Parisara Samrakshane Prabandha In Kannada – ಪರಿಸರ ಸಂರಕ್ಷಣೆ ಪ್ರಬಂಧ

ಈ ಲೇಖನದಲ್ಲಿ ಪರಿಸರ ಎಂದರೇನು?, ಪರಿಸರದ ಮಾಲಿನ್ಯಗಳು ಯಾವುವು?, ಪರಿಸರ ಸಂರಕ್ಷಣೆ ಎಂದರೇನು ಮತ್ತು ಅದನ್ನು ರಕ್ಷೆಣೆ ಹೇಗೆ ಎಂಬಿತ್ಯಾದಿಗಳ ಕುರಿತ ಮಾಹಿತಿಯನ್ನು ನೀವು ಪಡೆಯುವಿರಿ.

Here, we tried to give a piece of brief information about environmental protection as the name of Parisara Samrakshane Prabandha In Kannada.

ಪರಿಸರ ಎಂದರೇನು?

ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ನಮ್ಮ ಸುತ್ತಮುತ್ತಲಿನ  ಗಾಳಿ, ನೀರು, ಮರಗಿಡಗಳು, ಪ್ರಾಣಿಗಳು, ಮನುಷ್ಯರುಗಳೆಲ್ಲ ಪರಿಸರದ ಅಂಶಗಳು.

ಪರಿಸರ ಇಲ್ಲದೆ ಯಾವುದೇ ಜೀವನ ಸಾಗಲು ಸಾಧ್ಯವಿಲ್ಲ.

ಸೂಚನೆ: ನೀವು Parisara Samrakshane essay in kannada ಬರೆಯುವವರಾಗಿದ್ದರೆ ಪೀಠಿಕೆ, ವಿಷಯ ವಿವರಣೆ ಮತ್ತು ಉಪಸಂಹಾರಗಳೆಂದು  ಮೂರು ಮುಖ್ಯ ಭಾಗಗಳಾಗಿ ವಿಂಗಡಿಸುವುದಾಗಿರುತ್ತದೆ.


Parisara Samrakshane Prabandha In Kannada Language

ಯಾವುದೇ ದೇಶಾಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಪರಿಸರ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಒಂದು ದೇಶ ದೊಡ್ಡ ದೊಡ್ಡ ಕಾರ್ಖಾನೆಗಳನ್ನು, ಕಟ್ಟಡಗಳನ್ನು, ರಸ್ತೆಗಳನ್ನು ಹೊಂದಿದ ಮಾತ್ರಕ್ಕೆ ಅದನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನಲು ಸಾಧ್ಯವಿಲ್ಲ. ಜೊತೆಗೆ ಆರೋಗ್ಯಕರ ವಾತಾವರಣವನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿರುತ್ತದೆ.

ಆರೋಗ್ಯಕರ ಬದುಕಿಗೆ ಆರೋಗ್ಯಕರ ವಾತಾವರಣವು ಅವಶ್ಯವಾಗಿರುತ್ತದೆ. ಆದರೆ ಮನುಷ್ಯ ಅಭಿವೃದ್ಧಿಯ ನೆಪದಲ್ಲಿ ಪರಿಸರದ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ.

ಪರಿಸರ ಸಂರಕ್ಷಣೆ ಎಂದರೇನು?

ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳು ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮಾಡುವ ಅಭ್ಯಾಸವನ್ನು ಅಥವಾ ನಡೆಸುವ ಕ್ರಿಯೆಯನ್ನು ಪರಿಸರ ಸಂರಕ್ಷಣೆ ಎನ್ನುವರು.

ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಅಸ್ತಿತ್ವದಲ್ಲಿರುವ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಸಾಧ್ಯವಾದರೆ, ಹಾನಿಗೊಳಗಾಗಿರುವ ಪರಿಸರ ಸಂಪನ್ಮೂಲಗಳನ್ನು ಸರಿಪಡಿಸುವುದು ಇದರ ಉದ್ದೇಶಗಳು.

ಪ್ರಸ್ತುತ ದಿನಗಳಲ್ಲಿ ನಮ್ಮ ಗ್ರಹವನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆಗಳಲ್ಲಿ ಪರಿಸರ ಮಾಲಿನ್ಯ ಪ್ರಮುಖವಾದು.

ಪರಿಸರ ಮಾಲಿನ್ಯ ಎಂದರೇನು?

