Starlink ಎಂದರೇನು ಮತ್ತು Starlink ಹೇಗೆ ಕೆಲಸ ಮಾಡುತ್ತದೆ?

Starlink Explained in Kannada: ಇಂಟರ್ನೆಟ್ ಬಳಸುತ್ತಿರುವ ಬಹುತೇಕ ಎಲ್ಲರಿಗೂ ಸ್ಟಾರ್ಲಿಂಕ್ ಬಗ್ಗೆ, Starlink ಎಂದರೇನು ಮತ್ತು Starlink ಹೇಗೆ ಕೆಲಸ ಮಾಡುತ್ತದೆ? ಹಾಗೂ ನಮಗೆ ಈ ಸೇವೆ ಸಿಗುತ್ತಾ ಅಥವಾ ಸಿಗುವುದಾದರೆ ಯಾವಾಗ? ಹೀಗೆ ಹಲವಾರು ಪ್ರಶ್ನೆಗಳು ಕಾಡಿರಬಹುದು.

ಬನ್ನಿ, ಸ್ಟಾರ್ಲಿಂಕ್ ಕುರಿತ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ. ಅದಕ್ಕಿಂತ ಮುಂಚೆ ಈ ಕೆಳಗಿನ ಇತಿಹಾಸದ ಮುಖ್ಯಾಂಶಗಳನ್ನು ಸ್ವಲ್ಪ ನೋಡಿಕೊಳ್ಳೋಣ.

ಇತಿಹಾಸ – 2014ರಂದು ರಷ್ಯಾ ದೇಶವು ಒಂದೇ ರಾಕೆಟ್ (Dnepr Rocket) ಮೂಲಕ 37 ಉಪಗ್ರಹಗಳನ್ನು ಉಡಾವಣೆ ಮಾಡಿ ಇತಿಹಾಸ ಬರೆದಿತ್ತು. ಆ ದಾಖಲೆಯನ್ನು 2017 ಫೆಬ್ರುವರಿ 15 ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO, 104 ಉಪಗ್ರಹಗಳನ್ನು ಒಂದೇ ರಾಕೆಟ್ PSLV-C37 ಮೂಲಕ ಉಡಾವಣೆ ಮಾಡಿ ಯಶಸ್ವಿಯಾಗಿ ಭೂ-ಕಕ್ಷೆಗೆ ಸೇರಿಸುವುದರ ಮೂಲಕ ರಷ್ಯಾದ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹಾಕಿತ್ತು.

ಇದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ತಿಳಿದಿರುವ ವಿಷಯ.

ಈ ದಾಖಲೆಯನ್ನು ವಿಶ್ವದ ಖ್ಯಾತ ಉದ್ಯಮಿ ಮತ್ತು ವಿಶ್ವದ ಅತಿ ಶ್ರೀಮಂತ ವ್ಯಕ್ತಿ Elon Musk ರವರ SpaceX ಕಂಪನಿಯು ತನ್ನ Falcon 9 ರಾಕೆಟಿನ ಮೂಲಕ 143 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಿ ವಿಶ್ವದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿತು.

ಎಲಾನ್ ಮಸ್ಕ್ ರವರು Starlink ಯೋಜನೆಗೆ ಬೇಕಾದ ಕೃತಕ ಉಪಗ್ರಹಗಳನ್ನು ಭೂ ಕಕ್ಷೆಗೆ ಸೇರಿಸಲು, ತಮ್ಮ SpaceX ಕಂಪನಿಯ ಉಪಗ್ರಹ ಉಡಾವಣಾ ರಾಕೆಟ್ ಬಳಸಿಕೊಳ್ಳುತ್ತಿದ್ದಾರೆ. Elon Musk ರವರು ಈ SpaceX ಕಂಪನಿಯ ಮಾಲೀಕರೂ ಹೌದು.


Starlink ಎಂದರೇನು? (What Is Starlink In Kannada)

Starlink ಎನ್ನುವುದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿ, ಭೂಮಿಯ ಪ್ರತಿ ಮೂಲೆಯಲ್ಲೂ ಉಪಗ್ರಹಗಳ ಸಮೂಹದ ಮೂಲಕ ಅತಿ ವೇಗದ Internet ಸೇವೆಯನ್ನು ಒದಗಿಸುವ SpaceX ಕಂಪನಿಯ ಒಂದು ಮಹಾಯೋಜನೆ ಆಗಿದೆ.

