Puneeth Rajkumar Biography In Kannada | ಪುನೀತ್ ರಾಜಕುಮಾರ್ ಜೀವನ ಚರಿತ್ರೆ

Puneeth Rajkumar Biography In Kannada: ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ರವರು ದಿನಾಂಕ 29 ಅಕ್ಟೋಬರ್ 2021 ರಂದು ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಾಲ್ಯದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟ ನಟ ಪುನೀತ್ ರಾಜಕುಮಾರ್ ರವರು ಉತ್ತಮ ನಟರಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಹಾಗೂ ದೂರದರ್ಶನದಲ್ಲಿ ನಿರೂಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

Puneeth Rajkumar ರವರ Date of Birth, Age, Height, Weight, Wife, Family, ಹಾಗೂ ಇನ್ನೀತರ ಮಾಹಿತಿಯನ್ನು ಈ ಲೇಖನದ ಮೂಲಕ ಪಡೆದುಕೊಳ್ಳೋಣ.

Puneeth Rajkumar Biography In Kannada Language

ಹೆಸರು ಪುನೀತ್ ರಾಜಕುಮಾರ್
ಮೂಲ ಹೆಸರು
(Real Name)
ಮಾಸ್ಟರ್ ಲೋಹಿತ್
ಇತರೆ ಹೆಸರು
(Nick Names)
ಅಪ್ಪು, ಪವರ್ ಸ್ಟಾರ್,
ರಾಜರತ್ನ
ಜನನ
(Date of Birth)
17 ಮಾರ್ಚ್, 1975
ಜನ್ಮ ಸ್ಥಳ
(Birth Place)
ಮದ್ರಾಸ್
( ಚೆನ್ನೈ, ತಮಿಳುನಾಡು, ಭಾರತ)
ತಂದೆ ಡಾ. ರಾಜಕುಮಾರ್
ತಾಯಿ ಪಾರ್ವತಮ್ಮ ರಾಜಕುಮಾರ್
ಸಹೋದರರು ಶಿವರಾಜಕುಮಾರ್ &
ರಾಘವೇಂದ್ರ ರಾಜಕುಮಾರ್
ಸಹೋದರಿಯರು ಲಕ್ಷ್ಮಿ & ಪೂರ್ಣಿಮಾ
ಪತ್ನಿ ಅಶ್ವಿನಿ ರೇವಂತ್
ಮಕ್ಕಳು ವಂದಿತಾ & ಧೃತಿ
ವೃತ್ತಿ ನಟ, ಗಾಯನ, ನಿರ್ಮಾಪಕ,
ದೂರದರ್ಶನ ನಿರೂಪಕ
ಧರ್ಮ ಹಿಂದೂ
ರಾಷ್ಟ್ರೀಯತೆ ಭಾರತೀಯ
ಎತ್ತರ (approx.) 1.75 ಮೀ
ತೂಕ (approx.) 77 ಕಿ.ಗ್ರಾಂ
ಮರಣ
(Date of death)
29 ಅಕ್ಟೋಬರ್ 2021
ಕಾರಣ ಹೃದಯಘಾತ
ಮರಣ
(Date of death)
ವಿಕ್ರಮ್ ಆಸ್ಪತ್ರೆ,
ಬೆಂಗಳೂರು
ವಯಸ್ಸು (Age) 46
Puneeth Rajkumar Biography In Kannada

ಪುನೀತ್ ರಾಜಕುಮಾರ್ ರವರ ಬಾಲ್ಯ ಜೀವನ

17 ಮಾರ್ಚ್ 1975 ರಂದು ವರನಟ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮನವರ ದಂಪತಿಗಳ ಉದರದಲ್ಲಿ ಪುನೀತ್ ರಾಜಕುಮಾರ್ ರವರು ಜನಿಸುತ್ತಾರೆ. ಸಹೋದರರಾದ ರಾಘವೇಂದ್ರ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ರವರಿಗಿಂತ ಕಿರಿಯರಾದ ಪುನೀತ್ ರವರು ಬಹು ಪ್ರೀತಿಯಿಂದ ಬೆಳೆದರು.

