ಇವರು 17 ಮಾರ್ಚ್ 1975 ರಂದು ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳ ಉದರದಲ್ಲಿ ಜನಿಸಿದರು.
ಪುನೀತ್ ರಾಜಕುಮಾರ್ ರವರು ಆರು ತಿಂಗಳು ಇರುವಾಗಲೇ 1976 ರಲ್ಲಿ ‘ಪ್ರೇಮದ ಕಾಣಿಕೆ’ ಚಿತ್ರದ ಮುಖಾಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
ಕನ್ನಡದ ಕೋಟ್ಯಾಧಿಪತಿ ಸೀಸನ್ 1, 2 & 4 ಹಾಗೂ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ.
ಪುನೀತ್ ರಾಜಕುಮಾರ್ ರವರು ನಟಿಸಿದ ‘ಬೆಟ್ಟದ ಹೂವು’ ಚಿತ್ರಕ್ಕೆ 1985 ರಲ್ಲಿ “Best Child Artist” ಪ್ರಶಸ್ತಿಯು ಲಭಿಸಿತು.
ಪುನೀತ್ ರಾಜ್ ಕುಮಾರ್ ರವರು ‘ನಾವಿಬ್ಬರು ನಮಗಿಬ್ಬರು’ ಮತ್ತು ‘ಸೂತ್ರದಾರ’ ಚಿತ್ರಗಳನ್ನು Produce ಮಾಡಿದ್ದಾರೆ.
2002 ರಲ್ಲಿ ಪುನೀತ್ ರಾಜಕುಮಾರ್ ರವರು ನಟಿಸಿದ ‘ಅಪ್ಪು’ ಚಲನಚಿತ್ರವು ಅವರ ಸಿನಿಪಯಣಕ್ಕೆ ಒಂದು ಹೊಸ ತಿರುವನ್ನು ಕೊಟ್ಟಿತು