ಮೊಬೈಲ್ ಎಂದರೇನು? – ಮೊಬೈಲ್ ಅನುಕೂಲ ಮತ್ತು ಅನಾನುಕೂಲಗಳು

ಪ್ರಿಯ ಓದುಗರೇ, ಇಂದು ನಾವು ಈ ಲೇಖನದಲ್ಲಿ ಮೊಬೈಲ್ ಎಂದರೇನು? – ಮೊಬೈಲ್ ಅನುಕೂಲ ಮತ್ತು ಅನಾನುಕೂಲಗಳು, ಮೊಬೈಲ್ ನ ಇತಿಹಾಸ, ಮೊಬೈಲ್ ಅನ್ನು ಆವಿಷ್ಕರಿಸಿದವರು ಯಾರು?, ಹೀಗೆ ಇತ್ಯಾದಿ ವಿಷಯಗಳ ಕುರಿತು ಅಧ್ಯಯನ ಮಾಡಲಿದ್ದೇವೆ.

ನಮ್ಮ ದೈನಂದಿನ ಜೀವನದಲ್ಲಿ ಮೊಬೈಲ್ ಫೋನ್ ತುಂಬಾ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ. ಮೊಬೈಲ್ ಫೋನ್ ಇಲ್ಲದೆ ಜೀವನ ನಡೆಸುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಹಾಗೆಯೇ ಮೊಬೈಲ್ ನಿಂದ ಉಪಯೋಗಗಳು ಮತ್ತು ಕೆಲವು ದುರುಪಯೋಗಗಳೂ (Advantages And Disadvantages Of Mobile In Kannada) ಇವೆ.

ಹಾಗಾದರೆ ಬನ್ನಿ ಮೊಬೈಲ್ ನ ಕುರಿತು ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಮೊಬೈಲ್ ಎಂದರೇನು? – What Is The Meaning Of Mobile In Kannada

ಧ್ವನಿ, ವಿಡಿಯೋ ಅಥವಾ ಇತರ ಡೇಟಾವನ್ನು ರವಾನಿಸಲು ಮತ್ತು ಸ್ವೀಕರಿಸಲು ಬೇಕಾಗುವ ದೂರಸಂಪರ್ಕ ಜಾಲಕ್ಕೆ ಸಂಪರ್ಕಿಸುವನ್ನು ಕಲ್ಪಿಸುವ Portable ಸಾಧನಕ್ಕೆ Mobile ಎನ್ನುವರು. ಮೊಬೈಲ್ ಗೆ ಆಂಗ್ಲ ಭಾಷೆಯಲ್ಲಿ Cellular Phone, Cellphone, Hand Phone ಮತ್ತು Mobile ಎಂದು ಕರೆಯಲಾಗುತ್ತದೆ.

ಮೊಬೈಲ್ ನ್ನು ಕನ್ನಡದಲ್ಲಿ ಜಂಗಮವಾಣಿ, ಜಂಗಮಗಂಟೆ ಹಾಗೂ ದೂರವಾಣಿ (Mobile meaning in kannada) ಎಂದು ಕರೆಯುತ್ತಾರೆ.

ಮೊಬೈಲ್ ಒಂದು ವಿಧದ ಕಂಪ್ಯೂಟರ್ ಆಗಿದ್ದು ಗಣಕಯಂತ್ರದಲ್ಲಿರುವ ಬಹುತೇಕ ಎಲ್ಲಾ feature ಗಳನ್ನು ಹೊಂದಿದೆ. ಇದು ಕಾಲಕಾಲಕ್ಕೆ ನವೀಕರಣಗೊಳ್ಳುತ್ತಾ ಇರುವುದರಿಂದ ಮೊಬೈಲ್  ಪ್ರೇಮಿಗಳ ಅಂದರೆ ಮೊಬೈಲ್ ಬಳಕೆದಾರರ ಖರೀದಿ ಮಾಡಿಕೊಳ್ಳುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಮೊಬೈಲ್ ಫೋನ್ ಅಂತರ್ಜಾಲ, ರೇಡಿಯೋ, Audio-Video Record, ಗೇಮಿಂಗ್, Mp3 Player, GPS, ಬ್ಲೂಟೂತ್, Camera ಹೀಗೆ ಅನೇಕ Feature ಗಳನ್ನು ಹೊಂದಿರುವುದರಿಂದ  ಬಳಕೆದಾರರ ಹಲವಾರು ಬೇಡಿಕೆಗಳು ಅಥವಾ ಕೆಲಸಗಳು ಸುಲಭವಾಗುವಂತೆ ಮಾಡುತ್ತದೆ.