6 ತಿಂಗಳ ಮಗುವಿದ್ದಾಗಲೇ ‘ಪ್ರೇಮದ ಕಾಣಿಕೆ’ ಎಂಬ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡ ಪುನೀತ್ ರಾಜಕುಮಾರ್ ರವರು ಮುಂದೆ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಹೀಗೆ ಮುಂತಾದ ಚಿತ್ರಗಳಲ್ಲಿ ಅಭಿನಯ ಚಾತುರ್ಯತೆಯನ್ನು ತೋರಿ ಅಭಿನಯ ಪ್ರೌಢಿಮೆಯನ್ನು ಮೆರೆಯುತ್ತಾರೆ.

ಪುನೀತ್ ರಾಜಕುಮಾರ್ ರವರು ಬಾಲ್ಯದಲ್ಲಿ ಹಾಡಿದ, ಬಾನ ದಾರಿಯಲ್ಲಿ ಸೂರ್ಯ, ಕಾಣದಂತೆ ಮಾಯವಾದನನೋ, ಕಣ್ಣಿಗೆ ಕಾಣುವ ದೇವರು, ಮುಂತಾದ ಗೀತೆಗಳು ಕೇಳುಗರ ಮನಗೆದ್ದು ತುಂಬಾ ಪ್ರಶಂಸೆಗೆ ಪಾತ್ರವಾದವು.

ಪುನೀತ್ ರಾಜಕುಮಾರ್ ರವರು ನಟಿಸಿದ ‘ಬೆಟ್ಟದ ಹೂವು’ ಚಿತ್ರಕ್ಕೆ 1985 ರಲ್ಲಿ “Best Child Artist” ಪ್ರಶಸ್ತಿಯು ಲಭಿಸಿತು.

ನಟ ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿಯವರು ಘೋಷಿಸಿದ್ದಾರೆ.

ಪುನೀತ್ ರಾಜಕುಮಾರ್ ರವರ ವೈಯಕ್ತಿಕ ಜೀವನ


ರಾಜ್ ದಂಪತಿಯ ಮಗನಾಗಿ ಜನಿಸಿದ ಇವರು ಚಿಕ್ಕವರಿದ್ದಾಗಲೇ ತಮ್ಮ ತಂದೆ ಮತ್ತು ಸಹೋದರಿ ಪೂರ್ಣಿಮಾರವರ ಜೊತೆ ಚಲನಚಿತ್ರ ಸೆಟ್ ಗೆ ಹೋಗುತ್ತಿದ್ದರು.

1 ಡಿಸೆಂಬರ್ 1999 ರಂದು ಅಶ್ವಿನಿ ರೇವಂತ್ ರವರನ್ನು ಮದುವೆಯಾದರು. ಪುನೀತ್ ರಾಜಕುಮಾರ್ ರವರಿಗೆ ವಂದಿತಾ ಮತ್ತು ಧೃತಿ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಪುನೀತ್ ರಾಜಕುಮಾರ್ ಸಿನಿಪಯಣ


ಪುನೀತ್ ರಾಜ್ ಕುಮಾರ್ ಅವರು ಸುಮಾರು 10 ಚಿತ್ರಗಳಲ್ಲಿ ಬಾಲನಟನಾಗಿ ಮತ್ತು 29 ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ.

2002 ರಲ್ಲಿ ಪುನೀತ್ ರಾಜಕುಮಾರ್ ರವರು ನಟಿಸಿದ ‘ಅಪ್ಪು’ ಚಲನಚಿತ್ರವು ಅವರ ಸಿನಿಪಯಣಕ್ಕೆ ಒಂದು ಹೊಸ ತಿರುವನ್ನು ಕೊಟ್ಟಿತು ಎಂಬುದರಲ್ಲಿ ಸಂದೇಹವಿಲ್ಲ.

