ಪ್ರಿಯ ಓದುಗರೇ, ಇವತ್ತಿನ ಈ Kannada Varnamale (ಕನ್ನಡ ವರ್ಣಮಾಲೆ ) ಎಂಬ ಮಹತ್ವಪೂರ್ಣ ಲೇಖನಕ್ಕೆ ಸ್ವಾಗತ. ಈ ಪೋಸ್ಟ್ ನಲ್ಲಿ ಈ ಕೆಳಗಿನವುಗಳ ಕುರಿತು ಸವಿವರವಾಗಿ ತಿಳಿದುಕೊಳ್ಳೋಣ.
- ವರ್ಣ ಅಥವಾ ಅಕ್ಷರ ಅಂದರೇನು?
- ವರ್ಣಮಾಲೆ ಎಂದರೇನು?
- ಕನ್ನಡ ವರ್ಣಮಾಲೆ ಚಾರ್ಟ್
- ಸ್ವರಗಳು ಎಂದರೇನು?
- ಸ್ವರದ ವಿಧಗಳು
- ವ್ಯಂಜನಗಳು ಮತ್ತು ವ್ಯಂಜನದ ವಿಧಗಳು
- ಗುಣಿತಾಕ್ಷರಗಳು
- ಸಂಯುಕ್ತಾಕ್ಷರಗಳು / ಒತ್ತಕ್ಷರಗಳು
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಪ್ರತಿ ಭಾಷೆಯನ್ನು ಮಾತನಾಡಲು ಅಥವಾ ಬರೆಯಲು ಕೆಲವು ನಿಯಮಗಳಿರುತ್ತವೆ. ಈ ನಿಯಮಗಳನ್ನು ನಾವು ವ್ಯಾಕರಣದಲ್ಲಿ ಕಲಿಯುತ್ತೇವೆ.
ಇಲ್ಲಿ ನಾನು ವ್ಯಾಕರಣ ಎಂಬ ಪದವನ್ನು ಬಳಸುತ್ತಿದ್ದೆನೆ ಏಕೆಂದರೆ ವರ್ಣಮಾಲೆಯೂ ಕೂಡ ವ್ಯಾಕರಣದ ಭಾಗವಾಗಿದೆ.
ಪರಿವಿಡಿ
Kannada Varnamale (ಕನ್ನಡ ವರ್ಣಮಾಲೆ) – ಶಬ್ದ (Letter), ಸ್ವರ (Vowel) ಮತ್ತು ವ್ಯಂಜನ (Consonant)
ಕನ್ನಡ ವರ್ಣಮಾಲೆ ಎಂದರೇನು? (Varnamale in Kannada)
ಸರಳ ಭಾಷೆಯಲ್ಲಿ, ವರ್ಣ ಅಥವಾ ಅಕ್ಷರಗಳ ಸಮೂಹವನ್ನು ವರ್ಣಮಾಲೆ ಎದು ಕರೆಯಲಾಗುತ್ತದೆ. ಇದರ ಹೆಸರೇ ಸೂಚಿಸುವಂತೆ ವರ್ಣ+ಮಾಲೆ ಅರ್ಥಾತ್ ವರ್ಣಗಳ ಮಾಲೆ ಅಥವಾ ಸಮೂಹ ಈ ವರ್ಣಮಾಲೆಯಾಗಿದೆ.
ಈ ಕೆಳಗೆ ಎಲ್ಲ ವರ್ಣಗಳ ವ್ಯವಸ್ಥಿತ ಸಮೂಹ ಅಂದರೆ ವರ್ಣಮಾಲೆಯನ್ನು ಕೊಡಲಾಗಿದೆ.
ಪ್ರತಿ ಭಾಷೆಗಳು ತಮ್ಮದೇಯಾದ ಪ್ರತ್ಯೇಕ, ವರ್ಣಗಳ (ಅಕ್ಷರಗಳ) ವ್ಯವಸ್ಥಿತ ಸಮೂಹ ವರ್ಣಮಾಲೆಯನ್ನು ಹೊಂದಿರುತ್ತವೆ.
ವರ್ಣ ಅಥವಾ ಅಕ್ಷರ ಅಂದರೇನು?