Mobile Full Form In Kannada

ಮೊಬೈಲ್ ನ ಫುಲ್ ಫಾರ್ಮ್ Modified Operation Byte Integration Limited Energy ಎಂಬುವುದಾಗಿದೆ.

MOBILE ಶಬ್ದದ ವಿಸ್ತೃತ ರೂಪದ ಅರ್ಥವನ್ನು ತಿಳಿದುಕೊಳ್ಳೋಣ.

M = Modified ಎಂದರೆ ಮೊಬೈಲ್ Design ಮತ್ತು Features ಗಳಲ್ಲಿ ಬದಲಾದಂತೆ ಮೊಬೈಲ್ ನ ರೂಪ ಮತ್ತು ಗುಣಮಟ್ಟದಲ್ಲಿ ಆಗುವ ಬದಲಾವಣೆ  ಎಂದರ್ಥ.

O = Operation – ಮೊಬೈಲ್ ಗಳ ಮಾರ್ಪಾಟನ್ನು ಅಥವಾ ಸುಧಾರಣೆಯನ್ನು ಮಾಡುವ ಪ್ರಕ್ರಿಯೆಗೆ ಇಲ್ಲಿ Operation ಎನ್ನಲಾಗಿದೆ.

B = Byte – ಬೈಟ್ ಅಂದ್ರೆ Storage ಎಂದರ್ಥ. 8 bits ಗಳು 1 Byte ಗೆ ಸಮನಾಗಿರುತ್ತವೆ

I = Integration – ಇಲ್ಲಿ ಮೊಬೈಲನ್ನು ಅಭಿವೃದ್ಧಿಪಡಿಸುವ ಕ್ರಿಯೆ ಅಥವಾ ಪ್ರಕ್ರಿಯೆಗೆ Integration ಎನ್ನಲಾಗಿದೆ.

L = Limited – ಲಿಮಿಟೆಡ್ ಅಂದರೆ ಗಾತ್ರದಲ್ಲಿ ಚಿಕ್ಕದು ಎಂದರ್ಥ. ಫೋನ್ Launch ಮಾಡಿದಾಗ ಮೊಬೈಲ್ ಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದವು.

E = Energy – ಮೊಬೈಲ್ ಒಂದು Energy (Electric Energy) ಸಹಾಯದಿಂದ ಕಾರ್ಯನಿರ್ವಹಿಸುವ ಸಾಧನ.

ಮೊಬೈಲ್ ಅನ್ನು ಯಾರು ಅನ್ವೇಷಿಸಿದರು? ಹಾಗೂ ಮೊಬೈಲ್ ನ ಕುರಿತು ಸಂಪೂರ್ಣ ಮಾಹಿತಿಗಾಗಿ ( Information About Mobile In Kannada) ಈ ಲೇಖನವನ್ನು ಕೊನೆಯತನಕ  ಓದಿ.


ಮೊಬೈಲ್ ಕಂಡುಹಿಡಿದವರು ಯಾರು?

ವಿಶ್ವದ ಮೊದಲ ಮೊಬೈಲ್ ಫೋನ್ ನ್ನು 1973 ರಲ್ಲಿ Motorola ಕಂಪನಿಯ ಇಂಜಿನಿಯರುಗಳಾದ Martin Cooper ಮತ್ತು John F. Mitchell ರವರ ವತಿಯಿಂದ Launch ಮಾಡಲಾಯಿತು. ಇದು 2 ಕೆಜಿ ಭಾರ ಮತ್ತು 2 ಲಕ್ಷ ರೂಪಾಯಿ ಬೆಲೆಯುಳ್ಳದ್ದಾಗಿತ್ತು.

