಟೋಬರ್ 1957 ರಂದು ಭೂ ಕಕ್ಷೆಗೆ ಸೇರಿಸಲಾಗಿತ್ತು. 1958 ರ ಜನವರಿ 4 ರಂದು ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ಸ್ಪುಟ್ನಿಕ್ 1 ಸುಟ್ಟುಹೋಯಿತು.

10. ಈ ಕೆಳಗಿನ ಯಾವ ಜಿಲ್ಲೆಯು ವಿಮಾನ ನಿಲ್ದಾಣವನ್ನು ಹೊಂದಿಲ್ಲ?

  • ಕಲಬುರಗಿ
  • ಧಾರವಾಡ
  • ಬೀದರ
  • ರಾಯಚೂರು

ಉತ್ತರ: ರಾಯಚೂರು

Kannada GK Questions With Answers

11. ಯಾವ ದೇಶವು ಅತಿ ಹೆಚ್ಚು ಬಾರಿಗೆ ಏಷ್ಯನ್ ಕ್ರೀಡಾಕೂಟ(Asian Games) ಗಳನ್ನು ಆಯೋಜಿಸಿದೆ?

  • ಭಾರತ
  • ಜಪಾನ್
  • ಚೀನಾ
  • ಥೈಲ್ಯಾಂಡ್

ಉತ್ತರ: ಥೈಲ್ಯಾಂಡ್ ದೇಶವು 1966, 1970, 1978 ಮತ್ತು 1998 ಆಯೋಜಿಸುವುದರ ಮೂಲಕ ಅತಿ ಹೆಚ್ಚು ಬಾರಿಗೆ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಿದ ದೇಶವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

ಭಾರತವು ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಿದ ದೇಶವೆಂದು ಖ್ಯಾತಿಯಾಗಿದೆ.

12. ಜಗತ್ ವಿಖ್ಯಾತಿ ಪಡೆದ ಮೊನಾಲಿಸಾ ಚಿತ್ರವನ್ನು ಲಿಯೊನಾರ್ಡೊ ಡಾ ವಿಂಚಿ ಯಾವಾಗ ಚಿತ್ರಿಸಿದರು?

  • ಕ್ರಿ.ಶ 1407
  • ಕ್ರಿ.ಶ 1452
  • ಕ್ರಿ.ಶ 1499
  • ಕ್ರಿ.ಶ 1503

ಉತ್ತರ: ಕ್ರಿ.ಶ 1503 ರಿಂದ ಕ್ರಿ.ಶ 1506 ರ ನಡುವೆ ಇದನ್ನು ಚಿತ್ರಿಸಲಾಗಿದೆ ಎನ್ನಲಾಗುತ್ತದೆ. ಈಗ ಇದು ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂ(Louvre Museum)ನಲ್ಲಿದೆ.

13. ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಭಾರತೀಯ ಬ್ಯಾಂಕು ಯಾವುದು?

  • ಕೆನರಾ ಬ್ಯಾಂಕ್
  • ಗ್ರಾಮೀಣ ಬ್ಯಾಂಕ್
  • ಎಸ್.ಬಿ.ಐ
  • ಹೆಚ್.ಡಿ.ಎಫ್.ಸಿ ಬ್ಯಾಂಕ್

ಉತ್ತರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಅತಿದೊಡ್ಡ ಬ್ಯಾಂಕ್ ಮತ್ತು ವಿಶ್ವದ ಅತಿದೊಡ್ಡ ನಿಗಮಗಳಲ್ಲಿ ಒಂದು.

14. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಎಲ್ಲಿದೆ?

  • ಮೈಸೂರು
  • ಕಲ್ಕತ್ತ
  • ದೆಹಲಿ
  • ಚೆನ್ನೈ

ಉತ್ತರ: ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ(Central Institute of Indian Languages-CIIL) ಕರ್ನಾಟಕದ ಮೈಸೂರಿನಲ್ಲಿದೆ.

15. ಸೂಪಾ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?

  • ಕೃಷ್ಣಾ
  • ಕಾವೇರಿ
  • ಕಾಳಿ ನದಿ
  • ಮಲಪ್ರಭಾ

ಉತ್ತರ: ಸೂಪಾ ಆಣೆಕಟ್ಟನ್ನು ಕಾಳಿ ನದಿಗೆ ಅಡ್ಡಲಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟಲಾಗಿದೆ.

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

16. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಬಂಡೀಪುರ ರಾಷ್ಟೀಯ ಉದ್ಯಾನವನ ಇದೆ?

  • ಚಾಮರಾಜನಗರ
  • ತುಮಕೂರು
  • ಧಾರವಾಡ
  • ರಾಮನಗರ

ಉತ್ತರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅದೇ ರೀತಿ ರಾಷ್ಟ್ರೀಯ ಉದ್ಯಾನವನ ಕೂಡ ಹೌದು. ಇದು ಚಾಮರಾಜನಗರ ಜಿಲ್ಲೆಯಲ್ಲಿದೆ.

17. ಅತಿ ಹೆಚ್ಚು ದೀರ್ಘಾವಧಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು ಯಾರು?

  • ಡಿ.ದೇವರಾಜ್ ಅರಸ್
  • ರಾಮಕೃಷ್ಣ ಹೆಗಡೆ
  • ಸದಾನಂದ್ ಗೌಡ
  • ಆರ್.ಗುಂಡುರಾವ್

ಉತ್ತರ: ಡಿ.ದೇವರಾಜ್ ಅರಸ್ 7 ವರ್ಷಗಳ ಕಾಲ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದರು.

18. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಯಾವಾಗ?

  • 1963
  • 1964
  • 1965
  • 1966

ಉತ್ತರ: ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು 1964ರಲ್ಲಿ.

19. ಕರ್ನಾಟಕದಿಂದ ಭಾರತ ರತ್ನ ಪಡೆದ ಮೊದಲ ಕನ್ನಡಿಗ ಯಾರು?

  • ಸಿ.ಎನ್.ಆರ್ ರಾವ್
  • ಸರ್.ಎಂ.ವಿಶ್ವೇಶ್ವರಯ್ಯ
  • ಭಿಮಸೇನ್ ಜೋಷಿ
  • ಯಾರೂ ಅಲ್ಲ

ಉತ್ತರ:ಸರ್.ಎಂ.ವಿಶ್ವೇಶ್ವರಯ್ಯ

20. ಬುದ್ಧ ಮಲಗಿದ ಬೆಟ್ಟ ಇರುವುದು ಎಲ್ಲಿ?

  • ಯಾದಗಿರಿ
  • ಮೈಸೂರು
  • ಕೊಡಗು
  • ಶಿವಮೊಗ್ಗ

ಉತ್ತರ: ಬುದ್ಧ ಮಲಗಿದ ಬೆಟ್ಟ ಎಂದು ಖ್ಯಾತಿ ಪಡೆದ ಬೆಟ್ಟ ಇರುವುದು ಯಾದಗಿರಿ ಜಿಲ್ಲೆಯ ಶಹಾಪೂರಿನಲ್ಲಿ.

FAQ On Kannada GK Questions

1. ಕರ್ನಾಟಕದ ಕಾಶ್ಮೀರ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ

ಕೊಡಗು ಜಿಲ್ಲೆಯನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ.

2. “ಕರ್ನಾಟಕದ ಹೃದಯ” ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?

ದಾವಣಗೆರೆಯನ್ನು ಕರ್ನಾಟಕದ ಹೃದಯ (Heart of Karnataka)ಎಂದು ಕರೆಯಲಾಗುತ್ತದೆ.

ಕನ್ನಡದಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು Kannada GK Questions ಎಂಬ ಲೇಖನದ ಮೂಲಕ ನಿಮ್ಮ ಮುಂದೆ ತಂದಿಡುವ ಸಣ್ಣ ಪ್ರಯತ್ನ ಇದಾಗಿತ್ತು.

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು ಲೇಖನದ ಕುರಿತು ನಿಮ್ಮ ಅನಿಸಿಕೆ ಅಥವಾ ಅಭಿಪ್ರಾಯಗಳು ಇದ್ದರೆ ದಯವಿಟ್ಟು ಈ ಕೆಳಗೆ ಕಾಮೆಂಟ್ ಮಾಡುವುದರ ಮೂಲಕ ನಮಗೆ ತಿಳಿಸಿ.

ವಿಜ್ಞಾನ G.Kಗಣಿತ G.K
ಕಂಪ್ಯೂಟರ್ G.Kಸಾಮಾನ್ಯ G.K
Kannada GK Questions and answeres

Leave a Comment