Kannada Vibhakti Pratyaya | ವಿಭಕ್ತಿ ಪ್ರತ್ಯಯಗಳು – ಕನ್ನಡ ವ್ಯಾಕರಣ

Kannada Vibhakti Pratyaya ನಾಮಪ್ರಕೃತಿ ಎಂದರೇನು? ವಿಭಕ್ತಿ ಪ್ರತ್ಯಯಗಳು ಎಂದರೇನು ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು Hosagannada Vibhakti pratyaya ಹಳೆಗನ್ನಡ ವಿಭಕ್ತಿ ಪ್ರತ್ಯಯ Halegannada Vibhakti pratyaya ವಿಭಕ್ತಿ ಪ್ರತ್ಯಯಗಳು ಯಾವುವು.

ಪ್ರಿಯ ಓದುಗರೇ, ಇಂದು ನಾವೆಲ್ಲಾ ಕನ್ನಡ ವಿಭಕ್ತಿ ಪ್ರತ್ಯಯಗಳನ್ನು ಸವಿವರವಾಗಿ ಅಧ್ಯಯನ ಮಾಡಲಿದ್ದೇವೆ. ನೇರವಾಗಿ ಪ್ರತ್ಯಯಗಳನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಅದಕ್ಕೆ ಬೇಕಾದ ಪೂರಕ ವ್ಯಾಕರಣದ ಅಂಶಗಳನ್ನು ತಿಳಿದುಕೊಂಡರೆ ವಿಭಕ್ತಿಗಳನ್ನು ತಿಳಿದುಕೊಳ್ಳುವುದು ಬಾಳೆಹಣ್ಣು ಸುಲಿದಷ್ಟೇ ಸುಲಭ.

ಬನ್ನಿ ಹಾಗಾದರೆ ತಡ ಮಾಡದೆ ತಿಳಿದುಕೊಳ್ಳೋಣ.

ನಾಮ ಪ್ರಕೃತಿ ಎಂದರೇನು?

ಸರಳವಾಗಿ ಹೇಳುವುದಾದರೆ ನಾಮಪದಗಳ ಮೂಲರೂಪವನ್ನು ನಾಮ ಪ್ರಕೃತಿ ಎನ್ನುವರು.

ಉದಾಹರಣೆ ೧ : ಮನೆಯನ್ನು

ಈ ಮೇಲಿನ ಉದಾಹರಣೆಯಲ್ಲಿ ‘ಮನೆ’ ಎಂಬುದು ಮೂಲರೂಪ. ಮೂಲರೂಪವಾದ ‘ಮನೆ‘ ಎಂಬ ಶಬ್ದವನ್ನು ನಾಮ ಪ್ರಕೃತಿ ಎನ್ನುವರು. ಇದಕ್ಕೆ ಧಾತು ಎಂಬ ಇನ್ನೊಂದು ಹೆಸರುಂಟು. ಧಾತು ಎಂದರೆ ಮೂಲ ಅಥವಾ ಮೂಲರೂಪ ಎಂದರ್ಥ.

ಉದಾಹರಣೆ ೨: ರಾಕೇಶನು ಕಷ್ಟದಿಂದ ಹಿಟ್ಟನ್ನು ಚೆನ್ನಾಗಿ ರುಬ್ಬಿದನು. ಈ ವಾಕ್ಯದಲ್ಲಿ ;

  1. ರಾಕೇಶನು, ಕಷ್ಟದಿಂದ, ಹಿಟ್ಟನ್ನು – ಇವೆಲ್ಲ ನಾಮಪದಗಳು.
  2. ರುಬ್ಬಿದನು ಎನ್ನುವುದು ಕ್ರಿಯಾಪದ.
  3. ಚೆನ್ನಾಗಿ ಎನ್ನುವುದು ಅವ್ಯಯ.
  4. ರಾಕೇಶ, ಕಷ್ಟ, ಹಿಟ್ಟು – ಇವೆಲ್ಲ ನಾಮ ಪ್ರಕೃತಿಗಳು

ವಿಭಕ್ತಿ: ವಿಭಕ್ತಿ ಎಂದರೆ ಪದದ ಅರ್ಥವನ್ನು ಬಿಡಿಸಿ ಹೇಳುವುದು ಎಂದರ್ಥ. ಇವುಗಳು ನಾಮ ಪ್ರಕೃತಿಗಳ ಸಂಬಂಧ ಹಾಗೂ ವಾಕ್ಯಾರ್ಥ ಕಾರ್ಯವನ್ನು ಸಹಜವಾಗಿ ನಿರೂಪಿಸುವುವು.