ಪರಿಸರ ಅಸಮತೋಲನವಾಗುವ ಮಟ್ಟಿಗೆ ಮಣ್ಣಿನ ಅಥವಾ ವಾತಾವರಣದಲ್ಲಾಗುವ ಭೌತಿಕ, ಜೈವಿಕ ಅಥವಾ ರಾಸಾಯನಿಕ ಬದಲಾವಣೆಯನ್ನು ಸಾಮಾನ್ಯವಾಗಿ ಪರಿಸರ ಮಾಲಿನ್ಯ ಎಂದು ಕರೆಯಲಾಗುತ್ತದೆ.

ಹಲವಾರು ಮಾಲಿನ್ಯ ಕಾರಕಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ.  ಮಾಲಿನ್ಯ ಕಾರಕಗಳ ಆಧಾರದ ಮೇಲೆ ಪರಿಸರ ಮಾಲಿನ್ಯವನ್ನು ಹಲವಾರು ವಿಧಗಳಾಗಿ ವಿಂಗಡಿಸಲಾಗುತ್ತದೆ.

ಓದಿ: ಪುನೀತ್ ರಾಜಕುಮಾರ್ ಜೀವನ ಚರಿತ್ರೆ


ಪರಿಸರ ಮಾಲಿನ್ಯ ವಿಧಗಳು 

 • ವಾಯು ಮಾಲಿನ್ಯ
 • ಜಲ ಮಾಲಿನ್ಯ
 • ಮಣ್ಣು/ ಭೂ ಮಾಲಿನ್ಯ
 • ಶಬ್ದ ಮಾಲಿನ್ಯ
 • ಉಷ್ಣ ಮಾಲಿನ್ಯ
 • ವಿಕಿರಣ ಮಾಲಿನ್ಯ

ಓದಿ: ಜಲ ಮಾಲಿನ್ಯ ಪ್ರಬಂಧ

ಪರಿಸರ ಮಾಲಿನ್ಯವು ಜೀವವೈವಿಧ್ಯ, ಸಸ್ಯವರ್ಗ, ಪ್ರಾಣಿ-ಪಕ್ಷಿ ಸಂಕುಲಗಳ ವಿನಾಶಕ್ಕೆ ಕಾರಣವಾಗುವುದಲ್ಲದೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಮುಂಬರುವ ಹಲವಾರು ಸಮಸ್ಯೆಗಳಿಂದ ನಾವು ಪಾರಾಗಬೇಕೆಂದರೆ ನಾವು ಪರಿಸರವನ್ನು ಸಂರಕ್ಷಿಸುವುದು ಅತ್ಯಗತ್ಯ.

ಪರಿಸರ ಸಂರಕ್ಷಣೆ: ನಾವು ಪರಿಸರವನ್ನು ಸಂರಕ್ಷಿಸಲು ಪಾಲಿಸಬೇಕಾದ ಕೆಲವು ಸಲಹೆಗಳು ಈ ಕೆಳಗಿನಂತಿವೆ;

 1. ಮರಗಿಡಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕು
 2. ಎಲ್ಲೆಂದರಲ್ಲಿ ಕಸ ಮತ್ತು ತಾಜ್ಯಗಳನ್ನು ಎಸೆಯಬಾರದು
 3. ಕಡಿಮೆ ದೂರದ ಪ್ರಯಾಣಕ್ಕೆ ಕಾಲ್ನಡಿಗೆ ಅಥವಾ ಸೈಕಲ್ ಗಳನ್ನು ಬಳಸುವುದು
 4. ಹೊಗೆ ಉಗುಳುವ ವಾಹನಗಳ ಬದಲಿಗೆ ಹೊಸ ವಾಹನಗಳನ್ನು ಬಳಸುವುದು
 5. ಕಟ್ಟಿಗೆಗಳನ್ನು ಸುಡುವುದು ಅಥವಾ ಸೀಮೆಎಣ್ಣೆಯನ್ನು ಬಳಸುವುದನ್ನು ಕಡಿಮೆ ಮಾಡುವುದು
 6. ಎಲ್ ಇ  ಡಿ ಬಲ್ಬ್ ಗಳನ್ನು ಬಳಸುವುದು
 7. ಉದುರಿದ ಮರದ ಎಲೆಗಳನ್ನು, ಅಥವಾ ಇನ್ನಿತರ ಕಸಕಡ್ಡಿಗಳನ್ನು ಸುಡುವುದರ ಬದಲಿಗೆ ಕಾಂಪೋಸ್ಟ್ ಗೊಬ್ಬರಗಳ ತಯಾರಿಕೆಯಲ್ಲಿ ಬಳಸುವುದು
 8. ಪ್ಲಾಸ್ಟಿಕ್ ಅನ್ನು ಸುಡುವುದನ್ನು ನಿಲ್ಲಿಸುವುದು

ವಿಶ್ವ ಪರಿಸರ ದಿನಾಚರಣೆ

ಪರಿಸರದ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಾರೆ. ಭೂಮಿಯ ವಾತಾವರಣ ಮತ್ತು ಪರಿಸರ ಸಂರಕ್ಷಣೆದಂತಹ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಇದರ ಉದ್ದೇಶ.

