Yogabhyasa Prabandha in Kannada | ಯೋಗದ ಬಗ್ಗೆ ಪ್ರಬಂಧ

yogabhyasa prabandha in kannada:

ಭಾರತೀಯ ಪರಂಪರೆಯಲ್ಲಿ ಯೋಗ ದೈವಿಕ ಸ್ಥಾನವನ್ನು ಪಡೆದುಕೊಂಡಿದೆ. ಆರೋಗ್ಯ ಕಾಪಾಡುವಲ್ಲಿ ಯೋಗದ ಮಹತ್ವ ಅಪಾರವಾದದ್ದು.

ಪರಿಣಾಮ, ಈ ಯೋಗ ಭಾರತವನ್ನೆಲ್ಲಾ ವಿಸ್ತರಿಸಿ ಪ್ರಪಂಚಕ್ಕೆ ಕಾಲಿರಿಸಿ ಹೆಚ್ಚು ಪ್ರಚಾರಕ್ಕೆ ಬಂದಿದೆ. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಇವೆರಡೂ ಯೋಗದಿಂದ ರೂಪಿಸಿಕೊಳ್ಳಲು ಸಾಧ್ಯ.

ಇದರಿಂದ ಮಾನವ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಹಾಗಾದರೆ ಮತ್ಯಾಕೆ ತಡ ಯೋಗದ ಇನ್ನಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿದುಕೊಳ್ಳೋಣ.

ವೇದ ಕಾಲ, ಪೂರ್ವ ಶಾಸ್ತ್ರೀಯ ಅವಧಿ, ಶಾಸ್ತ್ರೀಯ ಅವಧಿ, ಮಧ್ಯಕಾಲೀನ ಯೋಗ ಮತ್ತು ಆಧುನಿಕ ಕಾಲದ ಯೋಗ ಎಂಬ ವಿಭಾಗಗಳನ್ನು ಮಾಡಿ ಈ ಯೋಗದ ಬಗ್ಗೆ ತಿಳಿಸಲಾಗುತ್ತದೆ. ಬನ್ನಿ ಯೋಗ ಎಂದರೇನು ನೋಡೋಣ.

Here, We tried to give complete information about Yogabhyasa Prabandha in Kannada in the form of an essay on importance of yoga in Kannada. It includes the Importance, benefits, and types of Yoga In Kannada.

Yogabhyasa Prabandha in Kannada ಯೋಗ ಎಂದರೇನು?

Yogabhyasa Prabandha in Kannada
Yogabhyasa Prabandha in Kannada
Essay On Library 2

ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು ಎಂದು ಕರೆಯಬಹುದು. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ.

‘ಯೋಗ’ ಎಂಬ ಪದವು ಸಂಸ್ಕೃತ ಪದ ‘ಯುಜ್‘ ದಿಂದ ಬಂದಿದೆ. ಇದರರ್ಥ ‘ಸೇರಲು’ ಅಥವಾ ‘ಒಟ್ಟಾಗಿ’ ಎಂದರ್ಥ.

ಯೋಗದ ಪರಿಕಲ್ಪನೆ

ಯೋಗವು ಮಾನವನ ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಒಂದು ಕ್ರಮ. ಯೋಗವು ಮನಸ್ಸು ಮತ್ತು ದೇಹದ ಅಭ್ಯಾಸವಾಗಿದೆ.

ಯೋಗದ ವಿವಿಧ ಶೈಲಿಗಳು, ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳು ಧ್ಯಾನ ಅಥವಾ ವಿಶ್ರಾಂತಿಯನ್ನು ಸಂಯೋಜಿಸಿವೆ. ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ಅಭ್ಯಾಸ ಕ್ರಮವಾದರೂ ಇಂದು ಎಲ್ಲೆಡೆ ಹರಡಿಕೊಂಡಿದೆ.

ಯೋಗದ ಮೂಲ ಪರಿಕಲ್ಪನೆಗಳನ್ನು ಗಮನಿಸುವುದಾದರೆ ದೇಹವನ್ನು ಆರೋಗ್ಯಕರವಾಗಿ, ಬಲವಾಗಿ ಮತ್ತು ಹೊಂದಿಕೊಳ್ಳುವಂತೆ ರೂಪಿಸಿಕೊಳ್ಳಲು ಇದು ಸಹಾಯಕ. ಸರಿಯಾದ ಉಸಿರಾಟ, ಸರಿಯಾದ ವಿಶ್ರಾಂತಿ, ಆಹಾರ ಮತ್ತು ಪೋಷಣೆ, ಧನಾತ್ಮಕ ಚಿಂತನೆ ಮತ್ತು ಧ್ಯಾನ ಇದರಿಂದ ಕಂಡುಕೊಳ್ಳಬಹುದು.

ಯೋಗದ ವಿಧಗಳು

ಯೋಗದ ಪ್ರಮುಖ ಪ್ರಕಾರಗಳು ಈ ಕೆಳಗಿನಂತಿವೆ;

 1. ಅಷ್ಟಾಂಗ ಯೋಗ
 2. ಹಠ ಯೋಗ
 3. ವಿನ್ಯಾಸ ಯೋಗ
 4. ಕುಂಡಲಿನಿ ಯೋಗ
 5. ಅನುಸರ ಯೋಗ

ಯೋಗವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಚಿಕಿತ್ಸಕ ಸಾಧನವಾದ್ದರಿಂದ ಎಲ್ಲರೂ ಇದಕ್ಕೆ ಒಗ್ಗಿಕೊಂಡಿದ್ದಾರೆ. ಬನ್ನಿ ಕೆಲವು ಯೋಗದ ವಿಧಾನಗಳನ್ನ ನೋಡೋಣ.

ಹಠ ಯೋಗ: ಹಠ ಎಂಬ ಸಂಸ್ಕೃತ ಪದದ ಅರ್ಥ “ಬಲ”. ಆದ್ದರಿಂದ ಹಠ ಯೋಗವು ದೇಹದ ಸಮತೋಲನವನ್ನು ಪುನಃಸ್ಥಾಪಿಸುತ್ತದೆ.

