Rashtriya Habbagalu Essay In Kannada [2021] | National Festivals Essay In Kannada

Rashtriya Habbagalu Essay In Kannada:
ಭಾರತ ಒಂದು ಬಹು ಸಂಸ್ಕೃತಿಯ ಮತ್ತು ವೈವಿಧ್ಯತೆಯ ದೇಶ. ನಮ್ಮ ಈ ಭಾರತ ದೇಶದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಹಬ್ಬಗಳಂದು ಯಾವುದೇ ಧರ್ಮ, ಜಾತಿಗಳೆನ್ನದೇ ಎಲ್ಲರೂ ಒಂದಾಗಿ, ಒಂದೇ ತಾಯಿ ಮಕ್ಕಳಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾ ನಮ್ಮ ದೇಶದ  ಇತಿಹಾಸದ ಮೈಲುಗಳನ್ನು ಸ್ಮರಿಸುತ್ತೇವೆ.

ಭಾರತದಲ್ಲಿ ಮುಖ್ಯವಾಗಿ ಹಬ್ಬಗಳನ್ನು 3 ವಿಧಗಳಾಗಿ ವಿಂಗಡಿಸಲಾಗುತ್ತದೆ.

 1. ರಾಷ್ಟ್ರೀಯ ಹಬ್ಬಗಳು
 2. ಧಾರ್ಮಿಕ ಹಬ್ಬಗಳು
 3. ಕಾಲೋಚಿತ(Seasonal) ಹಬ್ಬಗಳು

ಪ್ರತಿಯೊಂದು ಹಬ್ಬಗಳು ತಮ್ಮದೇ ಆದ ವಿಶೇಷ ಆಚರಣೆ, ಮಹತ್ವ ಹಾಗೂ ಮೌಲ್ಯಗಳನ್ನು ಹೊಂದಿವೆ.

ನಾವಿಂದು ಈ ಲೇಖನದಲ್ಲಿ, ರಾಷ್ಟ್ರೀಯ ಹಬ್ಬಗಳ ಕುರಿತು ಸವಿವರವಾದ ಪ್ರಬಂಧವನ್ನು(National Festivals Essay In Kannada) ನೋಡೋಣ.

Namma Rashtriya Habbagalu Essay In Kannada Language

ನಮ್ಮ ಭಾರತ ದೇಶದಲ್ಲಿ ಮೂರು ಪ್ರಮುಖ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತದೆ.

 1. ಗಣರಾಜ್ಯ ದಿನಾಚರಣೆ.
 2. ಸ್ವಾತಂತ್ರ್ಯ ದಿನಾಚರಣೆ
 3. ಗಾಂಧಿ ಜಯಂತಿ

ಈ ದಿನಗಳಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತೆತ್ತ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸಲಾಗುತ್ತದೆ.

ಈ ಹಬ್ಬಗಳು ಎಲ್ಲರ ಹೃದಯದಲ್ಲಿ ರಾಷ್ಟ್ರೀಯ ಸಮಗ್ರತೆ ಮತ್ತು ದೇಶಭಕ್ತಿಯ ಭಾವನೆಯನ್ನು ತುಂಬುತ್ತವೆ.


1. ಗಣರಾಜ್ಯ ದಿನ

Republic day essay in kannada
Republic day in kannada

ಗಣರಾಜ್ಯೋತ್ಸವವನ್ನು ಪ್ರತಿವರ್ಷ ಜನವರಿ 26 ರಂದು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಈ ದಿನವನ್ನು ಭಾರತ ನಿಜವಾಗಿ ಸ್ವಾತಂತ್ರ್ಯಗೊಂಡ ದಿನವೆಂದೇ ಹೇಳಬಹುದು. ಏಕೆಂದರೆ ಸ್ವಾತಂತ್ರ್ಯಾ ನಂತರ ಸುಮಾರು 3 ವರ್ಷಗಳ ಬಳಿಕ, ನಮ್ಮ ದೇಶವು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವಾಯಿತು.

ಬೇರೆ ರೀತಿಯಲ್ಲಿ ಹೇಳುವುದಾದರೆ ಈ ದಿನ ಅಂದರೆ, 26 ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂತು. ರವೀಂದ್ರನಾಥ ಠಾಗೋರ್  ರವರು ರಚಿಸಿದ, “ಜನ ಗಣ ಮನ” ಗೀತೆಯೂ ರಾಷ್ಟ್ರಗೀತೆಯಾಗಿ ದೇಶದಾದ್ಯಂತ ಕೇಳಿಬಂತು.

