Parisara Samrakshane Essay In Kannada – ಪರಿಸರ ಸಂರಕ್ಷಣೆ ಪ್ರಬಂಧ

Parisara Samrakshane Essay In Kannada (ಪರಿಸರ ಸಂರಕ್ಷಣೆ ಪ್ರಬಂಧ PDF, ಪರಿಸರ ಸಂರಕ್ಷಣೆ ಘೋಷಣೆಗಳು, ಪರಿಸರ ಸಂರಕ್ಷಣೆ ವಿದ್ಯಾರ್ಥಿಗಳ ಪಾತ್ರ, ಪರಿಸರ ಸಂರಕ್ಷಣೆಯಲ್ಲಿ ವನ್ಯ ಜೀವಿಗಳ ಪಾತ್ರ)

[2023] Refer ಮಾಡಿ 100% Upstox ದಿಂದ ಹಣಗಳಿಸುವುದು ಹೇಗೆ?
Refer ಮಾಡಿ Upstox ದಿಂದ ಹಣಗಳಿಸುವುದು ಹೇಗೆ?

ಪೀಠಿಕೆ

ಪರಿಸರ.. ನಾವು ನೀವೆಲ್ಲಾ ವಾಸಿಸುತ್ತಿರೋ ಈ ಭೂಮಿಯೇ ಸುಂದರ ಪರಿಸರ. ಪರಿಸರವನ್ನು ಪ್ರಕೃತಿ ಮಾತೆ ಎಂದು ಪೂಜಿಸುವ ಪದ್ಧತಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.

ಬೆಟ್ಟ-ಗುಡ್ಡ, ನದಿ, ವನ, ಕಾಡು, ಗಿಡ-ಮರ, ವನ್ಯಜೀವಿ, ಪ್ರಾಣಿ-ಪಕ್ಷಿ, ಮನುಷ್ಯ, ಜಲಚರಗಳು, ಸಸ್ತನಿಗಳು, ಹೀಗೆ ಒಂದಾ ಎರಡಾ? ಕೋಟಿ ಕೋಟಿ ಜೀವರಾಶಿಗಳನ್ನು ತನ್ನ ಒಡಲಲ್ಲಿ ಸಾಕಿಕೊಂಡಿದೆ ಈ ಭೂಮಿ.

ಇಂತಹ ಭೂಮಿ ಸ್ವಚ್ಛಂಧ ಪರಿಸರವನ್ನು ನಮಗಾಗಿ ಕಟ್ಟಿ ಕೊಟ್ಟಿದೆ. ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶಗಳೇ ಪಂಚಭೂತಗಳು. ಈ ಐದರಿಂದಲೇ ಜಗತ್ತು ನಿರ್ಮಾಣವಾಗಿದೆ.

ಪರಿಸರ ಅಂದ್ರೆ ಹಸಿರು, ಹಸಿರೇ ನಮ್ಮ ಉಸಿರು” ಎಂಬ ನಾಣ್ನುಡಿ ಇದೆ. ಪರಿಸರದ ಕುರಿತು ಹಲವಾರು ಲೇಖಕರು, ಕವಿಗಳು ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ. 

ಮನುಷ್ಯನ ಜೀವನ ಪ್ರಕೃತಿ ಮಾತೆ ಕೊಟ್ಟ ಕೊಡುಗೆ. ಕೃಷಿಯಿಂದ ಬದುಕು ಕಟ್ಟಿಕೊಂಡ ಮಾನವನಿಗೆ ಪ್ರಕೃತಿಯೇ ಪೂಜ್ಯನೀಯ.

ಮನುಷ್ಯನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ”. ಮನುಷ್ಯ ಹುಟ್ಟುತ್ತಲೇ ಪ್ರಕೃತಿ, ಪರಿಸರದ ಜೊತೆಗೆ ಒಟನಾಟ ಹೊಂದುತ್ತಾನೆ.

ಪರಿಸರ ಎಂಬುದು ತಾನಾಗಿಯೇ ಹುಟ್ಟಿಕೊಂಡ ನೈಜ ಸೃಷ್ಟಿ. ಪರಿಸರ ಎಂದರೇನು ಅನ್ನೋದನ್ನ ಮನುಷ್ಯ ಸರಿಯಾಗಿ ಮೊದಲು ತಿಳಿದುಕೊಳ್ಳಬೇಕು. ಈ Parisara Samrakshane Essay In Kannada PDF ಲೇಖನದ ಕೊನೆಗೆ DOWNLOAD ಮಾಡಿಕೊಳ್ಳಿ.

ಕನ್ನಡ ಪ್ರಬಂಧ, ಸಾಮಾನ್ಯ ಜ್ಞಾನ, ತಂತ್ರಜ್ಞಾನ ಹಾಗೂ ಕನ್ನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಮಾಹಿತಿಗಳ Daily Update ಪಡೆಯಲು ನಮ್ಮ WhatsApp Group Join ಆಗಿ.

ವಿಷಯ ಬೆಳವಣಿಗೆ

Parisara Samrakshane Essay In Kannada
Parisara Samrakshane Essay In Kannada

ಪರಿಸರ ಎಂದರೇನು?

“ನಮ್ಮ ವಾತಾವರಣ ಅಥವಾ ಹಸಿರೇ” ಪರಿಸರವಾಗಿದೆ. ಈಗ ಆಧುನಿಕತೆ ಬೆಳೆದಂತೆಲ್ಲಾ ಪರಿಸರದ ವ್ಯಾಖ್ಯಾನಗಳೂ ಸಹ ಬದಲಾವಣೆ ಆಗಿವೆ. ಅದಾಗ್ಯೂ ಪರಿಸರದ ಕಲ್ಪನೆ ವಿಶಿಷ್ಟ ಹಾಗೂ ವೈವಿಧ್ಯಮಯವಾಗಿದೆ. ಸರಳವಾದ ಅರ್ಥದಲ್ಲಿ ಹೇಳುವುದಾದರೆ “ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ”.

ನಾವು ವಾಸಿಸುತ್ತಿರುವ ಪ್ರದೇಶ, ಪ್ರಕೃತಿ, ಗಿಡ-ಮರ, ಜೈವಿಕ ಮತ್ತು ಅಜೈವಿಕ ವಸ್ತುಗಳಿಂದ ಕೂಡಿರುವುದೇ ಪರಿಸರ. “ಎಲ್ಲಾ ಜೀವ ಸಂಕುಲಗಳ ಅಸ್ತಿತ್ವ ಮತ್ತು ಬೆಳವಣಿಗೆಗೆ ಅನುಕೂಲಕರ ಸ್ಥಿತಿಯನ್ನು ಉಂಟು ಮಾಡುವ ವಾತಾವರಣ ಅಥವಾ ವ್ಯವಸ್ಥೆಯನ್ನೇ” ನಾವು ಪರಿಸರ ಎಂದು ಕರೆಯುತ್ತೇವೆ.