ಈ ರೀತಿಯ ಯೋಗವು, ಚಕ್ರಗಳು ಮತ್ತು ಶಕ್ತಿ ಬಿಂದುಗಳ ನಡುವಿನ ಸಾಮರಸ್ಯದ ಮೇಲೆ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಏಳು ವಿಭಿನ್ನ ಸ್ಥಳಗಳನ್ನು ಚಕ್ರಗಳೆಂದು ಗುರುತಿಸಲಾಗುತ್ತದೆ.

ಜ್ಞಾನ ಯೋಗ: ಜ್ಞಾನ ಯೋಗವು ಬೌದ್ಧಿಕ ಜ್ಞಾನವನ್ನು ಪ್ರಾಯೋಗಿಕ ಬುದ್ಧಿವಂತಿಕೆಯಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಇದು ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದಂತೆ ಮಾನವ ಧರ್ಮದ ಆವಿಷ್ಕಾರವಾಗಿದೆ.

ಜ್ಞಾನ ಯೋಗವನ್ನು ಅತ್ಯುನ್ನತ ಧ್ಯಾನಸ್ಥ ಸ್ಥಿತಿ ಮತ್ತು ಆಂತರಿಕ ಜ್ಞಾನವನ್ನು ಪಡೆಯುವ ಸಾಧನವಾಗಿ ಕಾಣಲಾಗುತ್ತದೆ.

ಮಂತ್ರ ಯೋಗ: ಈ ಯೋಗವನ್ನು ಮಂತ್ರಗಳು, ಜಪಗಳು ಅಥವಾ ದೇವರ ನಾಮಗಳ ಮೂಲಕ ಮಾಡಲಾಗುತ್ತದೆ. ವಾಸ್ತವವಾಗಿ ವೇದಗಳಲ್ಲಿನ ಎಲ್ಲಾ ಶ್ಲೋಕಗಳನ್ನು ಮಂತ್ರಗಳೆಂದು ಕರೆಯಲಾಗುತ್ತದೆ.

ಭಕ್ತಿ ಯೋಗ: ಭಕ್ತಿಯೋಗವನ್ನು ನಂಬಿಕೆಯ ಯೋಗ ಎಂದು ಸಹ ಕರೆಯಬಹುದು. ಈ ನಂಬಿಕೆಯು ಸಾಮಾನ್ಯವಾಗಿ ದೇವರಲ್ಲಿ ಅಥವಾ ಯಾವುದೇ ರೂಪದ ಪರಮ ಪ್ರಜ್ಞೆಯಲ್ಲಿರುತ್ತದೆ.

ಪ್ರಮುಖ ವಿಷಯವೆಂದರೆ ಈ ಮಾರ್ಗವನ್ನು ಅನುಸರಿಸಲು ಆಸಕ್ತಿ ಹೊಂದಿರುವ ವ್ಯಕ್ತಿಯು ತನ್ನ ನಂಬಿಕೆಯ ವಸ್ತುವಿನೊಂದಿಗೆ ಬಲವಾದ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು.

ಕುಂಡಲಿನಿ ಯೋಗ: ಯೋಗದ ಈ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಅತೀಂದ್ರಿಯ ಕೇಂದ್ರಗಳ ಅಥವಾ ಚಕ್ರಗಳ ಜಾಗೃತಿಗೆ ಸಂಬಂಧಿಸಿದೆ. ಮನುಷ್ಯರಲ್ಲಿ ಪ್ರಮುಖವಾಗಿ ಆರು ಮುಖ್ಯ ಚಕ್ರಗಳಿವೆ.

ಮನಸ್ಸು ವಿವಿಧ ಸೂಕ್ಷ್ಮ ಪದರಗಳಿಂದ ಮಾಡಲ್ಪಟ್ಟಿದೆ. ಈ ಪ್ರತಿಯೊಂದು ಪದರಗಳು ಹಂತವಾಗಿ ಉನ್ನತ ಮಟ್ಟದ ಪ್ರಜ್ಞೆಯೊಂದಿಗೆ ಸಂಬಂಧ ಹೊಂದಿವೆ.

ಕುಂಡಲಿನಿ ಯೋಗದಲ್ಲಿ ಉನ್ನತ ಮಟ್ಟದ ಚಕ್ರಗಳನ್ನು ಜಾಗೃತಗೊಳಿಸಲಾಗುತ್ತದೆ.

ಕರ್ಮ ಯೋಗ: ‘ಕರ್ಮ’ ಎಂಬ ಶಬ್ದವು ‘ಕೃ’ ಎಂಬ ಧಾತುವಿನಿಂದ ಹುಟ್ಟಿದೆ. ‘ಕೃ’ ಎಂದರೆ ಮಾಡುವುದು, ವ್ಯವಹರಿಸುವುದು ಮುಂತಾದ ಅರ್ಥಗಳಿವೆ. ಹಾಗಾಗಿ ಕರ್ಮ ಎಂದರೆ ಕೆಲಸ ಎಂಬ ತಾತ್ಪರ್ಯವಾಗುತ್ತದೆ.

ಹಿಂದೂ ಧರ್ಮದಲ್ಲಿ ಪ್ರತಿಪಾದಿಸಿದಂತೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ ಮಾಡುತ್ತಲೇ ಇರುತ್ತಾನೆ. ತಾನು ಮಾಡುವ ಕೆಲಸಗಳಿಂದ ಯಾವಾಗ ಕರ್ಮಬಂಧಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮ ಮುಕ್ತನಾಗುತ್ತಾನೆ.  