ಇದರ ನಂತರ 1983 ರಲ್ಲಿ ಅದೇ ಮೊಟೊರೊಲಾ ಕಂಪನಿಯ DynaTAC 8000x ಮಾಡೆಲ್ ಬಂತು. ಇದರ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 35 ನಿಮಿಷಗಳವರೆಗೆ ಮಾತನಾಡಬಹುದಿತ್ತು. ಇದು ವ್ಯವಹಾರಿಕವಾಗಿ ಲಭ್ಯವಾದ ಮೊದಲ Handheld ಮೊಬೈಲ್ ಫೋನ್ ಆಗಿದೆ.

ಅವರ ಈ ಆವಿಷ್ಕಾರದಿಂದಾಗಿ ಸಂವಹನ ಕ್ಷೇತ್ರದಲ್ಲಿ ಒಂದು ಕ್ರಾಂತಿಯೇ ಉಂಟಾಯಿತು. ಇವತ್ತಿನ ಕಾಲದಲ್ಲಿ ಜನರಿಗೆ ಇದು ಒಂದು ವರದಾನವಾಗಿದೆ.

1979 ರಲ್ಲಿ ವಿಶ್ವದ ಪ್ರಥಮ automatad cellular network ನ್ನು ಜಪಾನಿನಲ್ಲಿ ಪ್ರಾರಂಭಿಸಲಾಯಿತು. ಇದು 1G(First Generation) ವ್ಯವಸ್ಥೆಯಾಗಿತ್ತು. ಇದರ ಸಹಾಯದಿಂದ ಅನೇಕ ಜನ ಒಂದೇ ಸಮಯದಲ್ಲಿ ಪರಸ್ಪರ ಕರೆ ಮಾಡಬಹುದಾಗಿತ್ತು.

ಪ್ರಪ್ರಥಮವಾಗಿ Second Generation(2G) Digital Cellular ತಂತ್ರಜ್ಞಾನವನ್ನು 1991 ರಲ್ಲಿ ಫಿನ್ಲೆಂಡ್ ನ Radiolinja(GSM Operator) ಕಂಪನಿ ಶುರು ಮಾಡಿತು.

2G ಯ ಹತ್ತು ವರ್ಷಗಳ ನಂತರ, 2001 ರಲ್ಲಿ ಜಪಾನಿನ NTT DoCoMo ಕಂಪನಿಯು 3G ಯನ್ನು Launch ಮಾಡಿತು.

“ಟೆಲಿಯಾಸೊನೆರಾ”(TeliaSonera) 4G ಯನ್ನು ವಾಣಿಜ್ಯಿಕವಾಗಿ ಪ್ರಾರಂಭಿಸಿದ ವಿಶ್ವದ ಮೊದಲ ಆಪರೇಟರ್ ಆಗಿದೆ. 2019ರಲ್ಲಿ 4G ಯನ್ನು ಸ್ವೀಡನ್ ನ Stockholm ಮತ್ತು ನಾರ್ವೆಯ Oslo ನಗರಗಳಲ್ಲಿ ಶುರು ಮಾಡಲಾಯಿತು.

ಹಾಗಾದರೆ,
ಭಾರತದಲ್ಲಿ 4G ಬಂದದ್ದು ಯಾವಾಗ?
Airtel ಕಂಪನಿಯು 2012 ಏಪ್ರಿಲ್ 10 ರಂದು 4G ಸೇವೆಗಳನ್ನು ಪ್ರಾರಂಭಿಸಿ, 4G ಸೇವೆಗಳನ್ನು ನೀಡಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮೊಬೈಲ್ ಫೋನಿನ ವಿಧಗಳು

 • ಸ್ಮಾರ್ಟ್ ಫೋನ್
 • ಕ್ಯಾಮೆರಾ ಫೋನ್
 • ಮ್ಯೂಸಿಕ್ ಫೋನ್
 • 3G ಫೋನ್

Android ಎಂದರೇನು?