ಭೂಮಿಯ ಮೇಲ್ಮೇ ಪ್ರದೇಶದ ಎಲ್ಲಾ ಅಂಶಗಳನ್ನೇ ಪರಿಸರ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲಿನ ಸುಂದರವಾದ ಮೇಲ್ಮೈ ವಾತಾವರಣ ಕಲುಷಿತಗೊಳ್ಳುತ್ತಿದೆ.

ಮನುಷ್ಯನ ಪ್ರಲೋಭಕ್ಕೆ ಸಿಲುಕಿ ಪ್ರಕೃತಿ ನಾಶವಾಗುತ್ತಿದೆ. ಪರಿಸರದ ಮುಖ್ಯ ಮೂಲಭೂತ ಅಂಶಗಳಾದ ಗಾಳಿ, ನೀರು, ಭೂಮಿ, ಅರಣ್ಯ, ಗಿಡ-ಮರಗಳು ವಿನಾಶಗೊಳ್ಳುತ್ತಿವೆ.

ಹೀಗಿರುವಾಗ ನಮ್ಮ ಭೂಮಂಡಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾದ್ರೆ ನಾವೀಗ ಪರಿಸರ ಸಂರಕ್ಷಣೆ ಎಂದರೇನು ಅನ್ನೋದನ್ನ ಈ ಕೆಳಗೆ ನೋಡೋಣ.

ಪರಿಸರ ಸಂರಕ್ಷಣೆ ಎಂದರೇನು?

“ನಾವು ವಾಸಿಸುತ್ತಿರುವ ಪ್ರದೇಶ, ವಾತಾವರಣ, ನೀರು, ಮಣ್ಣು, ಅರಣ್ಯ ಸೇರಿದಂತೆ ಪ್ರಕೃತಿಯ ಮೂಲ ಅಂಶಗಳಿಗೆ ಮತ್ತು ತಾಜಾತನಕ್ಕೆ ಧಕ್ಕೆಯಾಗದಂತೆ, ಸ್ವಚ್ಛತೆ ಕಾಪಾಡಿಕೊಳ್ಳುವುದನ್ನೇ” ಪರಿಸರ ಸಂರಕ್ಷಣೆ ಎಂದು ಕರೆಯುತ್ತಾರೆ. 

ನೈಸರ್ಗಿಕ ಸಂಪತ್ತನ್ನು ಅಂದರೆ ಪರಿಸರದ ಎಲ್ಲ ಜೀವ ಮತ್ತು ಸಸ್ಯ ಸಂಕುಲಗಳಿಗೆ ಆರೋಗ್ಯಕರ ವಾತಾವರಣ ಕಲ್ಪಿಸಿಕೊಟ್ಟು, ಬದುಕುವುದೇ ಪರಿಸರ ಸಂರಕ್ಷಣೆಯಾಗಿದೆ.

“ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು, ಆತನ ದುರಾಸೆಯನ್ನಲ್ಲ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ.

ಅವರ ಈ ಮಾತು ಇಂದಿಗೆ ಸಾಕಷ್ಟು ಹೊಂದಾಣಿಕೆಯಾಗುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದಲ್ಲಿರುವ ಸಂಪತ್ತನ್ನು ನಾಶ ಮಾಡುತ್ತಾ, ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿದ್ದಾನೆ.

ಹೀಗಿರುವಾಗ ತನ್ನ ಕುಕೃತ್ಯಗಳನ್ನು ಬದಿಗಿಟ್ಟು, ದುರಾಸೆಯನ್ನು ಬಿಟ್ಟು ಮನುಷ್ಯ ಪರಿಸರವನ್ನು ರಕ್ಷಣೆ ಮಾಡಬೇಕಿದೆ. ಹಾಗಾದ್ರೆ ಪರಿಸರವನ್ನ ಯಾಕೆ ರಕ್ಷಣೆ ಮಾಡಬೇಕು? ಅನ್ನೋದನ್ನ ಈ ಕೆಳಗೆ ನೋಡೋಣ. 

ನಾವು ಪರಿಸರ ರಕ್ಷಣೆ ಏಕೆ ಮಾಡಬೇಕು? Parisara Samrakshane Essay In Kannada

ಆಧುನಿಕತೆ ಬೆಳೆದು ನಿಂತಿದೆ. ಸಮಾಜ ವಿಸ್ತಾರಗೊಂಡಿದೆ. ಎಲ್ಲೆಂದರಲ್ಲಿ ಕಟ್ಟಗಳು, ಕೈಗಾರಿಕೆಗಳು, ವಸಾಹತು, ಬೃಹತ್ ತ್ಯಾಜ್ಯ ಹೀಗೆ ಮನುಷ್ಯ ಕೃತಕವಾಗಿ ತನ್ನದೇ ಸಾಮ್ರಾಜ್ಯ ನಿರ್ಮಾಣ ಮಾಡಿಕೊಂಡಿದ್ದಾನೆ.

ಇದಕ್ಕಾಗಿ ಭೂಒಡಲನ್ನು ಬಗೆದಿದ್ದಾನೆ. ಜೂನ್ 5 ರಂದು ಪರಿಸರ ದಿನಾಚರಣೆ ಮಾಡುವ ಮೂಲಕ ಪರಿಸರ ಆಂದೋಲನ ನಡೆಸಲಾಗುತ್ತದೆ. 1974 ರಲ್ಲಿ ವಿಶ್ವದಲ್ಲಿ ಮೊದಲ ಪರಿಸರ ದಿನಾಚರಣೆ ನಡೆಯಿತು.

  • ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿರುವ ಪ್ಲಾಸ್ಟಿಕ್ ಭೂಮಿಯ ತುಂಬ ಆವರಿಸಿದ್ದು, ಪ್ರಕೃತಿ ವಿಕೋಪ ಹೆಚ್ಚಿಸಿದೆ.
  • ಅತಿವೃಷ್ಟಿ, ಅನಾವೃಷ್ಟಿ, ಪ್ರಳಯ, ಮಣ್ಣು ಸವಕಳಿ, ಆಮ್ಲಜನಕ ಕೊರತೆ ಉಂಟಾಗಿ ಮನುಷ್ಯಕುಲ ವಿನಾಶಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಪರಿಸರ ಸಂರಕ್ಷಣೆ ಮಾಡಬೇಕಿದೆ. 
  • ಪರಿಸರದ ಜೀವ ವೈವಿಧ್ಯತೆಯಲ್ಲಿ ಎಲ್ಲಾ ಜೀವಿಗಳು ಒಂದಕ್ಕೊಂದು ಅವಲಂಬಿಸಿವೆ. ಈ ಆಹಾರ ಸರಪಳಿ ಮುರಿಯದಂತೆ ನೋಡಿಕೊಳ್ಳಬೇಕು. 
  • ಪೀಳಿಗೆಯಿಂದ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುತ್ತ ಕೊಡುಗೆ ನೀಡುವುದು ಮನುಷ್ಯನ ಹೊಣೆಗಾರಿಕೆ.
  • ಒಂದು ವೇಳೆ ಪರಿಸರದ ಸಮತೋಲನ ತಪ್ಪಿದರೆ, ಜಗತ್ತು ನಾಶವಾಗುತ್ತದೆ.
  • ನಾವು ಬದುಕಲು, ಭವಿಷ್ಯದ ಮಕ್ಕಳ ಬದುಕಿಗೆ ಹಾಗೂ ಭವಿಷ್ಯದ ಕೆಡುಕನ್ನು ತಡೆಯಲು ಪರಿಸರ ಸಂರಕ್ಷಣೆ ಅತೀ ಮುಖ್ಯವಾಗಿದೆ.