ಪುನೀತ್ ರಾಜ್ ಕುಮಾರ್ ರವರು ‘ನಾವಿಬ್ಬರು ನಮಗಿಬ್ಬರು’ ಮತ್ತು ‘ಸೂತ್ರದಾರ’ ಚಿತ್ರಗಳನ್ನು Produce ಮಾಡಿದ್ದಾರೆ.

2010 ರಲ್ಲಿ ಪುನೀತ್ ರಾಜ್ ಕುಮಾರ್ ರವರು ನಟಿಸಿದ ‘ಜಾಕಿ’ ಚಲನಚಿತ್ರವು ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಕನ್ನಡದ ಕೋಟ್ಯಾಧಿಪತಿ ಸೀಸನ್ 1, 2 & 4 ಹಾಗೂ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ.

ಪುನೀತ್ ರಾಜಕುಮಾರ್ ಒಂದು ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) IPL ತಂಡದ Brand Ambassador ಆಗಿದ್ದರು.

Bangalore Premiere Futsal Team ನ ಒಡೆತನವೂ ಪುನೀತ್ ರಾಜಕುಮಾರ್ ರವರದಾಗಿತ್ತು.

Puneeth Rajkumar movies list in Kannada

ಬಾಲ ನಟನಾಗಿ ನಟಿಸಿದ ಚಿತ್ರಗಳು:

 • ಪ್ರೇಮದ ಕಾಣಿಕೆ
 • ಭಾಗ್ಯವಂತ
 • ಎರಡು ನಕ್ಷತ್ರಗಳು
 • ಬೆಟ್ಟದ ಹೂವು
 • ಚಲಿಸುವ ಮೋಡಗಳು
 • ಶಿವ ಮೆಚ್ಚಿದ ಕಣ್ಣಪ್ಪ
 • ಪರಶುರಾಮ್
 • ಯಾರಿವನು
 • ಭಕ್ತ ಪ್ರಹ್ಲಾದ
 • ವಸಂತ ಗೀತ

ಪುನೀತ್ ರಾಜಕುಮಾರ್ ರವರು ನಾಯಕ ನಟನಾಗಿ ನಟಿಸಿದ ಚಲನಚಿತ್ರಗಳು ಈ ಕೆಳಗಿನಂತಿವೆ:

 1. ಅಪ್ಪು
 2. ಅಭಿ
 3. ವೀರ ಕನ್ನಡಿಗ
 4. ಮೌರ್ಯ
 5. ಆಕಾಶ್
 6. ನಮ್ಮ ಬಸವ
 7. ಅಜಯ್
 8. ಅರಸು
 9. ಮಿಲನ
 10. ಬಿಂದಾಸ್
 11. ವಂಶಿ
 12. ರಾಜ್ ದ ಶೋಮ್ಯಾನ್
 13. ಪೃಥ್ವಿ
 14. ರಾಮ್
 15. ಜಾಕಿ
 16. ಹುಡುಗರು
 17. ಪರಮಾತ್ಮ
 18. ಅಣ್ಣ ಬಾಂಡ್
 19. ಯಾರೇ ಕೂಗಾಡಲಿ
 20. ನಿನ್ನಿಂದಲೇ
 21. ಮೈತ್ರಿ
 22. ಪವರ್ ಸ್ಟಾರ್
 23. ರಾಣಾ ವಿಕ್ರಮ
 24. ಚಕ್ರವ್ಯೂಹ
 25. ದೊಡ್ಮನೆ ಹುಡುಗ
 26. ರಾಜಕುಮಾರ
 27. ಅಂಜನಿ ಪುತ್ರ
 28. ನಟಸಾರ್ವಭೌಮ
 29. ಯುವರತ್ನ
 30. ಜೇಮ್ಸ್

FAQ on Puneeth Rajkumar Biography In Kannada

ಪುನೀತ್ ರಾಜಕುಮಾರ್ ರವರ ಮೊದಲ ಚಿತ್ರ ಯಾವುದು?