Kannada Vibhakti Pratyaya ವಿಭಕ್ತಿ ಪ್ರತ್ಯಯಗಳು ಎಂದರೇನು?

ಪ್ರತ್ಯಯ ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು ಅಕ್ಷರಗಳ ಗುಂಪುಗಳು (ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ). ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಉಂಟು ಮಾಡುತ್ತವೆ. ಇವುಗಳು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.

ಉದಾಹರಣೆಗೆ: ‘ಗೆ’ ಪ್ರತ್ಯಯ

ಶಾಲೆ + ಗೆ = ಶಾಲೆಗೆ

ಮನೆ + ಗೆ = ಮನೆಗೆ

ಹೀಗಾಗಿ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿದ ರೂಪವನ್ನು ನಾವು ನಾಮಪದ ಎಂದು ಕರೆಯುತ್ತೇವೆ.

ನಾಮಪ್ರಕೃತಿ + ಪ್ರತ್ಯಯ = ನಾಮಪದ

ಶಾಲೆ + ಅನ್ನು = ಶಾಲೆಯನ್ನು
ಮನೆ + ಅಲ್ಲಿ = ಮನೆಯಲ್ಲಿ

ನಾಮಪ್ರಕೃತಿಗಳ ಮುಂದೆ ಸೇರಿಕೊಂಡು ಬೇರೆ ಬೇರೆ ಅರ್ಥವನ್ನು ಉಂಟುಮಾಡುವ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯ ಎನ್ನುವರು.

ಉದಾಹರಣೆ;

  1. ಸಂತೋಷನು ಮನೆಗೆ ಹೋದನು.
  2. ಪ್ರಕಾಶನು ಆಕೆಯನ್ನು ನೋಡಲು ಹೋದನು.
  3. ಪುಟ್ಟರಾಜು ಕಿರಣನಿಂದ ಕಲಿಯುವುದು ಬಹಳ ಕಡಿಮೆ.
  4. ಆಕಾಶನು ಅವನಿಗೆ ಪೆನ್ನು ಕೊಟ್ಟ.
  5. ಸೀತೆಗೆ ರಾಮನ ದೆಸೆಯಿಂದ ತುಂಬಾ ನೋವಾಯಿತು.
  6. ಪ್ರಕಾಶನ ತೋಟ ಇದು.
  7. ರಾಮನಲ್ಲಿ ಒಳ್ಳೆಯ ಗುಣವಿದೆ.

ವಿಭಕ್ತಿ ಪ್ರತ್ಯಯಗಳಲ್ಲಿ ೨ ವಿಧಗಳನ್ನಾಗಿ ವಿಂಗಡಿಸಬಹುದು.

  1. ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು
  2. ಹಳಗನ್ನಡ ವಿಭಕ್ತಿ ಪ್ರತ್ಯಯಗಳು

ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು (Hosagannada Vibhakti pratyaya)

ವಿಭಕ್ತಿ ಹೆಸರು ನಾಮಪ್ರಕೃತಿ ವಿಭಕ್ತಿ ಪ್ರತ್ಯಯ ನಾಮ
ಪದ
ಪ್ರಥಮಾ ರಾಮ ರಾಮನು
ದ್ವಿತೀಯಾ ರಾಮ ಅನ್ನು ರಾಮನನ್ನು
ತೃತೀಯಾ ರಾಮ ಇಂದ ರಾಮನಿಂದ
ಚತುರ್ಥಿ ರಾಮ ಗೆ, ಇಗೆ, ಕ್ಕೆ ರಾಮನಿಗೆ
ಪಂಚಮಿ ರಾಮ ದೆಸೆಯಿಂದ ರಾಮನ ದೆಸೆಯಿಂದ
ಷಷ್ಠಿ ರಾಮ ರಾಮನ
ಸಪ್ತಮಿ ರಾಮ ಅಲ್ಲಿ ರಾಮನಲ್ಲಿ
Kannada Vibhakti Pratyaya (ಹೊಸಗನ್ನಡ ವಿಭಕ್ತಿ ಪ್ರತ್ಯಯಗಳು)

ಈ ವಿಭಕ್ತಿ ಪ್ರತ್ಯಯಗಳು ಹಳಗನ್ನಡದಲ್ಲಿ ಯಾವ ರೂಪದಲ್ಲಿವೆ ಎಂಬುದನ್ನು ನೋಡೋಣ ಏನಂತೀರಾ?