ಗಣರಾಜ್ಯೋತ್ಸವವನ್ನು “ಪ್ರಜಾರಾಜ್ಯೋತ್ಸವ” ಎಂದೂ ಕರೆಯುವುದುಂಟು.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದು ತುಂಬಾ ಮಹತ್ವದ ದಿನವಾಗಿದೆ. ಏಕೆಂದರೆ ಇದು ಬ್ರಿಟಿಷ್ ಆಡಳಿತದ ಅಂತ್ಯ ಮತ್ತು ಭಾರತದ ಗಣರಾಜ್ಯದ ಜನ್ಮವನ್ನು ಸೂಚಿಸುತ್ತದೆ.

ಗಣರಾಜ್ಯೋತ್ಸವದ ಆಚರಣೆಗಳು

ಈ ದಿನದಂದು ಭಾರತದ ನಾಗರಿಕರೆಲ್ಲರೂ  ತಮ್ಮ ಧರ್ಮ, ಜಾತಿ, ಮತಗಳೆಲ್ಲವನ್ನೂ ಮರೆತು ಈ ದಿನದ ಆಚರಣೆಯಲ್ಲಿ ಒಗ್ಗುಡುತ್ತಾರೆ. ಇದು ನಮ್ಮ ದೇಶದ ಏಕತೆಯನ್ನು ತೋರಿಸಿಕೊಡುತ್ತದೆ.

ಈ ದಿನ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರೇಡ್ ದೊಂದಿಗೆ ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಗುತ್ತದೆ.

ಬಹಳಷ್ಟು ಶಾಲೆಗಳು ಭಾಗವಹಿಸುವ ಇತರ ನಗರಗಳಲ್ಲಿಯೂ ಈ ಪರೇಡ್ ಗಳು ನಡೆಯುತ್ತವೆ.
ಅನೇಕ ಮಕ್ಕಳು ಹಾಗೂ ವೃತ್ತಿಪರರು ಈ ದಿನದ ಆಚರಣೆಯಲ್ಲಿ ಭಾಗವಹಿಸುವುದನ್ನು ನೋಡುವುದೇ ಒಂದು ಆನಂದ.

ನವದೆಹಲಿಯ ರಾಜಪಥದಲ್ಲಿ,  ಭಾರತದ ರಾಷ್ಟ್ರಪತಿಗಳು ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಿದ ತಕ್ಷಣ, 21 ಗನ್ ಸೆಲ್ಯೂಟ್ ಮಾಡುವುದರೊಂದಿಗೆ ಮಿಲಿಟರಿ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆಯನ್ನು ನುಡಿಸಲಾಗುವುದು.

ಧ್ವಜಾರೋಹಣ ಮಾಡಿದ ದಿನದಂದು ಶಾಲಾ-ಕಾಲೇಜು ಹಾಗೂ ಹಲವಾರು  ಕಚೇರಿಗಳಲ್ಲಿ ಸಿಹಿತಿಂಡಿಗಳನ್ನು ಹಂಚುವುದನ್ನು ನಾವು ಗಮನಿಸಿರುತ್ತೇವೆ!


2. ಸ್ವಾತಂತ್ರ್ಯ ದಿನಾಚರಣೆ

15ನೇ ಆಗಸ್ಟ್ ಇದು, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಂತಹ ದಿನವಾಗಿದೆ.
ಯಾಕಂದ್ರೆ

ಅನೇಕ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಮಹಾನ್ ನಾಯಕರ ತ್ಯಾಗದ ಫಲದಿಂದಾಗಿ, 200 ವರ್ಷಗಳ ಕಾಲ ಆಳಿದ ಬ್ರಿಟಿಷ್ ಆಳ್ವಿಕೆ ಕೊನೆಗೊಂಡು 1947 ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು.

ಸ್ವಾತಂತ್ರ್ಯ ಹೋರಾಟವು, ಕಠಿಣ ಮತ್ತು ದೀರ್ಘವಾದ ಅಹಿಂಸಾತ್ಮಕ ಹೋರಾಟ ವಾಗಿದ್ದು, ಈ ಹೋರಾಟದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹಾನ್ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಅಗಸ್ಟ್ 15 ಅನ್ನು ದೇಶದಾದ್ಯಂತ ರಾಷ್ಟ್ರೀಯ ರಜಾ ದಿನವಾಗಿದೆ.