Android ಎನ್ನುವುದು ಯಾವುದೇ ಫೋನ್ ಅಲ್ಲ ಮತ್ತು ಯಾವುದೇ ಅಪ್ಲಿಕೇಶನ್ ಅಲ್ಲ, ಇದೊಂದು Linux Kernel ಆಧಾರಿತ Operating System. ಇಲ್ಲಿ Linux Kernel ಎನ್ನುವುದು ಆಪರೇಟಿಂಗ್ ಸಿಸ್ಟಮ್ ನ ಒಂದು ಮುಖ್ಯ ಅಂಶ(Component) ಆಗಿದೆ.

ನಮಗೆ ಬರುವ ಹಲವಾರು Call, Message ಮತ್ತು Email ಗಳನ್ನು ಪ್ರೋಸೆಸ್ ಮಾಡಿ Readable Format ನಲ್ಲಿ ನಮ್ಮ ಮುಂದೆ ಪ್ರಸ್ತುತಪಡಿಸುವ ಕೆಲಸವನ್ನು ಈ OS( Operating System) ಮಾಡುತ್ತದೆ.

ಮೊಬೈಲ್ ನ ಎಲ್ಲಾ Functions ಮತ್ತು Application ಗಳನ್ನು ಸುಲಭವಾಗಿ run ಮಾಡುವ  ಉದ್ದೇಶವನ್ನು ಇಟ್ಟುಕೊಂಡು Android Operating System ನ್ನು Design ಮಾಡಲಾಯಿತು. ನೆನಪಿರಲಿ ಈ Android OS ನಲ್ಲಿ ಹಲವಾರು Version ಗಳಿವೆ.

IOS ಎಂದರೇನು?
IOS ಎನ್ನುವುದು Apple ಕಂಪನಿಯ Mobile Operating System ಆಗಿದ್ದು iPhone, iPad ಮತ್ತು iPod Touch device ಗಳನ್ನು run ಮಾಡುತ್ತದೆ. ಇದರ ಮೊದಲ ಹೆಸರು iPhone OS ಎಂಬುವುದಾಗಿತ್ತು. ಆಪಲ್ ಕಂಪನಿಯು iPad ನ್ನು ಪರಿಚಯಿಸಿದ ನಂತರ ಇದನ್ನು IOS ಎಂದು ಮಾಡಲಾಯಿತು.


ಮೊಬೈಲ್ ಹೇಗೆ ಕೆಲಸ ಮಾಡುತ್ತದೆ? – How Mobile Phone Works In Kannada

ಮೊಬೈಲ್ ಹೇಗೆ ಕಾರ್ಯನಿರ್ವಹಿಸುತ್ತದೆ  ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಈ 3 ಅಂಶಗಳನ್ನು ತಿಳಿದುಕೊಳ್ಳಲೇಬೇಕು.

 1. ರೇಡಿಯೋ ತರಂಗಗಳು (Radio Waves)
 2. ಕನೆಕ್ಟಿವಿಟಿ (Connectivity)
 3. ಆಂಟಿನಾ (Antenna)

1. ರೇಡಿಯೋ ತರಂಗಗಳು

ಮೊಬೈಲ್ ಫೋನ್ communication ಮಾಡಲು Radio Waves ಬಳಕೆ ಮಾಡಿಕೊಳ್ಳುತ್ತದೆ. ರೇಡಿಯೋ ತರಂಗಗಳು ನಾವು ಮಾತನಾಡುವ ಧ್ವನಿಯನ್ನು  electric ಮತ್ತು magnetic field ನ ರೂಪದಲ್ಲಿ transmit ಮಾಡುತ್ತವೆ. ಅದನ್ನು ನಾವು Electromagnetic field ಎಂದು ಕರೆಯುತ್ತೇವೆ. ರೇಡಿಯೋ ತರಂಗಗಳು ಎಲ್ಲಾ ಡಾಟಾಗಳನ್ನು ತೆಗೆದುಕೊಂಡು ಬೆಳಕಿನ ವೇಗದಲ್ಲಿ ಚಲಿಸುತ್ತವೆ.

ಮೊಬೈಲ್ ದಿಂದ ಹೊರಬರುವ ರೇಡಿಯೋ ತರಂಗಗಳು ಎಲ್ಲಾ ದಿಕ್ಕುಗಳಲ್ಲಿ ಹರಡುತ್ತವೆ ಮತ್ತು Tower ತಲುಪುವವರೆಗೆ ಮಧ್ಯ ಮಧ್ಯದಲ್ಲಿ ಸಿಗುವ ವಸ್ತುಗಳು ಈ ತರಂಗಗಳನ್ನು Absorb ಅಥವಾ reflect ಮಾಡುತ್ತವೆ.

