Online Education Essay In Kannada – ಪೀಠಿಕೆ
ಆನ್‌ಲೈನ್ ಶಿಕ್ಷಣ ಎಂಬುದು ಕೆಲವು ವರ್ಷಗಳಿಂದ ಪರಿಚಿತವಿದ್ದರೂ ಹೆಚ್ಚಾಗಿ ಬೆಳಕಿಗೆ ಬಂದಿದ್ದು ಮಾತ್ರ ಇತ್ತೀಚೆಗೆ. ಅದಕ್ಕೂ ಮೊದಲು ವಿದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ಸೀಮಿತ ಸಮಯದ ಕೋರ್ಸ್ಗಳು ಆನ್ಲೈನಲ್ಲಿ ನಡೆಯುತ್ತಿದ್ದವು.
ಆದರೆ, ಇತ್ತೀಚೆಗೆ ಬಾರತದ ಹಳ್ಳಿ ಹಳ್ಳಿಗೂ ಈ ಆನ್ಲೈನ್ ಶಿಕ್ಷಣ ಚಿರಪರಿಚಿತವಾವಾಗಿದೆ. ಯಾವುದೇ ಒಂದು ವಿಷಯದಲ್ಲಿ ಒಳ್ಳೆಯದು ಕೆಟ್ಟದ್ದು ಇರುತ್ತದೋ ಅದೇ ರೀತಿ ಇದರಲ್ಲೂ ಈ ವ್ಯವಸ್ಥೆಯನ್ನು ಕಾಣಬಹುದು.
ಪ್ರಮುಖವಾಗಿ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಇಂತಹ ಹೊಸ ವ್ಯವಸ್ಥೆಗಳು ಹೆಚ್ಚಾಗಿ ಚಾಲ್ತಿಗೆ ಬರುತ್ತಿವೆ. ಹಾಗಾದರೆ ಬನ್ನಿ ಇದರ ಆಳ ಅಂತರಾಳವನ್ನು ಅರ್ಥಮಾಡಿಕೊಳ್ಳೋಣ.
Here we tried to give a brief information about Online Education Essay In Kannada and online classes essay in Kannada in the form of essay.
ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.
ವಿಷಯ ಬೆಳವಣಿಗೆ:
ಆನ್ಲೈನ್ ಶಿಕ್ಷಣ ಎಂದರೇನು?
ಆನ್ಲೈನ್ ಶಿಕ್ಷಣ ಎಂದರೆ ಇಂಟರ್ನೆಟ್ ಬಳಸಿ ವಿದ್ಯಾರ್ಥಿಗಳು ಅವರಿರುವ ಸ್ಥಳದಲ್ಲೇ ಮೊಬೈಲ್ ಆಥವಾ ಕಂಪ್ಯುಟರ್ನಲ್ಲಿ ಕಲಿಯುವ ಕ್ರಮವಾಗಿದೆ.
ಆನ್‌ಲೈನ್ ಶಿಕ್ಷಣವು ಕೋರ್ಸ್ ಸ್ವರೂಪವಾಗಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕರು ವರ್ಚುವಲ್ ವಿಧಾನಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತಾರೆ.
ಇಮೇಲ್, ವೆಬ್ ಕಾನ್ಫರೆನ್ಸಿಂಗ್ ಮೂಲಕ ಇದು ಕಾರ್ಯನಿರ್ವಹಿಸಲ್ಪಡುತ್ತದೆ. ಇನ್ನು ಈ ಶಿಕ್ಷಣ ಯಾಕೆ ಬೇಕು? ಇದರಿಂದಾಗುವ ಅನುಕೂಲ ಹಾಗೂ ಆನಾನುಕೂಲಗಳೇನು ಎಂಬ ಬಗ್ಗೆ ಚರ್ಚಿಸೋಣ.
ಆನ್ಲೈನ್ ಶಿಕ್ಷಣದ ಮಹತ್ವ – Online Education Essay In Kannada PDF
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದೇ ಹೇಳಬಹುದು.

- ಆನ್‌ಲೈನ್ ಶಿಕ್ಷಣವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮದೇ ಆದ ಕಲಿಕೆಯ ವೇಗವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
- ಪ್ರತಿಯೊಬ್ಬರ ಕಾರ್ಯಸೂಚಿಗೆ ಸರಿಹೊಂದುವ ವೇಳಾಪಟ್ಟಿಯನ್ನು ಹೊಂದಿಸುವ ಹೆಚ್ಚುವರಿ ನಮ್ಯತೆ ಇದರಲ್ಲಿ ಇರಲಿದೆ.
- ಆನ್‌ಲೈನ್ ಶೈಕ್ಷಣಿಕ ವೇದಿಕೆಯನ್ನು ಬಳಸುವುದರಿಂದ ಕೆಲಸ ಮತ್ತು ಅಧ್ಯಯನಗಳ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
- ಸಾಂಪ್ರದಾಯಿಕ ಶಿಕ್ಷಣದ ಪರಿಕಲ್ಪನೆಯು ಕಳೆದೆರಡು ವರ್ಷಗಳಲ್ಲಿ ಆಮೂಲಾಗ್ರವಾಗಿ ಬದಲಾಗಿದೆ. ಇಂಟರ್ನೆಟ್ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಯಿಂದ ಇದು ಸಾಧ್ಯವಾಗಿದೆ.
- ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವುದು ಸಮಯ ನಿರ್ವಹಣೆ ಕೌಶಲ್ಯಗಳನ್ನು ಕಲಿಸುತ್ತದೆ.
- ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಸಾಮಾನ್ಯ ಕಾರ್ಯಸೂಚಿಯನ್ನು ಹೊಂದಿರುವುದು ಎರಡೂ ಕಡೆಯಿಂದ ಹೊಸ ಜವಾಬ್ದಾರಿಗಳನ್ನು ಸ್ವೀಕರಿಸಲು ಮತ್ತು ಹೆಚ್ಚಿನ ಸ್ವಾಯತ್ತತೆಯನ್ನು ಹೊಂದಲು ಪ್ರೇರೇಪಿಸುತ್ತದೆ.