ಅಗಸ್ಟ್ 15ರಂದು ನಮ್ಮ ಈ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಪುರುಷರ ಮತ್ತು ಮಹಿಳೆಯರ ನಿಸ್ವಾರ್ಥ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳಲಾಗುತ್ತದೆ.

ಈ ಸ್ವಾತಂತ್ರ್ಯ ಹೋರಾಟಕ್ಕೆ ಸುಭಾಷ್ಚಂದ್ರಬೋಸ್, ಮಹಾತ್ಮಗಾಂಧಿ ಮೌಲಾನಾ ಅಬ್ದುಲ್ ಕಲಾಂ ಆಜಾದ್,  ಸರ್ದಾರ್ ವಲ್ಲಭ ಭಾಯ್ ಪಟೇಲ್,  ಭಗತ್ ಸಿಂಗ್,  ಚಂದ್ರಶೇಖರ್ ಆಜಾದ್, ಲಾಲ್-ಬಾಲ್-ಪಾಲ್,  ಹೀಗೆ ಹಲವಾರು ಮಹನೀಯರ ಕೊಡುಗೆ ಅಪಾರ.

ಸ್ವಾತಂತ್ರ್ಯ ದಿನದಂದು ದೇಶದಾದ್ಯಂತ ನಡೆಯುವ ಚಟುವಟಿಕೆಗಳು

 • ಈ ದಿನಾಚರಣೆಯನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ, ಸಡಗರ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
 • ಪ್ರಧಾನಮಂತ್ರಿ ಯವರು ದೆಹಲಿಯ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ.
 • ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.
 • ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ
 • ಪ್ರಧಾನಮಂತ್ರಿಗಳು ತಮ್ಮ ಭಾಷಣದ ಮೂಲಕ ಇನ್ನೂ ದೇಶದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಉಲ್ಲೇಖಿಸುತ್ತಾರೆ ಮತ್ತು ಹೆಚ್ಚಿನ ಅಭಿವೃದ್ಧಿ ಪ್ರಯತ್ನಗಳಿಗೆ ಕರೆ ನೀಡುತ್ತಾರೆ.
 • ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.
 • ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಪರೇಡ್ ನಡೆಯುತ್ತದೆ.
 • ಕೆಲವು ಐತಿಹಾಸಿಕ ಕಟ್ಟಡಗಳು ವಿಶೇಷವಾಗಿ ಸ್ವಾತಂತ್ರ್ಯದ ವಿಷಯವನ್ನು ಚಿತ್ರಿಸುವ ಕಟ್ಟಡಗಳಿಗೆ ದೀಪಗಳಿಂದ ಅಲಂಕರಿಸುತ್ತಾರೆ.
 • ದಿನದ ವಿಶೇಷವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
 • ಹೀಗೆ ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ನಡೆಯುತ್ತವೆ.

ನಮ್ಮ ಪೂರ್ವಜರು/ ಹಿರಿಯರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆದರೆ ಈಗ ನಮ್ಮ ದೇಶದ ಭವಿಷ್ಯವನ್ನು ನಾವು ಹೇಗೆ ರೂಪಿಸಬೇಕು ಎಂಬುದು ನಮ್ಮ ಕೈಯಲ್ಲಿದೆ.

ಅವರು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ನಾವೀಗ ನಮ್ಮ ಪಾತ್ರವನ್ನು ಹೇಗೆ ನಿರ್ವಹಿಸುತ್ತೇವೆ  ಎಂಬುದರ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ.

ಓದಿ: ಶಬ್ದ ಮಾಲಿನ್ಯ ಕನ್ನಡ ಪ್ರಬಂಧ


3. ಗಾಂಧಿ ಜಯಂತಿ

Rashtriya habba Gandhi Jayanti In Kannada
Gandhi Jayanti In Kannada

ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ನ್ನು, ಪ್ರತಿವರ್ಷ ಭಾರತದಾದ್ಯಂತ “ಗಾಂಧಿ ಜಯಂತಿ” ಎಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.