ಕ್ರಿಯಾ ಯೋಗ: ಕ್ರಿಯಾ ಯೋಗ ‘ಚಟುವಟಿಕೆ’ ಅಥವಾ ‘ಚಲನೆ’ ಯನ್ನು ಸೂಚಿಸುತ್ತದೆ. ಕ್ರಿಯಾ ಯೋಗವು ಉದ್ದೇಶಪೂರ್ವಕವಾಗಿ ಚಟುವಟಿಕೆಯನ್ನು ಸೃಷ್ಟಿಸುತ್ತದೆ ಮತ್ತು ಪ್ರಜ್ಞೆಯಲ್ಲಿ ಜಾಗೃತಿ ಮೂಡಿಸುತ್ತದೆ.

ಕ್ರಿಯಾ ಯೋಗವು ಪ್ರಾಚೀನ ಕಾಲದಲ್ಲಿ ಹುಟ್ಟಿಕೊಂಡಿತ್ತು.

ಸ್ವರ ಯೋಗ: ಸ್ವರ ಎಂಬುದು ಸಂಸ್ಕೃತ ಪದ. ಸ್ವರ ಅಂದರೆ ಧ್ವನಿ ಎಂದರ್ಥ. ಇದು ಒಂದು ಮೂಗಿನ ಹೊಳ್ಳೆಯ ಮೂಲಕ ಗಾಳಿಯ ನಿರಂತರ ಹರಿವಾಗಿದೆ.

ಸ್ವರ ಯೋಗವು ಉಸಿರಾಟದ ನಿಯಂತ್ರಣ ಮತ್ತು ಕುಶಲತೆಯ ಮೂಲಕ ಕಾಸ್ಮಿಕ್ ಪ್ರಜ್ಞೆಯ ಸಾಕ್ಷಾತ್ಕಾರದ ವಿಜ್ಞಾನವೆಂದೇ ಹೇಳಬಹುದು.

ರಾಜಯೋಗ: ಈ ಯೋಗವನ್ನು ಪತಂಜಲಿ ಋಷಿಯ ಯೋಗ ಸೂತ್ರಗಳಲ್ಲಿ ವಿವರಿಸಲಾಗಿದೆ. ಪುರಾತನ ಪಠ್ಯದಲ್ಲಿ ಪತಂಜಲಿ ಋಷಿ ಯೋಗದ ಎಂಟು ಹಂತಗಳನ್ನು ವಿವರಿಸುತ್ತಾರೆ, ಇವುಗಳನ್ನು ಒಟ್ಟಾಗಿ ರಾಜಯೋಗ ಎಂದು ಕರೆಯಲಾಗುತ್ತದೆ.

ನಿಜ ಜೀವನಕ್ಕೆ ಅತ್ಯಾವಶ್ಯಕವಾಗಿರುವ ಯೋಗದ ವಿಧಗಳು ಈ ಕೆಳಗಿನಂತಿವೆ. ಇವುಗಳ ಬಗ್ಗೆಯೂ ತಿಳಿದುಕೊಂಡರೆ ಇನ್ನೂ ಒಳಿತು.

ಅಷ್ಟಾಂಗ ಯೋಗ: ಅಷ್ಟಾಂಗ ಯೋಗವನ್ನು ಪತಂಜಲಿ ಋಷಿಗಳ ಯೋಗ ಎಂದೇ ಸಂಭೋಧಿಸಬಹುದು. ಇದನ್ನು ಅವರೆಲ್ಲಾ ಹೆಚ್ಚಾಗಿ ರೂಢಿಸಿಕೊಂಡಿದ್ದರು. ತೂಕ ನಷ್ಟಕ್ಕೆ ಇದು ಸಹಾಯಕ.

ಅಷ್ಟಾಂಗ ಯೋಗದಲ್ಲಿ ಸಾಮಾನ್ಯಾಗಿ ಅಭ್ಯಾಸ ಮಾಡುವ ಕೆಲವು ಆಸನಗಳೆಂದರೆ ಪದ್ಮಾಸನ, ಸಿಂಹಸನ, ಚಿಟ್ಟೆಭಂಗಿಯ ಆಸನ, ಕಪಾಲಭಾತಿ ಪ್ರಾಣಾಯಾಮ, ಅನುಲೋಮ- ವಿಲೋಮ ಪ್ರಾಣಾಯಾಮ ಹಾಗೂ ಸೂರ್ಯ ಭೇದಿ ಪ್ರಾಣಾಯಾಮ, ಚಂದ್ರ ಭೇದಿ ಪ್ರಾಣಾಯಾಮ.

ವಿನ್ಯಾಸ ಯೋಗ: ಯೋಗದ ಈ ರೂಪವನ್ನು ‘ಫ್ಲೋ’ ಯೋಗ ಎಂದೂ ಕರೆಯಲಾಗುತ್ತದೆ. ವಿನ್ಯಾಸ ಎಂಬ ಪದವು ಎರಡು ಭಾಗಗಳನ್ನು ಹೊಂದಿದೆ, ವಿ ಎಂದರೆ ವ್ಯತ್ಯಾಸ ಮತ್ತು ನ್ಯಾಸ ಎಂದರೆ ನಿಗದಿತ ಮಿತಿ ಎಂದರ್ಥ.

ವಿನ್ಯಾಸ ಯೋಗವು, ಚಲನೆ ಮತ್ತು ಉಸಿರಾಟದ ತಂತ್ರಗಳನ್ನು ಒಳಗೊಂಡಿದೆ. ವಿನ್ಯಾಸ ಯೋಗವನ್ನು ಮಗುವಿನ ಭಂಗಿಯೊಂದಿಗೆ ಪ್ರಾರಂಭಿಸುತ್ತಾರೆ ಮತ್ತು ಸಾವಿನ ಭಂಗಿಯೊಂದಿಗೆ (ಶವಾಸನ) ಕೊನೆಗೊಳಿಸುತ್ತಾರೆ.

ಅಯ್ಯಂಗಾರ್ ಯೋಗ: ವಿಶ್ವದ ಅಗ್ರಗಣ್ಯ ಯೋಗ ಶಿಕ್ಷಕರಲ್ಲಿ ಒಬ್ಬರಾದ ಬಿ.ಕೆ.ಎಸ್ ಅಯ್ಯಂಗಾರ್ ಅವರಿಂದ ಈ ಯೋಗ ಆರಂಭವಾಗಿದೆ.