- ಆನ್‌ಲೈನ್ ಶಿಕ್ಷಣವು ಪ್ರಪಂಚದ ಎಲ್ಲಿಂದಲಾದರೂ ಅಧ್ಯಯನ ಮಾಡಲು ಅಥವಾ ಕಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರರ್ಥ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಅಗತ್ಯವಿಲ್ಲ.
- ಆನ್‌ಲೈನ್‌ನಲ್ಲಿ ವೀಡಿಯೊಗಳು, ಫೋಟೋಗಳು ಮತ್ತು ಇ-ಪುಸ್ತಕಗಳಂತಹ ವೈವಿಧ್ಯಮಯ ವಸ್ತುಗಳಿಗೆ ಆಗಾಗ್ಗೆ ಪ್ರವೇಶವಿದೆ ಮತ್ತು ಶಿಕ್ಷಕರು ತಮ್ಮ ಪಾಠಗಳನ್ನು ಸುಧಾರಿಸಲು ಫೋರಮ್‌ಗಳು ಅಥವಾ ಚರ್ಚೆಗಳಂತಹ ಇತರ ಸ್ವರೂಪಗಳನ್ನು ಸಹ ಸಂಯೋಜಿಸಬಹುದು.
ಇದನ್ನೂ ಓದಿ: ಯೋಗದ ಮಹತ್ವ ಪ್ರಬಂಧ
ಆನ್‍ಲೈನ್ ಶಿಕ್ಷಣ ಭವಿಷ್ಯತ್ತಿನ ಶಿಕ್ಷಣವೇ?
ಹೌದು, ವೇಗವಾಗಿ ಓಡುತ್ತಿರುವ ಕಾಲದಲ್ಲಿ ನಾನು ತೆವಳಿಕೊಂಡು ಹೋಗುತ್ತೇನೆ ಎಂದರೆ ಅದು ಅಸಾಧ್ಯ. ಕಾಲಘಟಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದು ಮನುಷ್ಯನ ಸಹಜ ಗುಣ.
ಹಿಂದೆ ಶಿಕ್ಷಣ ಪದ್ದತಿ ತುಂಬಾ ವಿಭಿನ್ನವಾಗಿತ್ತು. ಹಿಂದಿನ ಕಾಲದ ಶಿಕ್ಷಣಕ್ಕೂ ಮೆಖಾಲೆ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಎರಡೂ ಸಹ ವಿದ್ಯೆಯನ್ನು ಕಲಿಸಿದರೂ ಸಹ ಇವೆರಡಲ್ಲಿ ಸಾಮಾಜಿಕ ಸಮಾನತೆಯ ಸಾಮ್ಯತೆ ಇರಲಿಲ್ಲ.
ಕಾಲ ಬದಲಾದಂತೆ ಶಿಕ್ಷಣದ ವ್ಯವಸ್ಥೆಯೂ ಬದಲಾಗಿದೆ. ಅದರಂತೆ ಇಂದು ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆ ನಮ್ಮ ಮುಂದಿದೆ. ಇದನ್ನೂ ಮೀರಿ ಭವಿಷ್ಯದಲ್ಲಿ ಹೊಸತನ್ನು ನಾವು ಕಾಣಬಹುದು.
ಅದರಲ್ಲೂ ಪ್ರಮುಖವಾಗಿ ಭವಿಷ್ಯದ ಶಿಕ್ಷಣ ಅಂದ ತಕ್ಷಣ ಅದನ್ನು ಕಲಿಸುವ ಮಾರ್ಗ ಮುಂದೆ ಆನ್‌ಲೈನ್ ಎನ್ನುವುದರಲ್ಲಿ ಎರಡು ಮಾತಿಲ್ಲ.
- ಆನ್‌ಲೈನ್ ಶಿಕ್ಷಣದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ಕಲಿಕೆಯ ವೇಗವನ್ನು ಹೊಂದಲು ಸಾಧ್ಯವಾಗುತ್ತದೆ.
- ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವುದರಿಂದ ಸಮಯ ನಿರ್ವಹಣೆಯ ಕೌಶಲ್ಯವನ್ನು ಕಲಿಯಬಹುದಾಗಿದೆ.
ಆನ್ಲೈನ್ನಲ್ಲಿ ನಾವು ಹೆಚ್ಚೆಚ್ಚು ವಿಷಯಗಳ ಬಗ್ಗೆ ಕಲಿಯಬಹುದಾಗಿದೆ ಮತ್ತು ಎಲ್ಲಾ ರೀತಿಯ ಕಲಿಕೆಗೆ ನಮಗೆ ಆಯ್ಕೆ ಇರುತ್ತದೆ
ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಅಲ್ಲಿಂದಲೇ ಅಧ್ಯಯನ ಮಾಡಬಹುದಾಗಿದೆ. ಇದರರ್ಥ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ಅಗತ್ಯವಿಲ್ಲ.
ಈ ಶಿಕ್ಷಣವು ಕೈಗೆಟುಕುವ ದರದಲ್ಲಿ ನಮಗೆ ದೊರೆಯಲಿದೆ. ಇದರಲ್ಲಿ ಪ್ರಯಾಣ ಮತ್ತು ಸಾಮಗ್ರಿಗಳಿಂದ ಹಣವನ್ನು ಉಳಿಸಬಹುದಾಗಿದೆ. - ಇಂದು 90 ಪ್ರತಿಶತ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಉತ್ತಮವಾಗಿದೆ ಎಂದು ಭಾವಿಸುತ್ತಿದ್ದಾರೆ. ಇನ್ನೂ ಸ್ವಯಂ ಕಲಿಕೆಯಲ್ಲಿ ಆನ್ಲೈನ್ ಶಿಕ್ಷಣ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಲಿದೆ. ಈ ಪಾತ್ರವೇನು? ಎಂಬುದನ್ನು ನಾವಿಲ್ಲಿ ತಿಳಿಯೋಣ.
