15ನೇ ಆಗಸ್ಟ್ ಇದು, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ದಿನ. ಏಕೆಂದರೆ 200 ವರ್ಷಗಳ ಕಾಲ ಆಳಿದ ಬ್ರಿಟಿಷ್ ಆಳ್ವಿಕೆ ಕೊನೆಗೊಂಡು 1947 ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ.

ಸ್ವಾತಂತ್ರ್ಯ ನಂತರ, ಭಾರತದ ಮೊದಲ ಪ್ರಧಾನಿ ಪಂ.ಜವಾಹರ್‌ ಲಾಲ್‌ ನೆಹರು ಅವರು ಭಾರತದ ಧ್ವಜವನ್ನು ಕೆಂಪು ಕೋಟೆಯ ಮೇಲೆ  ಹಾರಿಸಿದರು.

ಭಾರತೀಯ ರಾಷ್ಟ್ರಗೀತೆಯನ್ನು 1950 ರಲ್ಲಿ ಅಳವಡಿಸಲಾಯಿತು

ಸ್ವಾತಂತ್ರ್ಯ ಪಡೆಯುವ ಮೊದಲು ಯಾವುದೇ ಅಧಿಕೃತ ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. 1911 ರಲ್ಲಿ ರವೀಂದ್ರನಾಥ ಠಾಗೋರ್ ರವರು 'ಜನ ಗಣ ಮನ ' ಗೀತೆಯನ್ನು ರಚಿಸಿದರು.

ರಾಷ್ಟ್ರ ಧ್ವಜದ ವಿನ್ಯಾಸ

ನಮ್ಮ ಪ್ರಸ್ತುತ ರಾಷ್ಟ್ರ ಧ್ವಜವನ್ನು ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ನವರು ವಿನ್ಯಾಸಗೊಳಿಸಿದರು. ಇದನ್ನು ಜುಲೈ 22, 1947 ರಂದು ಅಂಗೀಕರಿಸಲಾಯಿತು

ವಂದೇ ಮಾತರಂ ರಾಷ್ಟೀಯ ಹಾಡು

ದೇಶದ ರಾಷ್ಟ್ರೀಯ ಹಾಡಾದ ‘ವಂದೇ ಮಾತರಂ’ ಬಂಗಾಳಿ ಕಾದಂಬರಿ ಆನಂದಮಠದ ಭಾಗವಾಗಿತ್ತು. ಈ ಕಾದಂಬರಿಯನ್ನು 1880 ರ ದಶಕದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಬರೆದಿದ್ದರು.

ರಾಷ್ಟ್ರ ಧ್ವಜವನ್ನು ಹಾರಿಸಿದ್ದು ಯಾವಾಗ?

ಮೊದಲ ಬಾರಿಗೆ ರಾಷ್ಟ್ರ ಧ್ವಜವನ್ನು ಕೋಲ್ಕತ್ತದ ಗ್ರೀನ್ ಪಾರ್ಕ್ ನಲ್ಲಿ ಅಗಸ್ಟ್ ೭, ೧೯೦೬ ರಲ್ಲಿ ಹಾರಿಸಲಾಯಿತು .

ಸ್ವಾತಂತ್ರ್ಯದ ನಂತರ, ಪೋರ್ಚುಗೀಸರು ತಮ್ಮ ಸಂವಿಧಾನವನ್ನು ಬದಲಾಯಿಸಿಕೊಂಡು ಗೋವಾವನ್ನು ತಮ್ಮ ರಾಜ್ಯವೆಂದು ಘೋಷಿಸಿದರು. ಆದರೆ ಡಿಸೆಂಬರ್ 19, 1961 ರಂದು ಭಾರತೀಯ ಸಶಸ್ತ್ರ ಪಡೆಗಳು ಗೋವಾವನ್ನು ವಶಪಡಿಸಿಕೊಂಡು  ಅದನ್ನು ಭಾರತಕ್ಕೆ ಸೇರಿಸಿದವು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಉತ್ತಮ ಸಾಮಾನ್ಯ ಜ್ಞಾನ pdf , ಪ್ರಬಂಧ , ತಂತ್ರಜ್ಞಾನ ಮಾಹಿತಿಗಳಿಗಾಗಿ ಮೇಲೆ ಕಾಣಿಸಿದ CLICK HERE ಒತ್ತಿ .