“ನಾವು ಯಾವ ಬೀಜ ಬಿತ್ತುತ್ತೇವೋ ಅದೇ ಫಲ ಪಡೆಯುತ್ತೇವೋ” ಎಂಬ ಮಾತಿದೆ. ಇದರರ್ಥ ನಾವು ಗಿಡ-ಮರ ಬೆಳೆಸಿ, ದುರಾಸೆ ಬಿಟ್ಟು, ಪರಿಸರದ ಜೊತೆಗೆ ಬಾಂಧವ್ಯ ಹೊಂದಬೇಕು.

ಸ್ವಚ್ಛತೆ ಕಾಪಾಡಿಕೊಂಡು ಬದುಕಬೇಕು. ಹೀಗಾದಾಗ ಮಾತ್ರ ನಾವು ಪರಿಸರದಿಂದ ಒಳ್ಳೆಯ ಮಳೆ, ಬೆಳೆ ಪಡೆದು ಉನ್ನತಿ ಹೊಂದಲು ಸಾಧ್ಯ.

ಇಲ್ಲದಿದ್ದರೆ ನಮ್ಮ ಕತ್ತನ್ನು ಕಟುಕನಿಗೆ ನಾವೇ ಕೊಟ್ಟಂತಾಗುತ್ತದೆ. ಹಾಗಾಗಿ ನಾವು ಮೊದಲು ಪರಿಸರದ ಮಹತ್ವವನ್ನು ಅರಿತು ಬದುಕಬೇಕಿದೆ.

ಪರಿಸರದ ಮಹತ್ವವೇನು? prabandha parisara samrakshane essay in kannada

ಮನುಷ್ಯ ಮತ್ತು ಪರಿಸರದ ನಡುವಿನ ಸಂಬಂಧ ಶಾಶ್ವತವಾದದ್ದು.” ಪರಿಸರ ಚೆನ್ನಾಗಿದ್ದರೆ ನಾವು, ಇಲ್ಲದಿದ್ದರೆ ನಮ್ಮ ನಾಶ” ಎಂಬ ಮಾತಿದೆ.

ವಾತಾವರಣ ಬದಲಾವಣೆ, ಹವಾಮಾನ ಬದಲಾವಣೆ, ಸಸ್ಯ ಸಂಪತ್ತು, ಪ್ರಾಣಿ ಸಂಕುಲ, ಅರಣ್ಯ ನಾಶ ಇದೆಲ್ಲವೂ ಭೂಮಿಯ ಮೇಲೆ ಬದುಕುವ ಪ್ರತೀ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ.

‘ನಾವು ಬದುಕಬೇಕು, ಇತರರನ್ನು ಬಾಳಲು ಬಿಡಬೇಕು’ ಎಂದು ಹೇಳುವುದನ್ನು ನೀವು ಕೇಳಿರಬಹುದು. ಪ್ರಕೃತಿಯ ಈ ಸುಂದರ ಸೃಷ್ಟಿಯಲ್ಲಿ ಎಲ್ಲಾ ಜೀವಿಗಳು ಬದುಕುವ ಹಕ್ಕು ಹೊಂದಿವೆ.

ಪರಿಸರ ಇದ್ದರೆ ಮಾತ್ರ ಬದುಕಿದೆ. ಹಾಗಾಗಿ ಉತ್ತಮ ಪರಿಸರ ಬೇಕೇ ಬೇಕು.

೧. ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ, ಕೈಗಾರಿಕೆ, ನೌಕರಿ, ಮನೆಗೆಲಸ, ಕಾರ್ಮಿಕ ವೃತ್ತಿಯನ್ನು ಅವಲಂಬಿಸಿದ್ದಾರೆ. ಇದೆಲ್ಲವೂ ನಮಗೆ ಸಿಗೋದೇ ಪರಿಸರದಲ್ಲಿ ಹಾಗಾಗಿ ನಾವು ಪರಿಸರವನ್ನ ರಕ್ಷಿಸಬೇಕು. 

೨. ಹೆಚ್ಚಿನ ಜನರು ಆಹಾರ, ಔಷಧ ಮತ್ತು ಆಶ್ರಯಕ್ಕಾಗಿ ಪರಿಸರವನ್ನು ಅವಲಂಬಿಸಿದ್ದಾರೆ. ಅದರಲ್ಲಿ 1.5 ಬಿಲಿಯನ್ ಗಿಂತಲೂ ಹೆಚ್ಚು ಜನರು ಕಾಡನ್ನು ನಂಬಿ ಜೀವನ ಮಾಡುತ್ತಿದ್ದಾರೆ.

ಸುಮಾರು 2 ಬಿಲಿಯನ್ ಅಂದ್ರೆ ವಿಶ್ವದ ಜನಸಂಖ್ಯೆಯ ಸುಮಾರು 27 ಪ್ರತಿಶತ ಜನರು ಕೃಷಿಯನ್ನು ಅಲವಲಂಬಿಸಿದ್ದಾರೆ. ಬೆಳೆ ಬಾರದಿದ್ದರೆ ಬದುಕಿಗೆ ಫುಲ್ ಪಾಯಿಂಟ್ ಇಡಬೇಕಾಗುತ್ತದೆ.

ಇನ್ನು 3 ಬಿಲಿಯನ್ ಜನರು ಸಾಗರ ಅಂದ್ರೆ ಸಮುದ್ರವನ್ನು ಆಶ್ರಯಿಸಿದ್ದಾರೆ. ಮೀನುಗಾರಿಕೆ ನಡೆಸಿ ಬದುಕು ಕಂಡುಕೊಂಡಿದ್ದಾರೆ. 

೩. ಪರಿಸರದ ಕಾಳಜಿ ಮಾಡಿದರೆ ಹೊಸ ಉದ್ಯೋಗ ರಚನೆಯಾಗುತ್ತದೆ. ಪರಿಸರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಹಸಿವು, ಬಡತನ ನಿವಾರಣೆ ಆಗುತ್ತದೆ.

ಹಸಿರು ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡುವುದರಿಂದ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತದೆ. ಹಾಗಾಗಿ ಪರಿಸರ ಬೇಕು. 

೪. ವೈವಿಧ್ಯಮಯ ಪರಿಸರ ಆಹಾರ ಭದ್ರತೆ ನೀಡುತ್ತದೆ. ಪರಿಸರದಲ್ಲಿ ಜೀವವೈವಿಧ್ಯತೆಯ ನಷ್ಟ ಸಾಕಷ್ಟು ಋಣಾತ್ಮಕ ಪರಿಣಾಮ ಬೀರುತ್ತದೆ.