ಸ್ವಯಂ ಕಲಿಕೆಯಲ್ಲಿ ಆನ್ಲೈನ್ ಶಿಕ್ಷಣದ ಪಾತ್ರ
- ಆನ್ಲೈನ್ ಶಿಕ್ಷಣದಲ್ಲಿ ಸ್ವಯಂ ಕಲಿಕೆ ಹೆಚ್ಚಾಗಲಿದೆ ಎಂದೇ ಹೇಳಬಹುದು. ನಮ್ಮದೇ ಸಮಯ, ನಮ್ಮದೇ ತಾಳ್ಮೆ, ನಮ್ಮದೇ ಸಂಯಮ ಇವೆಲ್ಲವನ್ನು ಒಟ್ಟುಗೂಡಿಸಿಕೊಂಡು ಕಲಿಕೆಗೆ ಮುಂದಾದರೆ ಹೆಚ್ಚು ಜ್ಞಾನ ವೃದ್ಧಿಯಾಗಲಿದೆ.
- ಸ್ವಂತ ಸಮಯ ಮತ್ತು ವೇಳಾಪಟ್ಟಿಯಲ್ಲಿ ನಾವು ಏನನ್ನು ಬೇಕಾದರೂ ಕಲಿಯಬಹುದು. ಬೋಧಕ ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದವನ್ನು ಇದು ಉತ್ತೇಜಿಸುತ್ತದೆ.
- ಡಿಜಿಟಲ್ ಯುಗದಲ್ಲಿ, ಸ್ವಯಂ ಶಿಕ್ಷಣವು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ. ಈ ಸ್ವಯಂ ಶಿಕ್ಷಣದಲ್ಲಿ ಸಾಮಾಜಿಕ ಮಾಧ್ಯಮವು ಮಹತ್ವದ ಪಾತ್ರವನ್ನು ವಹಿಸುತ್ತದೆ.
- ಯೂಟ್ಯೂಬ್, ಫೇಸ್‌ಬುಕ್, ಗೂಗಲ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸೈಟ್‌ಗಳು ಜನರು ಪ್ರಮುಖ ವಿಷಯಗಳ ಕುರಿತು ತಮ್ಮನ್ನು ತಾವು ಶಿಕ್ಷಣ ಪಡೆಯಲು ಬಳಸುವ ಅತ್ಯಂತ ಸಾಮಾನ್ಯ ಸಾಮಾಜಿಕ ವೇದಿಕೆಗಳಾಗಿವೆ.
- ಆನ್‌ಲೈನ್ ಕಲಿಕೆಯು ಔಪಚಾರಿಕ ಶಿಕ್ಷಣಕ್ಕೆ ಸಮಾನವಾದ ಪ್ರಯೋಜನಗಳನ್ನು ಒದಗಿಸುತ್ತದೆ. ಜೊತೆಗೆ ಕಲಿಯುವವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ನೀಡುತ್ತದೆ.
- ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಪೂರೈಸಲು ಹಾಗೂ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
- ಇದು ಜನರಿಗೆ ತಿಳುವಳಿಕೆ, ತೊಡಗಿಸಿಕೊಳ್ಳುವಿಕೆ ಮತ್ತು ಮಾನಸಿಕವಾಗಿ ಸಕ್ರಿಯವಾಗಿರಲು ಸಹಾಯ ಪ್ರಮುಖ ವೇದಿಕೆಯಾಗಿದೆ.
- ಇನ್ನು ಆನ್‌ಲೈನ್ನಲ್ಲಿ ಕಲಿಯುವವರು ಉದಯೋನ್ಮುಖ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಲು ಬಯಸುತ್ತಾರೆ. ಪ್ರಪಂಚದ ಕೆಲವು ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಜನರನ್ನು ಸಶಕ್ತಗೊಳಿಸಲು ಈ ಶಿಕ್ಷಣ ಪ್ರಮುಖ ಮಾರ್ಗವಾಗಿದೆ.
ಅಂತರ್ಜಾಲ ಮತ್ತು ವಿದ್ಯಾರ್ಥಿ
ನಮಗೆಲ್ಲಾ ತಿಳಿದಿರುವಂತೆ ಇಂಟರ್ನೆಟ್ ಇಂದಿನ ತಾಂತ್ರಿಕ ಪ್ರಪಂಚದಲ್ಲಿ ಮೂಲಭೂತ ಅವಶ್ಯಕತೆಯಾಗಿದೆ. ಇಂಟರ್‌ನೆಟ್‌ನಿಂದ ಎಲ್ಲಾ ಕ್ಷೇತ್ರದ ಜನರಿಗೆ ಸಾಕಷ್ಟು ಪ್ರಯೋಜನಗಳಿವೆ.
ನೀವು ಇಂಟರ್ನೆಟ್ ಮೂಲಕ ಏನನ್ನ ಬೇಕಾದರೂ ಪಡೆಯಬಹುದಾಗಿದೆ. ಇಂಟರ್ನೆಟ್ ನ ಕೆಲವು ಉಪಯೋಗಗಳನ್ನು ತಿಳಿದುಕೊಳ್ಳೋಣ ಬನ್ನಿ.
- ಇಂಟರ್ನೆಟ್ ಮೂಲಕ ಸಂಪರ್ಕ ಮತ್ತು ಸಂವಹನ ನಡೆಸಬಹುದು
- ಇಂಟರ್ನೆಟ್ ಮೂಲಕ ಆನ್‌ಲೈನ್ ಶಿಕ್ಷಣ
- ವಿಷಯಗಳ ಹುಡುಕಾಟದಲ್ಲಿ ಇಂಟರ್ನೆಟ್ನಿಂದ ವಿದ್ಯಾರ್ಥಿಗೆ ಸಹಾಯ
- ಅಂತರ್ಜಾಲದ ಮೂಲಕ ಸ್ವಯಂ ಅಧ್ಯಯನ ಮಾಡಬಹುದಾಗಿದೆ
- ಇಂಟರ್ನೆಟ್ ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಉಳಿಸುತ್ತದೆ.
