50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 2023 । Kannada GK

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು: ಈ Kannada GK ಲೇಖನದಲ್ಲಿ PC, PSI, KPSC ಹಾಗೂ ಇನ್ನೀತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ತುಂಬಾ ಮಹತ್ವದ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಲಾಗಿದೆ.

ಹಾಗಾದರೆ ತಡ ಮಾಡೋದೇಕೆ ಬನ್ನಿ ಶುರು ಮಾಡೋಣ. ಆಲ್ವಾ?

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 2023

ಈ ಲೇಖನವು ಇತಿಹಾಸ, ಭೂಗೋಳ, ವಿಜ್ಞಾನ, ಸಂವಿಧಾನ, ಕಂಪ್ಯೂಟರ್ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ ವಿಷಯವಾರು ಪ್ರಶ್ನೋತ್ತರಗಳನ್ನು ಒಳಗೊಂಡಿದೆ.

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಸಾಮಾನ್ಯ ಜ್ಞಾನ ಇತಿಹಾಸ

೧. ಸುಭಾಷ್ ಚಂದ್ರ ಭೋಸ್ ರವರು ಫಾರ್ವರ್ಡ್ ಬ್ಲಾಕ್ ಅನ್ನು ಯಾವಾಗ ಸ್ಥಾಪಿಸಿದರು?

 • 1935
 • 1937
 • 1938
 • 1939

ಉತ್ತರ: ಸುಭಾಷ್ ಚಂದ್ರ ಭೋಸ್ ರವರು 22 ಜೂನ್ 1939 ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB) ನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಪೂರ್ಣ ಸ್ವರಾಜ್ಯವನ್ನು ಪಡೆಯಬೇಕೆಂಬ ಮಹಾ ಕನಸನ್ನು ಈ ಮೂಲಕ ಭೋಸ್ ರವರು ಕಂಡಿದ್ದರು.

೨. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಸ್ಥಾಪಕರು ಯಾರು?

 • ಮೊತಿಲಾಲ್ ನೆಹರು
 • ಜಿ. ಸುಬ್ರಮಣ್ಯ ಅಯ್ಯರ್
 • ಕೆ.ಎನ್. ಗುರುಸ್ವಾಮಿ
 • ಸುಂದರ್ ಸಿಂಗ್ ಲ್ಯಾಲ್ಪುರಿ

ಉತ್ತರ: ಹಿಂದೂಸ್ತಾನ್ ಟೈಮ್ಸ್ ಆಂಗ್ಲ ದಿನಪತ್ರಿಕೆಯನ್ನು ಸುಂದರ್ ಸಿಂಗ್ ಲ್ಯಾಲ್ಪುರಿ (Sunder Singh Lyallpuri) ಸ್ಥಾಪಿಸಿದರು.

ನೆನಪಿರಲಿ: ಸ್ಥಾಪಕರ ಹೆಸರು ಮತ್ತು ದಿನ ಪತ್ರಿಕೆ.

 • ಜಿ. ಸುಬ್ರಮಣ್ಯ ಅಯ್ಯರ್ – ದ ಹಿಂದೂ
 • ಕೆ.ಎನ್. ಗುರುಸ್ವಾಮಿ – ಡೆಕ್ಕನ್ ಹೆರಾಲ್ಡ್

೩. ಬ್ಯಾಂಕಿಂಗ್ ವ್ಯವಹಾರಗಳ ಮೊದಲ ಪುರಾವೆಗಳು ಕಂಡು ಬಂದದ್ದು ಯಾವಾಗ?

 • ವೇದಗಳ ಕಾಲ
 • ಮೌರ್ಯರ ಕಾಲ
 • ಗುಪ್ತರ ಕಾಲ
 • ಮಧ್ಯ ಕಾಲಿನ ಭಾರತ

ಉತ್ತರ: ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೊಟ್ಟ ಮೊದಲ ಪುರಾವೆಗಳೆಂದರೆ ವೇದಗಳ ಕಾಲ. ವೇದಗಳ ಕಾಲದಲ್ಲಿ ಸಾಲದ ಪಾತ್ರಗಳು ಪ್ರಚಲಿತದಲ್ಲಿದ್ದವು ಅವುಗಳಿಗೆ ‘ಋಣಪತ್ರ‘ ಅಥವಾ ‘ಋಣಲೇಖ್ಯ‘ ಎಂದು ಕರೆಯಲಾಗುತ್ತಿತ್ತು ಎನ್ನಾಲಾಗಿದೆ.