ಯೋಗ ಶಿಕ್ಷಣದ ಮಹತ್ವ

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆಯು ಇದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ವಿಜ್ಞಾನಿಕ, ನೈತಿಕ, ಆಧ್ಯಾತ್ಮಿಕ ಮೌಲ್ಯಗಳ ಹಾಗೂ ಆರೋಗ್ಯಕರ ಜೀವನಶೈಲಿಯ ಸರ್ವತೋಮುಖ ಅಭಿವೃದ್ಧಿಗಾಗಿ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗವನ್ನು ಸಂಯೋಜಿಸುವ ತುರ್ತು ಅಗತ್ಯವಿದೆ. ಏಕೆಂದರೆ ಇದು;

 • ದೇಹ, ಮನಸ್ಸು ಮತ್ತು ಚೈತನ್ಯಕ್ಕೆ ಸ್ವರಮೇಳವಾಗಿ ಕೆಲಸ ಮಾಡಲಿದೆ.
 • ವರ್ತನೆ, ನಡವಳಿಕೆ, ಒತ್ತಡ, ಆತಂಕಗಳಿಂದ ಮುಕ್ತಿ ಕೊಡುತ್ತದೆ.
 • ಆರೋಗ್ಯಕರ ಜೀವನಶೈಲಿಯನ್ನು ನಿರ್ಮಿಸಿ, ಉನ್ನತ ನೈತಿಕತೆಯನ್ನು ರೂಪಿಸಿ ವಿದ್ಯಾರ್ಥಿಗಳನ್ನು ಸಂಪೂರ್ಣ ಯೋಗ್ಯರನ್ನಾಗಿ ಮಾಡಲು ಅತ್ಯಾವಸ್ಯಕ.
 • ಯೋಗ ಶಿಕ್ಷಣವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
 • ಪರಿಶ್ರಮ, ತಾಳ್ಮೆ ಮತ್ತು ಅವರ ಗುರಿಗಳತ್ತ ಕೆಲಸ ಮಾಡಲು ಸಹಕಾರಿ.
 • ಗಮನ, ನೆನಪಿನ ಶಕ್ತಿ ಮತ್ತು ನಮ್ಯತೆಯನ್ನುಪಡೆಯಲು ಸಹಾಯ ಮಾಡುತ್ತದೆ.

ಆದ್ದರಿಂದ, ನಾವು ಯೋಗದ ಮಹತ್ವವನ್ನು ಅರ್ಥಮಾಡಿಕೊಂಡು ಅದನ್ನು ಒಂದು ಶಿಸ್ತು ಎಂದು ಪರಿಗಣಿಸಬೇಕು. ಯೋಗದ ಮಹತ್ವವನ್ನು ಅರಿತಿದ್ದರಿಂದ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಸಹ ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಯೋಗ ದಿನ

ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ವಿಶ್ವ ಸಂಸ್ಥೆಯು ಘೋಷಣೆ ಮಾಡಿದೆ. ಯೋಗಕ್ಕೆ ಭಾರತದವು 6,000 ವರ್ಷ ಹಳೆಯ ಇತಿಹಾಸ ಹೊಂದಿದೆ.

ಇದು ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014 ರಲ್ಲಿ ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಿಸುವಂತೆ ಕರೆ ನೀಡಿದರು.

ಅಂದಿನಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಯೋಗದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಇನ್ನು ದಾಖಲೆಯ 175 ಸದಸ್ಯ ರಾಷ್ಟ್ರಗಳಿಂದ ಇದಕ್ಕೆ ಅನುಮೋದನೆ ಸಿಕ್ಕಿದೆ.

ಯೋಗದಿಂದ ಆರೋಗ್ಯ ರಕ್ಷಣೆ ಹೇಗೆ?

1. ಯೋಗವು ಮನುಷ್ಯನ ದೇಹದ ಹಾಗೂ ಮಾನಸಿಕ ಸಮತೋಲಕ್ಕೆ ಪ್ರಮುಖ ಸಾಧನವಾಗಿ ಕೆಲಸ ಮಾಡುತ್ತದೆ. ಹಾಗೆ ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣಗಳನ್ನು ಕಂಡುಕೊಳ್ಳುವುದರ ಜೊತೆಗೆ ಅದಕ್ಕೆ ಪರಿಹಾರವನ್ನೂ ಒದಗಿಸುತ್ತದೆ.

2. ನಿಯಮಿತ ಯೋಗಾಭ್ಯಾಸವು ಒತ್ತಡದವನ್ನು ಕಡಿಮೆ ಮಾಡುವುದರೊಂದಿಗೆ ಆರೋಗ್ಯಕರ ಹೃದಯಕ್ಕೆ ಇದು ಕೊಡುಗೆ ನೀಡುತ್ತದೆ.

3. ಅಧಿಕ ರಕ್ತದೊತ್ತಡ ಮತ್ತು ಅಧಿಕ ತೂಕ ಸೇರಿದಂತೆ ಹೃದ್ರೋಗಕ್ಕೆ ಕಾರಣವಾಗುವ ಹಲವಾರು ಅಂಶಗಳನ್ನು ಯೋಗದ ಮೂಲಕ ಪರಿಹರಿಸಬಹುದು.

4. ಯೋಗವು ಎಲ್ಲಾ ವಯಸ್ಸಿನ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

5.ಇತ್ತೀಚಿನ ಅಧ್ಯಯನವಾದ ಜಾನ್ಸ್ ಹಾಪ್ಕಿನ್ಸ್ ವಿಮರ್ಶೆಯ ಪ್ರಕಾರ, ಸೌಮ್ಯವಾದ ಯೋಗವು ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಹಾಗೂ ಊದಿಕೊಂಡ ಕೀಲುಗಳ ಕೆಲವು ಅಸ್ವಸ್ಥತೆ ನೋವುಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಡುಕೊಳ್ಳಲಾಗಿದೆ.