- ಇಂಟರ್ನೆಟ್ ಮೂಲಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆನ್‌ಲೈನ್ ಚರ್ಚೆ
- ವೇಗವಾಗಿ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು
- ಆಸೈನ್ಮೆಂಟ್ ಮತ್ತು ಪ್ರೆಜೆಂಟ್ಟೇಶನ್ಸ್ ಪೂರ್ಣಗೊಳಿಸುವಲ್ಲಿ ಸಹಾಯ
- ವಿದ್ಯಾರ್ಥಿಗಳು ಇಂಟರ್ನೆಟ್ ಮೂಲಕ ಆನ್‌ಲೈನ್‌ನಿಂದ ಹಣವನ್ನು ಗಳಿಸಬಹುದು
- ಕೆಲಸದ ಬಗ್ಗೆ ಇಂಟರ್ನೆಟ್ ಮೂಲಕ ಯೋಜನೆಗಳನ್ನು ರೂಪಿಸಿಕೊಳ್ಳಬಹುದು
ವಿದ್ಯಾರ್ಥಿಗಳ ಮೇಲೆ ಲಾಕ್ ಡೌನ್ ಪರಿಣಾಮ
ಆನ್ಲೈನ್ ಶಿಕ್ಷಣ ಮತ್ತು ಅದರ ಪರಿಣಾಮಗಳು ಇತ್ತಿಚೀಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದುದನ್ನು ನಾವು ಕಂಡೆವು.
ಭಾರತ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ದೇಶದಲ್ಲಿ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ನೆನಪಿಸಿಕೊಂಡು ಏನಪ್ಪಾ ಮಾಡುವುದು? ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದರು.
ಇದಾದ ಕೆಲ ಸಮಯದಲ್ಲಿ ಆನ್ಲೈನ್ ಶಿಕ್ಷಣ ಜಾರಿಗೆ ಬಂದಿದ್ದರಿಂದ ಅವರ ನೋವು, ಹತಾಶೆ ಮಾಯವಾಯಿತು. ಆದರೆ, ವಿದ್ಯಾರ್ಥಿಗಳು ಆ ವೇಳೆ ಎಲ್ಲರನ್ನೂ ಬಿಟ್ಟು ಏಕಾಂಗಿಯಾಗಿ ಇರುವಂತೆ ಲಾಕ್ಡೌನ್ ಮಾಡಿತು.
ಆರಂಭದಲ್ಲಿ ಇದಕ್ಕೆ ಒಗ್ಗಿಕೊಳ್ಳಲು ಕಷ್ಟಪಟ್ಟ ವಿದ್ಯಾರ್ಥಿಗಳು ಕಾಲನಂತರ ಅದೇ ಸರಿ ಎಂಬಂತೆ ಇದ್ದರು. ಅದರಲ್ಲೂ ಕೆಲ ಹುಡುಗರು ಮಾತ್ರ ಯಾವಾಗಲೂ ಲಾಕ್ಡೌನ್ ಇರಲಿ ಎನ್ನುವ ಮಾತುಗಳನ್ನು ಸಹ ಆಡುತ್ತಿದ್ದರು.
ಈ ವೇಳೆ ಕೆಲವರು ಏಕಾಂಗಿತನ ಎದುರಿಸಿದರೆ ಇನ್ನೂ ಕೆಲವು ತಮ್ಮ ಕುಟುಂಬದೊಂದಿಗೆ ಬೆರೆತು ಸಂಸತದ ಸಮಯವನ್ನಾಗಿ ಮಾರ್ಪಾಡಿಸಿಕೊಂಡಿದ್ದಾರೆ.
ಪ್ರಮುಖಾಂಶಗಳು:
- ಭಾರತದಲ್ಲಿ ಸುಮಾರು 250 ಮಿಲಿಯನ್ ವಿದ್ಯಾರ್ಥಿಗಳ ಮೇಲೆ ಲಾಕ್ಡೌನ್ ಪರಿಣಾಮ ಬೀರಿದೆ.
- ಲಾಕ್ಡೌನ್ನಿಂದ ಹಲವಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಬೇಕಾಯಿತು.
- ಕಲಿಕೆಯ ಫಲಿತಾಂಶ ಮತ್ತು ಅದರ ಗುಣಮಟ್ಟದಲ್ಲಿ ಕುಸಿತ ಉಂಟಾಯಿತು.
- ಲಾಕ್‌ಡೌನ್ನಿಂದಾಗಿ ವಿದ್ಯಾರ್ಥಿಯ ಮಾನಸಿಕ ಆರೋಗ್ಯ ಮತ್ತು ಸಂತೋಷಕ್ಕೆ ತೊಡಕಾಗಿದೆ.
- ಆನ್ಲೈನ್ ಮೂಲಕ ಶಿಕ್ಷಣವನ್ನು ಪಡೆಯುವಂತಾಯಿತು
- ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಕಡಿಮೆ ಮಾಡಿತು.
ಶಿಕ್ಷಣದಲ್ಲಿ ಅಂತರ್ಜಾಲದ ಉಪಯೋಗಗಳು
ಅಂತರ್ಜಾಲದ ಬಳಕೆಯು ಮಾಹಿತಿ ಮತ್ತು ಸಂವಹನದ ಹಂಚಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಉಪನ್ಯಾಸಗಳನ್ನು ಕೇಳಲು, ನೋಡಲು ಮತ್ತು ವಿವಿಧ ಮಲ್ಟಿಮೀಡಿಯಾ ಸ್ವರೂಪಗಳಲ್ಲಿ ಸಂಬಂಧಿತ ಅಧ್ಯಯನ ಸಾಮಗ್ರಿಗಳನ್ನು ಉಲ್ಲೇಖಿಸಲು ಅನುಮತಿಸುತ್ತದೆ.
ಇದು ಶಿಕ್ಷಕರಿಗೆ ಅವರ ಪಠ್ಯಕ್ರಮದಲ್ಲಿ ವಿವಿಧ ಪರಿಕರಗಳನ್ನು ಬಳಸಲು ಅವಕಾಶ ನೀಡುವ ಮೂಲಕ ತುಂಬಾ ಸಹಕಾರಿಯಾಗಿದೆ.