೫. ಪ್ರತೀ 10ರಲ್ಲಿ 9 ಜನರು ಕಲುಷಿತ ಗಾಳಿಯನ್ನೇ ಉಸಿರಾಡುತ್ತಾರೆ. ಮರಗಳು ಗಾಳಿಯನ್ನು ಶುದ್ಧೀಕರಿಸುತ್ತವೆ. ಹಾಗಾಗಿ ಪರಿಸರ ಬೇಕು.

೬. ಅನಾರೋಗ್ಯಕರ ವಾತಾವರಣ, ಸ್ವಚ್ಛ ಮತ್ತು ಶುದ್ಧ ನೀರು, ಗಾಳಿ ಕೊರತೆ ಮತ್ತು ಪರಿಸರದ ಅಂಶಗಳು ಮಕ್ಕಳ ಹಾಗೂ ಶಿಶುಗಳ ಸಾವಿಗೆ ಕಾರಣವಾಗುತ್ತಿದೆ. 

೭. ಹೆಚ್ಚಿನ ಔಷಧಗಳು ನೈಸರ್ಗಿಕ ಮೂಲವನ್ನು ಅವಲಂಬಿಸಿವೆ. ಗಿಡಮೂಲಿಕೆಗಳು ಸಿಗೋದೇ ಪರಿಸರದಲ್ಲಿ. 15 ಸಾವಿರ ಔಷಧೀಯ ಸಸ್ಯಗಳು ಅಳಿವಿನಂಚಿನಲ್ಲಿವೆ. ಇದು ಮನುಷ್ಯನ ಬದುಕುಳಿಯುವ ಸಂಭವವನ್ನು ಕಡಿಮೆ ಮಾಡುತ್ತದೆ. 

೮. ಹಸಿರು ವಾತಾವರಣ, ಮನುಷ್ಯನ ಹಾಗೂ ಮಕ್ಕಳ ಬೆಳವಣಿಗೆ, ಸದೃಢ ದೇಹ ಹಾಗೂ ಸಂತೋಷ, ಜೀವನಶೈಲಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರ ಬೇಕು. 

ಒಟ್ಟಾರೆಯಾಗಿ ನಾವು ಪರಿಸರವನ್ನು ಸಂರಕ್ಷಿಸಬೇಕಾದರೆ ಮೊದಲು ವಿವಿಧ ಸ್ತರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಬೇಕು.

ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ 

ಮನುಷ್ಯನ ಅತಿಯಾಸೆ, ದುರಹಂಕಾರ ಹಾಗೂ ಕೃತಕ ವೈಭವೋಪೇರಿತ ಸಂಗತಿಗಳು ಪರಿಸರದ ಮಾಲಿನ್ಯಕ್ಕೆ ಕಾರಣವಾಗಿವೆ.

ನೀರು, ಗಾಳಿ, ಶಬ್ದ, ಮಣ್ಣು ಮಾಲಿನ್ಯಕ್ಕೆ ತುತ್ತಾಗುತ್ತಿವೆ. ಇದು ಮುಂದೊಂದು ದಿನ ಜಗತ್ತಿನ ವಿನಾಶಕ್ಕೆ ಕಾರಣವಾಗುತ್ತದೆ. 

ವಾಯು ಮಾಲಿನ್ಯ: ಹೆಚ್ಚುತ್ತಿರುವ ವಾಹನಗಳು, ಕೈಗಾರಿಕೆಗಳ ಹೊಗೆ, ಎಲ್ಲೆಂದರಲ್ಲಿ ತಲೆ ಎತ್ತಿರುವ ಕಟ್ಟಗಳು, ಗಿಡ-ಮರಗಳ ನಾಶದಿಂದಾಗಿ ವಾಯು ಅಂದರೆ ಗಾಳಿಯು ಮಲಿನಗೊಳ್ಳುತ್ತಿದೆ.

ನಾವು ಸೇವಿಸುವ ಗಾಳಿ, ಹೊಗೆಯಿಂದ ವಿಷವಾಗುತ್ತಿದೆ. ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಆಕ್ಸೈಡ್ ನಂತಹ ಅನಿಲಗಳ ಹೊರ ಸೂಸುವಿಕೆ ಗಾಳಿಯನ್ನು ವಿಷಪೂರಿತವಾಗಿಸುತ್ತಿವೆ. 

ಜಲ ಮಾಲಿನ್ಯ: ನಾವು ಕುಡಿಯುವ ನೀರು ಇಂದು ಮಲೀನವಾಗಿದೆ. ಹೆಚ್ಚುತ್ತಿರುವ ಕೈಗಾರಿಕೆಗಳು, ತ್ಯಾಜ್ಯ ಉತ್ಪನ್ನಗಳು, ಒಳಚರಂಡಿ ನೀರು ನದಿ, ಹಳ್ಳ-ಕೊಳ್ಳಗಳನ್ನು ಸೇರುತ್ತಿದೆ.

ಇದರಿಂದ ನೀರು ಕಲುಷಿತಗೊಂಡಿದ್ದು, ಅದೇ ನೀರು ಫಿಲ್ಟರ್ ಆಗಿ ಮಾನವನ ದೇಹ ಸೇರುತ್ತಿದೆ. ಇದು ಮಾನವನ ಜೀವಕ್ಕೆ ಕುತ್ತು ತಂದಿದೆ.

ಕೃಷಿಗೆ ಬಳಸುವ ರಸಗೊಬ್ಬರ, ಕ್ರಿಮಿನಾಶಕಗಳು ಜಲಮೂಲಗಳನ್ನು ವಿಷವಾಗಿಸುತ್ತಿದೆ. ಇದು ಹಲವು ಜಲಚರ ಜೀವಿಗಳಿಗೆ ಹಾನಿ ಉಂಟು ಮಾಡುವುದಲ್ಲದೆ ಹಲವು ರೋಗಗಳಿಗೆ ಕಾರಣವಾಗಿದೆ.

ಮಣ್ಣು ಮಾಲಿನ್ಯ: ಎಲ್ಲೆಂದರಲ್ಲಿ ಎಸೆಯುವ ಕಸ, ಕಾರ್ಖಾನೆಗಳ ಘನ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು, ಪಾಲಿಥಿನ್, ಮಣ್ಣಿನಲ್ಲಿ ಕೊಳೆಯದ ತ್ಯಾಜ್ಯಗಳು, ಬಾಟಲಿಗಳು ಮಣ್ಣನ್ನು ಹಾಳು ಮಾಡುತ್ತಿವೆ. ಮೈನಿಂಗ್, ವರ್ಷ ಪೂರ್ತಿ ಬೇಸಾಯ, ಬೆಟ್ಟ-ಗುಡ್ಡಗಳನ್ನು ಕಡಿಯುವುದು, ಮರಗಳ ನಾಶ ಇವುಗಳೂ ಮಣ್ಣನ್ನು ಹಾನಿ ಮಾಡುತ್ತಿದೆ. 