6. ನಿಯಮಿತವಾದ ಯೋಗ ನಿಮಗೆ ಸರಿಯಾದ ಮನಸ್ಥಿತಿಯನ್ನು ಹೊಂದಲು ಸಹಾಯ ಮಾಡುತ್ತದೆ ಹಾಗೂ ಒಳ್ಳೆಯ ನಿದ್ರೆ ಪಡೆಯಲು ಸಹಕಾರಿಯಾಗಿದೆ.

7. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಪ್ರಕಾರ, ಯೋಗವು ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ, ಸಾವಧಾನತೆ, ತೂಕ ನಷ್ಟ ಮತ್ತು ಗುಣಮಟ್ಟದ ನಿದ್ರೆಯನ್ನು ನೀಡುತ್ತದೆ ಎಂದು ತಿಳಿಸಿದೆ.  ಇದಕ್ಕೆ ವೈಜ್ಞಾನಿಕ ಪುರಾವೆಗಳು ಸಹ ಲಭಿಸಿವೆ.

US ಮಿಲಿಟರಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ಇತರ ದೊಡ್ಡ ಸಂಸ್ಥೆಗಳು ಆರೋಗ್ಯ ರಕ್ಷಣೆಯಲ್ಲಿ ಯೋಗದ ವೈಜ್ಞಾನಿಕ ಮೌಲ್ಯಗಳನ್ನು ಅನುಸರಿಸುತ್ತವೆ.

ಸೂಚನೆ: ವೈದ್ಯರ ಅನುಮತಿಯ ಮೇರೆಗೆ ನೀವು ಯೋಗ ಅಥವಾ ವ್ಯಾಯಾಮವನ್ನು ಮಾಡುವುದು ಒಳ್ಳೆಯದು.

ಇನ್ನೂ ಈ ಯೋಗವೆಂಬುದು ಕೇವಲ ವಯಸ್ಕರು ಮತ್ತು ಯುವಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ಉಪಕಾರಿಯಾಗಿದೆ. ಮಕ್ಕಳಿಗೆ ಯೋಗದ ಅಗತ್ಯತೆ ಇದೆಯೇ ಎಂಬುದನ್ನು ಇಲ್ಲಿ ನೋಡೋಣಾ..

ಮಕ್ಕಳಿಗೆ ಯೋಗದ ಅಗತ್ಯತೆ ಇದೆಯೇ?

ಯೋಗದಲ್ಲಿ ಕೇವಲ ಇಂತಿಷ್ಟೇ ವಯೋಮಾನವದವರಿಗೆ ಎಂಬಂತಹ ನಿಯಮಗಳೇನು ಇಲ್ಲ. ಅದರಲ್ಲೂ ಮಕ್ಕಳಿಗೆ ದೊಡ್ಡವರಿಗಿಂತ ಹೆಚ್ಚಿನ ಆತಂಕ, ಒತ್ತಡ ಇರುತ್ತದೆ.

ಕಾರಣ ಶಾಲಾ ಶಿಕ್ಷಣದ ವ್ಯವಸ್ಥೆ ಅಥವಾ ಪೋಷಕರ ಅತಿಯಾದ ಒತ್ತಡ ಹಾಗೂ ಇನ್ನೀತರ ಒತ್ತಡಗಳು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಹೀಗಾಗಿ ಮಕ್ಕಳಿಗೆ ಯೋಗ ಅಗತ್ಯತೆ ಇದೆ.

ಕೆಲವು ಆಸನಗಳು ಮಗುವಿನ ಬೆನ್ನುಮೂಳೆ ಮತ್ತು ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಚಿಕ್ಕ ವಯಸ್ಸಿನಲ್ಲಿ ಕಠಿಣವಾದ ಯೋಗಗಳು ಮಕ್ಕಳಿಗೆ ಯೋಗಗಳು ಸೂಕ್ತವಲ್ಲ.

ಯೋಗವು ಮಕ್ಕಳನ್ನು ವಿಶ್ರಾಂತಿಗೆ ಒಳಪಡಿಸಲು, ಒತ್ತಡ ಮತ್ತು ಆತಂಕವನ್ನು ನಿವಾರಿಸಲು, ಉತ್ತಮ ನಿದ್ರೆ, ಭಾವನಾತ್ಮಕ ನಿಯಂತ್ರಣವನ್ನು ಸುಧಾರಿಸಲು, ಸಹಾನುಭೂತಿಯನ್ನು ಹೆಚ್ಚಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಕಾಯವಾಗಿದೆ.

ಅಮೆರಿಕನ್ ಮಕ್ಕಳಲ್ಲಿ ಯೋಗವು ಹೆಚ್ಚು ಜನಪ್ರಿಯವಾಗುತ್ತಿದೆ. 2012 ರ ಹೊತ್ತಿಗೆ US ನ 3% ಮಕ್ಕಳು (1.7 ಮಿಲಿಯನ್) ಯೋಗವನ್ನು ಅಭ್ಯಾಸ ಮಾಡಿದ್ದಾರೆ ಎಂದು ರಾಷ್ಟ್ರೀಯ ಸಮೀಕ್ಷೆ ವರದಿ ಮಾಡಿದೆ.  

ಇತ್ತೀಚಿನ ಸಂಶೋಧನಾ ಅಧ್ಯಯನಗಳ ಪ್ರಕಾರ,  ಯೋಗವು ಗಮನ ಕೊರತೆಯ (ಹೈಪರ್ಆಕ್ಟಿವಿಟಿ ಡಿಸಾರ್ಡರ್) ಹೊಂದಿರುವ ಮಕ್ಕಳಿಗೆ ಬಹಳ ಉಪಯುಕ್ತ ಎಂದು ಸೂಚಿಸಿದೆ.