ಆನ್ಲೈನ್ ಶಿಕ್ಷಣದ ಅನುಕೂಲಗಳು ಮತ್ತು ಅನಾನುಕೂಲಗಳು
ಅನುಕೂಲಗಳು | ಅನಾನುಕೂಲಗಳು |
ಹಣ ಉಳಿತಾಯ: ಆನ್‌ಲೈನ್ ಕಲಿಕೆಯ ಉತ್ತಮ ಭಾಗವೆಂದರೆ ಹಳೆಯ-ಶೈಲಿಯ ಕಲಿಕೆಗೆ ಹೋಲಿಸಿದರೆ ಇದು ಹೆಚ್ಚು ಕೈಗೆಟುಕುಕುವ ಮಾರ್ಗ. ಸಮವಸ್ತ್ರ, ಪ್ರಯಾಣದ ವೆಚ್ಚವನ್ನು ಇದರಲ್ಲಿ ಉಳಿಸಬಹುದು. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು. | ಏಕಾಗ್ರತೆ ಸಮಸ್ಯೆ: ಶಿಕ್ಷಕರು ಆನ್‌ಲೈನ್ನಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಸರಿಯಾದ ಕಾಳಜಿಯಿಲ್ಲದೆ ಅವರು ಸುಲಭವಾಗಿ ಅಧ್ಯಯನದ ಮೇಲೆ ಗಮನವನ್ನು ಕಳೆದುಕೊಳ್ಳಬಹುದು. |
ತಂತ್ರಜ್ಞಾನ ಜ್ಞಾನಮಟ್ಟ ಹೆಚ್ಚಳ: ತಂತ್ರಜ್ಞಾನವನ್ನು ಬಳಸಿ ಕಲಿಯುವುದರಿಂದ ತಂತ್ರಜ್ಞಾನದಲ್ಲಿ ಹೆಚ್ಚು ಪ್ರಾವೀಣ್ಯವನ್ನು ಗಳಿಸಬಹುದು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಇದು ಅನಿವಾರ್ಯ. ಹಾಗಾಗಿ ಈ ಆನ್ಲೈನ್ ಶಿಕ್ಷಣ ಉದ್ಯೋಗಕ್ಕೂ ಸಹಾಯಕವಾಗುತ್ತದೆ. | ಆರೋಗ್ಯ ಸಮಸ್ಯೆ: ಕಂಪ್ಯೂಟರ್ ಪರದೆಯ ಮುಂದೆ ಗಂಟೆಗಳ ಕಾಲ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ಪೋಷಕರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಪರದೆಯನ್ನು ಹೆಚ್ಚು ಹೊತ್ತು ನೋಡುವುದರಿಂದ ಅವರ ದೃಷ್ಟಿಗೂ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಸರಿಯಾಗಿ ಕುಳಿತುಕೊಳ್ಳುದ ಭಂಗಿಯಿಂದಾಗಿ ಬೆನ್ನುನೋವಿನ ಸಮಸ್ಯೆಗಳು ಉಂಟಾಗಬಹುದು. |
ಸುಲಭ ಹಾಜರಾತಿ: ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲೇ ತಮ್ಮ ಅನುಪಸ್ಥಿತಿ ಇದೆ ಎಂದು ತಿಳಿಸಬಹು. ಹಾಗೆಯೇ ಎಲ್ಲಾ ತರಗತಿಗಳಿಗೆ ಸುಲಭವಾಗಿ ಹಾಜರಾಗಬಹುದು. | ಹೆಚ್ಚಿನ ವೆಚ್ಚ: ಅರೇ ಇದೇನಿದು ಅಲ್ಲಿ ಕಡಿಮೆ ವೆಚ್ಚ ಅಂತಾ ಹೇಳಿ ಇಲ್ಲಿ ದುಬಾರಿ ಅಂತಿದ್ದಾರಲ್ಲ ಎಂದು ಚಿಂತಿತರಾಗಬೇಡಿ. ಆನ್ಲೈನ್ ಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ಕೊಂಡುಕೊಳ್ಳಲು ಆರ್ಥಿಕವಾಗಿ ದುರ್ಬಲರಾದವಿಗೆ ಇದು ಹೆಚ್ಚಿನ ವೆಚ್ಚವೇ ಹೌದು. ನಿರುದ್ಯೋಗಿಯಾಗಿರುವ ಪೋಷಕರು ವಿದ್ಯಾರ್ಥಿಗಳ ಆನ್‌ಲೈನ್ ಕಲಿಕೆಗಾಗಿ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ಗಳನ್ನು ಕೊಡಿಸಲು ಸಾಧ್ಯವಾಗುವುದಿಲ್ಲ. |
ಸಮಯದ ಉಪಯೋಗ: ಸಾಂಪ್ರದಾಯಿಕ ತರಗತಿಗಳಿಗಿಂತ ಭಿನ್ನವಾಗಿ ಆನ್ಲೈನ್ ತರಗತಿ ಇರಲಿದೆ. ಆಯಾ ತರಗತಿಯಲ್ಲಿ ಯಾವುದೇ ಶಿಕ್ಷಕರು ಇಲ್ಲದಿದ್ದರೆ ಮನೆಯ ಅಥವಾ ಇನ್ಯಾವುದೇ ಕೆಲಸವನ್ನು ಆ ಸಮಯದಲ್ಲಿ ಮಾಡಿಕೊಳ್ಳಬಹುದು. ಸ್ವಂತ ಬಿಡುವಿನ ಸಮಯವನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದು. | ಸಾಮಾಜಿಕ ಕೌಶಲ್ಯ ಕೊರತೆ: ಡಿಜಿಟಲ್ ಕಲಿಕೆಯಲ್ಲಿ ಯಾವುದೇ ಸಾಮಾಜಿಕ ವ್ಯವಸ್ಥೆ ಇರುವುದಿಲ್ಲ. ಯಾರೊಬ್ಬರ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಹೆಚ್ಚು ಬೆರೆಯಲು ಇಲ್ಲಿ ಅವಕಾಶ ಇರುವುದಿಲ್ಲ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಕಷ್ಟಕರವಾಗುತ್ತದೆ. ಶಿಕ್ಷಣ ಎಂದರೆ ಕೇವಲ ಓದು ಬರಹ ಅಷ್ಟೇ ಅಲ್ಲ. ಅದರಲ್ಲಿ ಮಾನವೀಯ ಮೌಲ್ಯವುಳ್ಳ ಸಾಮಾಜಿಕ ಜವಬ್ದಾರಿಗಳನ್ನೂ ಸಹ ಕಲಿಯಬೇಕು. ಆದರೆ ಈ ವ್ಯವಸ್ಥೆಯಲ್ಲಿ ಅದು ಸಾಧ್ಯವಾಗದ ಪರಿಣಾಮ ಸಾಮಾಜದ ಸಾಮಾಜಿಕ ವ್ಯವಸ್ಥೆ ವಿದ್ಯಾರ್ಥಿಗೆ ಅರಿವಾಗುವುದು ಕಷ್ಟ. |
