Vishwa Parisara Dinacharane 2021 – Parisara Dinacharane Essay In Kannada

Vishwa Parisara Dinacharane 2021 – ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಪರಿಸರದ ರಕ್ಷಣೆಯ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವುದು ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಗಳನ್ನು ನೆಡುವುದು, ಸ್ಥಳೀಯ ಕಡಲತೀರಗಳನ್ನು ಸ್ವಚ್ಛಗೊಳಿಸುವುದು, ಸಭೆಗಳನ್ನು ಆಯೋಜಿಸುವುದು, ಆನ್ಲೈನ್ನಲ್ಲಿ ಪ್ರತಿಭಟನೆಗಳನ್ನು ನಡೆಸುವುದರ ಮೂಲಕ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ.

ಪ್ರತಿವರ್ಷ ಈ ಕಾರ್ಯಕ್ರಮದ ಮೂಲಕ ಪರಿಸರದ ಸಮಸ್ಯೆಯ ಕುರಿತ ಒಂದು ವಿಶೇಷ ಸಮಸ್ಯೆಯ ಮೇಲೆ ಗಮನ ಹರಿಸಲಾಗುತ್ತದೆ.

ಇದನ್ನು ಓದಿ: ಗ್ರಂಥಾಲಯದ ಮಹತ್ವ ಪ್ರಬಂಧ

History Of Vishwa Parisara Dinacharane

1972 ರಲ್ಲಿ ಸಂಯುಕ್ತ ರಾಷ್ಟ್ರಗಳು ಆಯೋಜಿಸಿದ್ದ ವಿಶ್ವ ಪರಿಸರ ಸಮ್ಮೇಳನದಲ್ಲಿ ಚರ್ಚಿಸಿದ ನಂತರ, ಈ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

5 ಜೂನ್ 1974 ರಂದು ವಿಶ್ವದ ಪ್ರಥಮ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ Eco Day ಮತ್ತು World Environment Day (WED) ಎಂದು ಆಚರಣೆ ಮಾಡಲಾಗುತ್ತದೆ.

ವಿಶ್ವ ಪರಿಸರ ದಿನಾಚರಣೆ ಥೀಮ್ ( World Environment Day Theme)

ವಿಶ್ವ ಪರಿಸರ ದಿನಾಚರಣೆ 2021 ರ ಥೀಮ್ಪರಿಸರ ವ್ಯವಸ್ಥೆಯ ಪುನರ್ಸ್ಥಾಪನೆ (Ecosystem Restoration)”.

2021 ರ ವಿಶ್ವ ಪರಿಸರ ದಿನಾಚರಣೆ ಆಥಿತ್ಯ(Host)ವನ್ನು ಪಾಕಿಸ್ತಾನ ವಹಿಸಿಕೊಳ್ಳಲಿದೆ.

ಮಾನವನ ಅಸ್ತಿತ್ವವು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಆರೋಗ್ಯಕರ ಮತ್ತು ಸುರಕ್ಷಿತ ಪರಿಸರವಿಲ್ಲದೆ ಮಾನವ ಸಮಾಜದ ಪರಿಕಲ್ಪನೆಯೂ ಕೂಡ ಅಪೂರ್ಣ.

ವಾಸ್ತವದಲ್ಲಿ ಪರಿಸರ ರಕ್ಷಣೆಯ ಮಾರ್ಗಗಳನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ.

ವಿಶ್ವ ಪರಿಸರ ದಿನಾಚರಣೆಯ ಉದ್ದೇಶಗಳು

ವಿಶ್ವ ಪರಿಸರ ದಿನಾಚರಣೆಯ ಕೆಲವು ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ:

  • ಪರಿಸರದ ಸಮಸ್ಯೆಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವುದು.
  • ವಿವಿಧ ಸಮಾಜ ಮತ್ತು ಸಮುದಾಯಗಳ ಜನರನ್ನು ಈ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವುದು ಹಾಗೂ ಪರಿಸರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು.
  • ಜನರಿಗೆ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುರಕ್ಷಿತ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೋತ್ಸಾಹಿಸುವುದು.

ವಿಶ್ವ ಪರಿಸರ ದಿನಾಚರಣೆಯ ಮಹತ್ವ

ಪರಿಸರ ರಕ್ಷಣೆ ಅಥವಾ ಪರಿಸರ ಸಂರಕ್ಷಣೆಗೆ ನಾವು ಏನು ಮಾಡಬೇಕು ಎಂಬುದರ ಅರಿವನ್ನು ಮೂಡಿಸುವುದು ಇದರ ಮುಖ್ಯ ಆಲೋಚನೆಯಾಗಿದೆ.