Essay On Library 1

೪. ಮೂರನೇ ಆಂಗ್ಲೋ-ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

 • ಶ್ರೀರಂಗಪಟ್ಟಣ ಒಪ್ಪಂದ
 • ಮಂಗಳೂರು ಒಪ್ಪಂದ
 • ತಾಷ್ಕೆಂಟ್ ಒಪ್ಪಂದ
 • ಮೇಲಿನ ಎಲ್ಲವು

ಉತ್ತರ: 1792 ರ ಮಾರ್ಚ್ 18 ರಂದು ಸಹಿ ಹಾಕಲಾದ ಶ್ರೀರಂಗಪಟ್ಟಣಂ ಒಪ್ಪಂದವು ಮೂರನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿತು. ಈ ಒಪ್ಪಂದವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಲಾರ್ಡ್ ಕಾರ್ನ್‌ವಾಲಿಸ್ ನ ಸಹಿ , ಹೈದರಾಬಾದ್‌ನ ನಿಜಾಮ, ಮರಾಠ ಸಾಮ್ರಾಜ್ಯದ ಪ್ರತಿನಿಧಿಗಳು ಹಾಗೂ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್ ರ ಸಹಿಯ ಮೇರೆಗೆ ಕೊನೆಗೊಂಡಿತು.

೫. ತುಳಸಿದಾಸರು ಈ ಕೆಳಗಿನ ಯಾವ ಆಡಳಿತಗಾರರ ಸಮಕಾಲೀನರಾಗಿದ್ದರು?

 • ಷಹಜಾನ್
 • ಅಕ್ಬರ್
 • ಹುಮಾಯೂನ
 • ಶೇರ್ ಷಾ ಸೂರಿ

ಉತ್ತರ: ರಾಮಚರಿತಮಾನಸದ ಲೇಖಕರಾದ ತುಳಿಸಿದಾಸರು ಅಕ್ಬರ್ ನ ಸಮಕಾಲೀನರಾಗಿದ್ದರು. ತುಳಸಿದಾಸರ ಸಮಕಾಲೀನರಾದ ಅಭಾದಾಸ್(Abhadas) ರು ತುಳಸಿದಾಸರುನ್ನು ವಾಲ್ಮೀಕಿಯ ಅವತಾರ ಎಂದು ಬಣ್ಣಿಸಿದ್ದಾರೆ.

Also Read: Kannada GK Questions


ಕಂಪ್ಯೂಟರ್ ಸಾಮಾನ್ಯ ಜ್ಞಾನ

೧. ಈ ಕೆಳಗಿನವುಗಳಲ್ಲಿ ಯಾವುದು ಸರ್ಚ್ ಇಂಜಿನ್ ಅಲ್ಲ?

 • ಗೂಗಲ್ (Google)
 • ಯಾಹೂ (Yahoo)
 • ಬೈಡು (Baidu)
 • ಕ್ರೋಮ್ (Chrome)

ಉತ್ತರ: ಕ್ರೋಮ್ (Chrome) ಇದು ಒಂದು ಸರ್ಚ್ ಇಂಜಿನ್ ಅಲ್ಲ ಇದೊಂದು ಬ್ರೌಸರ್(Browser). ಸರಳವಾಗಿ ವಿವರಿಸಬೇಕೆಂದರೆ, ನಾವು ಯಾವುದರಲ್ಲಿ Search ಮಾಡುತ್ತೇವೆಯೋ ಅದು ಸರ್ಚ್ ಇಂಜಿನ್ ಉದಾಹರಣೆಗೆ Google. ನಾವು ಯಾವುದರ ಸಹಾಯದ ಮೂಲಕ Search ಮಾಡುತ್ತೇವೆಯೋ ಅದು ಬ್ರೌಸರ್ ಉದಾಹರಣೆಗೆ Chrome.

೨. PUC ಯ ವಿಸ್ತೃತ ರೂಪವೇನು?

 • Personal Unblocking Code
 • Pre-university coarse
 • Pollution Under Control
 • Plasmacytoid urothelial carcinoma

ಉತ್ತರ: Personal Unblocking Code. ಕಳೆದುಹೋದ ಅಥವಾ ಮರೆತುಹೋಗಿರುವ personal identification number ನ್ನು reset ಮಾಡಲು ಮೊಬೈಲ್ ಗಳಲ್ಲಿPersonal Unblocking Code ಅನ್ನು ಬಳಸಲಾಗುತ್ತದೆ. ನೆನಪಿರಲಿ ಇಲ್ಲಿ ನಾವು ಓದುತ್ತಿರುವುದು ಕಂಪ್ಯೂಟರ್ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಎಂಬುದು.