ಕಡಿಮೆ ಸ್ಪರ್ಧೆ ಮತ್ತು ಕಡಿಮೆ ಒತ್ತಡ: ಸಾಂಪ್ರದಾಯಿಕ ತರಗತಿಗಳಿಗೆ ಹೋಲಿಸಿದರೆ ಆನ್‌ಲೈನ್ ಕಲಿಕೆಯಲ್ಲಿ ಕಡಿಮೆ ಒತ್ತಡ ಮತ್ತು ಕಡಿಮೆ ಸ್ಪರ್ಧೆ ಇರುತ್ತದೆ. ಕಡಿಮೆ ಮಟ್ಟದ ಸ್ಪರ್ಧೆಯು ವಿದ್ಯಾರ್ಥಿಗಳನ್ನು ಕಡಿಮೆ ಒತ್ತಡಕ್ಕೆ ಒಳಪಡಿಸುತ್ತದೆ, ಹಾಗೆಯೇ ಹೆಚ್ಚು ಶಾಂತಗೊಳಿಸುತ್ತದೆ. ಪರಿಣಾಮ ವಿದ್ಯಾರ್ಥಿಗಳು ಇನ್ನಷ್ಟು ಕಲಿಯಲು ಕಾತುರರಾಗುತ್ತಾರೆ. | ಏಕಾಂಗಿನತ: ಅನೇಕ ವಿದ್ಯಾರ್ಥಿಗಳು ಪ್ರತ್ಯೇಕತೆಯ ಭಾವನೆಯನ್ನು ಅನುಭವಿಸುತ್ತಾರೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಗೆಳೆಯರೊಂದಿಗೆ ಅಥವಾ ಇತರರೊಂದಿಗೆ ಬೆರೆಯದಿರುವ ಕಾರಣ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ. |
ಎಲ್ಲಾ ಕಡೆ ವಿಸ್ತರಿಸಿಕೊಳ್ಳಬಹುದು: ವಿದ್ಯಾರ್ಥಿಯು ಬೇರೆ ದೇಶ ಅಥವಾ ಪ್ರದೇಶದಿಂದ ನಿರ್ದಿಷ್ಟ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಬಯಸಿದರೆ ಹಣಕಾಸಿನ ಸಮಸ್ಯೆ ಅಥವಾ ಕೆಲವು ನಿರ್ಬಂಧಗಳಿಂದ ಅಲ್ಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಆಗ ಡಿಜಿಟಲ್ ಶಿಕ್ಷಣ ತುಂಬಾ ಅವಶ್ಯಕವಾಗಿ ಬಳಕೆಗೆ ಬರುತ್ತದೆ. ವಿದ್ಯಾರ್ಥಿಯು ಪ್ರಯಾಣ ಮಾಡದೆಯೇ ನಿರ್ದಿಷ್ಟ ವಿಶ್ವವಿದ್ಯಾಲಯದಿಂದ ಪದವಿ ಪಡೆಯಬಹುದು. | ಸೀಮಿತ: ಡಿಜಿಟಲ್ ಕಲಿಕೆಯು ಎಲ್ಲಾ ವಿಭಾಗಗಳು ಮತ್ತು ವಿಷಯಗಳಿಗೆ ಅನ್ವಯಿಸುವುದಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ ಮತ್ತು ಇತರ STEM ವಿಷಯಗಳಂತಹ ಪ್ರಾಯೋಗಿಕ ಅಗತ್ಯವಿರುವ ವಿಷಯಗಳಲ್ಲಿ ಡಿಜಿಟಲ್ ತರಗತಿ ಎಲ್ಲವನ್ನೂ ಈಡೇರಿಸುವುದಿಲ್ಲ. |
ಭಯವಿಲ್ಲದ ವಾತಾವರಣ: ಆನ್‌ಲೈನ್ ಶಿಕ್ಷಣದಲ್ಲಿ, ನಾವು ಶಿಕ್ಷಕರೊಂದಿಗೆ ಜಾಗರೂಕರಾಗಿರಬೇಕು. ಅಲ್ಲದೇ ತರಗತಿಗಳಂತೆ ಭಯಪಡಬೇಕಾಗಿಲ್ಲ. | ಇಂಟರ್ನೆಟ್ ಸಂಪರ್ಕದ ಕೊರತೆ: ಇಂಟರ್ನೆಟ್ ಇದ್ದರೆ ಆನ್ಲೈನ್ ತರಗತಿ ಖಂಡಿತಾ ಚೆಂದವಾಗಿರುತ್ತದೆ. ಉತ್ತಮ ಇಂಟರ್ನೆಟ್ ಸಂಪರ್ಕದೊಂದಿಗೆ ಫೋನ್ ಅಥವಾ ಕಂಪ್ಯೂಟರ್ ಅನ್ನು ಸಂಪರ್ಕಿಸಲು ವಿಫಲವಾದರೆ ಕಲಿಯುವಿಕೆಯ ಸಂದರ್ಭದಲ್ಲಿ ಪ್ರಮುಖ ಮಾಹಿತಿಯಿಂದ ವಂಚಿತರಾಗಬೇಕಾಗುತ್ತದೆ. ಉತ್ತಮ ಇಂಟರ್ನೆಟ್ ಸಂಪರ್ಕಕ್ಕಾಗಿ ಪೋಷಕರು ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನನುಕೂಲವಾಗಿದೆ. |
ಮಳೆ,ಗಾಳಿ,ಬಿಸಿಲಿಗೆ ಹೆದರಬೇಕಿಲ್ಲ: ಋತುಮಾನಗಳಲ್ಲಿ ಎದುರಾಗುವ ಬಿಸಿಲು, ಮಳೆ, ಚಳಿಗಾಲದ ಸಂದರ್ಬದಲ್ಲಿ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ, ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯಬಹುದಾಗಿದೆ. | ದೇಹದ ಮೇಲೆ ಪರಿಣಾಮ: ಆನ್‌ಲೈನ್ ಶಿಕ್ಷಣದಿಂದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿರಂತರವಾಗಿ 6-8 ಗಂಟೆಗಳ ಕಾಲ ಆನ್‌ಲೈನ್ ಶಿಕ್ಷಣವನ್ನು ಪಡೆದಾಗ, ಕಂಪ್ಯೂಟರ್, ಲ್ಯಾಪ್‌ಟಾಪ್ ಪರದೆಯ ಬೆಳಕು ಅವರ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. |