ಮಕ್ಕಳಿಗೆ ಯೋಗವನ್ನು ಆಟದ ಮೂಲಕ, ಧ್ಯಾನದ ಮೂಲಕ, ಉಸಿರಾಟದ ಏರಿಳಿತಗಳ ಮೂಲಕ ಸುಲಭವಾಗಿ ಹೇಳಿಕೊಟ್ಟರೆ ಖಂಡಿತಾ ಅವರು ಪಾಲನೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ.

ಆನ್ಲೈನ್ ಶಿಕ್ಷಣ ಪ್ರಬಂಧ Click Here
ಕೃತಕ ಬುದ್ಧಿಮತ್ತೆ ಪ್ರಬಂಧ Click Here
ಗ್ರಂಥಾಲಯದ ಮಹತ್ವ ಪ್ರಬಂಧ Click Here
Yogabhyasa Prabandha in Kannada

Yogabhyasa Prabandha in Kannada ಆಧುನಿಕ ಯುಗದಲ್ಲಿ ಯೋಗದ ಮಹತ್ವ

ಯೋಗದ ಆರಂಭ 6,000 ವರ್ಷಗಳ ಹಿಂದೆ ಉತ್ತರ ಭಾರತದ  ಸಿಂಧೂ-ಸರಸ್ವತಿ ನಾಗರಿಕತೆಯಿಂದ ಕಂಡುಬಂದಿದೆ ಎನ್ನಲಾಗುತ್ತದೆ. ಯೋಗ ಎಂಬ ಪದವನ್ನು ಮೊದಲು ಉಲ್ಲೇಖಿಸಿದ್ದು ಅತ್ಯಂತ ಹಳೆಯ ಪವಿತ್ರ ಗ್ರಂಥಗಳಾದ ಋಗ್ವೇದದಲ್ಲಿ.

ವೇದಗಳು ಬ್ರಾಹ್ಮಣರು, ವೈದಿಕ ಪುರೋಹಿತರು ಬಳಸಬೇಕಾದ ಹಾಡುಗಳು, ಮಂತ್ರಗಳು ಮತ್ತು ಆಚರಣೆಗಳನ್ನು ಒಳಗೊಂಡಿರುವ ಪಠ್ಯಗಳ ಸಂಗ್ರಹವಾಗಿತ್ತು.

1. ಆಧುನಿಕ ಜೀವನದಲ್ಲಿ ಯೋಗದ ಪ್ರಾಮುಖ್ಯತೆ ಹೇರಳವಾಗಿದೆ. ಯೋಗವು ಆರೋಗ್ಯಕರ ಜೀವನವನ್ನು ಹೇಗೆ ನಡೆಸಬೇಕು ಎಂಬ ಜ್ಞಾನವನ್ನು ನಮಗೆ ಕಲಿಸುತ್ತದೆ. ಏಕಾಗ್ರತೆ, ಸೃಜನಶೀಲತೆಯನ್ನು ಇದು ಸುಧಾರಿಸುತ್ತದೆ.

2. ನಮ್ಮ ಸ್ಮರಣೆಯನ್ನು ತೀಕ್ಷ್ಣಗೊಳಿಸುತ್ತದೆ. ಧನಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಗತ್ಯ.

3. ದೇಹವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನವೂ ಯೋಗ ಮಾಡಲು ವೈದ್ಯರು ಸಹ ಶಿಫಾರಸು ಮಾಡುತ್ತಾರೆ.

4. ಯೋಗವು ಅನೇಕ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಜನರು ತಮ್ಮ ಸ್ನಾಯುವಿನ ಶಕ್ತಿಯನ್ನು 50 ಮತ್ತು 40 ರ ಆಸುಪಾಸಿನಲ್ಲಿ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದ್ದರಿಂದ, ನಿಯಮಿತ  ವ್ಯಾಯಾಮ ಮಾಡದಿದ್ದರೆ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಯೋಗವು ಈ ತೊಂದರೆಯನ್ನು ನಿವಾರಿಸುತ್ತದೆ.

5. ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸುಧಾರಿಸಲು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡಿದರೆ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6. ಆಧುನಿಕ ಜೀವನಶೈಲಿಯು ಮನಸ್ಸು-ದೇಹದ ಸಂಬಂಧದಲ್ಲಿ ಸಾಮರಸ್ಯವನ್ನು ಕಳೆದುಕೊಂಡಿದೆ ಎಂದೇ ಹೇಳಬಹುದು. ಇದು ಅಧಿಕ ರಕ್ತದೊತ್ತಡ,  ಹೃದಯ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ಹಲವಾರು ಒತ್ತಡ ಆಧಾರಿತ ಕಾಯಿಲೆಗಳಿಗೆ ಕಾರಣವಾಗಿದೆ. ಈ ರೋಗಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ಕ್ರಮ ಈ ಯೋಗದಿಂದ ಸಿಗಲಿದೆ.

ಹಾಗಾಗಿ ಯೋಗವೆಂಬುದು ಆಧುನಿಕ ಯುಗದಲ್ಲಿ ಅವಶ್ಯಕವಾಗಿದೆ. ಅಷ್ಟೇ ಅಲ್ಲದೇ ಇದು ನಮ್ಮ ದೈನಂದಿನ ಜೀವನದಲ್ಲಿ ಸಹ ಪ್ರಮುಖ ಮಹತ್ವವನ್ನು ಪಡೆದುಕೊಂಡಿದೆ. ಅದು ಹೇಗೆ  ಗೊತ್ತಾ ?..

ದೈನಂದಿನ ಜೀವನದಲ್ಲಿ ಯೋಗದ ಮಹತ್ವ

ಪಾಶ್ಚಿಮಾತ್ಯರು ಸಾಮಾನ್ಯವಾಗಿ ಯೋಗವನ್ನು ದೇಹ ದಂಡಿಸಲು, ಬೊಜ್ಜನ್ನು ಕರಗಿಸಲು ಉಪಯೋಗಿಸಿಕೊಳ್ಳುತ್ತಾರೆ.

ಆದರೆ ಯೋಗ ಇದಕ್ಕಿಂತಲೂ ಹೆಚ್ಚಿನ ಉಪಯೋಗಗಳನ್ನ ನೀಡುತ್ತದೆ.