೩. ಈ ಕೆಳಗಿನ ಯಾವುದು Apple Phone ಗಳ tagline ಆಗಿದೆ?

 • Eat and Play
 • Half Apple
 • Royal life
 • Think different

ಉತ್ತರ: “Think different” ಅಂದರೆ ವಿಭಿನ್ನವಾಗಿ ಯೋಚಿಸಿ ಎಂಬುದು Apple ಕಂಪನಿಯ ಜಾಹಿರಾತುವಿನ tagline ಆಗಿತ್ತು. ಆದರೆ ಇದನ್ನು 2002 ರಲ್ಲಿ ನಿಲ್ಲಿಸಲಾಯಿತು.

೪. Ctrl + W ಕೀ ಕಂಪ್ಯೂಟರ್ ನಲ್ಲಿ ಏಕೆ ಬಳಸುತ್ತಾರೆ?

 • ಹೊಸ ಫೈಲ್ open ಮಾಡಲು
 • ಹೊಸ ಪ್ರೋಗ್ರಾಮ್ open ಮಾಡಲು
 • ಹೊಸ ವಿಂಡೊ open ಮಾಡಲು
 • ಎಲ್ಲ ಡಿಲೀಟ್ ಮಾಡಲು

ಉತ್ತರ: Ctrl + W Shortcut ಕೀ ಯನ್ನು ಹೊಸ ವಿಂಡೊ open ಮಾಡಲು ಬಳಸುತ್ತಾರೆ.

೫. UPI ಯ ಸರಿಯಾದ ರೂಪ(virtual address) ಯಾವುದು?

 • xyz-ybl
 • xyz
 • xyz@sbi.com
 • xyz@ybl

ಉತ್ತರ: xyz@ybl. Virtual Payment Address ಅಥವಾ VPA ಎನ್ನುವುದು UPI ದ ಮೂಲಕ ಹಣವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಒಂದು unique ID ಆಗಿದೆ.

ಮಹತ್ವದ ಕಂಪ್ಯೂಟರ್ ಸಾಮಾನ್ಯ ಜ್ಞಾನ PDF ಪಡೆಯಿರಿ.


ಭಾರತದ ಸಂವಿಧಾನ ಸಾಮಾನ್ಯ ಜ್ಞಾನ

೧. ಕೆಳಗಿನ ಯಾವ ವಿಧಿಯು ಪೌರತ್ವಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ?

 • 5 -15 ವಿಧಿ
 • 5 -11 ವಿಧಿ
 • 4 – 9 ವಿಧಿ
 • 5 – 9 ವಿಧಿ

ಉತ್ತರ: 5 -11 ವಿಧಿ

೨. ಯಾವ ವಿಧಿಯು ಶಿಕ್ಷಣದ ಹಕ್ಕಿಗೆ (Right To Education) ಸಂಬಂಧಿಸಿದೆ?

 • 81
 • 356
 • 21A
 • 51A

ಉತ್ತರ: 21A ವಿಧಿಯು Right To Education (RTE) ಗೆ ಸಂಬಂಧಿಸಿದೆ. 51A ವಿಧಿಯು ನಮ್ಮ ಮೂಲಭೂತ ಕರ್ತವ್ಯಗಳನ್ನು ಸೂಚಿಸುತ್ತದೆ.

೩. ರಾಜ್ಯ ಸಭೆ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?

 • 238
 • 250
 • 12
 • ಮೇಲಿನವು ಎಲ್ಲ

ಉತ್ತರ: ರಾಜ್ಯ ಸಭೆಯಲ್ಲಿ ಸದಸ್ಯರ ಸಂಖ್ಯೆ 250 ನ್ನು ಮೀರುವಂತಿಲ್ಲ. 250 ರಲ್ಲಿ 238 ಸದಸ್ಯರು ರಾಜ್ಯ ಮತ್ತು ಕೇಂದ್ರಾಡಳ ಪ್ರದೇಶಗಳಿಂದ ಆಯ್ಕೆಯಾದರೆ ಇನ್ನುಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ಆಯ್ಕೆ ಮಾಡುತ್ತಾರೆ.