ಈ ದಿನಾಚರಣೆಯು ವಾಸ್ತವದ ಸಮಸ್ಯೆಗಳಾದ ಜಾಗತಿಕ ತಾಪಮಾನದ ಏರಿಕೆ, ಜಲಮಾಲಿನ್ಯ,  ಜನಸಂಖ್ಯಾ ಏರಿಕೆ, ವನ್ಯಜೀವಿಗಳ ಅಳಿವು, ಅರಣ್ಯ ನಾಶ, ವಾಯುಮಾಲಿನ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಇನ್ನೀತರ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸುತ್ತದೆ.

ಜಗತ್ತಿನ ದೇಶಗಳಿಗೆ World Environment Day (ವಿಶ್ವ ಪರಿಸರ ದಿನಾಚರಣೆ) ಯ ಮಹತ್ವ ಅಥವಾ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಈ ದಿನಾಚರಣೆಯು ಒಂದು ಜಾಗತಿಕ ವೇದಿಕೆಯಾಗಿದೆ.

ಪರಿಸರ ವ್ಯವಸ್ಥೆಯ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತಿರುವ ಮಲಿನಕಾರಕ ಅಂದರೆ ಅದು ಪ್ಲಾಸ್ಟಿಕ್.

ಪ್ಲಾಸ್ಟಿಕ್ ಬಗ್ಗೆ ಕೆಲವು Facts

Vishwa parisara dinacharane Prabandha

ಪ್ಲಾಸ್ಟಿಕ್ ಮಾನವನ ಆರೋಗ್ಯಕ್ಕೆ ಹಾನಿಕಾರಕವಲ್ಲದೇ, ಜಲಚರಗಳಿಗೂ ತುಂಬಾ ಅಪಾಯಕಾರಿ.

ಜನಸಂಖ್ಯೆಯ ಹೆಚ್ಚಿನ ಭಾಗವು ತಮ್ಮ ದಿನಬಳಕೆಗೆ ಪ್ಲಾಸ್ಟಿಕ್ ಅನ್ನು ಹೆಚ್ಚು ಬಳಸುತ್ತಾರೆ. ಅದರಲ್ಲಿ ಸುಮಾರು 1/3 ಭಾಗವು ಸರಿಯಾಗಿ ವಿಲೇವಾರಿಯಾಗದೆ ಒಳಚರಂಡಿಗಳ ಮುಚ್ಚುವಿಕೆ ಮತ್ತು ಜಲ ಮಾಲಿನ್ಯಗಳಿಗೆ ಕಾರಣವಾಗುತ್ತದೆ.

ಪ್ಲಾಸ್ಟಿಕ್ ಸಂಪೂರ್ಣವಾಗಿ ವಿಘಟನೆ ಯಾಗಲು ಸುಮಾರು 1000 ವರ್ಷಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ಪ್ಲಾಸ್ಟಿಕ್ ನವೀಕರಿಸಲಾಗದ ವಸ್ತುವಾಗಿದ್ದು, ಪರಿಸರಕ್ಕೆ ಹಲವಾರು ಕಾರ್ಸಿನೋಜನ್ ಗಳಂತಹ ವಿಷಕಾರಿ ರಾಸಾಯನಿಕಗಳನ್ನು ಸೇರಿಸುತ್ತದೆ.

ಉತ್ಪತ್ತಿಯಾಗುವ ಒಟ್ಟು ತಾಜ್ಯದ 10% ಬರೀ ಪ್ಲಾಸ್ಟಿಕ್ ಆಗಿದೆ.

ನಾವು ಬಳಸುವ ಪ್ಲಾಸ್ಟಿಕ್ ಅಲ್ಲಿ 50% ಪ್ಲಾಸ್ಟಿಕ್ ಬರಿ ಒಂದೇ ಬಾರಿ ಬಳಕೆಗೆ ಬರುವಂತಹ ಪ್ಲಾಸ್ಟಿಕ್ ಆಗಿದೆ.

ಪ್ಲಾಸ್ಟಿಕ್ ಮನುಷ್ಯನಿಗೂ ಮತ್ತು ಪ್ರಾಣಿ-ಪಕ್ಷಿಗಳಿಗೂ ತುಂಬಾ ಅಪಾಯಕಾರಿ.