ಮೋಹನದಾಸ್ ಕರಮಚಂದ ಗಾಂಧಿಯವರು ಅಕ್ಟೋಬರ್ 2, 1869 ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ  ಜನಿಸಿದರು.

ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ನ್ನು ವಿಶ್ವದಾದ್ಯಂತ “ಅಂತರಾಷ್ಟ್ರೀಯ ಅಹಿಂಸಾ ದಿನ”ವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, 2007 ಜೂನ್ 15ರಂದು ಘೋಷಿಸಿತು.

ಗಾಂಧಿ ಜಯಂತಿ ಆಚರಣೆಯು ಭಾರತದ ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಒಂದಾಗಿದೆ.

ಮಹಾತ್ಮ ಗಾಂಧಿಯವರನ್ನು ರಾಷ್ಟ್ರಪಿತ ಮತ್ತು ಬಾಪು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಶಾಂತಿ ಮತ್ತು ಅಹಿಂಸೆಯನ್ನು  ಪ್ರಮುಖ ಶಸ್ತ್ರವಾಗಿ ಬಳಸಿದ್ದರು.

ಗಾಂಧೀಜಿ ಒಬ್ಬ ಸರಳ ವ್ಯಕ್ತಿಯಾಗಿದ್ದರು. ಇವರು ಚರಕದಿಂದ ತಾವೇ ನೇಯ್ದ ಬಟ್ಟೆಯನ್ನು ತೊಡುತ್ತಿದ್ದರು.

ಅವರ ಮೂರು ಕೋತಿಗಳು ನಮಗೆ ಈ ರೀತಿ ಬೋಧಿಸುತ್ತವೆ.

 • ಕೆಟ್ಟದನ್ನು ನೋಡಬಾರದು
 • ಕೆಟ್ಟದ್ದನ್ನು ಮಾತನಾಡಬಾರದು
 • ಕೆಟ್ಟದ್ದನ್ನು ಕೇಳಬಾರದು

ಗಾಂಧೀಜಿಯವರು ಬ್ರಿಟಿಷರನ್ನು ಭಾರತದಿಂದ ಓಡಿಸಲು ಅಹಿಂಸೆಯ ಪರಿಕಲ್ಪನೆಗಳನ್ನು ಆಧಾರಿತ ಸತ್ಯಾಗ್ರಹ ಸೇರಿದಂತೆ ವಿವಿಧ ಚಳುವಳಿಗಳನ್ನು ಮಾಡಿದರು.

ಅಕ್ಟೋಬರ್ 2 ರಾಷ್ಟ್ರದೆಲ್ಲೆಡೆ ರಜಾ ದಿನವಾಗಿರುತ್ತದೆ.

ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಹೋರಾಡುವುದು ಅಷ್ಟೇ ಅಲ್ಲದೆ ಜಾತಿವ್ಯವಸ್ಥೆ,  ಅಸ್ಪೃಶ್ಯತೆಯಂತಹ ವಿವಿಧ ಸಾಮಾಜಿಕ ವ್ಯವಸ್ಥೆಗಳ ವಿರುದ್ಧ ಹೋರಾಡಿದರು.

ಜನವರಿ 30, 1948 ರಂದು ದೆಹಲಿಯ ಬಿರ್ಲಾ ಹೌಸ್ ಹತ್ತಿರ, ನಾಥುರಾಮ್ ಗೂಡ್ಸೆ ಗಾಂಧೀಜಿಯವರನ್ನು ಗುಂಡು ಹಾರಿಸಿ  ಹತ್ಯೆಗೈದನು. ಆದ್ದರಿಂದ, ಜನೆವರಿ 30 ನ್ನು “ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ.

ರಾಷ್ಟ್ರೀಯ ಹಬ್ಬಗಳ ಮಹತ್ವ

Importance Of Rashtriya Habbagalu In Kannada as follows:

 • ರಾಷ್ಟ್ರೀಯ ಹಬ್ಬಗಳು ದೇಶದ ಜನರಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಬೀಜವನ್ನು ನೆಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
 • Rashtriya Habbagalu ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಮಹಾನ್ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರ ತ್ಯಾಗವನ್ನು ಸ್ಮರಿಸುತ್ತವೆ.
 • ರಾಷ್ಟ್ರೀಯ ಹಬ್ಬಗಳು ನಮ್ಮ ಸಂವಿಧಾನದ ಮೌಲ್ಯ ಮತ್ತು ಉತ್ತಮ ಆಡಳಿತದ ಅವಶ್ಯಕತೆಯನ್ನು ತಿಳಿಸಿಕೊಡುತ್ತವೆ.

