ಕೋನ ಎಂದರೇನು ಮತ್ತು ಕೋನದ ವಿಧಗಳು | Types Of Angles In Kannada

ಕೋನ ಎಂದರೇನು?

ಎರಡು ಸರಳ ರೇಖೆಗಳಿಂದ ಉಂಟಾಗಿರುವ ಒಂದೇ ಅಂತ್ಯ ಬಿಂದುವನ್ನು ಹೊಂದಿರುವ ಆಕೃತಿಯನ್ನು ಕೋನ ಎನ್ನುವರು. ಕೋನವನ್ನು  ಸಂಕೇತದಿಂದ ಗುರುತಿಸುತ್ತಾರೆ.

ಆ ಎರಡೂ ಸರಳ ರೇಖೆಗಳು ಕೂಡುವ ಬಿಂದುವನ್ನು ಶೃಂಗ ಅಥವಾ ಶೃಂಗ ಬಿಂದು ಎಂದು ಕರೆಯುತ್ತಾರೆ. ಆ ಎರಡೂ ಸರಳ ರೇಖೆಗಳ ನಡುವಿನ ಕೋನದ ಬೆಲೆಯೂ ಆ ಕೋನದ ಅಳತೆ ಆಗಿರುತ್ತದೆ.

ಕೋನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದರೆ ಅದರ ವಿಧಗಳನ್ನು ತಿಳಿದುಕೊಳ್ಳುವುದು ಅವಶ್ಯಕ.

Here we are explaining to you that What is angle and Types of angles in Kannada

ಓದಿ: ಪುನೀತ್ ರಾಜಕುಮಾರ್ ಜೀವನ ಚರಿತ್ರೆ

ಕೋನದ ವಿಧಗಳು 

Types Angles In Kannada
Types of angles in Kannada

1. ಲಘುಕೋನ (Acute Angle):

90 ಡಿಗ್ರಿಗಿಂತ ಕಡಿಮೆ ಇರುವ ಕೋನವನ್ನು ಲಘುಕೋನ ಎಂದು ಕರೆಯುತ್ತಾರೆ. ಮೇಲಿನ ಚಿತ್ರದಲ್ಲಿ ನೀಡಲಾದ 55 ಡಿಗ್ರಿ ಕೋನವು ಲಘುಕೋನವಾಗಿದೆ.

2. ಲಂಬಕೋನ (Right Angle):

90 ಡಿಗ್ರಿ ಇರುವ ಕೋನವನ್ನು ಲಂಬ ಕೋನ ಎಂದು ಕರೆಯುತ್ತಾರೆ. ಉದಾಹರಣೆಗೆ ∠900

3. ವಿಶಾಲಕೋನ (Obtuse Angle):

90 ಡಿಗ್ರಿಗಿಂತ ಹೆಚ್ಚು 180 ಡಿಗ್ರಿಗಿಂತ ಕಡಿಮೆ ಇರುವ ಕೋನವನ್ನು ಸರಳ ಕೋನ ಎಂದು ಕರೆಯುತ್ತಾರೆ. ಉದಾಹರಣೆಗೆ ∠1200

4. ಸರಳ ಕೋನ (Straight Angle):

180 ಡಿಗ್ರಿಗೆ ಸಮ ಇರುವ ಕೋನವನ್ನು ಸರಳ ಕೋನ ಎಂದು ಕರೆಯುತ್ತಾರೆ. ಸರಳ ರೇಖೆಯು ಡಿಗ್ರಿ ಇರುತ್ತದೆ. 

5. ಸರಳಾಧಿಕ ಕೋನ (Reflex Angle):

180 ಡಿಗ್ರಿಗಿಂತ ಹೆಚ್ಚು 360 ಡಿಗ್ರಿಗಿಂತ ಕಡಿಮೆ ಇರುವ ಕೋನವನ್ನು ಸರಳಾಧಿಕ ಕೋನ ಎಂದು ಕರೆಯುತ್ತಾರೆ. ಉದಾಹರಣೆಗೆ ∠2100

6. ಪೂರ್ಣ ಕೋನ (Full Angle):

360 ಡಿಗ್ರಿ ಇರುವ ಕೋನವನ್ನು ಪೂರ್ಣ ಕೋನ ಎಂದು ಕರೆಯುತ್ತಾರೆ. ಒಂದು ವೃತ್ತವು ಪೂರ್ಣ ಕೋನವಾಗಿರುತ್ತದೆ.