ಗಿಡಗಳನ್ನು ನೆಡುವುದು, ಪರಿಸರ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳುವುದು, ಪರೇಡ್ ನಡೆಸುವುದು, ಸಂಗೀತ ಕಚೇರಿಗಳನ್ನು ನಡೆಸುವುದು ಹಾಗೂ ಇನ್ನೀತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸುವುದು ಉಂಟು.

ಇದರಿಂದ ರಾಜಕೀಯ ಗಮನ ಪರಿಸರದ ಕಡೆಗೆ ವಾಲುವುದಲ್ಲದೆ ಪರಿಸರ ಸಂರಕ್ಷಣೆಯ ಕೆಲೆಸ ಕಾರ್ಯಗಳನ್ನು ಹೆಚ್ಚಿಸುವಂತೆ ಮಾಡುತ್ತದೆ.

ಓದಿ: ವಿಶ್ವ ಪರಿಸರ ದಿನಾಚರಣೆ ಪ್ರಬಂಧ


ಪರಿಸರ ಸಂರಕ್ಷಣೆಯ ಘೋಷಣೆಗಳು

ಅರಣ್ಯ ನಾಶ, ಅದುವೆ ನಮಗೆ ಯಮಪಾಶ

ಕಾಡುಬೆಳಸಿ ನಾಡು ಉಳಿಸಿ

ಕಾಡಿನ ಹಸಿರು, ನಮ್ಮೆಲ್ಲರ ಉಸಿರು

ಪರಿಸರವಿದ್ದರೆ ಸಂಸಾರ…ಇದೇ ಸೃಷ್ಟಿಯ ಸಾರ

ಪ್ರಕೃತಿ ಮಾತೆ, ನಿಜವಾದ ಅನ್ನಧಾತೆ

ಕಾಡನ್ನು ಬೆಳೆಸಿ ನಾಡನ್ನು ಉಳಿಸಿ

ಮನೆಗೊಂದು ಮರ ಊರಿಗೊಂದು ವನ

ಹಸಿರೇ ಉಸಿರು

ನೀರಿಗೆ ನೈದಿಲೆ ಶೃಂಗಾರ, ನಾಡಿಗೆ ಕಾಡೇ ಶೃಂಗಾರ

ಕಾಡಿನ ಸಿರಿ ಬೆಳೆಯುತ್ತಿರೆ ಅದುವೇ ನಾಡಿನ ಸಿರಿ

ಕಾಡು ಬೆಳಸಿ, ಭೂ ತಾಪಮಾನ ಇಳಿಸಿ

ಅಳಿದರೆ ಕಾಡು, ಅಳುವುದು ನಾಡು

ಕಡಿದರೆ ಮರ, ಬರುವುದು ಬರ

ನಿಸರ್ಗದೊಂದಿಗೆ ಕೈ ಜೋಡಿಸಿ

ಗಿಡಮರಗಳಾಗಿರಲಿ ಅಮರ, ಅವುಗಳಿಲ್ಲದಿರೆ ಜೀವನ ನಿಸ್ಸಾರ

ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದೆ ನಾವೆಲ್ಲಿ?

ಪರಿಸರ ಮಾಲಿನ್ಯ ನಿಯಂತ್ರಣ ಸಾಧನಗಳು 

ಮಾಲಿನ್ಯ ಕಾರಕಗಳನ್ನು ಹುಟ್ಟು ಹಾಕುವ ಚಟುವಟಿಕೆಗಳನ್ನು ಕಡಿಮೆ ಮಾಡುವುದರಿಂದ ಅಷ್ಟೇ ಅಲ್ಲದೆ ಕೆಲವು ಸಾಧನಗಳು ಬಳಸುವುದರಿಂದ ಅಥವಾ ಕೆಲವು ವಿಧಾನಗಳನ್ನು ಪಾಲಿಸುವುದರಿಂದ ಕಡಿಮೆ ಮಾಡಬಹುದು.

ವಾಯು ಮಾಲಿನ್ಯದ ನಿಯಂತ್ರಣಕ್ಕೆ Thermal Oxidizer ಅನ್ನು ಬಳಸುತ್ತಾರೆ.