ಬನ್ನಿ ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.

ನಾವು ನಮ್ಮ ಕಿವಿಯ ಹತ್ತಿರ ಮೊಬೈಲನ್ನು ಇಟ್ಟುಕೊಂಡು ಮಾತನಾಡುತ್ತಿರುವಾಗ ಅಲ್ಲಿ ನಿರಂತರವಾಗಿ ರೇಡಿಯೋ ತರಂಗಗಳ EMF( electromagnetic field) ಹರಡುತ್ತಾ ಇರುತ್ತದೆ. ಅವುಗಳಲ್ಲಿ ಕೆಲವು ನಮ್ಮ ಶರೀರದ ಒಳಗೂ ಹೋಗುತ್ತವೆ ಇನ್ನು ಕೆಲವು ಚದುರಿ ಹೋಗುತ್ತವೆ. ಹೀಗೆ ಬಹಳಷ್ಟು emf ಹಾಳಾಗಿ ನಷ್ಟವಾಗಿಬಿಡುತ್ತದೆ.

ಕೆಲವು ಮೊಬೈಲ್ ಗಳಲ್ಲಿ ಮಾಹಿತಿಯನ್ನು transmit ಮತ್ತು receive ಮಾಡುವ ಎರಡೂ ಕಾರ್ಯಗಳನ್ನು ಒಂದೇ Antenna ನಿರ್ವಹಿಸುತ್ತದೆ. ಇನ್ನೂ ಕೆಲವು ಮೊಬೈಲ್ ಗಳಲ್ಲಿ ಈ ಎರಡೂ ಕಾರ್ಯಗಳಿಗೆ ಬೇರೆ-ಬೇರೆ Antenna ಅಳವಡಿಸಲಾಗಿರುತ್ತದೆ.

2. ಕನೆಕ್ಟಿವಿಟಿ (ಸಂಪರ್ಕ)
ಮೊಬೈಲ್ ಎನ್ನುವುದು 2 Way Wireless Communication Device ಆಗಿದೆ. ಹೇಗೆಂದರೆ ಸಿಗ್ನಲ್ ಗಳನ್ನು ಕಳುಹಿಸುತ್ತದೆ ಮತ್ತು ಅವುಗಳನ್ನು ರಿಸೀವ್ ಕೂಡ ಮಾಡಿಕೊಳ್ಳುತ್ತದೆ. Tower ರಿಸೀವ್ ಮಾಡುವ ಒಟ್ಟು ಸಿಗ್ನಲ್ ಪ್ರಮಾಣವನ್ನು signal strength ಎನ್ನಲಾಗುತ್ತದೆ.

ಟಾವರ್ ಹೇಗೆ ದೂರವಾಗುತ್ತದೋ ಹಾಗೆ Signal strength ಕೂಡ ಕಡಿಮೆಯಾಗುತ್ತದೆ. ಸಿಗ್ನಲ್ ಕಡಿಮೆ ಇದ್ದಾಗ ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುವುದನ್ನು ನೀವು ಗಮನಿಸಿರಬಹುದು. ಹೀಗೇಕೆ ಆಗುತ್ತದೆ ಎಂದರೆ, ಕಡಿಮೆ ಸಿಗ್ನಲ್ ಇರುವ ಪ್ರದೇಶದಲ್ಲಿ ನಿಮ್ಮ ಮೊಬೈಲ್ ಫೋನ್ Weak signal ಗಳನ್ನು amplify ಮಾಡಲು ತನ್ನ Output power ನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೆಚ್ಚು ಬ್ಯಾಟರಿ consume ಆಗುವುದರಿಂದ ಕಡಿಮೆ ಸಿಗ್ನಲ್ ಇದ್ದಾಗ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತದೆ.