ಹಳಗನ್ನಡ ವಿಭಕ್ತಿ ಪ್ರತ್ಯಯ (Halegannada Vibhakti pratyaya)

ವಿಭಕ್ತಿ
ಹೆಸರು
ನಾಮ
ಪ್ರಕೃತಿ
ವಿಭಕ್ತಿ
ಪ್ರತ್ಯಯ
ನಾಮ
ಪದ
ಪ್ರಥಮಾ ರಾಮಮ್ ರಾಮಮ್
ದ್ವಿತೀಯಾ ರಾಮಅಂರಾಮಂ
ತೃತೀಯಾ ರಾಮಇಂ, ಇಂದಂ,
ಇಂದೆ
ರಾಮನಿಂದಂ
ಚತುರ್ಥಿ ರಾಮಗೆ, ಕೆ, ಕ್ಕೆ ರಾಮನಿಗೆ
ಪಂಚಮಿ ರಾಮಅತ್ತಣಿಂ,
ಅತ್ತಣಿಂದಂ
ರಾಮನತ್ತಣಿಂ
ಷಷ್ಠಿ ರಾಮರಾಮನ
ಸಪ್ತಮಿ ರಾಮಒಳ್ರಾಮನೊಳ್
ಸಂಬೋಧನಾರಾಮಏ , ಇರಾರಾಮನೇ
Halegannada Vibhakti pratyaya

ವಿಭಕ್ತಿ ಪಲ್ಲಟ ಎಂದರೇನು?

ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸ ಆಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ವಿಧಾನಕ್ಕೆ ವಿಭಕ್ತಿ ಪಲ್ಲಟ ಎಂದು ಕರೆಯುತ್ತಾರೆ.

ಅಂದರೆ ಕೆಲವೊಮ್ಮೆ ನಾವು ಮಾತನಾಡುವ ಸಂದರ್ಭದಲ್ಲಿ ನಾಮಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸುವ ಬದಲು ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತನಾಡುತ್ತೇವೆ.

ಉದಾಹರಣೆಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಹೋಲಿಕೆ ಮಾಡಲಾಗಿದೆ.

ದ್ವಿತೀಯಾ ವಿಭಕ್ತಿಚತುರ್ಥಿ ವಿಭಕ್ತಿ
ಶಾಲೆಯನ್ನು ಸೇರಿದನುಶಾಲೆಗೆ ಸೇರಿದನು
ಮರವನ್ನು ಹತ್ತಿದನುಮರಕ್ಕೆ ಹತ್ತಿದನು
ತೃತೀಯಾ ವಿಭಕ್ತಿ ಪಂಚಮಿ ವಿಭಕ್ತಿ
ಮರದಿಂದ ತೆಂಗು
ಬಿತ್ತು
ಮರದ ದೆಸೆಯಿಂದ ತೆಂಗು
ಬಿತ್ತು
ಕೆಟ್ಟವರಿಂದ
ಕೇಡಾಯಿತು
ಕೆಟ್ಟವರ ದೆಸೆಯಿಂದ
ಕೇಡಾಯಿತು
ಚತುರ್ಥಿ ವಿಭಕ್ತಿಷಷ್ಠಿ ವಿಭಕ್ತಿ
ನಮಗೆ ಅಣ್ಣ ನಮ್ಮಣ್ಣ
ಶಾಲೆಗೆ ಶಿಕ್ಷಕಶಾಲೆಯ ಶಿಕ್ಷಕ
ಚತುರ್ಥಿ ವಿಭಕ್ತಿಸಪ್ತಮಿ ವಿಭಕ್ತಿ
ಅವನಿಗೆ ಭಯವಿಲ್ಲಅವನಲ್ಲಿ ಭಯವಿಲ್ಲ
ವಿಭಕ್ತಿ ಪಲ್ಲಟ

FAQ On Kannada Vibhakti Pratyayagalu

Q1. ಹಳಗನ್ನಡ ವಿಭಕ್ತಿ ಪ್ರತ್ಯಯಗಳಿಗೆ ಉದಾಹರಣೆ ಯಾವುವು?