ಈಗಾಗಲೇ( ಅಕ್ಟೋಬರ್ 12, 2021) SpaceX  ಸುಮಾರು 1,800 Starlink ಉಪಗ್ರಹಗಳನ್ನು ಭೂಕಕ್ಷೆಯಲ್ಲಿ ನಿಯೋಜನೆ ಮಾಡಿದೆ. ಮುಂದೆ ಈ ಕಕ್ಷೆಗೆ ಸುಮಾರು 42,000 ಉಪಗ್ರಹಗಳನ್ನು ಸೇರಿಸುವ ನಿರೀಕ್ಷಣೆಯಲ್ಲಿದೆ.

ಓದಿ: ಕಂಪ್ಯೂಟರ್ ಕುರಿತು ಪೂರ್ಣ ಮಾಹಿತಿ

ಅಮೆರಿಕದ Nonprofit Science Advocacy ಸಂಸ್ಥೆಯ ಪ್ರಕಾರ, ಸದ್ಯಕ್ಕೆ ಭೂ ಕಕ್ಷೆಯಲ್ಲಿ ಕಾರ್ಯಾಚರಣೆಯಲ್ಲಿರುವ ಉಪಗ್ರಹಗಳ ಒಟ್ಟು ಸಂಖ್ಯೆಯೇ 4,084. ಇವುಗಳಿಗೆ ಹೋಲಿಸಿದರೆ ಸ್ಟಾರ್ಲಿಂಕ್ ಉಪಗ್ರಹಗಳ ಸಂಖ್ಯೆ 10 ಪಟ್ಟು ಹೆಚ್ಚಾಗುತ್ತದೆ.

ಹಾಗೆ ನೋಡಿದರೆ, ಉಪಗ್ರಹಗಳಿಂದ ಇಂಟರ್ನೆಟ್ ಒದಗಿಸುವುದು ಹೊಸ ವಿಚಾರವೇನಲ್ಲ. ಟಿವಿ, ರೇಡಿಯೋ ಸೇವೆಗಳನ್ನು ಒದಗಿಸುವ ಉಪಗ್ರಹಗಳಂತೆ, ಇಂಟರ್ನೆಟ್ ಅನ್ನೂ ಸಹ ಒದಗಿಸುವ ಸಂಪರ್ಕ ಉಪಗ್ರಹಗಳಿವೆ.

ಹಾಗಾದರೆ ಈ Starlink ಇಂಟರ್ನೆಟ್ ಸೇವೆಯಲ್ಲಿ ಏನು ಹೊಸದಿದೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.


ಸಾಂಪ್ರದಾಯಿಕ ಸೇವೆಗಳಿಗಿಂತ Starlink Internet Service ಹೇಗೆ ವಿಭಿನ್ನ?

ಸಾಂಪ್ರದಾಯಿಕ(ಮೊದಲ) ಉಪಗ್ರಹಗಳು ಬಹುತೇಕ Geostationary ಅಥವಾ Medium Earth Orbit ಗಳಲ್ಲಿ ಸುತ್ತುವಂತೆ ನಿಯೋಜಿಸಲಾಗುತ್ತಿತ್ತು. ಆದ್ದರಿಂದ ಉಪಗ್ರಹ ಮತ್ತು ಭೂಮಿಯ ನಡುವಿನ ದೂರ ಹೆಚ್ಚಾಗುತ್ತಿತ್ತು.

ಸರಿಸುಮಾರು 37,786 ಕಿ. ಮೀ ದೂರ ಆಗುವುದರಿಂದ ಸಿಗ್ನಲ್ ಗಳು ಸರಿಯಾಗಿ ಬರಲು ವಾತಾವರಣದ ಮಳೆ, ಮೋಡಗಳಂತಹ ಅನೇಕ ತೊಡಕುಗಳು ಎದುರಾಗುತ್ತಿದ್ದವು. ಅಲ್ಲದೆ ಅಷ್ಟು ದೂರದಿಂದ Signals ಬರಲು ಸಮಯ ತೆಗೆದುಕೊಳ್ಳುತ್ತದೆ.

ನಿಮ್ಮ ಮನೆಯ ಟಿವಿ ಸಿಗ್ನಲ್ ಸರಿಯಾಗಿ ಬರದಿದ್ದಾಗ, ನೀವು ಮನೆಯ ಮೇಲಿನ ಆಂಟಿನದ ತಲೆಯನ್ನು ಸಿಟ್ಟಿನಿಂದ ಎಡಕ್ಕೆ-ಬಲಕ್ಕೆ ಹೀಗೆ ಟಿವಿ ಪರದೆಯ ಮೇಲೆ ಚಿತ್ರ ಮೂಡುವವರೆಗೂ ತಿರುಗಿಸಿರುವ ನೆನಪು ಇರಬಹುದು ಅಲ್ವಾ?