೪. ರಾಜ್ಯಸಭೆ ಸದಸ್ಯರ ಅಧಿಕಾರವಧಿ ಎಷ್ಟು ವರ್ಷ?

 • 4 ವರ್ಷ
 • 5 ವರ್ಷ
 • 6 ವರ್ಷ
 • 10 ವರ್ಷ

ಉತ್ತರ: 6 ವರ್ಷ. ರಾಜ್ಯ ಸಭೆಯಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ. ಆದರೆ ಲೋಕಸಭೆಯ ಸದಸ್ಯರ ಅವಧಿ 5 ವರ್ಷ.

೫. ಭಾರತದ ಸಂವಿಧಾನದಲ್ಲಿ ಎಷ್ಟು ಭಾಗಗಳಿವೆ (Parts)?

 • 8
 • 22
 • 25
 • 395

ಉತ್ತರ: 25 ಭಾಗಗಳು. ಮೂಲತಃ, ಭಾರತದ ಸಂವಿಧಾನವು 395 ವಿಧಿಗಳು, 22 ಭಾಗಗಳು ಮತ್ತು 8 Schedule ಗಳನ್ನು ಹೊಂದಿತ್ತು. ನಂತರ 3 ಭಾಗಗಳನ್ನು ಸೇರಿಸಲಾಯಿತು. ಅವುಗಳೆಂದರೆ, 9A ಪುರಸಭೆಗಳು, 9B ಸಹಕಾರ ಸಂಘಗಳು ಮತ್ತು 14A ನ್ಯಾಯಮಂಡಳಿಗಳು.


ಕರ್ನಾಟಕದ ಬಗ್ಗೆ ಸಾಮಾನ್ಯ ಜ್ಞಾನ

೧. ಕರ್ನಾಟಕವನ್ನು ಸುತ್ತುವರೆದಿರುವ ಜಿಲ್ಲೆಗಳು ಎಷ್ಟು?

 • 4
 • 5
 • 6
 • 7

ಉತ್ತರ: ಕರ್ನಾಟಕವನ್ನು ಗೋವಾ, ಮಹಾರಾಷ್ಟ್ರ, ತೆಲಂಗಾಣಾ, ಆಂಧ್ರಪ್ರದೇಶ, ತಮಿಳು ನಾಡು ಹಾಗೂ ಕೇರಳ ಒಟ್ಟು 6 ರಾಜ್ಯಗಳು ಭೂ ಗಡಿಯನ್ನು ಹಂಚಿಕೊಂಡಿವೆ.

೨. ಕರ್ನಾಟಕದ ರಾಜ್ಯ ಚಿಹ್ನೆಗಳು ಯಾವುವು?

ನಮ್ಮ ರಾಜ್ಯದ ಚಿಹ್ನೆಗಳು ಈ ಕೆಳಗಿನಂತಿವೆ.

 • ಪಕ್ಷಿ – ನೀಲಕಂಠ
 • ಲಾಂಛನ – ಗಂಡಭೇರುಂಡ
 • ಮರ – ಗಂಧದ ಮರ
 • ಪ್ರಾಣಿ – ಆನೆ
 • ಹೂವು – ಕಮಲ
 • ಗೀತೆ – ಜೈ ಭಾರತ ಜನನಿಯ ತನುಜಾತೆ

೩. ಈ ಕೆಳಗಿನವುಗಳಲ್ಲಿ ಯಾವುದು ಕಂದಾಯ ವಿಭಾಗವಲ್ಲ?

 • ಬೆಳಗಾವಿ
 • ಹುಬ್ಬಳ್ಳಿ
 • ಕಲಬುರಗಿ
 • ಮೈಸೂರು

ಉತ್ತರ: ಹುಬ್ಬಳ್ಳಿ . ಒಟ್ಟು ಕರ್ನಾಟಕದಲ್ಲಿ 4 ಕಂದಾಯ ವಿಭಾಗಗಳು ಇವೆ. ಅವುಗಳೆಂದರೆ, ಮೈಸೂರು ವಿಭಾಗ (8 ಜಿಲ್ಲೆಗಳು), ಬೆಳಗಾವಿವಿಭಾಗ (7 ಜಿಲ್ಲೆಗಳು), ಕಲಬುರಗಿ ವಿಭಾಗ (6 ಜಿಲ್ಲೆಗಳು) ಮತ್ತು ಬೆಂಗಳೂರು ವಿಭಾಗ ( 9 ಜಿಲ್ಲೆಗಳು). ಒಟ್ಟಾರೆಯಾಗಿ ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ.