 • ದಿನನಿತ್ಯ ಯೋಗವನ್ನು ಅಭ್ಯಾಸ ಮಾಡುವುದರಿಂದ ವ್ಯಕ್ತಿಯ ಮನಸ್ಸು, ದೇಹ ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
 • ದೇಹದ ಹಾಗೂ ಮನಸ್ಸಿನ ಸಾಮಾನ್ಯ ಸ್ಥಿತಿಗೆ ಕಾರಣವಾಗುತ್ತದೆ.
 • ಪ್ರತಿಯೊಬ್ಬರು ಸಹ ಜೀವನಕ್ಕಾಗಿ ಒಂದಲ್ಲಾ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಆಗ ಬೆನ್ನು, ಸೊಂಟ, ಕುತ್ತಿಗೆ, ಕೀಲು ನೋವಿನ ಸಮಸ್ಯೆ ಕಂಡು ಬರುತ್ತದೆ. ಯೋಗ ಇದನ್ನೆಲ್ಲಾ ನಿಯಂತ್ರಣಕ್ಕೆ ತರುತ್ತದೆ.
 • ಯೋಗವು ದೇಹದ ವಕ್ರ ರಚನೆಯನ್ನು ಸರಿಪಡಿಸುತ್ತದೆ. ಈ ಮೂಲಕ ಭವಿಷ್ಯದ ನೋವನ್ನು ತಪ್ಪಿಸುತ್ತದೆ.

ಇನ್ನೂ ಈ ಯೋಗವನ್ನು ಪ್ರತಿದಿನ ಮಾಡುವುದರಿಂದ ಹಲವಾರು ಉಪಯೋಗಳಿವೆ. ಅವುಗಳೆಂದರೇ…

ಯೋಗದ ಪ್ರಯೋಜನಗಳು

importance of yoga in kannada

 1. ಯೋಗವು ಶಕ್ತಿ, ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.
 2. ಬೆನ್ನು ನೋವು ಹಾಗೂ ಇತರೆ ದೈಹಿಕ ಸಮಸ್ಯೆ  ನಿವಾರಣೆಗೆ ಯೋಗ ಸಹಾಯ ಮಾಡುತ್ತದೆ.
 3. ಯೋಗದಿಂದ ಸಂಧಿವಾತ ರೋಗಲಕ್ಷಣಗಳನ್ನು ದೂರಬಹುದು.
 4. ಹೃದಯದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
 5. ವಿಶ್ರಾಂತಿ ನೀಡುವುದರ ಜೊತೆಗೆ ಉತ್ತಮ ನಿದ್ರೆಗೆ ಸಹಾಯಕ.
 6. ಹೆಚ್ಚು ಶಕ್ತಿ ಮತ್ತು ಚೈತನ್ಯಯುಕ್ತ ಮನಸ್ಥಿತಿ ನೀಡುತ್ತದೆ.
 7. ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ
 8. ಉತ್ತಮ ಸ್ವ-ಆರೈಕೆಯನ್ನು ಉತ್ತೇಜಿಸುತ್ತದೆ

ಪ್ರತಿದಿನ ನಾವು ಯೋಗ ಮಾಡುವಾಗ ಹಲವಾರು ಮುನ್ನೇಚ್ಚರಿಕಾ ಕ್ರಮಗಳನ್ನು ವಹಿಸಬೇಕಾಗಿದೆ. ಒಂದು ವೇಳೆ ಇದನ್ನು ಪಾಲಿಸದಿದ್ದರೇ ನಮ್ಮ ಆರೋಗ್ಯಕ್ಕೆ ತೊಂದರೆಯಾಗುವುದಂತೂ ಖಚಿತ. ಹಾಗಾಗಿ ಯೋಗ ಮಾಡುವ ಅಥವಾ ಮುನ್ನ ಪಾಲಿಸಬೇಕಾದ ಕೆಲವು ಕ್ರಮಗಳು ಇಂತಿವೆ.

ಯೋಗ ಮಾಡುವ ಮುನ್ನ ಅಥವಾ ಮಾಡುವಾಗ ಎಚ್ಚರ ವಹಿಸಬೇಕಾದ ಪ್ರಮುಖಾಂಶಗಳು

ಯೋಗವು ಒಂದು ರೋಮಾಂಚನಕಾರಿ ಚಟುವಟಿಕೆಯಾಗಿದೆ. ಅದರ ಅರಿವು ಪ್ರಪಂಚದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಆದರೆ ಯೋಗದ ಮೊದಲು ಮಾಡಬೇಕಾದ ಕೆಲಸಗಳು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಈಗ ತಿಳಿದುಕೊಳ್ಳಿ.

ಯೋಗಕ್ಕೆ ಯಾವುದೇ ಅಲಂಕಾರಿಕತೆ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಸಡಿಲವಾದ, ಆರಾಮದಾಯಕವಾದ ಬಟ್ಟೆಗಳು. ಅದು ನಿಮ್ಮ ದೇಹವನ್ನು ಸುಲಭವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಸ್ಥಳದ ಆಯ್ಕೆಯಲ್ಲಿ ಜಾಗ್ರತೆ ವಹಿಸಿ.

ನಿಮ್ಮ ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ಹೊಟ್ಟೆ ಖಾಲಿಯಾಗಿರಬೇಕು. ನಿಮ್ಮ ಕೊನೆಯ ಊಟ ಮತ್ತು ನಿಮ್ಮ ವ್ಯಾಯಾಮದ ನಡುವೆ ನೀವು 2-4 ಗಂಟೆಗಳ ಅಂತರವನ್ನು ನೀಡಬೇಕು. ತುಂಬಿದ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ಸರಿಯಲ್ಲ.