ಹೀಗಾಗಿ, Starlink Project ನ ಉಪಗ್ರಹಗಳನ್ನು Low Earth Orbit (LEO) ನಲ್ಲಿ ನಿಯೋಜಿಸಲಾಗುತ್ತಿದೆ. ಈ ಉಪಗ್ರಹಗಳು ಭೂಮಿಯಿಂದ ಸುಮಾರು 550 ಕಿ.ಮೀ ಎತ್ತರದಲ್ಲಿ ಸುತ್ತುವುದರಿಂದ ತುಂಬಾ Strong Signal ಗಳನ್ನು ವೇಗವಾಗಿ ಭೂಮಿಗೆ ತಲುಪಿಸಲು ಮತ್ತು ಪಡೆಯಲು ಸುಲಭವಾಗುತ್ತದೆ.

ಅದಲ್ಲದೇ, Optical Fiber ಗಳಿಗಿಂತ ಬಾಹ್ಯಾಕಾಶ(Space) ದಲ್ಲಿ ಸಿಗ್ನಲ್ ಗಳು ಅತಿ ವೇಗವಾಗಿ ಚಲಿಸುತ್ತವೆ. ಆದ್ದರಿಂದ ಸಧ್ಯಕ್ಕೆ ಆಪ್ಟಿಕಲ್ ಫೈಬರ್ ಗಳ ಮೂಲಕ ಇಂಟರ್ನೆಟ್ ಅನ್ನು ಒದಗಿಸುತ್ತಿರುವ ಏರ್ಟೆಲ್, ಜಿಯೋಗಳಿಗೆ ಪ್ರತಿಸ್ಪರ್ಧಿಯಾಗಿ ಈ Starlink ನಿಲ್ಲಬಹುದು.


ಏನಿದು Low Earth Orbit (LEO)?

ಇದೊಂದು ಭೂ ಕಕ್ಷೆಯಾಗಿದ್ದು, ಸರಿಸುಮಾರು 160 ಕಿ.ಮೀ ದಿಂದ 2,000 ಕಿ.ಮೀ ದೂರದಲ್ಲಿದೆ. ಭೂಕಕ್ಷೆಗಳು ನಿಮಗೆ ಗೊತ್ತಿಲ್ಲ ಎಂದಾದಲ್ಲಿ, ಇದನ್ನು ನೀವು ಭೂಮಿಯಿಂದ 160-2000 ಕಿ.ಮೀ ದೂರದಲ್ಲಿರುವ ಜಾಗ ಅಥವಾ ಪ್ರದೇಶ ಎಂದು ಅರ್ಥಮಾಡಿಕೊಳ್ಳಬಹುದು.

Starlink ಭೂ ಕಕ್ಷೆಗಳು

ಭೂ ಕಕ್ಷೆಗಳನ್ನು ತಿಳಿದುಕೊಳ್ಳಲು ಈ ಮೇಲಿನ ಚಿತ್ರವನ್ನು ಗಮನಿಸಿ.

LEO ಕಕ್ಷೆಯಲ್ಲಿ ಹಲವಾರು ಬಾಹ್ಯಾಕಾಶ Mission ಗಳನ್ನು ಹಮ್ಮಿಕೊಳ್ಳಲಾಗುತ್ತದೆ. International Space Station ಸಹ ಕಾರ್ಯನಿರ್ವಹಿಸಲು ಈ ಕಕ್ಷೆಯನ್ನು ಬಳಸಿಕೊಳ್ಳುತ್ತದೆ.

ಭೂಮಿಯ ಕೆಲವು ಮುಖ್ಯ ಕಕ್ಷೆಗಳು ಈ ಕೆಳಗಿನಂತಿವೆ.

ಭೂ ಕಕ್ಷೆಗಳುಭೂ ಮೇಲ್ಮೈಯಿಂದ ದೂರ
High Earth Orbit (HEO)36,000 km
Medium Earth Orbit (MEO)20,200 km
Low Earth Orbit (LEO)160 to 2,000 km

Starlink ಹೇಗೆ ಕೆಲಸ ಮಾಡುತ್ತದೆ? | How Starlink Works?