3. ಆಂಟಿನಾ
ರೇಡಿಯೋ ಸಿಗ್ನಲ್ ಗಳನ್ನು receive ಮತ್ತು transmit ಮಾಡಲು ಪ್ರತಿಯೊಂದು ಫೋನಿನಲ್ಲಿ ಕನಿಷ್ಠ ಒಂದು antenna ಇದ್ದೇ ಇರುತ್ತದೆ. ಇದೇ ಅಂಟಿನ Electrical signal ಗಳನ್ನು radio wave   ಗಳಾಗಿ ಮತ್ತು radio wave ಗಳನ್ನು electrical signal ಗಳಾಗಿ convert ಮಾಡುತ್ತದೆ.

ಓದಿ: ಕಂಪ್ಯೂಟರ್ ಕುರಿತು ಪೂರ್ಣ ಮಾಹಿತಿ


ಮೊಬೈಲ್ ನ ಉಪಯೋಗಗಳು ಮತ್ತು ದುರುಪಯೋಗಗಳು – Advantages and disadvantages of mobile in Kannada

ಮೊಬೈಲ್ ನ ಕೆಲವು ಅನುಕೂಲಗಳು ಈ ಕೆಳಗಿನಂತಿವೆ:

 • ಮೊಬೈಲ್ ಫೋನ್ ದಿಂದಾಗಿ ಎಲ್ಲರೂ ಸಂಪರ್ಕದಲ್ಲಿ ಇರಬಹುದು.
 • ಶಾಲಾ Online ತರಗತಿಗಳನ್ನು  ಮನೆಯಲ್ಲೇ ಕುಳಿತು ಕೇಳಬಹುದು.
 • ಮೊಬೈಲ್ ಫೋನ್ ನ GPS ರಸ್ತೆ ಗೊತ್ತಿರದ ಸ್ಥಳಗಳಿಗೆ ಹೋಗಲು ಸಹಾಯ ಮಾಡುತ್ತದೆ.
 • ಮೊಬೈಲ್ ಫೋನ್ ಮನರಂಜನೆಗೂ ಬಳಕೆಯಾಗುತ್ತದೆ
 • ಹಣದ ವರ್ಗಾವಣೆ ಸುಲಭವಾಗಿ ಮಾಡಬಹುದು.
 • ಮೊಬೈಲ್ ನಲ್ಲಿಯ ಇಂಟರ್ನೆಟ್ ನ ಸಹಾಯದಿಂದ ವಿಶ್ವದ ಯಾವುದೇ ಮಾಹಿತಿಯನ್ನು ತಕ್ಷಣ ಪಡೆಯಬಹುದು.
 • ಊಟವನ್ನು ಸಹ ಮೊಬೈಲ್ ಫೋನ್ ನ ಸಹಾಯದಿಂದ ತರಿಸಬಹುದು.
 • ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲೂ ಸಿಗುತ್ತವೆ.
 • ಕುಳಿತಲ್ಲಿಯೇ ಬೇಕಾದ ವಸ್ತುಗಳನ್ನು ಖರೀದಿಸಬಹುದು
 • ಸಾಮಾಜಿಕ ಜಾಲತಾಣದ ಬಳಕೆ ಮಾಡಬಹುದು
 • ಮಾಹಿತಿಗಳನ್ನು ದಿನದ 24 ಗಂಟೆಯೂ ಸುಲಭವಾಗಿ ಪಡೆಯಬಹುದು
 • ವಾತಾವರಣದ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು
 • ಸುದ್ದಿಗಳನ್ನು ಓದಬಹುದು ಮತ್ತು ನೋಡಬಹುದು.
 • ವಿಡಿಯೋ ಗೇಮ್ ಗಳನ್ನು ಆಡಬಹುದು
 • ಚಲನಚಿತ್ರಗಳನ್ನು ನೋಡಬಹುದು
 • ಕ್ರಿಕೆಟ್ ಆಟದ ನೇರಪ್ರಸಾರವನ್ನು ನೋಡಬಹುದು

ಮೊಬೈಲ್ ನ ಅನಾನುಕೂಲಗಳು

ಅನಾನುಕೂಲಗಳು  ಬದಲಿಗೆವು ಇಗಳನ್ನು ದುಷ್ಪರಿಣಾಮಗಳು ಎಂದೂ ಹೇಳಬಹುದು.