ಪುನೀತ್ ರಾಜಕುಮಾರ್ ರವರು ಆರು ತಿಂಗಳು ಇರುವಾಗಲೇ 1976 ರಲ್ಲಿ ‘ಪ್ರೇಮದ ಕಾಣಿಕೆ’ ಚಿತ್ರದ ಮುಖಾಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಆದರೆ ನಾಯಕ ನಟನಾಗಿ ಕಾಣಿಸಿಕೊಂಡ ಮೊದಲ ಚಿತ್ರ ಅಪ್ಪು.

ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರ ಯಾವುದು?

ಮೂಲಗಳ ಪ್ರಕಾರ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರದ ಹೆಸರು ಜೇಮ್ಸ್. ಇದು ಇನ್ನು ಬಿಡುಗಡೆ ಆಗಬೇಕಾಗಿದೆ.

ಪುನೀತ್ ರಾಜಕುಮಾರ್ ರವರ ಸಾವಿಗೆ ಕಾರಣವೇನು?

ವಿಕ್ರಮ್ ಆಸ್ಪತ್ರೆಯ ವೈದ್ಯರ ಪ್ರಕಾರ ಪುನಿತ್ ರಾಜಕುಮಾರ ರವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಪುನೀತ್ ರಾಜಕುಮಾರ್ ರವರ ವಯಸ್ಸು ಎಷ್ಟು?

ಪುನೀತ್ ರಾಜಕುಮಾರ್ ರವರ ವಯಸ್ಸು 46 ಆಗಿತ್ತು.

Conclusion

“Puneeth Rajkumar Biography In Kannada” ಲೇಖನದ ಉದ್ದೇಶವು ಪುನೀತ್ ರಾಜಕುಮಾರ್ ರವರ ಜೀವನದ ಪರಿಚಯವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವುದಾಗಿತ್ತು. ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದ ಪುನಿತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

ಈ ಲೇಖನದ ಕುರಿತು ನಿಮ್ಮ ಸಲಹೆ, ಸೂಚನೆ ಅಥವಾ ಅಭಿಪ್ರಾಯಗಳನ್ನು Comment ಮಾಡುವುದರ ಮೂಲಕ ಹಂಚಿಕೊಳ್ಳಿ.

ಓದಿ: Starlink ಎಂದರೇನು? ಹೇಗೆ ಕೆಲಸ ಮಾಡುತ್ತದೆ?

Sources

 • ಮಾಹಿತಿಯ ಮೂಲ
 • ಮಾಹಿತಿಯ ಮೂಲ
 • ಮಾಹಿತಿಯ ಮೂಲ

3 thoughts on “Puneeth Rajkumar Biography In Kannada | ಪುನೀತ್ ರಾಜಕುಮಾರ್ ಜೀವನ ಚರಿತ್ರೆ”

 1. ಅವರು ಮಾಡಿರುವ ಸಮಜಮುಖೀ ಕೆಲಸಗಳ ಬಗ್ಗೆ,ಹಾಗೂ ಅವರ ಪಿ ಆರ್ ಕೆ ಪ್ರೊಡಕ್ಷನ್ ಬಗ್ಗೆ ಮಾಹಿತಿ ಇಲ್ಲಿ ನೀಡಿಲ್ಲ….ಹಾಗೆ ಅವರ ಬಯಾಗ್ರಫಿ ಪ್ರಯತ್ನ ಚೆನ್ನಾಗಿದೆ…..
  ಏನೇ ಆದ್ರೂ ಪುನೀತ್ ಸರ್ ಇರಬೇಕಿತ್ತು….
  ಅವರು ಮಾಡಿದ ಕೆಲಸಗಳು.. ನಗು..ನಟನೆ..ಎಲ್ಲದಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ದಿಂದ…ಜನಮಾನಸದಲ್ಲಿ ಎಂದಿಗೂ ಸ್ಥಿರವಾಗಿ..ಚಿರಾಯುವಾಗಿರ್ತಾರೆ…ನಮ್ಮ ಅಪ್ಪುಸರ್ 🙏🙏

  Reply

Leave a Comment

error: Content is protected !!