ಪ್ಲಾಸ್ಟಿಕ್ ವಸ್ತುಗಳು ವಿಘಟನೆಗೊಳ್ಳಲು ತೆಗದುಕೊಳ್ಳುವ ಕಾಲ
ಪ್ಲಾಸ್ಟಿಕ್ ಚೀಲ 20 ವರ್ಷಗಳು
ಹಲ್ಲುಜ್ಜುವ ಬ್ರಶ್ 500 ವರ್ಷಗಳು
ಪ್ಲಾಸ್ಟಿಕ್ ಸ್ಟ್ರಾಗಳು 200 ವರ್ಷಗಳು
ಪ್ಲಾಸ್ಟಿಕ್ ಬಾಟಲಿಗಳು 450 ವರ್ಷಗಳು

ಆದ್ದರಿಂದ ಪರಿಸರ ಸಂರಕ್ಷಣೆ ತುಂಬಾ ಅಗತ್ಯ.

ಓದಿ: ಪರಿಸರ ಸಂರಕ್ಷಣೆ ಪ್ರಬಂಧ

ಪರಿಸರ ದಿನದಂದು ಕೆಲವು ಸಂಕಲ್ಪಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ವಿಶ್ವ ಪರಿಸರ ದಿನದಂದು ಈ 7 ಸಂಕಲ್ಪಗಳನ್ನು ತೆಗೆದುಕೊಳ್ಳಿ

#1. ಒಂದು ವರ್ಷದಲ್ಲಿ ಕನಿಷ್ಠ ಪಕ್ಷ ಒಂದು ಸಸಿಯನ್ನಾದರೂ ನೆಡಿ ಮತ್ತು ಅದನ್ನು ಉಳಿಸಿ ಬೆಳೆಸಿ ಹಾಗೂ ಮರ-ಗಿಡಗಳ ಸಂರಕ್ಷಣೆಗೆ ಸಹಕರಿಸಿ.
#2. ನದಿ, ಹಳ್ಳ, ಕೊಳ್ಳಗಳಂತಹ ನೀರಿನ ಮೂಲಗಳನ್ನು ಕಲುಷಿತಗೊಳಿಸಬೇಡಿ.
#3. ನೀರನ್ನು ದುರುಪಯೋಗಪಡಿಸಿಕೊಳ್ಳಬೇಡಿ ಮತ್ತು ಬಳಕೆಯ ನಂತರ ನಲ್ಲಿಯನ್ನು ಬಂದ್ ಮಾಡಿ.
#4. ಅನಾವಶ್ಯಕವಾಗಿ ವಿದ್ಯುತ್ ಬಳಕೆಯನ್ನು ಮಾಡಬೇಡಿ. Fan, ಬಲ್ಬ್ ಮತ್ತು ಇನ್ನೀತರ ಉಪಕರಣಗಳನ್ನು ಬಳಕೆಯ ನಂತರ OFF ಮಾಡಿ.
#5. ಕಸವನ್ನು ಕಸದಬುಟ್ಟಿಯಲ್ಲಿ ಎಸೆಯಿರಿ ಮತ್ತು ಇನ್ನೊಬ್ಬರಿಗೆ ಹಾಗೇ ಮಾಡಲು ಪ್ರೇರೇಪಿಸಿ.
#6. ಪ್ಲಾಸ್ಟಿಕ್ ಮತ್ತು ಪಾಲಿಥಿನ್ ಗಳನ್ನು ಬಳಸುವುದನ್ನು ನಿಲ್ಲಿಸಿ. ಇವುಗಳಿಗೆ ಪರ್ಯಾಯವಾಗಿ ಕಾಗದದಿಂದ ಮಾಡಿದ ಚೀಲ/ಕೈಚೀಲವನ್ನು ಉಪಯೋಗಿಸಿ.
#7. ಕಡಿಮೆ ದೂರದ ಅಥವಾ ಹತ್ತಿರದ ಪ್ರಯಾಣಕ್ಕೆ ಸೈಕಲ್ ಉಪಯೋಗಿಸಿ.