೪. ಜೋಳದ ರೊಟ್ಟಿ ಮತ್ತು ಶೇಂಗಾ ಚಟ್ನಿಗೆ ಪ್ರಖ್ಯಾತಿ ಪಡೆದ ಜಿಲ್ಲೆ ಯಾವುದು?

 • ಕಲಬುರಗಿ
 • ವಿಜಯಪುರ
 • ಬೆಳಗಾಳವಿ
 • ಹಾಸನ

ಉತ್ತರ: ವಿಜಯಪುರ ಜೆಲ್ಲೆಯನ್ನು “Land Of Jowar Roti And Groundnut Chatni” ಎಂದು ಕರೆಯುತ್ತಾರೆ.

೫. Science City Of India ಎಂದು ಯಾವ ನಗರಕ್ಕೆ ಕರೆಯುತ್ತಾರೆ?

 • ಕಲ್ಕತ್ತಾ
 • ಬೆಂಗಳೂರು
 • ದೆಹಲಿ
 • ಮುಂಬೈ

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಆಗಿರುವುದರಿಂದ ಬೆಂಗಳೂರನ್ನು ‘ಭಾರತದ ವಿಜ್ಞಾನ ನಗರ’ ಎಂದು ಕರೆಯುತ್ತಾರೆ. ನೆನಪಿರಲಿ: “Science City Kolkata” ಎನ್ನುವುದು ಏಷ್ಯಾದಲ್ಲೇ ಅತಿ ದೊಡ್ಡ ವಿಜ್ಞಾನ ಕೇಂದ್ರವಾಗಿದೆ.


ಭೂಗೋಳ ಸಾಮಾನ್ಯ ಜ್ಞಾನ

೧. ಕೆ.ಜಿ.ಎಫ್. ಇರುವುದು ಎಲ್ಲಿ?

 • ಅ. ರಾಯಚೂರು
 • ಬ. ಕುದುರೆ ಮುಖ
 • ಕ. ಕೋಲಾರ
 • ಡ. ಹಟ್ಟಿ

ಉತ್ತರ: ಕೆ.ಜಿ.ಎಫ್. ಇರುವುದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿದೆ.

೨. ಲಕ್ಷದ್ವೀಪಗಳುನ್ನು ಮಾಲ್ಡಿವ್ ದಿಂದ ಬೇರ್ಪಡಿಸಿದ ಕಾಲುವೆ ಯಾವುದು?

 • 80 ಕಾಲುವೆ
 • 90 ಕಾಲುವೆ
 • 100 ಕಾಲುವೆ
 • 130 ಕಾಲುವೆ

ಉತ್ತರ: 80 ಕಾಲುವೆಯು ಲಕ್ಷದ್ವೀಪಗಳನ್ನು ಮಾಲ್ಡಿವ್ಸ್ ದಿಂದ ಬೇರ್ಪಡಿಸುತ್ತದೆ. ಅದೇ ರೀತಿ 100 ಕಾಲುವೆಯು ಬಂಗಾಳ ಕೊಲ್ಲಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಗಳನ್ನು ಬೇರ್ಪಡಿಸುತ್ತದೆ. ಅದೇ ರೀತಿ 90 ಕಾಲುವೆಯು ಲಕ್ಷದ್ವೀಪಗಳಿಂದ ಮಿನಿಕೋಯ್ ದ್ವೀಪವನ್ನು ಪ್ರತ್ಯೇಕಿಸುತ್ತದೆ.

ನೆನಪಿರಲಿ: ಲಕ್ಷದ್ವೀಪ ಎಂಬುದು 36 ಚಿಕ್ಕ ದ್ವೀಪಗಳ ಗುಂಪು. 32 ಚ.ಕೀಮೀ ವಿಸ್ತೀರ್ಣವನ್ನು ಹೊಂದಿರುವುದರೊಂದಿಗೆ ಅರಬ್ಬೀ ಸಮುದ್ರದಲ್ಲಿ ಭಾರತದ ಪಶ್ಚಿಮಕ್ಕೆ ಇರುವ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ.