 • ಮೊಬೈಲ್ ಅತಿ ಬಳಕೆಯಿಂದಾಗಿ ಆರೋಗ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
 • ಮೊಬೈಲ್ ಫೋನ್ ಬಳಕೆಯಿಂದಾಗಿ ಬಹಳಷ್ಟು ಜನರ ಮೆದುಳಿನ ಸಾಮರ್ಥ್ಯ ಕುಸಿಯುತ್ತಿದೆ.
 • ಮೊಬೈಲ್ ಫೋನ್ ನಿಂದ ಬರುವ ರೇಡಿಯೇಶನ್ ದಿಂದಾಗಿ ಮಾನವನ ಶರೀರಕ್ಕೆ ಹಾನಿ ಉಂಟಾಗಬಹುದು.
 • ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಬಹುದು
 • Online ನಲ್ಲಿ ಕಿರುಕುಳ ಅಥವಾ ಬೆದರಿಕೆ ಗಳಂತಹ ಸಮಸ್ಯೆಗಳು ಉದ್ಭವಿಸಬಹುದು.
 • ಇಂಟರ್ನೆಟ್ ದಿಂದಾಗಿ ಮಕ್ಕಳಿಗೆ ತಪ್ಪು ಮಾಹಿತಿ ದೊರೆಯಬಹುದು.
 • ನಿದ್ರೆಯಲ್ಲಿ ಅಸ್ವಸ್ಥತೆಗಳು
 • ದಿನಪೂರ್ತಿ ಮೊಬೈಲ್ ಬಳಕೆಯಿಂದಾಗಿ ಕಣ್ಣಿಗೆ ದುಷ್ಪರಿಣಾಮಗಳು ಬೀರಬಹುದು
 • ಮೊಬೈಲ್ Antenna ಗಳು ಹೊರಸೂಸುವ Radioradio Frequency Radiation ಗಳು ನಮ್ಮ ಮೆದುಳಿಗೆ ಹಾನಿ ಉಂಟುಮಾಡಬಹುದು.
 • ಕ್ಯಾನ್ಸರ್ ತಂದೊಡ್ಡಬಹುದು ಅಲ್ಲದೇ ನರಮಂಡಲಕ್ಕೂ ಹಾನಿಯುಂಟುಮಾಡಬಹುದು.

FAQ On ಮೊಬೈಲ್ ಎಂದರೇನು? – ಮೊಬೈಲ್ ಅನುಕೂಲ ಮತ್ತು ಅನಾನುಕೂಲಗಳು

ಮೊಬೈಲ್ ಕಂಡುಹಿಡಿದ ವಿಜ್ಞಾನಿ ಯಾರು?

ಟೆಲಿಫೋನ್ ಅನ್ನು ಕಂಡುಹಿಡಿದಿದ್ದು ಗ್ರಹಾಂ ಬೆಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಮೊಬೈಲ್ ಫೋನ್ ಕಂಡು ಹಿಡಿದಿದ್ದು ಬಹಳಷ್ಟು ಯಾರು ಅಂತ ಗೊತ್ತಿಲ್ಲ. ಮೊದಲ handheld ಸೆಲ್ಯುಲಾರ್ ಫೋನನ್ನು 1973 ಏಪ್ರಿಲ್ 3ರಂದು ಮಾರ್ಟಿನ್ ಕೂಪರ್ ಎಂಬ ವಿಜ್ಞಾನಿ ತಯಾರಿಸಿನು.

ಮೊಬೈಲ್ ವರವೋ? ಶಾಪವೋ?

ಈ ಎಲೆಕ್ಟ್ರಾನಿಕ್ ಯುಗದಲ್ಲಿ ಮೊಬೈಲ್ ಕ್ರಾಂತಿಯನ್ನೇ ತಂದಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊಬೈಲ್ ಫೋನ್ ಸಂವಹನದ ಮೂಲಭೂತ ಅಂಶವಾಗಿಬಿಟ್ಟಿದೆ. ಮೊಬೈಲ್ ಫೋನ್ ನ ಬಳಕೆಯು ಯಾವ ಉದ್ದೇಶಕ್ಕಾಗಿ ಎಂಬುವುದರ ಮೇಲೆ ವರ ಅಥವಾ ಶಾಪಗಳು ಆಧಾರಿತವಾಗಿವೆ.