ಹಳಗನ್ನಡ ವಿಭಕ್ತಿ ಪ್ರತ್ಯಯಗಳು ಈ ಕೆಳಗಿನಂತಿವೆ:
೧. ಪ್ರಥಮಾ – ಮ್
೨. ದ್ವಿತೀಯಾ – ಅಂ
೩. ತೃತೀಯಾ – ಇಂ, ಇಂದಂ, ಇಂದೆ
೪. ಚತುರ್ಥಿ – ಗೆ, ಕೆ, ಕ್ಕೆ
೫. ಪಂಚಮಿ – ಅತ್ತಣಿಂ, ಅತ್ತಣಿಂದಂ
೬. ಷಷ್ಠಿ – ಅ
೭. ಸಪ್ತಮಿ – ಒಳ್
೮. ಸಂಬೋಧನಾ – ಏ , ಇರಾ

Q2. ‘ಸಾವಿತ್ರಿಯೊಳ್’ ಪದದಲ್ಲಿರುವ ವಿಭಕ್ತಿ

‘ಸಾವಿತ್ರಿಯೊಳ್’ ಪದದಲ್ಲಿರುವ ವಿಭಕ್ತಿಯ ಹೆಸರು – ಸಪ್ತಮಿ ವಿಭಕ್ತಿ
ವಿಭಕ್ತಿ ಪ್ರತ್ಯಯ – ಒಳ್

Q3. ವಿಭಕ್ತಿ ಪ್ರತ್ಯಯಗಳು ಯಾವುವು

ಹೊಸಗನ್ನಡ ವಿಭಕ್ತಿ ಪ್ರತ್ಯಯಾಗಳು ಈ ಕೆಳಗಿನಂತಿವೆ.
೧. ಪ್ರಥಮಾ – ಉ
೨. ದ್ವಿತೀಯಾ – ಅನ್ನು
೩. ತೃತೀಯಾ – ಇಂದ
೪. ಚತುರ್ಥಿ – ಗೆ, ಇಗೆ, ಕ್ಕೆ
೫. ಪಂಚಮಿ – ದೆಸೆಯಿಂದ
೬. ಷಷ್ಠಿ – ಅ
೭. ಸಪ್ತಮಿ – ಅಲ್ಲಿ

Q4. ಶಾಲೆಯಲ್ಲಿ ಪದದಲ್ಲಿರುವ ವಿಭಕ್ತಿ ಪ್ರತ್ಯಯ

ಶಾಲೆಯಲ್ಲಿ ಪದದಲ್ಲಿರುವ ವಿಭಕ್ತಿ ಪ್ರತ್ಯಯ – ಅಲ್ಲಿ
ವಿಭಕ್ತಿ ಹೆಸರು – ಸಪ್ತಮಿ

Q5. ಪ್ರಥಮ ವಿಭಕ್ತಿ ಪ್ರತ್ಯಯ ಉದಾಹರಣೆ

ಹೊಸಗನ್ನಡ: – ರಾಮನ, ಅವನ, ಅವಳ, ಅದರ ಇತ್ಯಾದಿ.
ಹಳಗನ್ನಡ: ಮ್ – ರಾಮಮ್, ಸಾವಿತ್ರಿಯುಮ್

Kannada Vibhakti Pratyaya ಅರ್ಥಾತ್ ವಿಭಕ್ತಿ ಪ್ರತ್ಯಯಗಳು ಎಂಬ ಕನ್ನಡ ವ್ಯಾಕರಣದ ಕುರಿತಾದ ನಮ್ಮ ಈ ಲೇಖನ ನಿಮಗೆ ಸಹಾಯಕಾರಿಯಾಗಿದೆ ಎಂದು ನಾವು ಭಾವಿಸುತ್ತೇವೆ.

ಈ ಲೇಖನದ ಕುರಿತು ಏನಾದರೂ ಸಲಹೆ, ಸೂಚನೆಗಳನ್ನು ನೀವು ನೀಡಲು ಬಯಸಿದರೆ ದಯವಿಟ್ಟು COMMENT ಮಾಡುದರ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.

ಇವುಗಳನ್ನೂ ಓದಿ:

Read: ಕನ್ನಡ ವರ್ಣಮಾಲೆಯ ಪೂರ್ಣ ಮಾಹಿತಿ

Read: ಕೋನ ಎಂದರೇನು ಮತ್ತು ಅದರ ವಿಧಗಳು

Leave a Comment