ಇದೊಂದು ಉಪಗ್ರಹ ಆಧಾರಿತ ಇಂಟರ್ನೆಟ್ ಸರ್ವಿಸ್ ಆಗಿದ್ದು ನಮ್ಮ ಮನೆ-ಮನೆಗಳಿಗೆ ಸಿಗ್ನಲ್ ಗಳನ್ನು ರವಾನೆ (Transmit) ಮಾಡಲು ಉಪಗ್ರಹಗಳನ್ನು ಬಳಸಿಕೊಳ್ಳುತ್ತದೆ.

ಸ್ಟಾರ್ಲಿಂಕ್ ಕಂಪನಿಯ ಇಂಜಿನಿಯರ್ ಗಳು ಕೈಗೊಂಡ ಪ್ರಯೋಗದ ಪ್ರಕಾರ, ಈ ಉಪಗ್ರಹಗಳು ತಮ್ಮೊಳಗೆ Communicate ಮಾಡಲು Laser Beam ಗಳನ್ನು ಬಳಸಿಕೊಳ್ಳುತ್ತವೆ.

ನಿರ್ವಾತದಲ್ಲಿ ಅಂದರೆ, ಬಾಹ್ಯಾಕಾಶದಲ್ಲಿ ಲೇಸರ್ ಕಿರಣಗಳು ಬೆಳಕಿನ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದರಿಂದ ಫೈಬರ್ ಆಪ್ಟಿಕ್ ಕೇಬಲ್ ಗಳಿಗಿಂತ ವೇಗವಾಗಿ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ.

ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಿಕೊಳ್ಳಲು Satellite Dish, Wi-Fi router, Power supply, Cables ಮತ್ತು Mounting tripod ಗಳೆಲ್ಲವನ್ನೂ ಒಳಗೊಂಡ ಒಂದು Starlink Kit ಬೇಕಾಗುತ್ತದೆ.

ಈ Satellite Dish ಗೆ ಬರೀ ಸೆಟ್ ಮಾಡಿದರೆ ಸಾಕು. ಸಿಗ್ನಲ್ ಇರುವ ಕಡೆ ಅದರ ತಲೆಯನ್ನು ತಿರುಗಿಸಬೇಕು ಎಂಬುದಿಲ್ಲ, ತನ್ನಿಂದ ತಾನೇ ಸಿಗ್ನಲ್ ಇರುವ ಕಡೆ ಮುಖಮಾಡಿ ಉಪಗ್ರಹಗಳೊಂದಿಗೆ ಕನೆಕ್ಟ್ ಆಗಿಬಿಡುತ್ತದೆ.

ಆದರೆ ಯಾವುದೇ ಗಿಡಗಳು ಅಥವಾ ಅಡಚಣೆಗಳು ಇರಬಾರದು. ಪರಿಪೂರ್ಣವಾಗಿ ಆಕಾಶ ಕಾಣುವಂತಿರಬೇಕು ಅಷ್ಟೇ.

ಅಮೆಜಾನ್ ಮತ್ತು ಏರ್ಟೆಲ್ ಕಂಪನಿಗಳೂ ಸಹ ನಾವೇನು ಕಡಿಮೆಯಿಲ್ಲ ಎಂಬಂತೆ ಉಪಗ್ರಹಗಳ ಮೂಲಕ ಅಂತರ್ಜಾಲವನ್ನು ನೀಡುವ ಯೋಜನೆಗೆ ಕೈ ಹಾಕಿವೆ. ಆದರೆ ಇವುಗಳು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬುದು ಭವಿಷ್ಯವೇ ಹೇಳಬೇಕು.

ಇವುಗಳಿಗೆ ಹೋಲಿಸಿದರೆ ಎಲಾನ್ ಮಸ್ಕ್ ರವರ Starlink Project ಬೇಗನೆ ಯಶಸ್ವಿಯಾಗುವ ಸಾಧ್ಯತೆಗಳಿವೆ.


Starlink ಯೋಜನೆಗೆ Plus Points

ಎಲಾನ್ ಮಸ್ಕ್ ರವರ ಯೋಜನೆಗೆ ಮುಖ್ಯವಾದ ಪ್ಲಸ್ ಪಾಯಿಂಟ್ ಎಂದರೆ ಅದು SpaceX. ಇದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿದ್ದು ಸ್ವಂತ ಉಪಗ್ರಹ ಉಡಾವಣಾ ವಾಹನವನ್ನು ಹೊಂದಿದೆ.