ಮೂಲರೂಪದಲ್ಲಿ ಅಕ್ಷರಗಳು ಸಂಕೇತ ಗಳಾಗಿದ್ದು ನಮ್ಮ ಬಾಯಿಂದ ಹೊರಬರುವ ಧ್ವನಿಯ ಲಿಖಿತ ರೂಪ ವಾಗಿರುತ್ತವೆ. ಇವುಗಳನ್ನು ಇಂಗ್ಲಿಷ್ನಲ್ಲಿ Letters ಎಂದು ಕರೆಯಲಾಗುತ್ತದೆ
ವರ್ಣಗಳ ವರ್ಗೀಕರಣ (Kannada varnamale types) : ಕನ್ನಡದಲ್ಲಿ ವರ್ಣಗಳನ್ನು ಮುಖ್ಯವಾಗಿ, ನಾವು ಉಚ್ಚರಿಸುವ ರೀತಿ, ಪದ್ಧತಿ, ಉಚ್ಛರಿಸಲ್ಪಡುವ ಸ್ಥಳ, ಉಚ್ಚರಿಸಲು ಸಹಾಯ ಮಾಡುವ ಅಂಗಗಳು, ಹಾಗೂ ಇನ್ನೀತರವುಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.
- ಸ್ವರಗಳು (Vowels)
- ಯೋಗವಾಹಗಳು
- ವ್ಯಂಜನಗಳು (Consonants)
ಓದಿ: ಕನ್ನಡ ಮತ್ತು ಇಂಗ್ಲೀಷ್ ವಾರಗಳು
ಸ್ವರಗಳು ಎಂದರೇನು? (Kannada swaragalu)
ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ. ಕನ್ನಡದಲ್ಲಿ ಒಟ್ಟು 13 ಸ್ವರಗಳಿವೆ.
ಅ | ಆ | ಇ | ಈ | ಉ | ಊ | ಋ |
ಎ | ಏ | ಐ | ಒ | ಓ | ಔ |
ಈ ಸ್ವರಗಳನ್ನು ಮತ್ತೇ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ.
- ಹೃಸ್ವ ಸ್ವರಗಳ
- ದೀರ್ಘ ಸ್ವರಗಳು
- ಪ್ಲುತ ಸ್ವರಗಳು
೧. ಹೃಸ್ವ ಸ್ವರಗಳ: ಒಂದೇ ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರಗಳು ಎಂದು ಕರೆಯಲಾಗುತ್ತದೆ.
ಅವುಗಳೆಂದರೆ: ಅ ಇ ಉ ಋ ಎ ಒ
೨. ದೀರ್ಘ ಸ್ವರಗಳು: ಎರಡು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ದೀರ್ಘ ಸ್ವರಗಳು ಎನ್ನಲಾಗುತ್ತದೆ. ಇವುಗಳನ್ನು ಉಚ್ಚರಿಸಲು ದೀರ್ಘ ಉಸಿರು ಉಸಿರು ಬೇಕಾಗುತ್ತದೆ.
ಅವುಗಳೆಂದರೆ: ಆ ಈ ಊ ಏ ಐ ಓ ಔ
೩. ಪ್ಲುತ ಸ್ವರಗಳು: ಮೂರು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ಪ್ಲುತ ಸ್ವರಗಳು ಎನ್ನಲಾಗುತ್ತದೆ. ಇಲ್ಲಿ ದೀರ್ಘ ಸ್ವರಗಳನ್ನು ಎಳೆದು ಉಚ್ಚರಿಸಲಾಗುತ್ತದೆ.
ಉದಾಹರಣೆಗೆ: ಅಣ್ಣಾss , ಅಮ್ಮಾss
ಯೋಗವಾಹಗಳು (Yogavahagalu in Kannada)
ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಗಳು ಎಂದು ಕರೆಯುತ್ತಾರೆ.
ಉದಾಹರಣೆಗೆ: ಅಂ(ಅನುಸ್ವಾರ), ಅಃ(ವಿಸರ್ಗ)
- ಅನುಸ್ವಾರ: ಯಾವುದೇ ಒಂದು ಅಕ್ಷರ ತನ್ನ ಜೊತೆ ಒಂದು ಬಿಂದುವಿನನ್ನು ಹೊಂದಿದ್ದರೇ ಅದನ್ನು ಅನುಸ್ವಾರ ಎಂದು ಕರೆಯುವರು. ಉದಾಹರಣೆಗೆ, ಅಂಗ, ಒಂಟೆ ಹಾಗೂ ಇತ್ಯಾದಿ.