ಪರಿಸರದ ಬಗೆಗಿನ ಘೋಷಣೆಗಳು

ಹಸಿರೇ ಉಸಿರು
ಕಾಡಿದ್ದರೆ ನಾಡು
ಒಂದು ಭೂಮಿ ಒಂದೇ ಭವಿಷ್ಯ
ಮನೆಗೊಂದು ಮರ ಊರಿಗೊಂದು ವನ
ಅರಣ್ಯವಿಲ್ಲದೆ ಮಳೆ ಇಲ್ಲಾ ಮಳೆ ಇಲ್ಲದೆ ಬೆಳೆ ಇಲ್ಲಾ
ಗಿಡ ನಕ್ಕರೆ ಜಗ ನಗುವುದು ಗಿಡ ಅಳಿದರೆ ಜಗ ಅಳಿವುದು
ನಿಮ್ಮ ವಂಶ ಬೆಳಗಲು ಮಗನನ್ನು ಬೆಳೆಸಿ ಮಗನ ವಂಶ ಬೆಳಗಲು ಮರಗಳನ್ನು ಬೆಳೆಸಿ
ಅಕ್ಷರ ಅನ್ನ, ಪರಿಸರ ಚಿನ್ನ
ವೃಕ್ಷ ಕಡಿದವನಿಗೆ ಭಿಕ್ಷೆ ತಪ್ಪದು
ಕಾಡು ಬೆಳೆಸಿ, ಭೂ ತಾಪಮಾನ ಇಳಿಸಿ
ಮಾತೆ ಪ್ರಕೃತಿ, ನೀಡು ಸನ್ಮತಿ
ಮಳೆ ಬೀಜಕ್ಕಾಗಿ, ಮರ ಬೆಳೆಸಿ

FAQ on Vishwa Parisara Dinacharane

ವಿಶ್ವ ಪರಿಸರ ದಿನಾಚರಣೆ 2021 ಯಾವಾಗ ಆಚರಿಸಲಾಗುತ್ತದೆ?

2021 ರ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5 ಶನಿವಾರದಂದು ಆಚರಿಸಲಾಗುತ್ತದೆ.

ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಯಾವಾಗ ಆಚರಿಸಲಾಗುತ್ತದೆ?

ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತದೆ.

ವಿಶ್ವ ಪರಿಸರ ದಿನಾಚರಣೆ 2021 ರ ಥೀಮ್ ಏನು?

Ecosystem Restoration

ವಿಶ್ವ ಪರಿಸರ ದಿನಾಚರಣೆ ಯಾವಾಗ ಜಾರಿಗೆ ಬಂತು?

1974 ರಂದು ವಿಶ್ವ ಪರಿಸರ ದಿನಾಚರಣೆ ಜಾರಿಗೆ ತರಲಾಯಿತು.

ವಿಶ್ವ ಪರಿಸರ ದಿನದ ಶುಭಾಶಯಗಳು

Conclusion:

ಬರೀ ಜೂನ್ 5 ಬಂದಾಗ ಮಾತ್ರ “ವಿಶ್ವ ಪರಿಸರ ದಿನ” ನೆನಪಾಗಬಾರದು. ಪ್ರತಿ ದಿನವೂ ವಿಶ್ವ ಪರಿಸರ ದಿನವಾಗಬೇಕು.

ಈ ಪ್ರಕೃತಿ ಇಲ್ಲದೆ ಮಾನವನ ಜೀವನ ಸಾಧ್ಯವಿಲ್ಲ. ಆದ್ದರಿಂದ ನಾವು ಈ ಭೂಮಿ ಮೇಲಿರುವ ಮರ-ಗಿಡಗಳು, ಕಾಡುಗಳು, ನದಿಗಳು,  ಸಮುದ್ರ-ಸಾಗರಗಳು, ಸರೋವರಗಳು ಹಾಗೂ ಪರ್ವತಗಳು ಎಷ್ಟು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದೆ.

ಸೂಚನೆ – ನೀವು ವಿಶ್ವ ಪರಿಸರ ದಿನಾಚರಣೆ ಕುರಿತು ಪ್ರಬಂಧ ಬರೆಯುವವರಾಗಿದ್ದರೆ ಪೀಠಿಕೆ, ವಿಷಯ ವಿಸ್ತಾರ ಮತ್ತು ಉಪಸಂಹಾರಗಳೆಂದು ವಿಂಗಡಿಸಿಕೊಳ್ಳಿ.

ಪರಿಸರಕ್ಕೆ ಏನೂ ಕೊಡುಗೆ ನೀಡದಿದ್ದರೂ ಪರವಾಗಿಲ್ಲ. ಆದರೆ ಪರಿಸರವನ್ನು ಹಾಳು ಮಾಡುವ ಅಥವಾ ಕಲುಷಿತಗೊಳಿಸುವ ಕೆಲಸಗಳನ್ನು ಎಂದಿಗೂ ಮಾಡಬಾರದು. 

Vishwa Parisara Dinacharane 2021 ಕುರಿತು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿತ್ತು.

ನಿಮ್ಮ ಸಲಹೆ ಅಥವಾ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment ಮಾಡಿ.

2 thoughts on “Vishwa Parisara Dinacharane 2021 – Parisara Dinacharane Essay In Kannada”

Leave a Comment

error: Content is protected !!