ವಿಕಿಪಿಡಿಯಾ ಪ್ರಕಾರ SpaceX ಬಳಸುವ Falcon 9 ರಾಕೆಟ್ ಬಹುತೇಕವಾಗಿ ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಬಹುತೇಕವಾಗಿ ಎಂದರೆ Falcon 9 ಎನ್ನುವುದು 2 ಹಂತದ (two-stage-to-orbit) ರಾಕೆಟ್ ಆಗಿದ್ದು, ಉಪಗ್ರಹಗಳನ್ನು ಸಂಪೂರ್ಣವಾಗಿ ಭೂಕಕ್ಷೆಗೆ ತಲುಪಿಸುವವರೆಗೂ ಕಕ್ಷಾವೇಗವನ್ನು (Orbit Velocity) ಪಡೆಯಲು ಎರಡು ಹಂತದಲ್ಲಿ ಬೇರ್ಪಡುತ್ತದೆ.

ಮೊದಲನೆಯ ಹಂತದಲ್ಲಿ ಬೇರ್ಪಟ್ಟ ರಾಕೆಟ್ ಅನ್ನು ಮತ್ತೇ ಭೂಸ್ಪರ್ಶ ಮಾಡಿಸಿ ಮರುಬಳಕೆ ಮಾಡಬಹುದು. ಈ ಮರುಬಳಕೆ ತಂತ್ರಜ್ಞಾನವನ್ನು ಸಧ್ಯಕ್ಕೆ SpaceX ಮಾತ್ರ ಹೊಂದಿದ್ದು, ಇವರ Starlink ಯೋಜನೆಗೆ ಇದು ಮತ್ತಷ್ಟು ಬಲ ತುಂಬುತ್ತದೆ.

ಈ ಮರುಬಳಕೆ ತಂತ್ರಜ್ಞಾನವನ್ನು ಪಡೆಯಲು ವಿಶ್ವದ ಹಲವಾರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿವೆ.

ಬೇರೆ ಕಂಪನಿಗಳು ತಮ್ಮ ಉಪಗ್ರಹಗಳನ್ನು Launch ಮಾಡಿಸಲು ಬೇರೆ ಉಪಗ್ರಹ ಉಡಾವಣಾ ಸಂಸ್ಥೆಗಳ ಸಹಾಯ ಹಸ್ತವನ್ನು ಕೋರಬೇಕಾಗುತ್ತದೆ. ಆದ್ದರಿಂದ ಉಪಗ್ರಹಗಳ ಮೂಲಕ ಇಂಟರ್ನೆಟ್ ಅನ್ನು ಒದಗಿಸುವ ಯೋಜನೆ ಬೇರೆ ಕಂಪನಿಗಳಿಗೆ ತುಂಬಾ ವೆಚ್ಚದಾಯಕ ಆಗುವ ಸಾಧ್ಯತೆಗಳಿವೆ.

ಓದಿ: ಮೊಬೈಲ್ ಕುರಿತು ಪೂರ್ಣ ಮಾಹಿತಿ


ಸ್ಟಾರ್ ಲಿಂಕ್ ಗೆ ಅಷ್ಟೊಂದು ಉಪಗ್ರಹಗಳು ಏಕೆ ಬೇಕು?


European Space Agency (ESA) ಪ್ರಕಾರ, ಪ್ರತಿಗಳು ಸೆಕೆಂಡಿಗೆ 7.8 km ವೇಗದಲ್ಲಿ Low Earth Orbit ನಲ್ಲಿ ಚಲಿಸುತ್ತಿರುವ ಉಪಗ್ರಹಗಳು ಭೂಮಿಯನ್ನು ಒಂದು ಸುತ್ತು ಹಾಕಲು ಸುಮಾರು 90 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತವೆ.

ಅರ್ಥಾತ್, Low Earth Orbit ಉಪಗ್ರಹಗಳು ಭೂಮಿಗೆ ಹತ್ತಿರ ಇರುವುದರಿಂದ Higher Earth Orbit ಉಪಗ್ರಹಗಳಂತೆ ಇಡೀ ಭೂಗೋಳಕ್ಕೆ ಸ್ಥಿರವಾದ ಸಿಗ್ನಲ್ ಗಳ range ನ್ನು Maintain ಮಾಡಲು ಸಾಧ್ಯವಿಲ್ಲ.