- ವಿಸರ್ಗ: ಒಂದು ಅಕ್ಷರವು ಒಂದರ ಮೇಲೊಂದು ಎರಡು ಬಿಂದುಗಳನ್ನು ಹೊಂದಿದ್ದರೇ ಅದನ್ನು ವಿಸರ್ಗ ಎನ್ನುವರು. ಉದಾಹರಣೆ, ಬಹುಶಃ, ದುಃಖ ಇತ್ಯಾದಿ.
Kannada Varnamale Chart
ಈ ಮೇಲೆ ನಾವು ಕನ್ನಡ ಸ್ವರಗಳು ಮತ್ತು ಅವುಗಳು ವಿಧಗಳು ಕುರಿತು ವಿವರವಾಗಿ ನೋಡಿದೆವು. ಈಗ ಸ್ವರಗಳ ಚಾರ್ಟ್ ನ್ನು ನೋಡಿದರೆ ಸ್ವರಗಳ ಕುರಿತು ಪೂರ್ಣವಾಗಿ ಮಾಹಿತಿ ದೊರೆತಂತಾಗುತ್ತದೆ.
![[2021] Kannada Varnamale (ಕನ್ನಡ ವರ್ಣಮಾಲೆ) | ಕನ್ನಡ ವರ್ಣಮಾಲೆಯ ಸ್ವರಗಳು ಮತ್ತು ವ್ಯಂಜಗಳು kannada varnamale chart 2](https://i0.wp.com/infokannadiga.com/wp-content/uploads/2021/05/kannada-varnamale-chart-2.jpeg?resize=520%2C925&ssl=1)
ವ್ಯಂಜನಾಕ್ಷರಗಳು ಎಂದರೇನು?
ಸ್ವರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಹೆಸರು. ಕನ್ನಡದಲ್ಲಿ ವ್ಯಂಜನಗಳು ೩೪ ಇವೆ.
ವ್ಯಂಜನಗಳ ವಿಧಗಳು:
- ವರ್ಗೀಯ ವ್ಯಂಜನಗಳು
- ಅವರ್ಗೀಯ ವ್ಯಂಜನಗಳು
ವರ್ಗೀಯ ವ್ಯಂಜನಗಳು
ಸ್ವರಗಳ ಸಹಾಯದಿಂದ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ವ್ಯಂಜನಾಕ್ಷರಗಳು ಅಥವಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ.
ಕ ವರ್ಗ | ಕ | ಖ | ಗ | ಘ | ಙ |
ಚ ವರ್ಗ | ಚ | ಛ | ಜ | ಝ | ಞ |
ಟ ವರ್ಗ | ಟ | ಠ | ಡ | ಢ | ಣ |
ತ ವರ್ಗ | ತ | ಥ | ದ | ಧ | ನ |
ಪ ವರ್ಗ | ಪ | ಫ | ಬ | ಭ | ಮ |
ವರ್ಗೀಯ ವ್ಯಂಜನಗಳನ್ನು ಮತ್ತೆ ವಿಧಗಳಾಗಿ ವಿಂಗಡಿಸಲಾಗುತ್ತದೆ.
ವರ್ಗೀಯ ವ್ಯಂಜನದ ವಿಧಗಳು
- ಅಲ್ಪ ಪ್ರಾಣಗಳು
- ಮಹಾಪ್ರಾಣಗಳು
- ಅನುನಾಸಿಕಗಳು
ಅಲ್ಪ ಪ್ರಾಣಗಳು: ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.
ಇವು ಒಟ್ಟು ಸಂಖ್ಯೆಯಲ್ಲಿ ೧೦ ಇವೆ. ಉದಾಹರಣೆಗೆ:
ಕ,ಚ,ಟ,ತ,ಪ
ಗ,ಜ,ಡ,ದ,ಬ
ಮಹಾಪ್ರಾಣಗಳು: ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ ಇವೆ,
ಉದಾಹರಣೆಗೆ:
ಖ,ಛ,ಠ,ಥ,ಫ
ಘ,ಝ,ಢ,ಧ,ಭ
ಅನುನಾಸಿಕಗಳು: ಇವು ಕನ್ನಡದಲ್ಲಿ ಒಟ್ಟು ೫ ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.
ಅವುಗಳೆಂದರೆ: ಙ, ಞ, ಣ, ನ, ಮ
ಅವರ್ಗೀಯ ವ್ಯಂಜನಗಳು
ಹೆಸರೇ ಸೂಚಿಸುವಂತೆ ಈ ವ್ಯಂಜನಗಳಿಗೆ ವರ್ಗಗಳನ್ನು ಮಾಡಲು ಸಾಧ್ಯವಿಲ್ಲ. ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಾಕ್ಷರಗಳನ್ನು ಅವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ.