ಶಬ್ದ ಮಾಲಿನ್ಯ: ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಕೈಗಾರಿಕೆಯ ಶಬ್ದ, ವಾಹನಗಳ ಹಾರ್ನ, ಡಿಜೆ ಸಂಗೀತ, ಧ್ವನಿವರ್ಧಕಗಳು, ಪಟಾಕಿ ಹೊಡೆಯುವುದು ಹಾಗೂ ಗಣಿಗಾರಿಕೆಯಿಂದಾಗಿ ಶಬ್ದ ಮಾಲಿನ್ಯ ಹೆಚ್ಚುತ್ತಿದೆ.

ಇದು ಜನರ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ. 

ಹವಾಮಾನ ಬದಲಾವಣೆ: ವಾತಾವರಣದಲ್ಲಿ ಉಂಟಾಗುವ ಬದಲಾವಣೆಗೆ ಮಾಲಿನ್ಯ ಕಾರಣ. ಭೌತಿಕ, ಜೈವಿಕ ಘಟಕಗಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಓಝೋನ್ ಸವಕಳಿ, ಹಸಿರು ಮನೆ ಅನಿಲ, ಜಾಗತಿಕ ತಾಪಮಾನ ಹೆಚ್ಚುತ್ತದೆ.

ಹೀಗೆ ವಿವಿಧ ರೀತಿಯಲ್ಲಿ ಕಲುಷಿತವಾಗುತ್ತಿರುವ ಪರಿಸರವನ್ನು ಹಂತಹಂತವಾಗಿ ಸಂರಕ್ಷಣೆ ಮಾಡಬೇಕಿದೆ. 

ಪರಿಸರ ಸಂರಕ್ಷಣೆಯ ವಿಧಾನಗಳು

  1. ಅರಣ್ಯೀಕರಣ ಮತ್ತು ಮರು ಅರಣ್ಯೀಕರಣ
  2. ಮನೆಗೊಂದು ಮರ, ಊರಿಗೊಂದು ವನ ಪದ್ಧತಿ ಅಳವಡಿಕೆ ಮಾಡಿಕೊಳ್ಳುವುದು.
  3. ಎಲ್ಲಿ ಮರಗಳನ್ನು ಕಡಿಯುತ್ತಾರೋ ಅದಕ್ಕೆ ಪರ್ಯಾಯವಾಗಿ ಅಷ್ಟೇ ಪ್ರಮಾಣದಲ್ಲಿ ಗಿಡ ನೆಡುವ ವಿಧಾನ ಅನುಸರಿಸುವುದು.
  4. ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡುವ ಟ್ರೀ ಶಿಫ್ಟಿಂಗ್ ಮಾರ್ಗ ಅನುಸರಿಸುವುದು. 
  5. ಬೇಸಾಯದಲ್ಲಿ ಅಡ್ಡ ಉಳುಮೆ ಪದ್ಧತಿ ಅನುಸರಿಸುವುದು.
  6. ರಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಕೆ ಮಾಡಬೇಕು.
  7. ಹುಲ್ಲುಗಾವಲು ಭೂಮಿಯ ರಕ್ಷಣೆ ಮಾಡಬೇಕು.
  8. ಪ್ರತೀ ಮೂರು ವರ್ಷಕ್ಕೊಮ್ಮೆ ಕೃಷಿ ಭೂಮಿಯನ್ನು ಫಲವತ್ತತೆಗಾಗಿ ಬಿಡುವುದು.
  9. ಮಣ್ಣಿನ ಪರೀಕ್ಷೆ ಮಾಡಿಸುವುದು.
  10. ಮಳೆ ಕೊಯ್ಲು, ನೀರು ಸಂಗ್ರಹ, ಇಂಗು ಗುಂಡಿಗಳ ರಚನೆ, ಕೆರೆ, ಬಾವಿ ಹೂಳೆತ್ತುವುದು.
  11. ಕಾರ್ಖಾನೆಗಳ ತ್ಯಾಜ್ಯ ನೀರು ನದಿಮೂಲಗಳಿಗೆ ಹೋಗದಂತೆ ತಡೆಯುವುದು.
  12. ಘನ ತ್ಯಾಜ್ಯ, ಪ್ಲಾಸ್ಟಿಕ್ ಮರು ಬಳಕೆ, ಕೈಗಾರಿಕೆ ಹೊಗೆ ತಡೆಗೆ ಪರ್ಯಾಯ ಮಾರ್ಗ ಬಳಸುವುದು.
  13. ಸ್ವಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  14. ಕಾಡು ನಾಶ, ಕಲುಷಿತ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ತಪ್ಪಿಸುವುದು. 
  15. ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಜಾಥಾ ಕಾರ್ಯಕ್ರಮ, ಬೀದಿ ನಾಟಕ, ಸರ್ಕಾರಿ ಯೋಜನೆ, ಸಾರ್ವಜನಿಕ ಜಾಗೃತಿ ಸಮಿತಿ ರಚಿಸುವ ಮಾರ್ಗ ಅನುಸರಿಸುವುದು.

ಪರಿಸರ ಸಂರಕ್ಷಣೆಗಾಗಿ ಇಂತಹ ಹಲವು ಮಾರ್ಗಗಳು ಸಹಕಾರಿ.

ಪರಿಸರ ಮಾಲಿನ್ಯ ತಡೆದು ರಕ್ಷಣೆ ಮಾಡಲು 1986ರಲ್ಲಿ ಕಾಯ್ದೆ ಜಾರಿ ಮಾಡಲಾಯಿತು.

ಪರಿಸರ ಸಂರಕ್ಷಣಾ ಕಾಯ್ದೆ 1986

ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆ, ಪರಿಸರ ಹಾನಿ, ವಾಯು, ನೀರು, ಶಬ್ದ, ಮಣ್ಣು ಮಾಲಿನ್ಯ ತಡೆಗೆ ಪರಿಸರ ಸಂರಕ್ಷಣಾ ಕಾಯಿದೆಯನ್ನು 1986ರಲ್ಲಿ ಜಾರಿ ಮಾಡಲಾಯಿತು.

ಈ ಕಾಯ್ದೆಯ ಕೆಲವು ಪ್ರಯೋಜನಗಳು ಈ ಕೆಳಗಿಂತಿವೆ:

  • ಪರಿಸರ ಸಂರಕ್ಷಣಾ ಕಾಯ್ದೆ ಎಲ್ಲಾ ರೀತಿಯ ಮಾಲಿನ್ಯವನ್ನು ಒಳಗೊಂಡಿದೆ.
  • ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲಾ ಅಂಶಗಳ ವಿರುದ್ಧ ಕ್ರಮ ಜರುಗಿಸಲು ಈ ಕಾಯ್ದೆ ದಾರಿ ಮಾಡಿ ಕೊಟ್ಟಿದೆ.
  • ಪರಿಸರಕ್ಕೆ ಹಾನಿ ಉಂಟು ಮಾಡುವ ಮಾಲಿನ್ಯಕಾರಕಗಳ ವಿರುದ್ಧ ನಿಷೇಧ ಹಾಗೂ ಮಾನದಂಡ ಒದಗಿಸುವ ಅನುಮತಿ ನೀಡುತ್ತದೆ. 
  • ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಮತ್ತು ಪರಿಸರದ ಹಾನಿ ಸುಧಾರಿಸಲು ಸಹಾಯ ಮಾಡುತ್ತದೆ.
  • ಕೈಗಾರಿಕೆ, ಕಾರ್ಖಾನೆಗಳ ಮಲಿನ ನೀರು, ಅನಿಲ ಹೊರಸೂಸುವಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅನುವು ಮಾಡಿ ಕೊಟ್ಟಿದೆ.
  • ಎಲ್ಲಾ ರೀತಿಯ ಕ್ರಮ, ನಿಯಮ, ಮಾನದಂಡ ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಕೊಟ್ಟಿದೆ.