ನಿರಂತರ ಮತ್ತು ವೇಗದ ಸಿಗ್ನಲ್ ಗಳನ್ನು ಭೂಮಿಗೆ ತಲುಪಿಸಲು ಸಾವಿರಾರು ಉಪಗ್ರಹಗಳು ಒಂದೇ ಸಮಯದಲ್ಲಿ ಭೂಮಿಯನ್ನು ಸುತ್ತುವ ಅವಶ್ಯಕತೆ ಇದೆ. ಈ ನಿರಂತರತೆ ಮತ್ತು ವೇಗವನ್ನು ನಿರ್ವಹಿಸಲು ಸಾವಿರಾರು ಉಪಗ್ರಹಗಳು ಬೇಕಾಗುತ್ತವೆ.

Starlink Satellite ಗಳು ಸಾಂಪ್ರದಾಯಿಕ ಅಂದರೆ ಮೊದಲು ಬಳಸುತ್ತಿದ್ದ ಉಪಗ್ರಹಗಳಿಗಿಂತ 60 ಪಟ್ಟು ಭೂಮಿಗೆ ಹತ್ತಿರವಾಗಿವೆ.

ಇದು ನೆಟ್ವರ್ಕ್ ಬರುವ ವಿಳಂಬವನ್ನು ಕಡಿಮೆ ಕಡಿಮೆ ಮಾಡುವುದಲ್ಲದೇ, ಸಾಂಪ್ರದಾಯಿಕ ಉಪಗ್ರಹಗಳಿಂದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಾಧ್ಯವಿಲ್ಲದ ಪ್ರದೇಶಗಳಿಗೆ ಇಂಟರ್ನೆಟ್ ಅನ್ನು ತಲುಪಿಸಲು ಸಹಾಯವಾಗುತ್ತದೆ.

ಹಾಗಾದರೆ ಬನ್ನಿ ಸ್ಟಾರ್ ಲಿಂಕ್ ನ ಒಳಿತು-ಕೆಡುಕುಗಳ ಬಗ್ಗೆ ತಿಳಿದುಕೊಳ್ಳೋಣ.


ಸ್ಟಾರ್ಲಿಂಕ್ ನ ಅನುಕೂಲಗಳು – Advantages Of Starlink

ಸ್ಟಾರ್ಲಿಂಕ್ ನ ಕೆಲವು ಅನುಕೂಲಗಳು ಈ ಕೆಳಗಿನಂತಿವೆ

  • ವೇಗದ ಇಂಟರ್ನೆಟ್ – ಸಾಂಪ್ರದಾಯಿಕ ಉಪಗ್ರಹಗಳ ಇಂಟರ್ನೆಟ್ ಗಿಂತ ಸ್ಟಾರ್ಲಿಂಕ್ ಇಂಟರ್ನೆಟ್ ಅತಿ ವೇಗವಾಗಿದೆ.
  • ವಿಶ್ವವ್ಯಾಪಿ ಇಂಟರ್ನೆಟ್ – ಭೂಮಿಯ ಪ್ರತಿ ಮೂಲೆಯಲ್ಲಿಯೂ ಸಹ ಇಂಟರ್ನೆಟ್ ಸೇವೆ ದೊರೆಯಲಿದೆ.
  • ಸುಲಭ ಬಳಕೆ – ಸ್ಟಾರ್ಲಿಂಕ್ ಒದಗಿಸುವ kit ನ್ನು ಬಳಸಿಕೊಂಡು ಸುಲಭವಾಗಿ ಬಳಸಬಹುದು.
  • ವೇಗದ ವಿಪತ್ತು ಚೇತರಿಕೆ  – ಬಿರುಗಾಳಿ, ಸುಂಟರಗಾಳಿ, ಕಾಡ್ಗಿಚ್ಚು, ಚಂಡಮಾರುತಗಳು  ಅಥವಾ ಪ್ರವಾಹವು ಇಂಟರ್ನೆಟ್ ಕೇಬಲ್ ಅನ್ನು ತೀವ್ರವಾಗಿ ಹಾನಿಗೊಳಿಸಬಹುದು. ಇದನ್ನು ಸರಿಪಡಿಸಲು ಸಮಯ ಮತ್ತು ವೆಚ್ಚ ತೆಗೆದುಕೊಳ್ಳುತ್ತದೆ. ಆದರೆ ಸ್ಟಾರ್ಲಿಂಕ್ ಗೆ ಇದ್ಯಾವುದೇ ಕೇಬಲ್ ಗಳ ಅವಶ್ಯಕತೆ ಇಲ್ಲ.
  • ವಿಶ್ವಾಸಾರ್ಹ