ಅವುಗಳೆಂದರೆ: ಯ, ರ, ಲ, ವ, ಶ, ಷ, ಸ, ಹ, ಳ
ಗುಣಿತಾಕ್ಷರಗಳು
ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಉಂಟಾಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎಂದು ಕರೆಯುತ್ತಾರೆ.ಗುಣಿತಾಕ್ಷರಗಳನ್ನು ರೂಢಿಯಲ್ಲಿ “ಕಾಗುಣಿತಗಳು” ಮತ್ತು “ಬಳ್ಳಿಗಳು” ಎಂದೂ ಕರೆಯುವುದುಂಟು.
ಉದಾಹರಣೆಗಳು:
ವ್ಯಂಜನ + ಸ್ವರ = ಗುಣಿತಾಕ್ಷರ
ಕ್ + ಅ = ಕ
ಕ್ + ಆ = ಕಾ
ಚ್ + ಇ = ಚಿ
ಚ್ + ಇ = ಚೀ
ತ್ + ಉ = ತು
ಇದರಂತೆ ಎಲ್ಲಾ ಸ್ವರಗಳನ್ನು ಎಲ್ಲಾ ವ್ಯಂಜನಗಳಲ್ಲಿ ಸೇರಿಸಿದಾಗ ಹೊಸ ಆಕಾರದ ಅಕ್ಷರಗಳನ್ನು ಪಡೆದುಕೊಳ್ಳುತ್ತವೆ. ಇವೇ ಗುಣಿತಾಕ್ಷರಗಳು.
ಸಂಯುಕ್ತಾಕ್ಷರಗಳು
ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು, ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯುತ್ತೇವೆ.
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಸ್ + ತ್ + ರ್ + ಅ = ಸ್ತ್ರ
ಸಂಯುಕ್ತಾಕ್ಷರಗಳನ್ನು ಮತ್ತೇ ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ.
- ಸಜಾತಿಯ ಸಂಯುಕ್ತಾಕ್ಷರ
- ವಿಜಾತೀಯ ಸಂಯುಕ್ತಾಕ್ಷರ
ಸಜಾತೀಯ ಸಂಯುಕ್ತಾಕ್ಷರಗಳು: ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು, ನಂತರ ಸ್ವರವೊಂದು ಬಂದರೆ ಅಂತ ಅಕ್ಷರಗಳನ್ನು ಸಜಾತೀಯ ಸಂಯುಕ್ತಾಕ್ಷರಗಳು ಎನ್ನುವರು.
ಉದಾಹರಣೆಗೆ,
ಕತ್ತೆ = ಕ್ + ತ್ + ತ್ + ಎ
ಅಕ್ಕ = ಅ + ಕ್ + ಕ್ + ಅ
ವಿಜಾತೀಯ ಸಂಯುಕ್ತಾಕ್ಷರಗಳು:
ಯಾವುದೇ ಪದದಲ್ಲಿ ಎರಡು ಬೇರೆ-ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತಿಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.
ಉದಾಹರಣೆಗೆ:
ಅಗ್ನಿ = ಅ + ಗ್ + ನ್ + ಇ
ಆಪ್ತ = ಆ + ಪ್ + ತ್ + ಅ
ಕನ್ನಡ ವರ್ಣಮಾಲೆ(Kannada Varnamale) | ಒಟ್ಟು ಅಕ್ಷರಗಳ ಸಂಖ್ಯೆ |
ಸ್ವರಗಳು | 13 |
ಹೃಸ್ವ ಸ್ವರಗಳು | 6 |
ದೀರ್ಘ ಸ್ವರಗಳು | 7 |
ಯೋಗವಾಹಗಳು | 2 |
ವ್ಯಂಜನಗಳು | 34 |
ವರ್ಗೀಯ ವ್ಯಂಜನಗಳು | 25 |
ಅಲ್ಪ ಪ್ರಾಣಗಳು | 10 |
ಮಹಾಪ್ರಾಣಗಳು | 10 |
ಅನುನಾಸಿಕಗಳು | 5 |
ಅವರ್ಗೀಯ ವ್ಯಂಜನಗಳು | 9 |
ಒಟ್ಟು ವರ್ಣಮಾಲೆ | 49 |
FAQ on Kannada Varnamale
Q: ಕನ್ನಡ ವರ್ಣಮಾಲೆಯ ಸ್ವರಗಳು ಎಷ್ಟು?