೩. ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ಬೆಟ್ಟಗಳಲ್ಲಿ ಕೂಡುತ್ತವೆ?

 • ಹಿಮಾಲಯ ಪರ್ವತಗಳು
 • ಶಿವಾಲಿಕ್ ಪರ್ವತಗಳು
 • ಅಣ್ಣಾಮಲೈ ಬೆಟ್ಟಗಳು
 • ನೀಲಗಿರಿ ಬೆಟ್ಟಗಳು

ಉತ್ತರ: ಪೂರ್ವ ಮತ್ತು ಪಶ್ಚಿಮ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ. ಪೂರ್ವ ಘಟ್ಟಗಳು ಪಶ್ಚಿಮಘಟ್ಟಗಳಿಗಿಂತ ಕಡಿಮೆ ಎತ್ತರದಲ್ಲಿರುತ್ತವೆ. ಪೂರ್ವ ಘಟ್ಟಗಳ ಅತಿ ಎತ್ತರದ ಪರ್ವತ ಜಿಂಧಗಡ.

೪. ಈ ಕೆಳಗಿನವುಗಳ್ಲಲಿ ಅತಿ ಹಳೆಯ ಉಕ್ಕಿನ ಕಾರ್ಖಾನೆ ಯಾವುದು?

 • IISCO
 • TISCO
 • HSL
 • BSL

ಉತ್ತರ: TISCO – Tata Iron and Steel Company ಇದು ಭಾರತದ ಅತಿ ಹಳೆಯ ಉಕ್ಕಿನ ಕಾರ್ಖಾನೆ ಮತ್ತು ಇದು ಜೆಮಶೇಡ್ ಜಿ ಟಾಟಾ ಅವರಿಂದ ಸ್ಥಾಪಿಸಲಾಯಿತು.

ಸಂಕ್ಷಿಪ್ತ ರೂಪ:

 • IISCO – Indian Iron And Steel Company
 • BSL- Bhushan Steel Limited
 • Hindustan Steel Limited

೫. ಭಾರತದ ಅತೀ ಉದ್ದದ ರಾಷ್ಟೀಯ ಹೆದ್ದಾರಿ ಯಾವುದು?

 • NH 27
 • NH 114
 • NH 44
 • NH1

ಉತ್ತರ: NH-44 ರಾಷ್ಟೀಯ ಹೆದ್ದಾರಿಯು ಜಮ್ಮು ಕಾಶ್ಮೀರದ ಶ್ರೀನಗರದಿಂದ ಶುರುವಾಗಿ ತಮಿಳು ನಾಡಿನ ಕನ್ಯಾಕುಮಾರಿ ವರಗೆ ಹರಡಿದೆ. ಇದರ ಒಟ್ಟು ಉದ್ದವು 3,745 ಕೀ.ಮಿ. NH 27 ಗುಜರಾತಿನ ಪೋರ್ ಬಂದರ್ – ಅಸ್ಸಾಂ ನ ಸಿಲ್ಚಾರ್ ವರೆಗೆ


ಸಾಮಾನ್ಯ ವಿಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

೧. ನೀರನ್ನು ಕುಡಿಯದೇ ಇರುವ ಪ್ರಾಣಿ ಯಾವುದು?

 • ಅ. ಕಾಂಗರೂ
 • ಬ. ಒಂಟೆ
 • ಕ. ಕಾಂಗರೂ ಇಲಿ
 • ಡ. ಕಾಡು ಬೆಕ್ಕು

ಉತ್ತರ: ಕ. ಕಾಂಗರೂ ಇಲಿ. ಇದೊಂದು ಕಾಂಗರೂವಿನಂತೆ ವರ್ತಿಸುವ ಒಂದು ಜಾತಿಯ ಇಲಿ. ಇದು ಉತ್ತರ ಅಮೇರಿಕ ಪ್ರದೇಶಗಳಲ್ಲಿ ಕಂಡುಬರುತ್ತದೆ.

೨. ಅತ್ಯಂತ ದೊಡ್ಡ ಜೀವಕೋಶ ಯಾವುದು?