ಸ್ಟಾರ್ಲಿಂಕ್ ನ ಅನಾನುಕೂಲಗಳು | Disadvantages Of Starlink

ಸ್ಟಾರ್ಲಿಂಕ್ ಇಂಟರ್ನೆಟ್ ಗೂ ಸಹ ಕೆಲವು ಅನಾನುಕೂಲಗಳಿವೆ. ಆದರೆ ಅವ್ಯಾವುವೂ ಈ ಸೇವೆಯನ್ನು ಬಿಟ್ಟು ಬಿಡುಲು ಉತ್ತೇಜಿಸುವ ಅನಾನುಕೂಲಗಳಲ್ಲ.

  • Hardware Installation – ಸ್ಟಾರ್ಲಿಂಕ್ ಡಿಶ್ ಅನ್ನು ಬಳಕೆದಾರರೇ ಅಳವಡಿಸಿಕೊಳ್ಳಬೇಕಾಗುತ್ತದೆ ಅಥವಾ ಬೇರೆಯವರಿಗೆ ಅಳವಡಿಸಲು ಹೇಳಬೇಕಾಗುತ್ತದೆ.ಈ ಸೇವೆಯನ್ನು ಸ್ಟಾರ್ಲಿಂಕ್ ಒದಗಿಸುವುದಿಲ್ಲ.
  • ಸ್ಟಾರ್ಲಿಂಕ್ Portable ಅಲ್ಲ – ಅಂದರೆ ನಾವು ಬಳಸುತ್ತಿರುವ ಮೊಬೈಲ್ ಇಂಟರ್ನೆಟ್ ನಂತೆ ಎಲ್ಲೆಂದರಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಇಂಟರ್ನೆಟ್ ಅನ್ನು ಬೇರೆ ಕಡೆ ಬಳಸಬೇಕೆಂದರೆ ನಾವು ಸಾಟಲೈಟ್ ಡಿಶ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಇದೊಂದು Fixed Internet Service ಆಗಿದೆ.

ಇನ್ನೊಂದು ಮುಖ್ಯವಾದ ಅನಾನುಕೂಲ ಅಥವಾ ದುಷ್ಪರಿಣಾಮ ಎಂದರೆ Space Debris ಅಥವಾ Space Junk. ಅಂದರೆ ಬಾಹ್ಯಾಕಾಶದ ತ್ಯಾಜ್ಯಗಳು ಎಂದರ್ಥ.

Starlink Space Debris
image credit: NASA

ಮುಂದಿನ ದಿನಗಳಲ್ಲಿ ಉಪಗ್ರಹಗಳ ಘರ್ಷಣೆಯಿಂದ ಅಥವಾ ಘರ್ಷಣೆಯ ತುಣುಕುಗಳು ಇನ್ನೊಂದು ಉಪಗ್ರಹದೊಂದಿಗೆ ಘರ್ಷಣೆಗೊಂಡು ಭೂಕಕ್ಷೆಯ ತ್ಯಾಜ್ಯಗಳಾಗಿ ಬದಲಾಗಬಹುದು.

ಬಾಹ್ಯಾಕಾಶದಲ್ಲಿಯ ಉಪಗ್ರಹಗಳು ಅಥವಾ ಅವುಗಳ ಅವಶೇಷಗಳನ್ನು ಈ ಮೇಲಿನ ಚಿತ್ರದ ಮೂಲಕ ನೀವು ಕಲ್ಪನೆ ಮಾಡಿಕೊಳ್ಳಬಹುದು.

Starlink internet ಉಪಗ್ರಹಗಳು ಮತ್ತು ಉಪಗ್ರಹಗಳ ತ್ಯಾಜ್ಯಗಳು ಮುಂದಿನ ದಿನಗಳಲ್ಲಿ ಖಗೋಳವನ್ನು ಅಧ್ಯಯನ ಮಾಡುವವರಿಗೆ, ಉಪಗ್ರಹ ಉಡಾವಣಾ ರಾಕೆಟ್ ಗಳಿಗೆ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಂಚಾರಕ್ಕೆ ಅಡಚಣೆ ಉಂಟುಮಾಡಬಲ್ಲವು ಎಂದು ಕೆಲವು ಬಾಹ್ಯಾಕಾಶ ಸಂಶೋಧಕರು ಭವಿಷ್ಯದ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ತಂತ್ರಜ್ಞಾನವು ಸಾಧಕ ಮತ್ತು ಬಾಧಕಗಳನ್ನು ಹೊಂದಿರುತ್ತದೆ. ಹಾಗಾಗಿ ತಂತ್ರಜ್ಞಾನದ ಅನುಕೂಲಗಳು ಅನಾನುಕೂಲಗಳಿಗಿಂತ ಹೆಚ್ಚಿದ್ದರೆ ನಾವು ಅದನ್ನು ಅಳವಡಿಸಿಕೊಳ್ಳಬೇಕು.