ಇನ್ನು ಪರಿಸರ ಸಂರಕ್ಷಣೆಯನ್ನು ಎಲ್ಲಾ ವಯೋಮಾನದವರು, ಯಾವುದೇ ಲಿಂಗ ಭೇದವಿಲ್ಲದೆ ಮಾಡುವ ಕರ್ತವ್ಯ ಎಲ್ಲರ ಮೇಲಿದೆ. ಅದರಲ್ಲೂ ಪರಿಸರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಮಖ್ಯವಾಗಿದೆ.

ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ 

ಭಾರತೀಯ ಜನಸಂಖ್ಯೆಯ ಸುಮಾರು 70 ಪ್ರತಿಶತ ಕುಟುಂಬಗಳು ಗ್ರಾಮೀಣ ಭಾಗದಲ್ಲಿ ಬದುಕು ಕಟ್ಟಿಕೊಂಡಿವೆ.

ಹೀಗಿರುವಾಗ ಗ್ರಾಮಗಳಲ್ಲಿ ಮನೆಯ ಜವಾಬ್ದಾರಿ ಹೊರುವವರು, ಕೃಷಿ ಚಟುವಟಿಕೆ ಹಾಗೂ ವ್ಯಾಪಾರ ಸೇರಿದಂತೆ ಹಲವು ಕೆಲಸ ಮಾಡುವವರಲ್ಲಿ ಮಹಿಳೆಯರ ಪಾತ್ರವೇ ಹಿರಿದು. ಹಾಗಾಗಿ ಮಹಿಳೆ ಪರಿಸರದ ಜೊತೆ ಹೆಚ್ಚು ಒಡನಾಟ ಹೊಂದುತ್ತಾಳೆ. 

ಮನೆಯಲ್ಲಿ ಅಡುಗೆ ಮನೆ ಸೇರಿದಂತೆ ಮನೆಯ ಸುತ್ತಮುತ್ತಲಿನ ಸ್ವಚ್ಛತೆ, ಬೆಳೆಗಳ ಸ್ವಚ್ಛತೆ, ತರಕಾರಿ, ಸಸಿಗಳ ಆರೈಕೆ, ಮರ-ಗಿಡಗಳ ಪೋಷಣೆ, ಕುಡಿಯಲು ನೀರು ತರುವುದು ಸೇರಿದಂತೆ ಹಲವು ಕೆಲಸಗಳನ್ನು ಮಹಿಳೆಯರೇ ನಿಭಾಯಿಸುತ್ತಾರೆ. ಹಾಗಾಗಿ ಮಹಿಳೆ ಸ್ವಚ್ಛತೆ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಜಾಗ್ರತೆ ವಹಿಸಬೇಕು. 

ಕುಟುಂಬದ ಸದಸ್ಯರಿಗೆ ನೀರು ಪೋಲು ಮಾಡದಂತೆ ನೀರು ಉಳಿತಾಯದ ಬಗ್ಗೆ ಮಹಿಳೆ ಅರಿವು ಹೊಂದಿದ್ದರೆ, ಮನೆಯ ಸದಸ್ಯರಿಗೆ, ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ತಿಳಿ ಹೇಳಬೇಕು. ಕಚ್ಚಾ ವಸ್ತುಗಳ ಮರು ನಿರ್ಮಾಣದ ಐಡಿಯಾ ಮಾಡಿ, ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಕಲೆ ಹೊಂದಿದವರು ಮಹಿಳೆಯರು. 

ಬುಡಕಟ್ಟು ಮಹಿಳೆಯರು ಕೃಷಿ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು. ಚಳವಳಿ, ಸಾಲುಮರದ ತಿಮ್ಮಕ್ಕನವರಂತೆ ಮರ-ಗಿಡಗಳ ಪೋಷಣೆ, ಸ್ವಚ್ಛತೆ ಕಾಪಾಡುವುದು.

ಕಡಿಮೆ ಪ್ಲಾಸ್ಟಿಕ್ ಬಳಕೆ, ಪ್ರಾಣಿಗಳ ಬಗ್ಗೆ ಕಾಳಜಿ ಹೀಗೆ ಪರಿಸರದ ಪ್ರತಿ ಹಂತದಲ್ಲಿ ಮಹಿಳೆ ಹೆಚ್ಚು ಸಂಬಂಧ ಹೊಂದಿದ್ದಾಳೆ. ಹಾಗಾಗಿ ಮಹಿಳೆ ಮನಸ್ಸು ಮಾಡಿದರೆ ಪರಿಸರ ಸಂರಕ್ಷಣೆ ಸಾಧ್ಯ. 

ಕೇವಲ ಮಹಿಳೆ ಮಾತ್ರವಲ್ಲ, ವಿದ್ಯಾರ್ಥಿಗಳೂ ಸಹ ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ 

ಮಕ್ಕಳೇ ಭವಿಷ್ಯದ ಪ್ರಜೆಗಳು. ಹಾಗಾಗಿ ಭವಿಷ್ಯದ ಪರಿಸರದಲ್ಲಿ ಬದುಕುವವರು ಮಕ್ಕಳೇ ಆಗಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಬಾಲ್ಯದಲ್ಲೇ ಮಕ್ಕಳಿಗೆ ಪರಿಸರದ ಕುರಿತು ಸರಿಯಾದ ತಿಳಿವಳಿಕೆ ಮೂಡಿಸುವುದು ಭವಿಷ್ಯಕ್ಕೆ ಪರಿಸರ ರಕ್ಷಣೆ ಸಹಕಾರಿ ಆಗುತ್ತದೆ. 

ಹಾಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯ ಪಾಠ ಹೇಳಿ ಕೊಡಬೇಕು. 