ಧೂಳಿನ/ರಾಸಾಯನಿಕ ಕಣಗಳನ್ನು ಹಿಡಿದಿಟ್ಟುಕೊಳ್ಳಲು ಈ ಕೆಳಗಿನ ಸಾಧನಗಳನ್ನು ಬಳಸುತ್ತ್ತಾರೆ.

 • ಸ್ಥಾಯೀವಿದ್ಯುತ್ತಿನ ಅವಕ್ಷೇಪಕಗಳು (Electrostatic precipitators)
 • ಸ್ಕ್ರಬ್ಬರ್ (Scrubbers)

ಒಳಚರಂಡಿ ಸಂಸ್ಕರಿಸಲು ಹಲವಾರು ವಿಧಾನಗಳನ್ನು ಪಾಲಿಸಲಾಗುತ್ತದೆ.

ಓದಿ: ರಾಷ್ಟ್ರೀಯ ಹಬ್ಬಗಳ ಕುರಿತ ಪ್ರಬಂಧ

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಎಂದು ಕರೆಯುತ್ತಾರೆ. ಜನ ಸಾಮಾನ್ಯರಿಗಿಂತ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಹೆಚ್ಚು ಅರಿತವರಾಗಿರುತ್ತಾರೆ.

ಆದುದರಿಂದ ಪರಿಸರದ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವವಾಗಿರುತ್ತದೆ.

 • ಪರಿಸರದ ಸಮಸ್ಯೆಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಕುರಿತಂತೆ ಗುಂಪು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 • ನೀವು ಬಳಸಿದ ಪುಸ್ತಕಗಳ ಅಥವಾ ವಸ್ತುಗಳನ್ನು ಸಾಧ್ಯವಾದಷ್ಟು ಮರುಬಳಕೆಯನ್ನು ಮಾಡುವುದು.

ವಿದ್ಯಾರ್ಥಿಗಳು ದಿನನಿತ್ಯ ಬಳಸುವ ಕಾಗದ ಹಾಗೂ ನೋಟ್ ಪುಸ್ತಕಗಳ ಸರಿಯಾದ ಬಳಕೆ ಮಾಡಬೇಕು. ಕಾಗದವನ್ನು ತಯಾರುಮಾಡಲು ಅಪಾರ ಪ್ರಮಾಣದ ಮರಗಿಡಗಳನ್ನು ಕಡಿಯಬೇಕಾಗುತ್ತದೆ. ನಂತರ ಅದನ್ನು ಬಿಳುಪಾಗಿಸಲು ಹೆಚ್ಚಿನ ಪ್ರಮಾಣದ ಸುಣ್ಣ, ನೀರು ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಲಾಗುತ್ತದೆ.

ಇಷ್ಟೆಲ್ಲಾ ಶ್ರಮವಹಿಸಿ ತಯಾರಿಸಲಾದ ಕಾಗದಗಳನ್ನು ಹಾಗೂ ನೋಟ್ ಪುಸ್ತಕಗಳನ್ನು ಕೆಲವರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ.

ಕಾಗದದ ಎರಡೂ ಬದಿಗಳನ್ನು ಬಳಸಿಕೊಳ್ಳುವುದು, ಉಪಯೋಗಿಸಿದ ನೋಟ್ ಪುಸ್ತಕಗಳ ಖಾಲಿ ಹಾಳೆಗಳನ್ನು ಹರಿದು ಹಾಕದೇ ಅಥವಾ ನಾಶಪಡಿಸದೇ ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.

ಇಂತಹ ಹಲವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಮ್ಮಿಕೊಳ್ಳಬೇಕಾಗುತ್ತದೆ.

ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲದೆ ಜನ ಸಾಮಾನ್ಯರೂ ಅಷ್ಟೇ ಜವಾಬ್ದಾರಿಯೂತ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ನಾವೆಲ್ಲರು ಮರೆಯುವಂತಿಲ್ಲ.


ಪರಿಸರ ಸಂರಕ್ಷಣೆಯಲ್ಲಿ ಸಾಲುಮರದ ತಿಮ್ಮಕ್ಕ

Parisara Samrakshane Prabandha In Kannada - ಸಾಲು ಮರದ ತಿಮ್ಮಕ್ಕ
Image credit: Wikipedia

ಆಲದ ಮರದ ತಿಮ್ಮಕ್ಕ ಎಂದು ಹೆಸರುವಾಸಿಯಾದ ಸಾಲುಮರದ ತಿಮಕ್ಕನವರು ಪರಿಸರ ಸಂರಕ್ಷಣೆಯಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ೩೮೫ ಕ್ಕೂ ಹೆಚ್ಚಿನ ಆಲದ ಮರಗಳನ್ನು ಹುಲಿಕಲ್ ಮತ್ತು ಕುಡೂರ್ ನಡುವಿನ ಸುಮಾರು ೪ ಕಿ.ಮೀ ದೂರದ ರಸ್ತೆಯ ಬದಿಗಳಲ್ಲಿ ಬೆಳೆಸಿದ್ದಾರೆ.