FAQ

Starlink ಪದದ ಅರ್ಥ ಏನು?

ಅಂತರ್ಜಾಲವನ್ನು ಒದಗಿಸುವ ಉಪಗ್ರಹಗಳ ಸಮೂಹ ಅಥವಾ ಪುಂಜವನ್ನು ಸ್ಟಾರ್ ಲಿಂಕ್ ಎಂದು ಹೆಸರಿಡಲಾಗಿದೆ. SpaceX ಕಂಪನಿಯು ಉಪಗ್ರಹಗಳಿಗೆ ಇಲ್ಲಿ Star ಎಂದು ಕರೆದಿದೆ.

ಸ್ಟಾರ್ಲಿಂಕ್ Internet Speed ಎಷ್ಟು?

ಮೂಲಗಳ ಪ್ರಕಾರ ಸದ್ಯಕ್ಕೆ Internet Speed 50Mb/s ದಿಂದ 150Mb/s ದೊರೆಯಲಿದೆ. ಮುಂದಿನ ದಿನಗಳಲ್ಲಿ ಇದನ್ನು ದ್ವಿಗುಣಗೊಳಿಸಿ 300Mb/s ದೊರೆಯುವಂತೆ ಮಾಡಲಾಗುತ್ತದೆ ಎಂದು ಎಲಾನ್ ಮಸ್ಕ್ ರವರು ಹೇಳಿಕೊಂಡಿದ್ದಾರೆ.

Starlink Intetrnet ಸೇವೆಯ ತಿಂಗಳ ವೆಚ್ಚ ಎಷ್ಟು?

ಸಧ್ಯಕ್ಕೆ ಇದನ್ನು Pre-Order ಮಾಡಲು 99 US ಡಾಲರ್ ಪಾವತಿಸಬೇಕಾಗುತ್ತದೆ. ಇದು ಭಾರತೀಯ ಕರೆನ್ಸಿಯಲ್ಲಿ 7,425 ರೂಪಾಯಿಗಳು ಆಗುತ್ತದೆ. ಆದರೆ ತಿಂಗಳ ಪ್ಲಾನ್ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ನಮಗೆ Starlink Intetrnet ದೊರೆಯುವುದು ಯಾವಾಗ?

ನಮ್ಮ ಭಾರತದಲ್ಲಿ Starlink Intetrnet ಸೇವೆ ಡಿಸೆಂಬರ್ 2022 ರಿಂದ ಸಿಗುವ ಸಾಧ್ಯತೆಗಳಿವೆ.
ಆದರೆ ಭಾರತದಲ್ಲಿ Pre-Order ಶುರುವಾಗಿದೆ.

Conclusion

Starlink ಎಂದರೇನು ಮತ್ತು Starlink ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಕನ್ನಡದಲ್ಲಿ ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಇದಾಗಿತ್ತು.

ಸಾಂಪ್ರದಾಯಿಕ ಉಪಗ್ರಹ ಮತ್ತು ಕೇಬಲ್ ಇಂಟರ್ನೆಟ್ ಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಸ್ಟಾರ್ ಲಿಂಕ್ ಇಂಟರ್ನೆಟ್ ಸರ್ವಿಸ್ ಹೊಂದಿದೆ.

ಆದ್ದರಿಂದ ನಾವು ಇಂಟರ್ನೆಟ್ ಅನ್ನು ದೂರವಿಡುವ ಬದಲು ಅಳವಡಿಸಿಕೊಳ್ಳುವುದು ಉತ್ತಮ. ಇದಕ್ಕೆ ನೀವು ಏನಂತೀರಾ?

Comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಸೂಚನೆಗಳನ್ನು ತಿಳಿಸಿ.

1 thought on “Starlink ಎಂದರೇನು ಮತ್ತು Starlink ಹೇಗೆ ಕೆಲಸ ಮಾಡುತ್ತದೆ?”

Leave a Comment