  • ಶಾಲೆ, ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಡುವುದು ಮತ್ತು ಶಿಕ್ಷಕರು, ಪೋಷಕರ ಸಹಾಯದಿಂದ ಜಾಥಾ ಜಾಗೃತಿ ಕಾರ್ಯಕ್ರಮ ನಡೆಸಬೇಕು. 
  • ಪರಿಸರ ಸಂರಕ್ಷಣೆಯ ಕುರಿತ ಬೀದಿ ನಾಟಕ, ಸಾಂಸ್ಕೃತಿ ಚಟುವಟಿಕೆ, ಪ್ರಬಂಧ, ಚಿತ್ರಕಲೆ ಸ್ಪರ್ಧೆ ನಡೆಸುವ ಮೂಲಕ ಅರಿವು ಮೂಡಿಸುವುದು.   
  • ಕೆರೆ, ನದಿ, ನಾಲೆ ಸ್ವಚ್ಛತೆ, ಸಾವಯವ ಗೊಬ್ಬರ ಬಳಕೆ, ಕೃಷಿಯ ಬಗ್ಗೆ ಜ್ಞಾನ ಪಡೆಯುವುದು
  • ಮಕ್ಕಳಿಗೆ ಮಣ್ಣು, ನೀರು, ಗಾಳಿ, ಬೇಸಾಯದ ಬಗ್ಗೆ ತಿಳಿದುಕೊಳ್ಳುವುದು.
  • ಮರಗಿಡಗಳನ್ನು ಉಳಿಸಿ ಬೆಳೆಸುವುದು
  • ತ್ಯಾಜ್ಯ ಎಸೆಯದಂತೆ, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದು
  • ಪರಿಸರ ಸ್ನೇಹಿ ಚಟುವಟಿಕೆ, ಪೇಪರ್ ಬ್ಯಾಗ್ ಬಳಕೆ
  • ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡುವುದು.

ಪರಿಸರದ ರಕ್ಷಣೆಯಲ್ಲಿ ಮಕ್ಕಳ, ಮಹಿಳೆಯರದ್ದು ಮಾತ್ರವಲ್ಲ, ವನ್ಯಜೀವಿಗಳ ಪಾತ್ರವೂ ಮಹತ್ವದ್ದಾಗಿದೆ. 

ಪರಿಸರದ ಸಂರಕ್ಷಣೆಯಲ್ಲಿ ವನ್ಯ ಜೀವಿಗಳ ಪಾತ್ರ 

ವನ್ಯ ಜೀವಿಗಳು ರಾಷ್ಟ್ರದ ಸಂಪತ್ತು. ಪರಿಸರದ ಅವಿಭಾಜ್ಯ ಅಂಗ. ಇವು ಜೈವಿಕ ಸರಪಳಿಯ ಪ್ರಮುಖ ಭಾಗವಾಗಿವೆ. ಪರಿಸರ ಸಮತೋಲನ ಕಾಪಾಡಿಕೊಳ್ಳಲು ವನ್ಯಜೀವಿಗಳ ಪಾತ್ರ ದೊಡ್ಡದು.

ಆದರೆ ಕೃಷಿ, ಕೈಗಾರಿಕೆ, ರಸ್ತೆ ನಿರ್ಮಾಣ, ವಸಾಹತು ಸೇರಿದಂತೆ ಇತರೆ ಚಟುವಟಿಕೆಗಳ ಪರಿಣಾಮ ಕಾಡು ಮಾಯವಾಗುತ್ತಿದೆ. ಕೆಲ ಪ್ರಾಣಿಗಳ ಸಂತತಿ ಅಳಿವಿನಂಚಿನಲ್ಲಿದೆ. 

ಆರ್ಥಿಕ, ಮನರಂಜನೆಯ ಭಾಗವಾಗಿರುವ ವನ್ಯ ಜೀವಿಗಳು ಪ್ರಕೃತಿಯ ಕೊಡುಗೆ. ಆರೋಗ್ಯಕರ ವ್ಯವಸ್ಥೆಗೆ ಕಾಡು ಪ್ರಾಣಿಗಳ ಕೊಡುಗೆ ಇದೆ.

ಕಾಡಿನಲ್ಲಿ ವನ್ಯ ಜೀವಿಗಳ ವಾಸವು, ಜನರ ದುರಾಸೆಗೆ ಸ್ವಲ್ಪ ಬ್ರೇಕ್ ಹಾಕಿದೆ. ಪ್ರಾಣಿಗಳ ಭಯದಿಂದ ಮನುಷ್ಯರು ಕಾಡಿನತ್ತ ಹೋಗಲು ಭಯ ಪಡುತ್ತಾರೆ.

ಇದರಿಂದ ವನ್ಯ ಸಂಪತ್ತು ಉಳಿಯುತ್ತದೆ. ಕಟ್ಟಿಗೆ ಕಳ್ಳತನ, ಮರಗಳ ಮಾರಣ ಹೋಮ, ಮನೆ ನಿರ್ಮಾಣ, ರೆಸಾರ್ಟ್ ನಿರ್ಮಾಣ ಪ್ರಮಾಣ ಕಡಿಮೆ ಇದೆ. 

ಹುಲ್ಲುಗಾವಲು, ಮರುಭೂಮಿ, ಬಯಲು ಪ್ರದೇಶ, ಮಳೆಕಾಡುಗಳು, ಪರಿಸರ ವ್ಯವಸ್ಥೆ ಸೇರಿದಂತೆ ಹಲವು ಕಡೆಗಳಲ್ಲಿ ವನ್ಯ ಜೀವಿಗಳ ಓಡಾಟವಿದೆ. ಇದು ಪರಿಸರದ ಸ್ಥಿರತೆ ಕಾಪಾಡುತ್ತದೆ. ಜೊತೆಗೆ ಆಹಾರ ಸರಪಳಿಯನ್ನು ಉಳಿಸುತ್ತದೆ. ಅಕ್ರಮ ಬೇಟೆಗೆ ಕಡಿವಾಣ ಹಾಕುವುದು ಪರಿಸರ ಸಂರಕ್ಷಣೆಯ ಮಾರ್ಗವಾಗಿದೆ.

ಇನ್ನು ಪರಿಸರದ ಕುರಿತ ಘೋಷಣೆಗಳ ಬಗ್ಗೆ ನೋಡೋಣ.

ಪರಿಸರದ ಬಗ್ಗೆ ಘೋಷಣೆಗಳು

Slogans About Environment In Kannada are given below:

  • ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
  • ಸೈಕಲ್ ಬಳಸಿ ಇಂಧನ ಉಳಿಸಿ
  • ಗಿಡ-ಮರ ಬೆಳೆಸಿ, ಪರಿಸರ ಉಳಿಸಿ
  • ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ
  • ಸಸ್ಯರಾಶಿ ಬೆಳೆಸಿ, ಜೀವಸಂಕುಲ ರಕ್ಷಿಸಿ
  • ಜೀವಿ ಪರಿಸರ ಸಂಬಂಧ ಅರಣ್ಯಗಳಿಂದ ಮಾತ್ರ ಸಾಧ್ಯ
  • ನಮ್ಮ ಕಾಡು ನಮ್ಮ ಹೆಮ್ಮೆ
  • ಕಾಡು ಬೆಳೆಸಿ, ನಾಡು ಉಳಿಸಿ
  • ಕಾಡಿದ್ದರೆ ನಾಡು, ನಾಡಿದ್ದರೆ ನಾವು
  • ಇರುವುದೊಂದೇ ಭೂಮಿ ದಯವಿಟ್ಟು ಸಂರಕ್ಷಿಸಿ

ಇನ್ನು ಪರಿಸರದ ಬಗ್ಗೆ ನುಡಿಮುತ್ತುಗಳನ್ನು ನೋಡೋಣ.