 • ಅ . ನರಕೋಶ
 • ಬ. ಅಂಡಾಣು
 • ಕ. ಕೋಳಿ ಮೊಟ್ಟೆ
 • ಡ. ಉಷ್ಟ್ರ ಪಕ್ಷಿಯ ಮೊಟ್ಟೆ

ಉತ್ತರ: ಡ . ಉಷ್ಟ್ರ ಪಕ್ಷಿಯ ಮೊಟ್ಟೆ. ಈ ಮೊಟ್ಟೆಯು ಒಂದು ಒಂದು ಜೀವಕೋಶದಿಂದ ಆಗಿರುವುದರಿಂದ ಇದನ್ನು ಅತಿ ದೊಡ್ಡ ಜೀವಕೋಶ ಎಂದು ಕರೆಯುತ್ತಾರೆ.

ನೆನಪಿರಲಿ: ಮಾನವನ ದೇಹದ ಅತಿ ದೊಡ್ಡ ಕೋಶವೆಂದರೆ ಅಂಡಾಣು. ಮಾನವನ ದೇಹದ ಅತಿ ಉದ್ದದ ಜೀವಕೋಶ ಎಂದರೆ ಅದು ನರಕೋಶ.

೩. ಕೆಂಪು ರಕ್ತಕಣಗಳ ಜೇವಿತಾವಧಿ ಎಷ್ಟು?

 • ಅ. 100 ದಿನಗಳು
 • ಬ. 120 ದಿನಗಳು
 • ಕ. 130 ದಿನಗಳು
 • ಡ. 160 ದಿನಗಳು

ಉತ್ತರ: ಬ. ಕೆಂಪು ರಕ್ತಕಣಗಳ ಜೇವಿತಾವಧಿ 120 ದಿನಗಳು. ಅದೇ ರೀತಿ ಬಿಳಿ ರಕ್ತ ಕಣಗಳು 3-15 ದಿನಗಳು ಹಾಗೂ ಪ್ಲೇಟೆಲೆಟ್ (Platelets) ಗಳ ಜಿವೀತಾವಧಿ 10 ದಿನಗಳು.

೪. ಎರಡು ಕೋಣೆಗಳುಳ್ಳ ಹೃದಯವನ್ನು ಹೊಂದಿರುವ ಕಶೇರುಕಗಳು ಯಾವವು?

 • ಅ. ಮೀನು
 • ಬ. ಹಾವು
 • ಕ. ನೀಲಿ ತಿಮಿಂಗಲ
 • ಡ. ಮೊಸಳೆ

ಉತ್ತರ: ಅ ಮೀನು. ಶೀತ ರಕ್ತದ ಜಲಚರಗಳಾದ ಈ ಮೀನುಗಳು ಎರಡು ಹೃದಯದ ಕೋಣೆಗಳನ್ನು ಹೊಂದಿವೆ.

೫. ಮಾಸ್ಟರ್ ಗ್ಲ್ಯಾಂಡ್ ಎಂದು ದೇಹದ ಯಾವ ಗ್ರಂಥಿಯನ್ನು ಕರೆಯುತ್ತಾರೆ?

 • ಅ.ಪಿಟ್ಯುಟರಿ ಗ್ರಂಥಿ
 • ಬ.ಮೆದೋಜಿರಕ ಗ್ರಂಥಿ
 • ಕ.ಪೀನಲ್ ಗ್ರಂಥಿ
 • ಡ.ಥೈಮಸ್ ಗ್ರಂಥಿ

ಉತ್ತರ: ಅ ಪಿಟ್ಯುಟರಿ ಗ್ರಂಥಿಯನ್ನು ಮಾಸ್ಟರ್ ಗ್ಲ್ಯಾಂಡ್ ಎಂದು ಕರೆಯುತ್ತಾರೆ. ಏಕೆಂದರೆ ಇದು ಎಲ್ಲಾ ಅಂತಃಸ್ರಾವಕ (Endocrine) ಗ್ರಂಥಿಗಳ ಕಾರ್ಯವನ್ನು ನಿಯಂತ್ರಿಸುತ್ತದೆ.

ವಿಜ್ಞಾನ ಸಾಮಾನ್ಯ ಜ್ಞಾನದ ಪೂರ್ತಿ ಲೇಖನವನ್ನು ಓದಿ.


ಗಣಿತ ರಸ ಪ್ರಶ್ನೆಗಳು ಮತ್ತು ಉತ್ತರಗಳು

೧. 121 ರಿಂದ 11 ಅನ್ನು ಹತ್ತು ಬಾರಿ ಕಳೆದಾಗ ಎಷ್ಟು ಉಳಿಯುತ್ತದೆ?