ಯೋಗವನ್ನು ಬರಿಗಾಲಿನಿಂದ ಅಭ್ಯಾಸ ಮಾಡಲಾಗುತ್ತದೆ.  ಆದ್ದರಿಂದ ಪಾದರಕ್ಷೆಗಳ ಅಗತ್ಯವಿಲ್ಲ. ಹಾಗೆ  ಫೋನ್ ಬಳಕೆ ಮಾಡಬೇಡಿ. ಮನಸನ್ನು ಕೇಂದ್ರೀಕರಿಸಿಲು ಇದು ತೊಂದರೆ ನೀಡುತ್ತದೆ.  

ಅಭ್ಯಾಸದ ಹೆಚ್ಚಿನ ಭಾಗ ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ವಾಸ್ತವವಾಗಿ, ಅನುಭವಿ ತರಬೇತುದಾರರ ಅಡಿಯಲ್ಲಿ ಯೋಗವನ್ನು ಅಭ್ಯಾಸ ಮಾಡುವುದು ಅತ್ಯಗತ್ಯ.

ನೀವು ಉಸಿರಾಡುವಾಗ ಮತ್ತು ಬಿಡುವಾಗ ಪ್ರತಿ ಬಾರಿ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಕಡ್ಡಾಯವಾಗಿದೆ. ಉಸಿರಾಟವು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ನಿಮ್ಮ ದೇಹವನ್ನು ವಿಶ್ರಾಂತಿಗೆ ದೂಡಲು ಸಹಾಯ ಮಾಡುತ್ತದೆ.

ಭಗವಂತ ಶಿವನನ್ನು ಆದಿಯೋಗಿ ಶಿವ ಎಂದೂ ಸಹ ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಶಿವನು ಯೋಗದ ಪಿತಾಮಹ.

ಆದ್ರೆ ಹಲವಾರು ಸಿದ್ಧಾಂತಗಳ ಪ್ರಕಾರ ಪತಂಜಲಿಯನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅದು ಏನೇ ಇರಲಿ ಯೋಗ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ.

ಪ್ರತಿದಿನ ಯೋಗವನ್ನು ಮಾಡುವುದರಿಂದ ಹಲವಾರು ಆಯೋಗ್ಯಕರ ಪ್ರಯೋಜನಗಳನ್ನು ನಾವೆಲ್ಲಾ ಪಡೆಯಬಹುದಾಗಿದೆ.

Quotes About Yoga In Kannada

 1. ನಮ್ಮೊಳಗಿನ ನಮ್ಮನ್ನು ನಾವು ನೋಡಿಕೊಳ್ಳಲು ಯೋಗವು  ಕನ್ನಡಿ-ಬಿ ಕೆ ಎಸ್ ಅಯ್ಯಂಗಾರ್
 2. ಯೋಗವು 99% ಅಭ್ಯಾಸವಾಗಿದೆ ಮತ್ತು 1% ಸಿದ್ಧಾಂತವಾಗಿದೆ – ಶ್ರೀ. ಕೆ. ಪಟ್ಟಾಭಿ ಜೋಯಿಸ್
 3. ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು  ನೀವು ಗೆಲ್ಲುವುದು ಉತ್ತಮ – ಬುದ್ಧ
 4. ನಿಮ್ಮ ದೇಹದ ಬಗ್ಗೆ ಜಾಗ್ರತೆ ವಹಿಸಿ, ನೀವು ವಾಸಿಸುವ ಏಕೈಕ ಸ್ಥಳ ಇದು – ಜಿಮ್ ರೋಹ್ನ್
 5. ಸತ್ಯವೆನೆಂದರೇ, ಯೋಗ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಅದು ಸಮಯವನ್ನು ನೀಡುತ್ತದೆ –ಗಂಗಾ ವೈಟ್ 

FAQ Yogabhyasa Prabandha in Kannada

ಯೋಗ ಮತ್ತು ಧ್ಯಾನದ ನಡುವಿನ ವ್ಯತ್ಯಾಸವೇನು?

ಧ್ಯಾನವು ಯೋಗದ ಒಂದು ಭಾಗವಾಗಿದ್ದು ಮಾನಸಿಕ ವಿಶ್ರಾಂತಿ ಮತ್ತು ಮಾನಸಿಕ ಏಕಾಗ್ರತೆಯನ್ನು ನೀಡುತ್ತದೆ. ಯೋಗದ ನಂತರ ಧ್ಯಾನವನ್ನು ಮಾಡಲಾಗುತ್ತದೆ.

ಯೋಗ ತರಗತಿಗಳು ಸುರಕ್ಷಿತವೇ?

ಹೌದು. ಸಾಮಾನ್ಯವಾಗಿ ಯೋಗ ತರಗತಿಗಳು ಸುರಕ್ಷಿತವಾಗಿರುತ್ತವೆ. ತರಗತಿಗೆ ಸೇರುವುದಕ್ಕಿಂತ ಮುಂಚೆ ಒಂದೆರಡು ಪ್ರಾಯೋಗಿಕ (Trial) ತರಗತಿಳಿಗೆ ಹಾಜರಾಗಿ ನೋಡಿ. ಯೋಗ ಶಿಕ್ಷಕರ/ಶಿಕ್ಷಕಿಯರ ಆ ಕ್ಷೇತ್ರದಲ್ಲಿನ ಅನುಭವವೆಷ್ಟು ಎಂಬುದು ತಿಳಿದು ಸೇರುವುದು ಒಳ್ಳೆಯದು.

ಯೋಗಾಭ್ಯಾಸಕ್ಕಾಗಿ ವಿಶೇಷ ಉಪಕರಣಗಳು ಬೇಕೇ?

ಯೋಗದ ಅಭ್ಯಾಸಕ್ಕಾಗಿ, ಜಾರದೇ ಇರುವಂತಹ ನಿಮ್ಮಷ್ಟು ಉದ್ದದ ಯೋಗ ಮ್ಯಾಟ್ (ಯೋಗ ಚಾಪೆ ) ಇದ್ದರೆ ಸಾಕು.

Yogabhyasa Prabandha in Kannada ಲೇಖನದ ಕುರಿತು ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Leave a Comment