ಪರಿಸರದ ಬಗ್ಗೆ ನುಡಿಮುತ್ತುಗಳು:

1. ವರ್ಷಕ್ಕೊಮ್ಮೆ ಒಂದಾದರೂ ಗಿಡ ನೆಡುವ ಸಂಕಲ್ಪ ಮಾಡಬೇಕು

2. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅದರ ಉಳಿವಿಗೆ ಪೂರಕವಾಗುವ ಸಾಮಾನ್ಯ ಜ್ಞಾನ, ಪರಿಸರದ ಒಡನಾಟದಿಂದ ತಾನಾಗಿಯೇ ಬೆಳೆದು ಬರುತ್ತದೆ

3. ಭೂಮಿಯು ಸುಂದರವಾದ ವಧುವಿನಂತೆ, ಅವಳ ಸೌಂದರ್ಯವನ್ನ ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ- ಖಲೀಲ್ ಗಿಬ್ರಾನ್

4. ಪರಿಸರವೇ ಪ್ರಾಣ ಎಲ್ಲರಿಗೂ ಆಶ್ರಯ ತಾಣ

5. ಈಗ ಕಾಡುಗಳಿಲ್ಲದ, ಕಾಡು ಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ- ಪೂರ್ಣಚಂದ್ರ ತೇಜಸ್ವಿ

6. ಪ್ರಕೃತಿಯೇ ಮನುಷ್ಯನ ನಿಜವಾದ ಮಿತ್ರ. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಂಗತಿಗಳು ತಾನಾಗಿಯೇ ದೂರವಾಗುತ್ತವೆ. ಆದ್ದರಿಂದ ಪರಿಸರ ಜೀವ ಸಂಕುಲಕ್ಕೆ ಅತೀ ಅವಶ್ಯಕವಾಗಿದೆ. 

ಪರಿಸರದ ಉಪಯೋಗಗಳು

ಪರಿಸರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಪರಿಸರದ ಉಪಯೋಗ ಸಾಕಷ್ಟಿದೆ.

  • ಶುಧ್ಧ ಪರಿಸರ ಕಲುಷಿತ ಗಾಳಿಯ ಪ್ರಮಾಣ ಕಡಿಮೆ ಮಾಡುತ್ತದೆ. ಒಳ್ಳೆಯ ಗಾಳಿಯ ಉಸಿರಾಟ ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. 
  • ಸ್ವಚ್ಛ ಪರಿಸರ ವಾಯು ಮಾಲಿನ್ಯ ನಿಯಂತ್ರಿಸಿ ರೋಗ, ಸೋಂಕು ತಡೆಯುತ್ತದೆ.
  • ಶುದ್ಧ ನೀರು ಒಳ್ಳೆಯ ಅರೋಗ್ಯ ನೀಡುತ್ತದೆ.
  • ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
  • ಜೀವ ವೈವಿಧ್ಯತೆ ಮತ್ತು ಆವಾಸ ಸ್ಥಾನಗಳ ರಕ್ಷಣೆ ಮಾಡುತ್ತದೆ.
  • ಅತಿವೃಷ್ಟಿ, ಅನಾವೃಷ್ಟಿ, ಪ್ರಳಯ, ಹಸಿವಿನ ಕೊರತೆ, ಮೂಲ ಸೌಲಭ್ಯಗಳ ಕೊರತೆ ನಿವಾರಿಸುತ್ತದೆ.

ಉಪಸಂಹಾರ

ಹೀಗೆ ಪರಿಸರದಲ್ಲಿ ಬೆರೆತು ಹೋಗಿರುವ ಜೀವ ಸಂಕುಲ ಗಿಡ ನೆಡುವ ಮತ್ತು ಅರಣ್ಯ ಉಳಿಸುವ ಸಂಕಲ್ಪ ಮಾಡಬೇಕಿದೆ. ಪರಿಸರದ ಜೊತೆಗೆ ಸಹಬಾಳ್ವೆಯ ಅಗತ್ಯವಿದೆ.

ಹೆಚ್ಚಿರುವ ಮಾಲಿನ್ಯ, ಪರಿಸರದ ವಿಕೋಪಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಮನುಷ್ಯ ಸಂಕುಲ ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದೆ.

ಮನುಷ್ಯನ ಕೃತಕ ಚಟುವಟಿಕೆ, ಅತಿಯಾಸೆಯ ಪರಿಣಾಮ ಪರಿಸರ ಹಾಳಾಗುತ್ತಿದೆ. ಅನಾಹುತ ಸಂಭವಿಸುವ ಮೊದಲೇ ಮನುಷ್ಯ ಎಚ್ಚೆತ್ತು ಪರಿಸರದ ಸ್ವಚ್ಛತೆ, ಉಳಿವಿಗೆ ಶ್ರಮಿಸಬೇಕಿದೆ. ಇದಕ್ಕೆ ನಿವೇನಂತೀರಾ?

FAQs On Parisara Samrakshane Essay In Kannada

1. ಪರಿಸರ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿ ವರ್ಷ ನವಂಬರ್ 26 ರಂದು ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

2. ಪರಿಸರದ ಅತ್ಯಂತ ಪ್ರಮುಖ ಸಮಸ್ಯೆ ಯಾವುದು?

ಜಾಗತಿಕ ತಾಪಮಾನದ ಏರಿಕೆಯು ಪ್ರಸ್ತುತ ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ.

3. ಮಾಲಿನ್ಯಕ್ಕೆ ಪ್ರಮುಖ ಕಾರಣಗಳು ಯಾವುವು?

ಘನ, ದ್ರವ ತ್ಯಾಜ್ಯ ಹಾಗೂ ಗಾಳಿಯಲ್ಲಿ ಸೇರುವ ವಿಷ ಕಣಗಳು ಮಾಲಿನ್ಯಗಳಿಗೆ ಪ್ರಮುಖ ಕಾರಣಗಳಾಗುತ್ತವೆ.

You have to wait 49 seconds.

Generating Download Link…

ಈ ಕೆಳಗಿನ ಪ್ರಬಂಧಗಳನ್ನೂ ಓದಿ.

ಪರಿಸರ ಸಂರಕ್ಷಣೆ – 2ಆನ್ಲೈನ್ ಶಿಕ್ಷಣ ಪ್ರಬಂಧ
ಯೋಗದ ಬಗ್ಗೆ ಪ್ರಬಂಧ ಕೃತಕ ಬುದ್ದಿಮತ್ತೆ ಪ್ರಬಂಧ
Parisara Samrakshane Essay In Kannada

ನಮ್ಮ ಈ Parisara Samrakshane Essay In Kannada ಲೇಖನದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ದಯವಿಟ್ಟು ಈ ಕೆಳಗೆ Comment ಮಾಡಿ.

Leave a Comment