 • 0
 • 1
 • 11
 • -11

ಉತ್ತರ 11. ಹೇಗೆಂದರೆ, 121-11×10= 11.

೨. ಮೊದಲ ನಾಲ್ಕು ಅವಿಭಾಜ್ಯ ಸಂಖ್ಯೆಗಳ ಮೊತ್ತ ಎಷ್ಟಾಗಿರುತ್ತದೆ?

 • 6
 • 10
 • 14
 • 17

ಉತ್ತರ 17. ಅವಿಭಾಜ್ಯ ಸಂಖ್ಯೆಗಳೆಂದರೆ ತಮ್ಮಿಂದ ಮತ್ತು 1 ರಿಂದ ಮಾತ್ರ ಭಾಗವಾಗುವ ಸಂಖ್ಯೆಗಳು. ಉದಾಹರಣೆಗೆ 2,3,4,5,7,11,13… ಇವುಗಳಲ್ಲಿ ಮೊದಲ ನಾಲ್ಕು ಅವಿಭಾಜ್ಯ ಸಂಖ್ಯೆಗಳ ಮೊತ್ತ ಎಂದರೆ 2+3+5+7=17

೩. 2-3+3÷3×3-2=?

 • 0
 • 1
 • 2
 • 3
 • 4

ಉತ್ತರ 0. Solve ಮಾಡಲು BODMAS ನಿಯಮವನ್ನು ಪಾಲಿಸಿ.

೪. ವೃತ್ತದ ವಿಸ್ತೀರ್ಣವನ್ನು ಕಂಡುಹಿಡಿವ ಸೂತ್ರ ಯಾವುದು?

 • 2πR
 • πR
 • 2πR/4
 • πR2

ಉತ್ತರ: ವೃತ್ತದ ವಿಸ್ತೀರ್ಣವನ್ನು ಕಂಡುಹಿಡಿಯಲು πR2 ಸೂತ್ರವನ್ನು ಬಳಸಲಾಗುತ್ತದೆ. ಇಲ್ಲಿ π=3.14 ಹಾಗೂ R ವೃತ್ತದ ತ್ರಿಜ್ಯದ ಅಳತೆ.

೫. ಆಯತದ ಉದ್ದ 7 ಮೀ. & ಅಗಲ 3ಮೀ. ಆದರೆ ಅದರ ಸುತ್ತಳತೆ ಎಷ್ಟು?

 • 10m
 • 20m
 • 21m
 • 22m

ಉತ್ತರ: ಆಯತದ ಸುತ್ತಳತೆ= 2x(ಉದ್ದ+ಅಗಲ)=2x(7+3)=2


FAQ On ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

Q1. ಸಾಮಾನ್ಯ ಜ್ಞಾನ WhatsApp group link ತಿಳಿಸಿ.

ನೀವು ಸಾಮಾನ್ಯ ಜ್ಞಾನ, ಪ್ರಬಂಧ, ವ್ಯಾಕರಗಳ Daily Update & PDF ಪಡೆಯಲು Info Kannadiga ಜಾಲತಾಣದ WhatsApp Group Join ಆಗಿ.

Q2. ಪ್ರಬಂಧ ಮತ್ತು ಸಾಮಾನ್ಯ ಜ್ಞಾನಕ್ಕೆ ಒಳ್ಳೆಯ Website ತಿಳಿಸಿ.

InfoKannadiga.Com ಜಾಲತಾಣದಲ್ಲಿ ತುಂಬಾ ಉತ್ತಮ ಪ್ರಬಂಧಗಳು, GK , ವ್ಯಾಕರಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಗಳು ಮತ್ತು ಲೇಖನಗಳು ಲಭ್ಯ ಇವೆ.

Q3. InfoKannadiga.Com ಜಾಲತಾಣದ Telegram channel join ಆಗುವುದು ಹೇಗೆ?

InfoKannadiga ಜಾಲತಾಣದ ಟೆಲಿಗ್ರಾಂ ಚಾನೆಲ್ ಗೆ ಉಚಿತವಾಗಿ Join ಆಗಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. Join Free

ನಮ್ಮ ಈ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು ನಿಮಗೆ ಸಹಾಯಕವಾಗಿದೆ ಎಂದು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ comment ಮಾಡಿ.

ಓದಿ: ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು Part-2

2 thoughts on “50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 2023 । Kannada GK”

Leave a Comment