ತಂತ್ರಜ್ಞಾನದ ಸದ್ಬಳಕೆ: ಆನ್ಲೈನ್ ಶಿಕ್ಷಣದ ಜೊತೆಗೆ ಮಕ್ಕಳು ಹೊಸ ಹೊಸ ತಂತ್ರಜ್ಞಾನವನ್ನು ಕಲಿಯಬಹುದಾಗಿದೆ. | ಎಲ್ಲರಿಗೂ ಆನ್‌ಲೈನ್ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಕಷ್ಟ: ಆನ್‌ಲೈನ್ ಶಿಕ್ಷಣ ಎಲ್ಲರಿಗೂ ಲಭ್ಯವಾಗುವುದು ಕಷ್ಟ. ಕೇವಲ ಎರಡು ಹೊತ್ತಿನ ಊಟಕ್ಕಾಗಿ ದುಡಿಯುವವರು ತಮ್ಮ ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್‌ನಂತಹ ವಸ್ತುಗಳನ್ನು ಕೊಡಿಸಲಾಗುವುದಿಲ್ಲ. ಇದರಿಂದ ಬಡ ಕುಟುಂಬಗಳ ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. |
ಕಾಲೇಜ್ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆಯ ಪ್ರಯೋಜನಗಳು:
ಕಾಲೇಜು ವಿದ್ಯಾರ್ಥಿಗಳಿಗೆ ಈ ಮಾರ್ಗ ಹೇಳಿಮಾಡಿಸಿದಂತಿದೆ. ಕಾಲೇಜು ಮಟ್ಟಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ ಎಂದರೆ ಅವರಿಗೆ ವ್ಯವಹಾರದ ಜ್ಞಾನ , ಕೌಟುಂಬಿಕ ಜವಬ್ದಾರಿ ಎಲ್ಲವೂ ಮೈಗೂಡಲು ಆರಂಭವಾಗುತ್ತದೆ.
ಆನ್ಲೈನ್ ಶಿಕ್ಷಣ ವ್ಯವಸ್ಥೆ ಕಾಲೇಜು ವಿದ್ಯಾರ್ಥಿಗೆ ಸಮಯ ಉಳಿತಾಯ ಮಾಡುವುದರಿಂದ ಹಾಗೂ ಹಣ ಉಳಿತಾಯ ಮಾಡುವುದರಿಂದ ಅದು ಬೇರೆ ರೀತಿಯಲ್ಲಿ ಬಳಕೆಗೆ ಬಂದು ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುತ್ತದೆ.
ಆನ್‌ಲೈನ್ ಶಿಕ್ಷಣದಿಂದಿರುವ ಅಪಾಯಗಳೇನು?
Benefits of Online Education Essay In Kannada as follows:
- ಆನ್‌ಲೈನ್ನಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಸೀಮಿತವಾಗಿರಲಿದೆ
- ಸಾಮಾಜಿಕ ಪ್ರತ್ಯೇಕತೆಯನ್ನು ಉಂಟುಮಾಡಬಹುದು
- ಬಲವಾದ ಸ್ವಯಂ ಪ್ರೇರಣೆ ಮತ್ತು ಸಮಯ ನಿರ್ವಹಣಾ ಕೌಶಲ್ಯಗಳು ಬೇಕಾಗುತ್ತವೆ
- ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯ ಅಭಿವೃದ್ಧಿಯ ಕೊರತೆ ಉಂಟಾಗುತ್ತದೆ
- ಬೋಧಕರು ಅಭ್ಯಾಸಕ್ಕಿಂತ ಹೆಚ್ಚಾಗಿ ತಮ್ಮ ಸಿದ್ಧಾಂತದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ
- ಮುಖಾಮುಖಿ ಸಂವಹನದ ಕೊರತೆ ಇರಲಿದೆ
- ಕೆಲವು ವಿಭಾಗಗಳಿಗೆ ಮಾತ್ರ ಇದು ಸೀಮಿತವಾಗಿದೆ
- ಅನಕ್ಷರಸ್ಥರು ಆನ್‌ಲೈನ್ ಕಲಿಕೆಯನ್ನು ಪ್ರವೇಶಿಸಲಾಗುವುದಿಲ್ಲ
- ಆನ್‌ಲೈನ್ ಶಿಕ್ಷಣದಲ್ಲಿ ಮಾನ್ಯತೆ ಮತ್ತು ಗುಣಮಟ್ಟದ ಭರವಸೆಯ ಕೊರತೆ ಇರಲಿದೆ
ಆನ್‌ಲೈನ್ ಕೋರ್ಸ್ ತೆಗೆದುಕೊಳ್ಳುವುದರ ಉಪಯೋಗಗಳೇನು?
- ಅನುಕೂಲಕರ ವಾತಾವರಣದಲ್ಲಿ ನಮಗೆ ಹತ್ತಿರ ಇರುವವರ ಮಧ್ಯೆಯೇ ಇದ್ದುಕೊಂಡು ಕಲಿಯಬಹುದು
- ಶಿಕ್ಷಣವನ್ನು ನಮ್ಮ ಮನೆಗೇ ಕರೆದುಕೊಂಡು ಬರಬಹುದು
- ನಾವು ಜಾಗತಿಕ ಮಟ್ಟಕ್ಕೆ ತೆರೆದುಕೊಳ್ಳಬಹುದು
- ಹೆಚ್ಚು ಪ್ರಾಯೋಗಿಕ ಮತ್ತು ನವೀನವಾಗಿರಲಿವೆ
- ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ಪಡೆಯಬಹುದಾಗಿದೆ
- ಒಂದೇ ವೇದಿಕೆಯಡಿ ಹೆಚ್ಚು ಕೋರ್ಸ್ಗಳ ಶಿಕ್ಷಣ ತೆಗೆದುಕೊಳ್ಳಬಹುದು
- ಕಲಿಸುವವರ ಕೆಲಸವನ್ನು ಕಿತ್ತುಕೊಳ್ಳದೆ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ
ಇವು ಕೆಲವು ಆನ್ಲೈನ್ ಶಿಕ್ಷಣದ ಸಾಧಕ ಬಾಧಕಗಳು. ಮಕ್ಕಳಿಗೆ ಶಿಕ್ಷಣ ಅತ್ಯಂತ ಅಮೂಲ್ಯ. ಅದು ಸಾಂಪ್ರದಾಯಿಕವಾದರೂ ಸರಿಯೇ ಆನ್ಲೈನ್ ಆದರೂ ಸರಿಯೇ.