ಅಷ್ಟೇ ಅಲ್ಲದೆ ೮೦೦೦ಕ್ಕೂ ಹೆಚ್ಚುವಿವಿಧ ಮರಗಳನ್ನೂ ಬೆಳೆಸಿದ್ದಾರೆ. ಅವರ ಇಂತಹ ಅದ್ಭುತ ಸಾಧನೆಗೆ ಅನೇಕಾನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಪರಿಸರಕ್ಕೆ ಸಾಲುಮರದ ತಿಮ್ಮಕ್ಕನವರ ಕೊಡುಗೆ ಅಪಾರ.

ಸಾಲುಮರದ ತಿಮ್ಮಕರವರ ಸಾಧನೆ ಅಪಾರ.

ನಾವಿರುವ ಜಾಗ, ನಮ್ಮ ಮನೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯದಿರುವುದು, ಪ್ಲಾಸ್ಟಿಕ್ ಗಳನ್ನು ಕಡಿಮೆ ಬಳಸುವುದು/ಸುಡದೇ ಇರುವುದು, ನೀರಿನ ಮೂಲಗಳು ಮಲಿನವಾಗದಂತೆ ನೋಡಿಕೊಳ್ಳುವುದು ಹಾಗೂ ಇತ್ಯಾದಿ ಜವಾಬ್ದಾರಿಗಳು/ಕರ್ತವ್ಯಗಳೂ ಪರಿಸರ ಸಂರಕ್ಷಣೆಯ ಭಾಗಗಳು.


FAQ on Parisara Samrakshane

ಪರಿಸರ ಸಂರಕ್ಷಣೆ ಅರ್ಥ

ಇದಕ್ಕೆ ಸರಳವಾದ ಉತ್ತರ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಅಥವಾ ಕಾಪಿಡಿಕೊಳ್ಳುವುದು.

ಪರಿಸರ ಸಂರಕ್ಷಣೆ ಮಾಡದಿದ್ದರೆ ಏನಾಗುತ್ತದೆ?

ಹಲವಾರು ಸಮಸ್ಯಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಆರೋಗ್ಯ ಸಮಸ್ಯೆಗಳು, ಜಾಗತಿಕ ತಾಪಮಾನದಲ್ಲಿ ಬದಲಾವಣೆ, ಇತ್ಯಾದಿ.

ಪ್ರಬಂಧ ಹೇಗೆ ಬರೆಯಬೇಕು?

ಪೀಠೀಕೆ, ವಿಷಯ ವಿಸ್ತರಣೆ ಹಾಗೂ ಉಪಸಂಹಾರ ಅಂಶಗಳನ್ನು ಹಾಕಿ ಇವುಗಳನ್ನು ವಿಸ್ತರಿಸುತ್ತಾ ಹೋಗಬೇಕು.

ವಿಶ್ವ ಪರಿಸರ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ?

ನವಂಬರ್ 26 ರಂದು ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.

Parisara Samrakshane Prabandha In Kannada ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.

ಪರಿಸರದ ಬಗ್ಗೆ ಕನ್ನಡದಲ್ಲಿ ಪ್ರಬಂಧ ಬರೆಯುವ ಒಂದು ಸಣ್ಣ ಪ್ರಯತ್ನ ಇದಾಗಿತ್ತು.

Comment  Box ನಲ್ಲಿ Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

22 thoughts on “Parisara Samrakshane Prabandha In Kannada – ಪರಿಸರ ಸಂರಕ್ಷಣೆ ಪ್ರಬಂಧ”

 1. ಇದು ತುಂಬಾ ಚೆನ್ನಾಗಿದೆ ಇತರ ಮಾಹಿತಿನ ಇನ್ನು ನಮಗೆ ಹೆಚ್ಚು ಹೆಚ್ಚು ತಿಳಿಸಿಕೊಡಿ ಯಾಕಂದ್ರೆ ಇದು ವಿದ್ಯಾರ್ಥಿಗಳಿಗೆ ತುಂಬಾನೇ ಸಹಾಯವಾಗುತ್ತೆ ಈತರ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  ಉತ್ತರ

Leave a Comment