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿವೆ.
Q: ಕನ್ನಡ ವ್ಯಂಜನಾಕ್ಷರಗಳು ಎಷ್ಟು?
ಕನ್ನಡದಲ್ಲಿ ಒಟ್ಟು 34 ವ್ಯಂಜನಗಳಿವೆ.
Q: ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?
ಕನ್ನಡ ವರ್ಣಮಾಲೆಯಲ್ಲಿ, ಸ್ವರಗಳು, ಯೋಗವಾಹಗಳು ಮತ್ತು ವ್ಯಂಜನಗಳೆಂದು 3 ವಿಧಗಳಿವೆ.
Q: ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
Q: ದೀರ್ಘ ಸ್ವರಗಳು ಎಷ್ಟು
ಕನ್ನಡದಲ್ಲಿ ಒಟ್ಟು 7 ದೀರ್ಘಸ್ವರಗಳಿವೆ.
Conclusion
Kannada Varnamale ಎಂಬ ಈ ಲೇಖನ ನಿಮಗೆ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನ ಸಹಾಯಕವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಏನು ಎಂಬುದನ್ನು Comment ಮಾಡುವುದರ ಮೂಲಕ ತಿಳಿಸಿ.
Fantastic explanation super ❤
Thanks for your comment.
ಒಟ್ಟು ವರ್ಣಗಳು ಎಷ್ಟು?ಅವು ಯಾವವು
ಒಟ್ಟು ವರ್ಣಗಳು 49. ಅವು ಸ್ವರಗಳು, ಯೋಗವಾಹಗಳು ಮತ್ತು ವ್ಯಂಜನಗಳು.
ಧನ್ಯವಾದಗಳು ನಿಮ್ಮ ಕಾರ್ಯ ಬಹು ಉಪಯುಕ್ತವಾದುದ್ದು….
ವಿನಂತಿ,
ನಾನು ಗಮನಿಸಿದ ಹಾಗೆ ಅವರ್ಗೀಯ ವ್ಯಂಜನಗಳಲ್ಲಿ..’ಷ’ ತಪ್ಪಿದೆ ಮತ್ತು ‘ವರ್ಗೀಯ ವ್ಯಂಜನಗಳ’ ಅರ್ಥ ಇನ್ನೂ ಸ್ವಲ್ಪ ಪೂರ್ಣವಾಗಿದ್ದಿದ್ದರೆ ತುಂಬಾ ಚೆನ್ನಾಗಿತ್ತು…
ನಿಮ್ಮ ಈ ಸಲಹೆಗಾಗಿ ಧನ್ಯವಾದಗಳು. ತಪ್ಪಾಗಿರುವುದನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ.
ತುಂಬಾ ಚೆನ್ನಾಗಿ ವಿವರಣೆ ಇದೆ ಸರ್. ಆದರೆ ಒಟ್ಟು ಅಕ್ಷರಗಳ ಪಟ್ಟಿ ಮಾಡಿದ್ದಿರಲ್ಲಾ ಅಲ್ಲಿ ಸ್ವಲ್ಪ ಬದಲಾವಣೆ ಅಥವಾ ಹೆಚ್ಚಿನ ಮಾಹಿತಿಗಾಗಿ ನೀಡಿರುವ ಮಾಹಿತಿಯ ಒಟ್ಟು ಸಂಖ್ಯೆ ಬೇರೆ ಬೇರೆ ನೀಡಿದರೆ ಉತ್ತಮ ಅನ್ನೋದು ನನ್ನ ಅನಿಸಿಕೆ ಸರ್.
ಉದಾಹರಣೆಗೆ,
ಒಟ್ಟು ಅಕ್ಷರಗಳ ಸಂಖ್ಯೆ ಸಾಲಿನಲ್ಲಿ ವ್ಯಂಜನಗಳು 34 ಅಂತ ನಮೂದಿಸಿದ್ದಿರಿ ಆದರೆ
ಕೆಳಗಿನ ಅದೆ ಸಾಲಿನಲ್ಲಿ ವರ್ಗೀಯ ವ್ಯಂಜನಗಳು 25 ಅಂತ ಬರೆದಿದ್ದಿರಿ…ಹೀಗೆ ಅಲ್ಪಪ್ರಾಣ, ಮಹಾಪ್ರಾಣಗಳು ಇತ್ಯಾದಿ.