 • ಈ ಹಬ್ಬಗಳು ನಮ್ಮ ಸೇನಾ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿಕೊಡುತ್ತವೆ.

 • ಇವು ಹಿಂಸೆಯ ಮೌಲ್ಯ ಮತ್ತು ಸರಳ ಜೀವನದ ವಿಧಾನಗಳನ್ನು ಕಲಿಸುತ್ತವೆ.

 • ಈ ಹಬ್ಬಗಳು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಾಮರಸ್ಯದ ಮಹತ್ವವನ್ನು ಎತ್ತಿ ಸಾರುತ್ತವೆ.

 • ರಾಷ್ಟ್ರೀಯ ಹಬ್ಬಗಳು ವಿವಿಧ ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ನಾಗರಿಕರನ್ನು ಒಂದುಗೂಡಿಸುತ್ತವೆ.

 • ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ,  ಗಣರಾಜ್ಯೋತ್ಸವ ಮತ್ತು ಗಾಂಧೀಜಯಂತಿ ಭಾರತದ ಶ್ರೀಮಂತ ಇತಿಹಾಸವನ್ನು ಪ್ರಸ್ತುತಪಡಿಸುತ್ತವೆ.

 • ವಿವಿಧ ಜನಾಂಗದವರು ಒಗ್ಗಟ್ಟಿನಿಂದ  ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು Rashtriya Habbagalannu ಆಚರಿಸಲು ಒಂದಾಗುವ ಸಂದರ್ಭ,  ಇದು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ.

 • ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ನಾಯಕರ ತ್ಯಾಗವನ್ನು ಈ ಹಬ್ಬಗಳು ಸ್ಮರಿಸಿ ಕೊಡುತ್ತವೆ.

ಹೀಗೆ ಹಲವಾರು ಮಹತ್ವಗಳನ್ನು ಭಾರತದ ರಾಷ್ಟ್ರೀಯ ಹಬ್ಬಗಳು ಹೊಂದಿವೆ.

ರಾಷ್ಟ್ರೀಯ ಹಬ್ಬಗಳು ರಾಷ್ಟ್ರೀಯ ಸಂಪತ್ತು


FAQ Rashtriya Habbagalu Essay In Kannada

ಭಾರತದಲ್ಲಿ ಆಚರಿಸಲಾಗುವ ವಿವಿಧ ರಾಷ್ಟ್ರೀಯ ಹಬ್ಬಗಳು ಯಾವುವು?

ಭಾರತ ದೇಶದ ಐತಿಹಾಸಿಕ ಘಟನೆಗಳ ಮಹತ್ವವನ್ನು ಸಾರುವ ಮೂರು ಪ್ರಮುಖ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತದೆ.
1. ಸ್ವಾತಂತ್ರ್ಯೋತ್ಸವ
2. ಗಣರಾಜ್ಯೋತ್ಸವ
3. ಗಾಂಧಿ ಜಯಂತಿ

ಗಾಂಧಿ ಜಯಂತಿಯನ್ನು ಏಕೆ ಆಚರಿಸಲಾಗುತ್ತದೆ?

ದೇಶದಾದ್ಯಂತ ಪ್ರತಿವರ್ಷ ಅಕ್ಟೋಬರ್ 2 ರಂದು ಅಹಿಂಸಾ ಬೋಧನೆಗಳನ್ನು ಮೌಲ್ಯೀಕರಿಸಲು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ.

ನಮ್ಮ ಈ “Rashtriya Habbagalu Essay In Kannada ಬರಹವು ನಿಮಗೆ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ.

ನಿಮ್ಮ ಸಲಹೆ ಅಥವಾ ಸೂಚನೆಗಳೇನಾದರೂ ಇದ್ದಲ್ಲಿ, ದಯವಿಟ್ಟು Comment Boxನಲ್ಲಿ Comment ಮಾಡಿ.

ಓದಿ: ಪರಿಸರ ಸಂರಕ್ಷಣೆ ಕುರಿತು ಪ್ರಬಂಧ

Leave a Comment

error: Content is protected !!