What do we call mobile in Kannada?

We call it as ದೂರವಾಣಿ in Kannada.


Conclusion

ಒಟ್ಟಾರೆಯಾಗಿ ಮೊಬೈಲ್ ಫೋನ್ ಗಳು ತುಂಬಾ ಸಹಾಯಕವಾದ ಆವಿಷ್ಕಾರಗಳಲ್ಲಿ ಒಂದಾಗಿವೆ.ಮೊಬೈಲ್ ನ ಅನಾನುಕೂಲಗಳಿಗೆ ಹೋಲಿಸಿದರೆ ಅನುಕೂಲಗಳು ಹೆಚ್ಚಾಗಿ ಕಾಣುತ್ತವೆ. ವಾಸ್ತವದಲ್ಲಿ ಅದು ಸತ್ಯ ಕೂಡ.

ಹೆಚ್ಚಾದರೆ ಅಮೃತವೂ ವಿಷ ಎಂಬಂತೆ, ಮೊಬೈಲ್ ಬಳಕೆಯು ಎಲ್ಲಿ, ಹೇಗೆ ಮತ್ತು ಏಕೆ ಎಂಬುದರ ಮೇಲೆ ನಮ್ಮ ಒಳಿತು-ಕೆಡುಕುಗಳು ನಿರ್ಧಾರವಾಗುತ್ತವೆ. ಅದರಂತೆ ವಿದ್ಯಾರ್ಥಿಗಳು ಮೊಬೈಲ್ ಅನ್ನು ಒಳಿತಿಗಾಗಿ ಬಳಸಿಕೊಂಡರೆ ಅದು ತುಂಬಾ ಪರಿವರ್ತನೆಗೆ ಕಾರಣವಾಗುತ್ತದೆ.

ಅದೇ ರೀತಿ, ಗೇಮ್, ಸಿನಿಮಾ, ಸಾಮಾಜಿಕ ಜಾಲತಾಣ ಹೀಗೆ ಅನುಪಯುಕ್ತ ಕೆಲಸಗಳಿಗೆ ಬಳಸಿದರೆ ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸುತ್ತದೆ. ಇದು ವಿದ್ಯಾರ್ಥಿಗಳ ಸಮಯವನ್ನು ಕಸಿದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಆದರೆ ವಿದ್ಯಾರ್ಥಿಗಳು ಇದರ ಬಲೆಗೆ ಬೀಳಬಾರದು ಅಷ್ಟೇ.

ಮೊಬೈಲ್ ಬಳಕೆಯಿಂದ ಆಗುವ ಲಾಭ ಮತ್ತು ಹಾನಿಗಳನ್ನು ಅರಿತು ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡು ಅನುಸರಿಸಬೇಕು ಎಂಬುದು ವಿದ್ಯಾರ್ಥಿಗಳ ಮೇಲೆ ನಿಂತಿದೆ.

ನಿಮಗೆ ಈ “ಮೊಬೈಲ್ ಎಂದರೇನು? – ಮೊಬೈಲ್ ಅನುಕೂಲ ಮತ್ತು ಅನಾನುಕೂಲಗಳು” ಎಂಬ ಲೇಖನವು ಸಹಾಯಕವಾಗಿದೆ ಎಂದು ನಾವು ಭಾವಿಸುತ್ತೇವೆ.

ನಿಮ್ಮ ಸಲಹೆ-ಸೂಚನೆ ಅಥವಾ ದೂರುಗಳು ಏನಾದರೂ ಇದ್ದರೆ ದಯವಿಟ್ಟು Comment ಮಾಡಿ.
ಧನ್ಯವಾದಗಳು

1 thought on “ಮೊಬೈಲ್ ಎಂದರೇನು? – ಮೊಬೈಲ್ ಅನುಕೂಲ ಮತ್ತು ಅನಾನುಕೂಲಗಳು”

Leave a Comment

error: Content is protected !!