ಓದಿ: ಕನ್ನಡ ಮತ್ತು ಇಂಗ್ಲೀಷ್ ವಾರಗಳು

List of Angles in Kannada

ಕೋನದ ವಿಧಗಳುಕೋನದ ಅಳತೆ 
ಲಘುಕೋನ>0& <900
ಲಂಬಕೋನ=900
ವಿಶಾಲಕೋನ>90& <1800
ಸರಳ ಕೋನ=180
ಸರಳಾಧಿಕ ಕೋನ>180& <3600
ಪೂರ್ಣ ಕೋನ3600

ಪೂರಕ ಮತ್ತು ಪರಿಪೂರಕ ಕೋನಗಳು

supplementary and complementary angles in Kannada
supplementary and complementary angles in Kannada

ಪೂರಕ ಕೋನಗಳು (Complementary Angles): ಎರಡು ಕೋನಗಳ ಮೊತ್ತವು 90 ಡಿಗ್ರಿ ಆಗಿದ್ದರೆ ಅವುಗಳನ್ನು ಪೂರಕ ಕೋನಗಳು ಎಂದು ಕರೆಯುತ್ತಾರೆ.

ಚಿತ್ರದಲ್ಲಿ ನೀಡಿದಂತೆ 65 ಮತ್ತು25 ಡಿಗ್ರಿಗಳನ್ನು ಕೂಡಿದಾಗ ಮೊತ್ತವು 90 ಡಿಗ್ರಿಯಾಗುತ್ತದೆ. ಹಾಗಾಗಿ ಇವೆರಡೂ ಪೂರಕ ಕೋನಗಳು.

ಪರಿಪೂರಕ ಕೋನಗಳು (Supplementary Angles): ಎರಡು ಕೋನಗಳ ಮೊತ್ತವು 180 ಡಿಗ್ರಿ ಆಗಿದ್ದರೆ ಅವುಗಳನ್ನು ಪರಿಪೂರಕ ಕೋನಗಳು ಎಂದು ಕರೆಯುತ್ತಾರೆ.

ಚಿತ್ರದಲ್ಲಿ ಇರುವಂತೆ 60 ಮತ್ತು 120 ಡಿಗ್ರಿ ಕೋನಗಳನ್ನು ಕೂಡಿದಾಗ ಮೊತ್ತವು 180 ಡಿಗ್ರಿಯಾಗುತ್ತದೆ. ಹಾಗಾಗಿ ಇವೆರಡೂ ಒಂದಕ್ಕೊಂದು

FAQs on Types of Angles In Kannada

 1. ಅಧಿಕ ಕೋನ ಎಂದರೇನು?

  90 ಡಿಗ್ರಿಗಿಂತ ಹೆಚ್ಚು ಮತ್ತು 180 ಡಿಗ್ರಿಗಿಂತ ಕಡಿಮೆ ಇರುವ ಕೋನವನ್ನು ಅಧಿಕ ಕೋನ ಅಥವಾ ವಿಶಾಲ ಕೋನ ಎನ್ನುವರು.

 2. ಕೋನಗಳ ವಿಧಗಳು ಎಷ್ಟು?

  ಸಾಮಾನ್ಯವಾಗಿ ಕೋನಗಳಲ್ಲಿ 6 ವಿಧಗಳು.

 3. What do you mean by acute angle in Kannada

  Acute angle ಎಂದರೆ ಕನ್ನಡದಲ್ಲಿ ಲಘುಕೋನ. ಇದು 0 ಡಿಗ್ರಿಗಿಂತ ಹೆಚ್ಚು ಮತ್ತು 90 ಡಿಗ್ರಿಗಿಂತ ಕಡಿಮೆ ಇರುವ ಕೋನವಾಗಿದೆ.

 4. Reflex Angle Kannada Meaning

  Reflex Angle Kannada meaning is ಸರಳಾಧಿಕ ಕೋನ.
  Share this:

ಕೋನ ಎಂದರೇನು ಮತ್ತು ಕೋನದ ವಿಧಗಳು ((Types Of Angles In Kannada) ಲೇಖನದ ಕುರಿತು ನಿಮ್ಮ ಅನಿಸಿಕೆಯನ್ನು Comment ಮಾಡುವುದರ ಮೂಲಕ ತಿಳಿಸಿ.

2 thoughts on “ಕೋನ ಎಂದರೇನು ಮತ್ತು ಕೋನದ ವಿಧಗಳು | Types Of Angles In Kannada”

Leave a Comment

error: Content is protected !!