ಉಪಸಂಹಾರ:
ಭಾರತದಲ್ಲಿ ಎಲ್ಲರ ಹತ್ತಿರವೂ ಮೊಬೈಲ್ , ಗಣಕಯಂತ್ರ / ಲ್ಯಾಪ್ಟಾಪ್ ಇದೆ ಎಂದು ಹೇಳಲು ಅಸಾಧ್ಯ. ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲದ ಅದೆಷ್ಟೋ ಹಳ್ಳಿಗಳಿವೆ. ಅಲ್ಲಿಗೆ ಆನ್ಲೈನ್ ಶಿಕ್ಷಣ ಅಂದರೆ ಅದನ್ನು ಊಹಿಸಿಕೊಳ್ಳಲೂ ಸಹ ಕಷ್ಟವಾಗುತ್ತದೆ.
ಆ ಕಾರಣಕ್ಕಾಗೆ ಪೋಷಕರು ಮಕ್ಕಳನ್ನು ಸರ್ಕಾರಿ ಹಾಸ್ಟೆಲ್ಗಳಲ್ಲಿ ಇರಿಸಿ ಕಲಿಸುತ್ತಾರೆ. ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸರಿಯಾದ ವೇದಿಕೆಯಲ್ಲಿ ಪ್ರದರ್ಶಿಸಿದರೆ ಸಾಧನೆ ಖಂಡಿತಾ ಸಾಧ್ಯವಾಗುತ್ತದೆ.
ಶಿಕ್ಷಣದಿಂದ ವಂಚಿತರಾದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ? ಎಂಬುದಕ್ಕೆ ನಮ್ಮ ನಡುವೆ ಅದೆಷ್ಟೋ ಹುಧಾಹರಣೆಗಳಿವೆ.
ಅವುಗಳನ್ನು ಅರ್ಥ ಮಾಡಿಕೊಂಡು ದೇಶಕ್ಕೆ ಏನನ್ನಾದರೂ ನೀಡಬೇಕು ಎಂಬ ಮನೋಭಾವನೆಯನ್ನು ಅಭ್ಯಾಸ ಮಾಡಿದರೆ ಸಾರ್ಥಕ ಜೀವನವನ್ನಾಗಿಸಿಕೊಳ್ಳಬಹುದು ಅಲ್ಲವೇ?.
FAQ On Online Education Essay In Kannada
1. ಆನ್ಲೈನ್ ಶಿಕ್ಷಣ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳು ಯಾವವು?
1. ಮೂಲ ಸೌಕರ್ಯಗಳ ಕೊರತೆ
2. ಡಿಜಿಟಲ್ ಸಾಕ್ಷರತೆ ಮತ್ತು ತಾಂತ್ರಿಕ ಸಮಸ್ಯೆಗಳು
3. ವ್ಯಕ್ತಿಗತ ಸಂವಹನದ ಕೊರತೆ
4. ಕೋರ್ಸ್ಗಳ ಗುಣಮಟ್ಟದ್ದಲ್ಲಿ ಕಳಪೆ
5. ಉನ್ನತ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ ಪದವಿಗಳ ಕೊರತೆ
6. ವಿದ್ಯಾರ್ಥಿಗಳಲ್ಲಿ Motivation ದ ಕೊರತೆ
2. ಆನ್ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗಿರಬೇಕಾದ ತಾಂತ್ರಿಕ ಕೌಶಲ್ಯಗಳೇನು?
ವಿದ್ಯಾರ್ಥಿಗಳಿಗೆ ಕನಿಷ್ಠ ಪಕ್ಷ ಕಂಪ್ಯೂಟರ್ ಹೇಗೆ ಬಳಸಬೇಕು ಎಂಬುದು ತಿಳಿದಿರಬೇಕು. ಈಗಂತೂ ಮೊಬೈಲ್ ನಲ್ಲೆ 90% ಎಲ್ಲ ಕೆಲಸ ಮೊಬೈಲ್ ದಿಂದ ಸಾಧ್ಯವಾಗುತ್ತಿದೆ.
ಅದರ ಜೊತೆಗೆ ಇ-ಮೇಲ್ ಹೇಗೆ ಕಳುಹಿಸಬೇಕು ಹಾಗೂ ಹೇಗೆ ರಿಸೀವ್ ಮಾಡಬೇಕು ಎನ್ನುವುದು ಗೊತ್ತಿರಬೇಕು.
ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವು ಬದಲಾಗುತ್ತದೆ ಅದಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕಾಗುತ್ತದೆ.
3. ಅಗತ್ಯವಿರುವ ಪಠ್ಯ ಸಾಮಗ್ರಿಗಳನ್ನು ಆನ್ಲೈನ್ ನಲ್ಲಿ ಹೇಗೆ ಪಡೆಯಬೇಕು?
ಆಯಾ ಕೋರ್ಸುಗಳಿಗೆ ಬೇಕಾದ ಪಠ್ಯ ಸಾಮಗ್ರಿಗಳನ್ನು ಆಯಾ ಕೋರ್ಸುಗಳಲ್ಲಿ ನೀಡಿರುತ್ತಾರೆ ಅಥವಾ ನಮೂದಿಸಿರುತ್ತಾರೆ. ಇಲ್ಲವಾದಲ್ಲಿ ಆನ್ಲೈನ್ ನಲ್ಲಿ ಹುಡುಕಬಹುದು ಅಥವಾ ಓದಬಹುದು.
ಈ “Online Education Essay In Kannada” (essay writing ಆನ್ಲೈನ್ ಶಿಕ್ಷಣ ಪ್ರಬಂಧ) ಲೇಖನದ ಕುರಿತು ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಯನ್ನು ದಯವಿಟ್ಟು ಈ ಕೆಳಗೆ Comment ಮಾಡಿ.
5G internet essays